ENG vs IND: ಇಂಗ್ಲೆಂಡ್‌ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ; ತಂಡದಲ್ಲಿ ಯಾರಿಗೆಲ್ಲ ಅವಕಾಶ?

India Women squads for England tour 2025: ಭಾರತದ ಮಹಿಳಾ ಮತ್ತು ಪುರುಷರ ಕ್ರಿಕೆಟ್ ತಂಡಗಳು ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿವೆ. ಪುರುಷರ ತಂಡದ ಘೋಷಣೆಯಲ್ಲಿ ವಿಳಂಬವಾಗಿದ್ದರೆ, ಮಹಿಳಾ ತಂಡವನ್ನು ಬಿಸಿಸಿಐ ಇಂದು ಘೋಷಿಸಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮಹಿಳಾ ತಂಡವು ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.

ಭಾರತದ ಮಹಿಳಾ ಮತ್ತು ಪುರುಷರ ತಂಡಗಳು ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ (India tour of England 2025) ಕೈಗೊಳ್ಳಲಿವೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವುದರಿಂದ, ನಾಯಕತ್ವಕ್ಕೆ ಹೊಸ ಹೆಸರನ್ನು ಪರಿಗಣಿಸಲಾಗುತ್ತಿದೆ . ಆದ್ದರಿಂದ, ತಂಡವನ್ನು ಘೋಷಿಸುವಲ್ಲಿ ವಿಳಂಬವಾಗಿದೆ. ಮೇ 23 ರಂದು ಭಾರತ ತಂಡ ಘೋಷಣೆಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಇಂಗ್ಲೆಂಡ್‌ ಪ್ರವಾಸಕ್ಕೆ ಭಾರತ ಮಹಿಳಾ ತಂಡವನ್ನು (India Women squads) ಘೋಷಿಸಲಾಗಿದೆ. ಭಾರತ ಮಹಿಳಾ ತಂಡ ಇಂಗ್ಲೆಂಡ್‌ನಲ್ಲಿ ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದೆ. ಐದು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಭಾರತೀಯ ಮಹಿಳಾ ತಂಡ ಜೂನ್ 28 ರಿಂದ ಜುಲೈ 22 ರವರೆಗೆ ಇಂಗ್ಲೆಂಡ್ ವಿರುದ್ಧ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಟಿ20 ಸರಣಿ ಜೂನ್ 28 ರಿಂದ ಪ್ರಾರಂಭವಾದರೆ, ಏಕದಿನ ಸರಣಿ ಜುಲೈ 16 ರಿಂದ ಜುಲೈ 22 ರವರೆಗೆ ನಡೆಯಲಿದೆ. ಈ ಎರಡೂ ತಂಡಗಳನ್ನು ಹರ್ಮನ್ಪ್ರೀತ್ ಕೌರ್ (Harmanpreet Kaur) ಮುನ್ನಡೆಸಲಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ಮಹಿಳಾ ತಂಡ ಪ್ರಕಟ

ಭಾರತ ಮಹಿಳಾ ಏಕದಿನ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ, ತೇಜಲ್ ಹಸ್ಬಾನಿಸ್, ದೀಪ್ತಿ ಶರ್ಮಾ, ಸ್ನೇಹಿ ರಾಣಾ, ಶ್ರೀ ಚರಣಿ, ಶುಚಿ ಉಪಾಧ್ಯಾಯ, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ಸಯಾಲಿ ಸತ್ಘರೆ.

ಟಿ20 ಸರಣಿಗೆ ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್‌ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್‌ಕೀಪರ್), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ಶುಚಿ ಉಪಾಧ್ಯಾಯ, ಅಮಂಜೋತ್ ಕೌರ್, ಅರುಂಧತಿ ರೆಡ್ಡಿ, ಕ್ರಾಂತಿ ಗೌಡ್, ಸಯಾಲಿ ಸತ್ಘರೆ.

ಭಾರತ vs ಇಂಗ್ಲೆಂಡ್ ಪಂದ್ಯದ ವೇಳಾಪಟ್ಟಿ

  1. ಮೊದಲ ಟಿ20, ಜೂನ್ 28 (ಸಂಜೆ 7 ಗಂಟೆಗೆ)
  2. ಎರಡನೇ ಟಿ20, ಜುಲೈ 1 (ರಾತ್ರಿ 11)
  3. 3ನೇ ಟಿ20, ಜುಲೈ 4 (ರಾತ್ರಿ 11.05)
  4. 4ನೇ ಟಿ20, ಜುಲೈ 9 (ರಾತ್ರಿ 11)
  5. 5ನೇ ಟಿ20, ಜುಲೈ 12 (ರಾತ್ರಿ 11.05)

ಏಕದಿನ ಸರಣಿ

  1. ಮೊದಲ ಏಕದಿನ ಪಂದ್ಯ, ಜುಲೈ 16 (ಸಂಜೆ 5.30)
  2. ಎರಡನೇ ಏಕದಿನ ಪಂದ್ಯ, ಜುಲೈ 19 (ಮಧ್ಯಾಹ್ನ 3.30)
  3. ಮೂರನೇ ಏಕದಿನ ಪಂದ್ಯ, ಜುಲೈ 22 (ಸಂಜೆ 5.30)

TV9 Kannada

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *