ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿ, ಮಂಗಳವಾರ ಉಪದೇಶಕ್ಕೆ ಉದ್ದೇಶ, ವ್ಯಾಪಾರಕ್ಕೆ ವಿದೇಶ, ಹಿರಿಯರಿಂದ ಸಂದೇಶ, ಉದ್ಯೋಗಕ್ಕೆ ಪ್ರವೇಶ, ಮಾತಿನಲ್ಲಿ ಆವೇಶ ಎಲ್ಲವೂ ಇರವುದು. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಅತಿಗಂಡ, ಕರಣ: ಚತುಷ್ಪಾತ್, ಸೂರ್ಯೋದಯ – 06 : 04 am, ಸೂರ್ಯಾಸ್ತ – 06 : 55 pm, ಇಂದಿನ ಶುಭಾಶುಭಕಾಲ: ರಾಹು ಕಾಲ 15:43 – 17:19, ಯಮಘಂಡ ಕಾಲ 09:17 – 10:53, ಗುಳಿಕ ಕಾಲ 12:30 – 14:06
ಮೇಷ ರಾಶಿ: ಹಳೆಯ ಗಾಯಕ್ಕೇ ಬರೆಬಿದ್ದರೆ ಗಾಯ ವಾಸಿಯಾಗದು. ಬೇರೆ ಹೂಡಿಕೆಯಲ್ಲಿ ನಿಮಗೆ ಆಸಕ್ತಿ ಹೆಚ್ಚಿರುವುದು. ನೀವು ಅಂದುಕೊಂಡ ರೀತಿಯಲ್ಲಿ ನಡೆಯದೇ ವಿರುದ್ಧವಾಗಿ ನಡೆಯುವುದನ್ನು ಕಂಡು ನಿರಾಸೆಗೊಳ್ಳುವಿರಿ. ಹಚ್ಚಲೇಬೇಕಿದ್ದರೆ ಹಣತೆಯನ್ನು ಕತ್ತಲಲ್ಲಿ ಹಚ್ಚಿ. ನಿಮಗೂ ಕೆಲವರಿಗೂ ಬೆಳಕಾದೀತು. ಹಣದ ಹೊಸ ಮಾರ್ಗಗಳು ಕಣ್ಮುಂದೆ ಬರುತ್ತವೆ, ಆದರೆ ನಿರ್ಧಾರಗಳ ಕಡೆ ಯತ್ನಪೂರ್ವಕವಾಗಿ ಸಾಗಬೇಕು. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ. ದೂರ ಬಂಧುಗಳ ಅನಿರೀಕ್ಷಿತ ಭೇಟಿಯು ಆಗಲಿದೆ. ವಿವಾಹ ಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ. ಬಹಳ ಕಾಲದ ಆಪ್ತನಿಂದ ವಿಶ್ವಾಸಘಾತಕವಾಗಿ ನೋವಾಗಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು. ಅತ್ಯಾಪ್ತರ ಜೊತೆ ಕಾಲವನ್ನು ಕಳೆಯುವಿರಿ. ಯಾರಿಗಾದರೂ ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬರಬಹುದು.
ವೃಷಭ ರಾಶಿ: ನಿಮ್ಮ ನಡಿಗೆ ವಿಜಯದ ಕಡೆಗೆ ಇದೆಯೇ ಎಂಬುದನ್ನು ದೃಢಮಾಡಿ. ಯಾರದೋ ಮಾತಿಗೆ ದಾರಿತಪ್ಪುವ ಸಾಧ್ಯತೆ ಇದೆ. ಉದ್ದೇಶವಿಲ್ಲದವರಿಂದ ಉಪದೇಶ ಕೇಳಬೇಕಾಗುವುದು. ನಿಮ್ಮ ಬಗ್ಗೆ ಕುಖ್ಯಾತಿ ಬರಬಹುದು. ಒಮ್ಮೆಲೆ ಹತ್ತಾರು ವಿಚಾರಗಳಲ್ಲಿ ಆಸಕ್ತಿಯನ್ನು ಹೊಂದುವಿರಿ. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ತುಂಬಾ ಭಾವುಕವಾಗಿ ಇರುವ ಕಾರಣದಿಂದ ನಿಮಗೆ ಕೆಲ ಸಂದರ್ಭಗಳಲ್ಲಿ ಕೋಪ ವಶವಾಗುವ ಸಾಧ್ಯತೆ ಇದೆ. ಹಣದ ವಿಚಾರದಲ್ಲಿ ನಿಮ್ಮ ನಿರ್ಧಾರಗಳು ನಿಖರವಾಗಿರಬೇಕಾಗಿದೆ. ಸಂಬಂಧಿಕರೊಂದಿಗೆ ನಿಮ್ಮ ನಡವಳಿಕೆಯಲ್ಲಿ ಸಹನೆ ಅಗತ್ಯ. ಎಂದೂ ಆಗದ ವಿಚಾರದಲ್ಲಿ ನಿಮಗೆ ಆಸಕ್ತಿ ಇರುವುದು. ಹೊರಗಡೆಗೆ ಊಟಕ್ಕೆ ಹೋಗಲಿದ್ದೀರಿ. ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಕುಟುಂಬದವರ ಜೊತೆ ಸಮಯವನ್ನು ಕಳೆಯುವಿರಿ. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ನೋವನ್ನು ನುಂಗಿ ಬದುಕುವ ರೀತಿಯು ನಿಮಗೆ ಗೊತ್ತಾಗಲಿದೆ.
ಮಿಥುನ ರಾಶಿ: ಆಗುವುದನ್ನು ತಡೆಯಲಾಗದಮೇಲೆ ಚಿಂತೆ ಬೇಕಿಲ್ಲ. ಧೈರ್ಯವನ್ನಷ್ಟೇ ನಿಮ್ಮಕಡೆಯಿಂದ ಮಾಡಲು ಸಾಧ್ಯ. ನಿಮ್ಮ ತುರ್ತು ಆರ್ಥಿಕ ಸ್ಥಿತಿಯನ್ನು ಎದರಿಸಲು ಕಷ್ಟವಾಗುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಇಂದು ವಾಹನದ ಸಮಯವು ವ್ಯತ್ಯಾಸವಾದ್ದರಿಂದ ನಡೆಯಬೇಕಾಗ ಸ್ಥಿತಿ ಬರಬಹುದು. ಹಣಕಾಸು ವ್ಯವಹಾರದಲ್ಲಿ ಸುಧಾರಣೆಯಾಗಲಿದೆ. ಹೆತ್ತವರ ಜೊತೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳಿ. ಪ್ರೀತಿಯ ಪ್ರಭಾತವು ನಿಮ್ಮ ಜೀವನವನ್ನು ಬೆಳಗಿಸುತ್ತದೆ. ವೃತ್ತಿಪರ ಬದುಕಿನಲ್ಲಿ ಹೊಸ ಅವಕಾಶಗಳು ಸಿಗಬಹುದು. ಮೋಸದಿಂದ ನಿಮ್ಮ ಹಣವು ಕಳೆದುಹೋಗುವುದು. ನಿಮ್ಮ ಪ್ರೇಮಪ್ರಕರಣವು ಗಂಭೀರಸ್ಥಿತಿಯನ್ನು ತಲುಪಲಿದೆ. ತಾಳ್ಮೆಯಿಂದ ವ್ಯವಹರಿಸಿ, ಸರಿ ಮಾಡಿಕೊಳ್ಳಿ. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಹೊಸ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯವು ಸಾಲದು. ಅಪರಿಚಿತರ ಜೊತೆ ಸಲುಗೆ ಅನವಶ್ಯಕ. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ.
ಕರ್ಕಾಟಕ ರಾಶಿ: ಏನನ್ನಾದರೂ ಕೇಳಿಕೊಳ್ಳಲು ಉತ್ತಮ ಸಮಯ. ನಿಮಗೆ ಎಂದಿಗೂ ಉಚಿತವಾದುದನ್ನೇ ಕೇಳಿ. ಸಾಲಬಾಧೆಯೂ ಬಿಡದೇ ನಿಮ್ಮನ್ನು ಅತಿಯಾಗಿ ಕಾಡಲಿದೆ. ಅಷ್ಟೇ ಅಲ್ಲದೇ ಸಾಲ ಕೊಟ್ಟವರೂ ನಿಮ್ಮನ್ನು ದಿನವೂ ಕೇಳುವರು. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಹಣದ ವ್ಯವಹಾರಗಳಲ್ಲಿ ನೆಮ್ಮದಿ ಅನುಭವಿಸಲಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಮಾತುಕತೆ ಸಂತೋಷ ನೀಡಲಿದೆ. ಪ್ರೀತಿಯ ಕ್ಷಣಗಳು ಮನಸ್ಸಿಗೆ ಹತ್ತಿರವಾಗುತ್ತವೆ. ಕೆಲಸದ ಒತ್ತಡದಲ್ಲೂ ನಿಮ್ಮ ಶಕ್ತಿಯ ಪ್ರದರ್ಶನ ಸುಧಾರಿತವಾಗಿರುತ್ತದೆ. ವಿವಾಹವಾಗಲು ಬಹಳ ಆತುರಪಡುವಿರಿ. ಮನಸ್ಸಿನ ಶಾಂತಿಯನ್ನು ಪಡೆಯಲು ಶ್ರಮಿಸಬೇಕು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು.
ಸಿಂಹ ರಾಶಿ: ಯಾರನ್ನೂ ಆತಂಕಗೊಳಿಸಬೇಡಿ. ಹೇಳುವುದನ್ನು ಹೇಳುವಹಾಗೇ ಹೇಳಿ. ಉದ್ಯೋಗವನ್ನು ಅರಸುತ್ತ ಇದ್ದರೆ ಇಂದು ಉತ್ತಮ ಉದ್ಯೋಗವು ಅನಿರೀಕ್ಷಿತವಾಗಿ ಸಿಗಲಿದೆ. ಸಿಕ್ಕ ಉದ್ಯೋಗವು ಮುಂದೆ ಅನೇಕ ಲಾಭವನ್ನು ಮಾಡಿ ಕೊಡಲಿದೆ. ಶಿಷ್ಟ ನಡವಳಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಕಟುವಚನದಿಂದ ಅವಾಂತರ ಸೃಷ್ಟಿಯಾದೀತು. ಹಣದ ವ್ಯಯದಲ್ಲಿ ಮಿತಿಮೀರಬೇಡಿ, ಸಣ್ಣ ಉಡುಗೊರೆಗೂ ಸಂಯಮ ಬೇಕಾಗುತ್ತದೆ. ಕುಟುಂಬ ಸದಸ್ಯರ ಭಾವನೆಗಳಿಗೆ ಗೌರವ ನೀಡಿ, ಬೇಜವಾಬ್ದಾರಿಯ ಮಾತುಗಳಿಂದ ದೂರವಿರಿ. ವಿನಾಕಾರಣ ಮನೆಯವರನ್ನು ದೂರುತ್ತ ಕುಳಿತುಕೊಳ್ಳಬೇಡಿ. ನಿಮ್ಮ ಕರ್ತವ್ಯವೇನು ಎಂಬುದು ನೀವೇ ನೆನಪಿಗೆ ತಂದುಕೊಂಡು ಮಾಡಿ. ಅತಿಯಾಸೆಯಿಂದ ದುಃಖವು ಬರಬಹುದು. ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣದ ಬಗ್ಗೆ ಸರಿಯಾದ ನಿರ್ಧಾರವಿರಲಿ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ. ಕೆಲವರ ಸ್ವಭಾವು ಇಷ್ಟವಾಗದೇ ಅವರಿಂದ ದೂರವಿರಲು ಪ್ರಯತ್ನಿಸುವಿರಿ.
ಕನ್ಯಾ ರಾಶಿ: ನಿಮಗೆ ಇಂದು ಬಹಳ ಸೂಕ್ಷ್ಮ ಕಾಲವಾಗಿದ್ದು, ನಡೆತೆಯನ್ನು ಸರಿಯಿಟ್ಟುಕೊಳ್ಳುವ ಪ್ರಯತ್ನ ಚಾಲ್ತಿಯಲ್ಲಿರಲಿ. ಇಂದು ಹಲವಾರು ದಿನಗಳಿಂದ ವಾಹನ ಖರೀದಿಯ ಆಸೆಯನ್ನು ಪೂರ್ಣಮಾಡಿಕೊಳ್ಳುವಿರಿ. ವಿನಾಕಾರಣ ವಾಗ್ವಾದಗಳು ನಡೆಯಬಹುದು. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಕೋಪವನ್ನು ನಿಯಂತ್ರಿಸುವುದು ಅತ್ಯಗತ್ಯ, ಇಲ್ಲದಿದ್ದರೆ ಸಂಬಂಧಗಳು ಹಾಳಾಗಬಹುದು. ಹಣದ ಸಮಸ್ಯೆಗಳಿಂದಾಗಿ ನಿರ್ಣಯಗಳಲ್ಲಿ ಎಚ್ಚರಿಕೆ ಅಗತ್ಯ. ಮನೆಮಂದಿಯೊಂದಿಗೆ ನಿಮ್ಮ ಮಾತು ಸರಳವಾಗಿರಲಿ. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ಕುಟುಂಬದವರಿಗೆ ಸಮಯ ಮೀಸಲಿಡಿ. ಕೈಯ್ಯಲ್ಲಿರುವ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಳ್ಳುವಿರಿ. ಹೊರದೇಶದಲ್ಲಿ ಇರುವವರಿಗೆ ಕಷ್ಟವಾಗುವ ಸಾಧ್ಯತೆ ಇದೆ. ನಿಮ್ಮ ಬಗ್ಗೆ ಪ್ರಚಾರದ ಗೀಳು ಇರಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಯಾರದೋ ಮೂಲಕ ಸರ್ಕಾರಿ ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ.
ತುಲಾ ರಾಶಿ: ನೆಮ್ಮದಿಯನ್ನು ಕೊಡುವವರೇ ಅದನ್ನು ಹಾಳುಮಾಡಿಕೊಂಡಂತಾಗುತ್ತದೆ. ನೀವು ಇಂದು ಉದ್ಯೋಗದ ಸ್ಥಳದಲ್ಲಿ ಏನನ್ನಾದರೂ ಹೇಳಿಬಿಡಬೇಡಿ. ಹೊಸ ಹೂಡಿಕೆ ಯೋಜನೆಗಳ ಕುರಿತು ಅಧ್ಯಯನ ಮಾಡಿ ನಂತರ ನಿರ್ಧಾರ ಕೈಗೊಳ್ಳಿ. ಕುಟುಂಬದೊಂದಿಗೆ ಸಮಯ ಕಳೆಯುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ನಿಮ್ಮ
ಕೌಶಲ್ಯ ಗುರುತಿಸಲ್ಪಡುತ್ತದೆ. ಉದ್ಯೋಗವನ್ನು ಬದಲಿಸುವ ನಿರೀಕ್ಷೆಯಲ್ಲಿರುವಿರಿ. ಸರಳ ಸಮಾರಂಭದಲ್ಲಿ ಭಾಗಿಯಾಗಬಹುದು. ಸಮಯವನ್ನು ದುರುಪಯೋಗ ಮಾಡಿಕೊಳ್ಳಿದ್ದೀರಿ. ಸಂತಾನದಿಂದ ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು. ದಾಂಪತ್ಯದಲ್ಲಿ ಮುಸುಕಿನ ಸಮರ ನಡೆಯುತ್ತಿರುವುದು.
ವೃಶ್ಚಿಕ ರಾಶಿ: ಮಕ್ಕಳಿಂದ ನಿಮಗೆ ಕಾಳಜಿ ಸಿಕ್ಕಿದ್ದು ಸಂತೋಷವಾಗುವುದು. ಬಲವಂತದ ಪ್ರೇಮವಾದರೆ ಅದು ತಪ್ಪಿಹೋಗಬಹುದು. ನಿಮಗಿಷ್ಟವಾದವರ ಜೊತೆ ನಿಮ್ಮ ವಿಹಾರ ಇರುವುದು. ಇಂದು ಬಾಯಿ ಚಪಲಕ್ಕೆ ಅಹಿತಕರಚಮವಾದ ಆಹಾರವನ್ನು ಸೇವಿಸುವಿರಿ. ಹಣದ ಕುರಿತು ಸಕಾಲಿಕ ನಿರ್ಧಾರ ಅಗತ್ಯ. ಒಗ್ಗಟ್ಟನ್ನು ಪ್ರದರ್ಶಿಸಲು ಹೋಗಿ ಎಡವಟ್ಟು ಮಾಡಿಕೊಳ್ಳುವಿರಿ. ಕುಟುಂಬದ ಒಗ್ಗಟ್ಟಿಗೆ ಬಲ ನೀಡುವ ಯತ್ನ ಮಾಡಿ. ಪ್ರೀತಿಯ ಸಂಬಂಧ ಹೆಚ್ಚು ಆಳವಾಗಬಹುದು. ಉದ್ಯೋಗದಲ್ಲಿ ಸ್ಪಷ್ಟ ದೃಷ್ಟಿಕೋನದಿಂದ ಯಶಸ್ಸು ಸಾಧ್ಯ. ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಿ. ಕಾನೂನಿನ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ನಿಮ್ಮ ನಡವಳಿಕೆಯು ವಿವೇಕಯುತವಾಗಿರಲಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು. ಇನ್ಮೊಬ್ಬರನ್ನು ದೂರುವುದರಿಂದ ನೀವು ಸಜ್ಜನರಾಗಲಾರಿರಿ. ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಇಂದು ನಿಮಗೆ ಬಂಧನದಂತೆ ಅನ್ನಿಸಬಹುದು. ಭಯದಿಂದ ಕೆಲಸ ಮಾಡಿಸಿಕೊಳ್ಳುವಿರಿ.
ಧನು ರಾಶಿ: ಯಾರ ಪ್ರಶಂಸೆಯನ್ನೂ ನೀವು ಸುಲಭವಾಗಿ ಒಪ್ಪಲಾರಿರಿ. ಎದುರಿಗೆ ಒಂದು ಹಿಂದೆ ಒಂದು ಮಾಡಿದವರನ್ನು ಮೆಚ್ಚಲಾರಿರಿ. ಇಂದು ವಿದ್ಯಾರ್ಥಿಗಳಿಗೆ ತಂದೆಯಿಂದ ಅಗತ್ಯವಿರುವ ಧನವು ಲಭ್ಯವಾಗಬಹುದು. ಅಧರ್ಮ ಮಾರ್ಗದಲ್ಲಿ ಹೋಗಲು ಯಾರದರೂ ಪ್ರೇರಣೆ ಕೊಡಬಹುದು. ಖರ್ಚು ಹೆಚ್ಚಾಗಬಹುದು. ಮಿತ್ರನ ಸಲಹೆಯಿಂದ ಹಣಕಾಸಿನ ಲಾಭ ಸಂಭವಿಸುತ್ತದೆ. ಮನೆಯವರು, ಮಕ್ಕಳೊಂದಿಗೆ ಕಾಲ ಕಳೆಯುವುದು ಮನಸ್ಸಿಗೆ ನೆಮ್ಮದಿ ನೀಡಲಿದೆ. ಅಂತರಂಗವು ಸರಿಯಾಗಿ ಇನ್ನೊಬ್ಬರಿಗೆ ತಿಳಿಯುವುದು. ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋಗಬಹುದು. ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಜನರ ಜೊತೆ ಬೆರೆಯುವುದು ನಿಮಗೆ ಇಷ್ಟವಾಗದು. ಉನ್ನತ ವಿದ್ಯಾಭ್ಯಾಸಕ್ಕೆ ನಿಮ್ಮವರು ಸಲಹೆ ಕೊಡಬಹುದು. ನಿಮ್ಮ ಹಣವನ್ನು ಪರಿಚಿತರು ಕೇಳಬಹುದು. ಅಧಿಕಾರವು ಅಹಂಕಾರವಾಗಿ ಬದಲಾಗುವುದು ಬೇಡ. ನಿಮ್ಮ ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ಸರಿಯಾಗಿ ಪ್ರತಿಕ್ರಯಿಸಲು ನಿಮಗೆ ಬಾರದೇ ಇರುವುದು.
ಮಕರ ರಾಶಿ: ನಿಮ್ಮ ಲಾಭವನ್ನು ಮತ್ಯಾರೋ ನಿರೀಕ್ಷಿಸಿ, ನಿಮ್ಮಿಂದ ಹಣ ಪಡೆಯಬಹುದು. ನೀವು ಸಲ್ಲದ ಯೋಚನೆಗಳಿಂದ ಮನಸ್ಸು ಹಾಳು ಮಾಡಿಕೊಳ್ಳುವಿರಿ. ಹಿರಿಯರ ಸಲಹೆಯನ್ನು ಪಡೆಯಿರಿ. ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಒತ್ತಡದಲ್ಲಿ ಸಿಲುಕಿಕೊಳ್ಳಬೇಡಿ. ನಡವಳಿಕೆಯಿಂದ ತೊಂದರೆ ಆಗಬಹುದು, ತಾಳ್ಮೆಯಿಂದ ಮುಂದುವರಿಯಿರಿ. ಹಣಕಾಸಿನ ವಿಚಾರದಲ್ಲಿ ಲಾಭದಾಯಕ ದಿನ. ಸಂಗಾತಿಯ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಿ. ನಿಮ್ಮ ಪ್ರತಿಭೆ ಗುರುತಿಸಲ್ಪಡುವ ದಿನವಾಗಬಹುದು. ಸುಂದರವಾದ ಜೀವನ ನಮ್ಮ ಪೂರ್ವಜರ ಪುಣ್ಯದ ಫಲವೆಂದು ಇಂದು ಆನ್ನಿಸಬಹುದು. ಉದ್ಯೋಗದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳ ಜೊತೆ ಸ್ನೇಹಪರ ವಾತಾವರಣದಲ್ಲಿ ಕೆಲಸ ಮಾಡಲು ಇಂದು ಸಾಧ್ಯವಾಗುತ್ತದೆ. ಹಿತೈಷಿಗಳ ಸಹವಾಸದಿಂದ ಮನಸಿಗೆ ಸಂತಸ ಉಂಟಾಗುವುದು. ಹೊಸ ವ್ಯವಹಾರಕ್ಕೆ ಹಿಂದೇಟು ಮನಸ್ಸು ಹಾಕುವುದು. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು.
ಕುಂಭ ರಾಶಿ: ಅಭ್ಯಾಸವು ಮರೆತುಹೋಗುವ ಭಯವಿದೆ. ಇಂದು ಮನೆಯಿಂದ ದೂರವಿರುವ ನಿಮಗೆ ಮನೆಯ ನೆನಪಾಗುವುದು. ಎಂದೋ ಹೂಡಿದ ಹಣವು ಇಂದು ಉಪಯೋಗಕ್ಕೆ ಬರಲಿದೆ. ಹಣಕಾಸು ಸಮಸ್ಯೆಗಳು ನಿಧಾನವಾಗಿ ಪರಿಹಾರವಾಗುತ್ತವೆ. ಧರ್ಮಾರ್ಥ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಪಡೆದ ಹಣವನ್ನು ಹಿಂದಿರುಗಿ ಪ್ರೀತಿಯ ವಿಷಯದಲ್ಲಿ ಹೊಸ ತಿರುವು ಸಾಧ್ಯ. ಉದ್ಯೋಗದಲ್ಲಿ ಉತ್ತಮ ಸಾಧನೆ ಸಾಧ್ಯವಿದೆ. ಮನಸ್ಸು ಹಗುರಾದೀತು. ಕಛೇರಿಯಲ್ಲಿ ನಿಮಗೆ ಹೊಸ ನಾಯಕ ಬರಬಹುದು. ಅವರನ ಜೊತೆ ನಿಮ್ಮ ವರ್ತನೆಯು ಆಪ್ತವಾಗಿ ಇರಲಿದೆ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ. ದಾನದಿಂದ ನಿಮಗೆ ಸಂತೋಷವಾಗಲಿದೆ. ನೀವು ಹಣಕಾಸಿನ ವ್ಯವಹಾರಗಳಿಗೆ ಹೆಚ್ಚು ಗಮನ ಹರಿಸಬಹುದು. ನೀವು ರುಚಿಕರವಾದ ಆಹಾರದಿಂದ ಸಂತೋಷಿಸುವಿರಿ. ಸಾಮಾಜಿಕ ಕಾರ್ಯಗಳಿಗೆ ಒತ್ತಡಗಳು ಇರಲಿದೆ.
ಮೀನ ರಾಶಿ: ನಿಮ್ಮ ಸ್ಥಿರತೆಗೆ ಯಾರಾದರೂ ಭಂಗ ತರಬಹುದು. ಇಂದು ನಿಮಗೆ ಎಲ್ಲ ಕಾರ್ಯದಲ್ಲಿಯೂ ಉತ್ಸಾಹ ಉತ್ಸಾಹವು ಕಡಿಮೆ ಇರುವುದು. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ನಿಮ್ಮನ್ನು ಬಿಟ್ಟುಕೊಡಲು ಆಗದು. ಸೋಲನ್ನು ಒಪ್ಪಿಕೊಳ್ಳಲು ನಿಮಗೆ ಇಂದು ಆಗದು. ಹಣಕಾಸು ಸಂಬಂಧಿತ ನ್ಯಾಯಾಲಯದ ವಿಚಾರದಲ್ಲಿ ನೀವು ಲಾಭ ಗಳಿಸಬಹುದು. ಮಕ್ಕಳ ಸಾಧನೆ ನಿಮ್ಮಲ್ಲಿ ಹೆಮ್ಮೆ ಹುಟ್ಟಿಸುತ್ತದೆ. ಕೊರತೆಯಿಂದ ನಿರಾಶೆ ಉಂಟಾಗಬಹುದು, ಆದರೆ ಸಹನಯೇ ಗುರಿಯಾಗಿರಲಿ. ಆಕಸ್ಮಿಕವಾಗಿ ಬಂದ ವಾರ್ತೆಯು ನಿಮಗೆ ಖುಷಿಯನ್ನೂ ಬೇಸರವನ್ನೂ ತರಬಹುದು. ಆಪ್ತರ ಜೊತೆ ದೂರಪ್ರಯಾಣ ಮಾಡಲಿದ್ದೀರಿ. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಬೇಕಿದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆದಷ್ಟು ಚರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ. ನಿಮ್ಮ ಕಷ್ಟವನ್ನು ಆಪ್ತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾಗುವುದು.
TV9Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1