ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘದ ಮೊದಲ ಸಭೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 19 ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘ (ರಿ) ಬೆಂಗಳೂರು ರಾಜ್ಯ ಘಟಕದ ಸಂಘದ ಸದಸ್ಯರ ಮೊದಲನೆಯ ಸಭೆಯೂ ಇತ್ತೀಚೆಗೆ ಶಾಸಕರಾದ ವೀರೇಂದ್ರ(ಪಪ್ಪಿ)ರವರ ಕಛೇರಿಯಲ್ಲಿ ಶ್ರೀಮತಿ ಕೆ,ಸಿ, ವೀಣಾರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಗಾಣಿಗ ಸಮುದಾಯವನ್ನು ಸಂಘಟಿಸುವ ಹಾಗೂ ಸಮುದಾಯದಲ್ಲಿ ಜಾಗೃತಿಯನ್ನು
ಮೂಡಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಇದಾದ ನಂತರ ಚಿತ್ರದುರ್ಗ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾದ ಸುರೇಶ ಬಾಬು ಮತ್ತು ಸಮಾಜದ ಮುಖಂಡರ ಹಾಗೂ ಅಖಿಲ ಕರ್ನಾಟಕ ಗಾಣಿಗ ಸಮೂಹ ಸಂಘದ ರಾಜ್ಯ ಘಟಕದ ಸಹಯೋಗದಲ್ಲಿ “ಆಪರೇಷನ್ ಸಿಂಧೂರ” ವಿಜಯೋತ್ಸವದ ಅಂಗವಾಗಿ ಹಣೆಗೆ ಸಿಂಧೂರ ಹಚ್ಚಿಕೊಂಡು ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ರಾಷ್ಟ್ರ ಧ್ವಜವನ್ನು ಪ್ರದರ್ಶನ ಮಾಡುವುದರ ಮೂಲಕ ಸೈನಿಕರಿಗೆ ಧೈರ್ಯವನ್ನು ತುಂಬಲಾಯಿತು.

ಇದೇ ಸಂದರ್ಭದಲ್ಲಿ ಚಿತ್ರದುರ್ಗ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷರಾದ ಸುರೇಶ ಬಾಬುರವರು ವೈಯಕ್ತಿಕವಾಗಿ 1 ಲಕ್ಷ ರೂಪಾಯಿ
ಚಕ್‍ನ್ನು ಯೋಧರ ಪರಿಹಾರ ನಿಧಿಗೆ ಜಿಲ್ಲಾಧಿಕಾರಿಗಳಾದ ವೆಂಕಟೇಶ್ ರವರಿಗೆ ನೀಡಿದರು.

ಈ ಸಂದರ್ಭದಲ್ಲಿ ಶಿವಾನಂದ, ಮಹಾಮಂತೇಶ್ ಡಿ.ಜಿ. ತಿಪ್ಪೇಸ್ವಾಮಿ, ಕೆ.ಟಿ.ಬಸಣ್ಣ, ಎನ್.ಟಿ.ಬಸವರಾಜು, ಆದರ್ಶ ರುದ್ರಮುನಿ,
ಚನ್ನಬಸಪ್ಪ, ಕಿರಣಶಂಕರ್, ನಾಗರತ್ನ, ಪುಷ್ಪ ಸುರೇಶ್‍ಬಾಬು ಸೇರಿದಂತೆ ಇತರರು ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *