SRH vs LSG IPL 2025: ಐಪಿಎಲ್ 2025ರ 61ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಿತು. ಲಕ್ನೋ 205 ರನ್ ಗಳಿಸಿದರೂ, ಹೈದರಾಬಾದ್ ಆಕ್ರಮಣಕಾರಿ ಬ್ಯಾಟಿಂಗ್ನಿಂದ 6 ವಿಕೆಟ್ಗಳ ಗೆಲುವು ಪಡೆಯಿತು. ಅಭಿಷೇಕ್ ಶರ್ಮಾ (59 ರನ್) ಮತ್ತು ಹೆನ್ರಿಚ್ ಕ್ಲಾಸೆನ್ (47 ರನ್) ಅವರ ಅದ್ಭುತ ಇನ್ನಿಂಗ್ಸ್ಗಳು ಹೈದರಾಬಾದ್ಗೆ ಗೆಲುವು ತಂದುಕೊಟ್ಟವು. ಈ ಸೋಲಿನೊಂದಿಗೆ ಲಕ್ನೋ ಪ್ಲೇಆಫ್ನಿಂದ ಹೊರಬಿದ್ದಿದೆ.

ಐಪಿಎಲ್ 2025 (IPL 2025) ರ 61 ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (SRH vs LSG) ವಿರುದ್ಧ ಸುಲಭ ಗೆಲುವು ದಾಖಲಿಸಿತು. ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ಜೈಂಟ್ಸ್ ತಂಡ 206 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡ ಈ ಗುರಿಯನ್ನು ಬೆನ್ನಟ್ಟಿ ಸೀಸನ್ನಲ್ಲಿ ನಾಲ್ಕನೇ ಗೆಲುವು ಸಾಧಿಸಿತು. ಈ ಸೋಲಿನೊಂದಿಗೆ, ಲಕ್ನೋ ಸೂಪರ್ ಜೈಂಟ್ಸ್ ತಂಡ ಪ್ಲೇಆಫ್ ರೇಸ್ನಿಂದ ಅಧಿಕೃತವಾಗಿ ಹೊರಬಿದ್ದಿತು.
205 ರನ್ ಬಾರಿಸಿದ ಲಕ್ನೋ
ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 205 ರನ್ ಗಳಿಸಿತು. ಮೊದಲ ವಿಕೆಟ್ಗೆ ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಾಮ್ 115 ರನ್ಗಳ ಜೊತೆಯಾಟ ನೀಡಿದರು. ಮಿಚೆಲ್ ಮಾರ್ಷ್ 65 ರನ್ ಮತ್ತು ಐಡೆನ್ ಮಾರ್ಕ್ರಾಮ್ 61 ರನ್ಗಳ ಇನ್ನಿಂಗ್ಸ್ ಆಡಿದರು. ಇವರ ಹೊರತಾಗಿ, ನಿಕೋಲಸ್ ಪೂರನ್ 26 ಎಸೆತಗಳಲ್ಲಿ 173.07 ಸ್ಟ್ರೈಕ್ ರೇಟ್ನಲ್ಲಿ 45 ರನ್ ಗಳಿಸಿದರು. ಆದರೆ, ಮಧ್ಯಮ ಓವರ್ಗಳಲ್ಲಿ ಸನ್ರೈಸರ್ಸ್ ಬೌಲರ್ಗಳು ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಪಡೆಯುವ ಮೂಲಕ ಲಕ್ನೋ ರನ್ ವೇಗಕ್ಕೆ ಕಡಿವಾಣ ಹಾಕಿದರು. ಸನ್ರೈಸರ್ಸ್ ಹೈದರಾಬಾದ್ ತಂಡದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಇಶಾನ್ ಮಾಲಿಂಗ 4 ಓವರ್ಗಳಲ್ಲಿ 28 ರನ್ಗಳಿಗೆ 2 ವಿಕೆಟ್ಗಳನ್ನು ಪಡೆದರು. ಉಳಿದಂತೆ ಹರ್ಷ್ ದುಬೆ, ಹರ್ಷಲ್ ಪಟೇಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 1 ವಿಕೆಟ್ ಪಡೆದರು.
ಅಭಿಷೇಕ್ ಸ್ಫೋಟಕ ಬ್ಯಾಟಿಂಗ್
ಇದಕ್ಕೆ ಪ್ರತಿಕ್ರಿಯೆಯಾಗಿ ಸನ್ರೈಸರ್ಸ್ ಹೈದರಾಬಾದ್ ಆಕ್ರಮಣಕಾರಿ ಆರಂಭವನ್ನು ಪಡೆಯಿತು. ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ 59 ರನ್ ಗಳಿಸಿ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಇಶಾನ್ ಕಿಶನ್ ಜೊತೆಗೆ, ಅವರು ಪವರ್ಪ್ಲೇನಲ್ಲಿ ವೇಗವಾಗಿ ರನ್ ಗಳಿಸಿದರು. ಆದರೆ, ದಿಗ್ವೇಶ್ 7.3ನೇ ಓವರ್ನಲ್ಲಿ ಅಭಿಷೇಕ್ ಅವರನ್ನು ಔಟ್ ಮಾಡುವ ಮೂಲಕ ಲಕ್ನೋಗೆ ಸ್ವಲ್ಪ ಸಮಾಧಾನ ತಂದರು. ಇದರ ಹೊರತಾಗಿಯೂ, ಸನ್ರೈಸರ್ಸ್ ಬ್ಯಾಟಿಂಗ್ ತಂಡವು ಒತ್ತಡವನ್ನು ಕಾಯ್ದುಕೊಂಡು ಸುಲಭವಾಗಿ ಗುರಿಯನ್ನು ತಲುಪಿತು. ತಂಡದ ಪರ ಇಶಾನ್ ಕಿಶನ್ 28 ಎಸೆತಗಳಲ್ಲಿ 35 ರನ್ ಗಳಿಸಿದರೆ, ಹೆನ್ರಿಚ್ ಕ್ಲಾಸೆನ್ (47 ರನ್) ಮತ್ತು ಕಮಿಂಡು ಮೆಂಡಿಸ್ (32 ರನ್) ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇದರಿಂದಾಗಿ ಹೈದರಾಬಾದ್ ತಂಡವು ಈ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದಿತು.
ಲಕ್ನೋ ತಂಡಕ್ಕೆ ಕೆಟ್ಟ ಸೀಸನ್
ಈ ಸೀಸನ್ ಲಕ್ನೋ ಸೂಪರ್ ಜೈಂಟ್ಸ್ಗೆ ಸವಾಲಿನದ್ದಾಗಿತ್ತು. ರಿಷಭ್ ಪಂತ್ ಮತ್ತು ಡೇವಿಡ್ ಮಿಲ್ಲರ್ ಅವರ ಕಳಪೆ ಫಾರ್ಮ್ ತಂಡವನ್ನು ನಿರಂತರವಾಗಿ ತೊಂದರೆಗೊಳಿಸಿತು. ಇವರ ಜೊತೆಗೆ ಸೀಸನ್ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದ ನಿಕೋಲಸ್ ಪೂರನ್ ಕೂಡ ಆ ಬಳಿಕ ಫಾರ್ಮ್ ಕಳೆದುಕೊಂಡರು. ಇವರಲ್ಲದೆ, ಲಕ್ನೋದ ಬೌಲಿಂಗ್, ವಿಶೇಷವಾಗಿ ಪವರ್ಪ್ಲೇನಲ್ಲಿ, ಈ ಸೀಸನ್ನಲ್ಲಿ ಅತ್ಯಂತ ಕೆಟ್ಟದಾಗಿತ್ತು. ಇದು ತಂಡದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿತು.
TV9 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1