
ಉತ್ತಮ ಪ್ರವಾಸಿ ಮಾರ್ಗದರ್ಶಕರಾಗಲು ಉತ್ತಮ ಆರೋಗ್ಯ ಹೊಂದುವುದು ಅವಶ್ಯಕ_ ರವಿ ಕೆ.ಅಂಬೇಕರ್, ಯೋಗ ಪ್ರಚಾರಕರು, ಭಾರತೀಯ ಯೋಗ ಶಿಕ್ಷಣ ಸಂಸ್ಥೆ.

ಚಿತ್ರದುರ್ಗ: ಮೇ.25. ಪ್ರವಾಸಿ ಮಾರ್ಗದರ್ಶಕರು ನಿರಂತರವಾಗಿ ನಡೆಯುವುದು, ನಿಲ್ಲುವುದು, ಕೆಲವೊಂದು ಸಮಯ ಭಾರವಾದ ವಸ್ತುಗಳನ್ನು (ಉದಾಹರಣೆಗೆ ಲಗೇಜ್) ಎತ್ತುವುದು ಮತ್ತು ಪ್ರಯಾಣಿಕರೊಂದಿಗೆ ವಿವಿಧ ಸ್ಥಳಗಳಿಗೆ ತೆರಳುವಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಅದಕ್ಕಾಗಿ ಅವರು ತಮ್ಮ ದೇಹವನ್ನು ಸಧೃಢ ಮತ್ತು ಆಕರ್ಶಕವಾಗಿ ಇಟ್ಟುಕೊಳ್ಳುವುದಕ್ಕಾಗಿ ಪ್ರತಿದಿನ ಯೋಗಭ್ಯಾಸ ಮಾಡುವುದು ಮುಖ್ಯ ಎಂದು ಯೋಗ ಗುರು ರವಿ ಕೆ.ಅಂಬೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹೋಟೆಲ್ ಮಯೂರದುರ್ಗ ಘಟಕ ಚಿತ್ರದುರ್ಗ ವತಿಯಿಂದ ನಗರದ ಕೋಟೆ ಮುಂಭಾಗದಲ್ಲಿರುವ ಸರ್ಕಾರಿ ಸ್ವಾಮ್ಯದ ಹೋಟೆಲ್ ಮಯೂರದುರ್ಗ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಯೋಗ ಸಪ್ತಾಹ ಕಾರ್ಯಕ್ರಮದಲ್ಲಿ ಕೋಟೆಯ ಪ್ರವಾಸಿ ಮಾರ್ಗದರ್ಶಕರೂ ಸೇರಿದಂತೆ ನಿಗಮದ ಸಿಬ್ಬಂದಿ ವರ್ಗದವರಿಗೆ ಯೋಗ ತರಬೇತಿ ನೀಡಿ ಅವರು ಮಾತನಾಡುತ್ತಾ ಅವರು ಪ್ರವಾಸಿ ಮಾರ್ಗದರ್ಶಕರಾದವರು ಪ್ರವಾಸಿಗರ ನಿರೀಕ್ಷೆಗಳನ್ನು ಪೂರೈಸುವುದು, ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಮಾನಸಿಕವಾಗಿ ಒತ್ತಡವನ್ನು ಉಂಟುಮಾಡಬಹುದು. ಉತ್ತಮ ಮಾನಸಿಕ ಆರೋಗ್ಯವು ಈ ಒತ್ತಡವನ್ನು ನಿರ್ವಹಿಸಲು ಮತ್ತು ಶಾಂತವಾಗಿ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಲು ನೆರವಾಗುತ್ತದೆ. ನಿತ್ಯ ಯೋಗಭ್ಯಾಸ ಈ ಎಲ್ಲಾ ತೊಂದರೆಗಳನ್ನು ನಿವಾರಿಸಲು ನೆರವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೋಟೆಲ್ ಮಯೂರದುರ್ಗದ ವ್ಯವಸ್ಥಾಪಕ ಚೇತನ್ ಕುಮಾರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರವಾಸೋದ್ಯಮ ಸಪ್ತಾಹವು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಏರ್ಪಡಿಸಲಾದ ಒಂದು ವಾರದ ಕಾರ್ಯಕ್ರಮ. ದಿನಾಂಕ ಮೇ 22 ರಿಂದ 28ರವರೆಗೆ ಎಳುದಿನಗಳು ಪ್ರವಾಸಿಗರಿಗಾಗಿ ಆಹಾರಮೇಳ, ಚಾರಣ, ಯೋಗ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಇದು ಪ್ರವಾಸೋದ್ಯಮದ ಪ್ರಾಮುಖ್ಯತೆಯನ್ನು ತಿಳಿಸುವುದು, ಪ್ರವಾಸಿಗರಿಗೆ ಪ್ರವಾಸಿ ತಾಣಗಳ ಬಗ್ಗೆ ಜ್ಞಾನ ನೀಡುವುದು ಮತ್ತು ಪ್ರವಾಸೋದ್ಯಮದ ಉದ್ಯಮಗಳನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಇದರಲ್ಲಿ ಯೋಗ ಸಪ್ತಾಹ ಕಾರ್ಯಕ್ರಮ ಪ್ರವಾಸಿಗರಿಗೆ ಮಾತ್ರವಲ್ಲದೆ ನಮ್ಮ ಐತಿಹಾಸಿಕ ಕೋಟೆ ಪ್ರವಾಸಿ ಮಾರ್ಗದರ್ಶಕರಿಗೂ ಆರೋಗ್ಯ ಸುಧಾರಿಸಿಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.
ಯೋಗ ಸಪ್ತಾಹ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಸಾಹಸಿಗ ಜ್ಯೋತಿರಾಜ್, ಯೋಗ ಶಿಕ್ಷಕಿ ಮಂಜುಳಾ ರಾಜೇಶ್, ನಿವೃತ್ತ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನ ಚಾರ್ ಸೇರಿದಂತೆ ಹಲವಾರು ಪ್ರವಾಸಿಗರು, ಹಾಗೂ ಪ್ರವಾಸೋದ್ಯಮ ನಿಗಮದ ಪ್ರವಾಸಿ ಮಾರ್ಗದರ್ಶಕರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1