ಜೂನ್ 14 ರಿಂದ ಸಾಕ್ಷಿ ಟ್ರಸ್ಟ್ ಬೆಂಗಳೂರು ವತಿಯಿಂದ “ಭಾರತ ಗೌರವ ಶಿಬಿರ”

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 24 ಜೂನ್ ೧೪ ರಿಂದ ೨೨, ೨೦೨೫ ರವರೆಗೂ ಸಾಕ್ಷಿ ಟ್ರಸ್ಟ್ ಬೆಂಗಳೂರು ಭಾರತ ಗೌರವ ಶಿಬಿರವನ್ನು ಆರೋವೇದ ತೋಟದಲ್ಲಿ ಆಯೋಜಿಸಿದೆ ಎಂದು ಶಿಬಿರ ಸಂಯೋಜಕರಾದ ಬಿಂದು ಮಾಧವ ವಿ.ಜೆ. ತಿಳಿಸಿದ್ದಾರೆ.


ಭಾರತ ಪುಣ್ಯಭೂಮಿ. ಇದು ದೇವಸಾನಿಧ್ಯ ದಟ್ಟಿಸಿದ ದೇಶವೂ ಅಹುದು. ಇದು ತ್ಯಾಗ ಭೂಮಿ, ಯೋಗ ಭೂಮಿ, ಕರ್ಮ
ಭೂಮಿ, ಅಸಂಖ್ಯ ಶೂರರು, ವೀರರು, ಧೀರರು ಆಳಿದ ದೇಶವಿದು. ಅಪಾರ ಯೋಗಿಗಳು, ತ್ಯಾಗಿಗಳು, ಸಂತರು,
ಸನ್ಯಾಸಿಗಳು ತಪಸ್ಸುಗೈದ ದೇಶವಿದು. ಇದುವೇ ’ಭಾರತ ಗೌರವ’ ವೇದಗಳು ಭಾರತೀಯ ಸಂಸ್ಕೃತಿಯ ಅಡಿಗಲ್ಲು, ಅಂದು
ಇಂದು ಮುಂದು ವೇದಗಳೇ ನಮ್ಮ ಬೆಳಕು. ಮನುಷ್ಯನ ಅಂತಃಸ್ಸತ್ವ ಅರಳಿಸುವ ಜ್ಞಾನ ವೇದಗಳಲ್ಲಿ ಇದೆ. ಕತ್ತಲೆ ಕಳೆಯಬೇಕು.
ಬೆಳಕು ಪಡೆಯಬೇಕು. ಇದಕ್ಕಾಗಿ ವೇದಗಳು ಬೇಕು. ಇದರ ಮರ್ಮ ಅರಿಯಲು “ಭಾರತ ಗೌರವ ಶಿಬಿರ”ವನ್ನು
ಆಯೋಜಿಸಲಾಗಿದೆ.


ಭಾರತದ ಪರಂಪರೆ ಪೂರ್ಣವಾಗಿ ಅರಿಯಬೇಕಾಗಿದೆ. ಮಸುಕಾದ ನಮ್ಮ ಸಂಸ್ಕೃತಿ-ಸ್ಮರಣೆಗೆ ಹೊಳಪು ನೀಡಬೇಕಾಗಿದೆ.
ಭಾರತದಲ್ಲಿ ಆಗಿಹೋದ ಪ್ರಾತಃಸ್ಮರಣೀಯರನ್ನು ನೆನೆಯಬೇಕು. ವಿಶ್ವಗುರು ಪರಂಪರೆ ಮೆರೆಯಲು ನಾವೆಲ್ಲ ಸಿದ್ದರಾಗಬೇಕು.
ಸಂಸ್ಕೃತಿಯ ತೇರು ಎಳೆಯಲು, ಪರಂಪರೆಯ ಪಲ್ಲಕ್ಕಿ ಹೊರಲು ಮನಸ್ಸು ಮಾಡಬೇಕು. ದೇವರು ದಯಪಾಲಿಸಿದ ಶಕ್ತಿ, ಯುಕ್ತಿ,
ಸಾಮರ್ಥ್ಯ ಮತ್ತು ಸದ್ಗುಣಗಳನ್ನು ಪೂರ್ಣಪ್ರಮಾಣದಲ್ಲಿ ತೊಡಗಿಸಬೇಕು. ಈ ಸಿದ್ಧತೆಗಾಗಿ ”ಭಾರತ ಗೌರವ ಶಿಬಿರ”ವನ್ನು
ಹಮ್ಮಿಕೊಂಡಿದೆ.


ಭಾರತ ಗೌರವ ಶಿಬಿರ ಜೂನ್ ೧೪ ರಿಂದ ೨೨ ವರೆಗೆ ನಡೆಯಲಿದೆ. ಬೆಂಗಳೂರಿನ ಹೊರ ವಲಯದಲ್ಲಿ, ಪ್ರಶಾಂತ ವಾತಾವರಣ
ನೆಲೆಸಿದ ಆರೋವೇದ ತೋಟ (ಎಡಮಡು ಗ್ರಾಮ)ದಲ್ಲಿ ಆಯೋಜಿಸಲಾಗಿದೆ. ೩೦ ರಿಂದ ೩೫ ಆಸಕ್ತರು ಮಾತ್ರ ಭಾಗವಹಿಸಲು
ಅವಕಾಶ ಇದೆ. ೨೦ ರಿಂದ ೫೦ ವರ್ಷದೊಳಗಿನ ಸ್ತ್ರೀ ಪುರುಷರೆಲ್ಲ ಭಾಗವಹಿಸಬಹುದು. ಪ್ರವೇಶ ಉಚಿತ. ಸರಳ ಊಟ,
ವಸತಿ ವ್ಯವಸ್ಥೆ ಮಾಡಲಾಗುವುದು.ವಿವಿಧ ಕ್ಷೇತ್ರದ ಸಾಧಕರು, ವಿದ್ವಾಂಸರು ಮಾರ್ಗದರ್ಶನ ನೀಡಲಿದ್ದಾರೆ. ಯೋಗ,
ಪ್ರಾಣಾಯಾಮ, ಧ್ಯಾನ ಹಾಗೂ ಆಟೋಟಗಳೂ ಶಿಬಿರದ ಭಾಗ ಆಗಿರುತ್ತವೆ.


ಎಲ್ಲ ಶಿಬಿರಾರ್ಥಿಗಳಿಗೂ ಅಧ್ಯಯನ ಸಾಮಗ್ರಿ, ಉಚಿತವಾಗಿ ನೀಡಲಾಗುವುದು. ಭಾರತೀಯ ಸಂಸ್ಕೃತಿಯ ರಕ್ಷಣೆ, ವರ್ಧನೆಗಾಗಿ
ಆಸಕ್ತಿ ಹೊಂದಿದವರು ನಮೂದಿತ ಅರ್ಜಿ ಭರ್ತಿ ಮಾಡಿ ಕಳಿಸಲು ವಿನಂತಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೨೫-೦೫-
೨೦೨೫. ಆಯ್ಕೆ ಆದವರಿಗೆ ೩೦-೦೫-೨೦೨೫ ಒಳಗೆ ತಿಳಿಸಲಾಗುವುದು.ಬನ್ನಿ, ಭಾಗವಹಿಸಿ, ಜ್ಞಾನಸಾಗರದಲ್ಲಿ ಈಜಾಡೋಣ.
ಕರ್ಮ ಯೋಗದ ಆಕಾಶದಲ್ಲಿ ಹಾರಾಡೋಣ, ಇದು ಸಮಾಜ ಯೋಗ, ಅರ್ಜಿ ಹಾಗೂ ಇತರ ಮಾಹಿತಿಗಾಗಿ ಶಿಬಿರ ಸಂಯೋಜಕರಾದ ಬಿಂದು ಮಾಧವ ವಿ.ಜೆ. ೯೦೦೮೮೩೩೮೮೬
ಸಂಪರ್ಕಿಸಬಹುದಾಗಿದೆ. info@vedah.com www.vedah.com

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *