ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 25 ಪಿ.ಯು.ಸಿಯಲ್ಲಿ ಮತ್ತು ಸಿಇಟಿಯಲ್ಲಿ ೬ನೇರ‍್ಯಾಂಕ್ ಪಡೆದಿರುವ ಮದಕರಿಪುರ ಗ್ರಾಮದ ಬಡ ಕುಟುಂಬದಲ್ಲಿರುವ ಎಮ್. ಮಾರುತಿಯವರಿಗೆ ಮದಕರಿ ಬಳಗದವತಿಯಿಂದ ಸೋಮವಾರ ಅವರ ನಿವಾಸದಲ್ಲಿ ಸನ್ಮಾನ ಮಾಡಲಾಯಿತು.
ಮದಕರಿ ಬಳಗದ ಸಂಚಾಲಕರಾದ ಡಿ.ಗೋಪಾಲಸ್ವಾಮಿ ನಾಯಕ ಸನ್ಮಾನ ಮಾಡಿ ಮಾತನಾಡಿ ಪ್ರತಿಭೆ ಯಾರ ಸ್ವತ್ತು ಅಲ್ಲಾ
ವಿದ್ಯೆಯನ್ನು ಪ್ರೀತಿಸುವವರಿಗೆ ವಿದ್ಯೆ ಒಲಿಯುತ್ತದೆ.ಇಲ್ಲಿ ಬಡತನ, ಸಿರಿತನ ಗಂಡು, ಹೆಣ್ಣು ಜಾತಿ, ಮv, ಧರ್ಮವನ್ನು ಮೀರಿ
ಯಾವುದೇ ಭೇಧಭಾವವಿಲ್ಲದೆ ಪರಿಶ್ರಮ ಮಾಡಿದವರಿಗೆ ವಿದ್ಯೆ ಒಲಿಯುತ್ತದೆ. ವಿದ್ಯೆಯನ್ನು ಪ್ರೀತಿಸಿದರೆ ವಿದ್ಯೆ ಒಲಿಯುತ್ತದೆ.
ಮಾರುತಿಯವರು ವಿದ್ಯಾಭ್ಯಾಸ ಮುಂದುವರೆಯಲೆಂದು ಶುಭ ಹಾರೈಸಿದರು.
ರ‍್ಯಾಂಕ್ ಪಡೆದ ವಿದ್ಯಾರ್ಥಿ ಮಾತನಾಡಿ ಶಿಕ್ಷಣವನ್ನು ಇದೆ ರೀತಿ ಮುಂದೆವರಿಸುತ್ತನೆ. ನಿಮ್ಮಗಳ ಸಹಾಯ ಮತ್ತು ಸಹಕಾರ
ಅಗತ್ಯವಾಗಿದೆ, ಇಂದಿನ ದಿನಮಾನದಲ್ಲಿ ವಿದ್ಯೆ ಇದ್ದರೆ ಮಾತ್ರ ಶಕ್ತಿ ಬರುತ್ತದೆ. ಯಾವುದೇ ಕಾರಣಕ್ಕೂ ಸಹಾ ಕಲಿಯುವುದನ್ನು
ಬಿಡುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮದಕರಿನಾಯಕ ವಂಶಸ್ಥರಾದ ರಾಜಮದಕರಿ ನಾಯಕ, ಜಿ.ಪ್ರಹ್ಲಾದ್,
ಕೆ.ಸೋಮಶೇಖರ್,ನಾಗರಾಜು,ಪರಮೇಶ್ವರಪ್ಪ.ಆರ್,ಸುಪುತ್ರ,ಆರ್.ನಾರಾಯಣಸ್ವಾಮಿ, ಎಂ.ವೆಂಕಟಗಿರಿ, ಎಂ.ಕೆ.ರಾಜು,
ತಿಪ್ಪೇಸ್ವಾಮಿ, ಮೂರ್ತಪ್ಪ, ಮಾರುತಿ ತಂದೆಯಾದ ಮೋಹನ್, ತಾಯಿ ಸವಿತ, ಅಕ್ಕ ಸೀರಿಶ ಸೇರಿದಂತೆ ಇತರರು
ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1