ವಿಶ್ವ ತಂಬಾಕು ನಿಷೇಧ ದಿನ: ವ್ಯಸನಮುಕ್ತರಾಗಲು ಸಹಾಯ ಮಾಡೋಣ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 30 ಪ್ರತಿವರ್ಷ ಮೇ ೩೧ ರಂದು ವಿಶ್ವ ತಂಬಾಕು ನಿಷೇಧ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ತಂಬಾಕು ಮಾದಕ ಉತ್ಪನ್ನಗಳು. ಕೆಟ್ಟ ಉದ್ದೇಶಗಳು. ಆಕರ್ಷಣೆಯನ್ನು ಬಹಿರಂಗಪಡಿಸುವುದು.೨೦೨೫ ವರ್ಷದ ಥೀಮ್ ಆಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸದಸ್ಯ ರಾಷ್ಟ್ರಗಳು ೧೯೮೭ ರಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ವಿಶ್ವ ತಂಬಾಕು ನಿಷೇಧ ದಿನ ಆಚರಿಸಬೇಕೆಂದು ತೀರ್ಮಾನಿಸಿತು. ತದನಂತರ ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯದ ದೃಷ್ಟಿಯಿಂದ ತಂಬಾಕು ನಿಷೇಧದ ಬಗ್ಗೆ ಚಿಂತನೆಯನ್ನು ಕೈಗೊಂಡಿತು. ಭಾರತದಲ್ಲಿ ಕ್ಯಾನ್ಸರ್ ಆರೋಗ್ಯ ಸಂಸ್ಥೆ, ರೆಡ್ಕ್ರಾಸ್ ಸಂಸ್ಥೆ, ಸರ್ಕಾರೇತರ ಸಂಸ್ಥೆಗಳಾದ ಬ್ರಹ್ಮಾಕುಮಾರೀಸ್ ಮತ್ತು ಇತರೆ ಸಂಸ್ಥೆಗಳು ತಂಬಾಕಿನ
ದುಷ್ಪರಿಣಾಮಗಳ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಕೆಲವು ವರ್ಷಗಳಿಂದ ಮಾಡುತ್ತಾ ಬಂದಿವೆ.

ತಂಬಾಕು ಸೇವನೆಯಿಂದ ಪ್ರತಿವರ್ಷ ವಿಶ್ವದಾದ್ಯಂತ ೬೦ ಲಕ್ಷ ಜನರು ಮರಣ ಹೊಂದುತ್ತಾರೆ. ಭಾರತದಲ್ಲಿ ಪ್ರತಿ ಸೆಕೆಂಡಿಗೆ ಒಬ್ಬ ವ್ಯಕ್ತಿ, ಒಂದು ದಿನಕ್ಕೆ ೩೭೫೦ ಮತ್ತು ವರ್ಷದಲ್ಲಿ ೧೩.೫ ಲಕ್ಷ ಜನ ತಂಬಾಕು ವ್ಯಸನದಿಂದ ಸಾವನ್ನು ಅಪ್ಪುತ್ತಾರೆ. ೯೦% ಬಾಯಿಯ ಕ್ಯಾನ್ಸರ್ ತಂಬಾಕಿನಿಂದ ಬರುತ್ತದೆ. ಧೂಮ್ರಪಾನ ನಿಮ್ಮ ಆಯುಸ್ಸನ್ನು ಒಂದು ದಿನಕ್ಕೆ ೧೧ ನಿಮಿಷ ಕಡಿಮೆ ಮಾಡುತಿದ್ದರೆ, ೯೦% ಶ್ವಾಸಕೋಶದ ಕ್ಯಾನ್ಸರ್ ಧೂಮ್ರಪಾನದಿಂದ ಬರುತ್ತದೆ. ಇದರಿಂದ ಪ್ರತಿವರ್ಷ ವಿಶ್ವದಾದ್ಯಂತ ೧೨ ಲಕ್ಷ ಜನ ಸಾಯುತ್ತಾರೆ.

ಭಾರತ ದೇಶದಲ್ಲಿ ಮುಖ್ಯವಾಗಿ ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ತಂಬಾಕು ಬೆಳೆಯಲಾಗುತ್ತದೆ. ೩೦೦
ಮಿಲಿಯನ್ ತಂಬಾಕು ಆಂಧ್ರದಲ್ಲಿ ಬೆಳೆಯತ್ತಿದ್ದರೆ, ಕರ್ನಾಟಕದಲ್ಲಿ ಅತಿ ಹೆಚ್ಚು ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿ
ಬೆಳೆಯುತ್ತಾರೆ.ಧೂಮ್ರಪಾನ ಕೆಟ್ಟದ್ದು, ತಂಬಾಕು ಅನೇಕ ಕಾಯಿಲೆಗಳ ಮೂಲ. ಗಂಟಲು, ಬಾಯಿ, ಶ್ವಾಸಕೋಶದ ಕ್ಯಾನ್ಸರ್
ತಂಬಾಕಿನಿಂದ ಬರುತ್ತದೆ. ಸಿಗರೇಟ್ ತಮ್ಮ ಅಕ್ಕಪಕ್ಕದಲ್ಲಿರುವವರಿಗೆ ಹೆಚ್ಚಿನ ಹಾನಿಯನ್ನು ಮಾಡುತ್ತದೆ. ಆದ್ದರಿಂದ ಸರ್ಕಾರ
ಮಾನವನ ಭವಿಷ್ಯದ ಬಗ್ಗೆ ಚಿಂತಿಸಿ ತಂಬಾಕು ನಿಷೇಧವನ್ನು ಮಾಡಿದೆ. ಅನೇಕ ಪ್ರಕಾರದ ಜಾಹೀರಾತುಗಳನ್ನು ನೀಡಿ
ಮನುಷ್ಯರನ್ನು ಎಚ್ಚರಿಸಲು ಪ್ರಯತ್ನಿಸುತ್ತಿದೆ. ಗುಟಕ, ಪಾನ್ಪರಾಗ್, ಬೀಡಿ, ಸಿಗರೇಟು ಮುಂತಾದ ಪೊಟ್ಟಣಗಳ ಮೇಲೆ ತಂಬಾಕು
ಅರೋಗ್ಯಕ್ಕೆ ಹಾನಿಕಾರಕ ಎಂದು ಪ್ರಕಟಿಸುವುದು ಕಡ್ಡಾಯವೆಂದು ಕಾನೂನು ಮಾಡಿದೆ.

ಸಿನೆಮಾ, ನಾಟಕ, ಬಸ್ಸು, ರೈಲು ಮತ್ತು ಸಾಮಾಜಿಕ ಸ್ಥಳಗಳಲ್ಲಿ ಧೂಮ್ರಪಾನವನ್ನು ನಿಷೇಧಿಸಿದೆ. ತಂಬಾಕುವಿನ ಅನೇಕ ಘಾತಕ ಮರಿಗಳೆಂದರೆ – ಬೀಡಿ, ಸಿಗರೇಟ್, ಗುಟಕ, ಪಾನ್ಪರಾಗ್, ಪಾನ್ಮಸಾಲಾ ಮುಂತಾದವು. ಇತ್ತೀಚಿನ ದಿನಗಳಲ್ಲಿ ಯುವಕರೇ ಹೆಚ್ಚಾಗಿ ತಂಬಾಕು ಇರುವ ವಸ್ತುಗಳನ್ನೇ ಸೇವಿಸುತ್ತಾರೆ. ಅವರಿಗೆ ತಂಬಾಕುವಿನಿಂದ ಆಗುವ ದುಷ್ಪರಿಣಾಮಗಳನ್ನು ಅರ್ಥಮಾಡಿಸಲು ಈ ದಿನ ವಿಶ್ವದಾದ್ಯಂತ ತಂಬಾಕು ನಿಷೇಧ ದಿನವನ್ನು ಆಚರಿಸಲಾಗುತ್ತದೆ.ದುಶ್ಚಟದಿಂದ
ದೂರವಾಗಲು ನಿಯಮಿತ ವ್ಯಾಯಾಮ, ಸಾತ್ವಿಕ ಆಹಾರ, ಯೋಗದ ಅವಶ್ಯಕತೆ ಇದೆ. ವ್ಯಸನದಿಂದ ಮುಕ್ತರಾಗಲು ಮನಸ್ಸು
ಮಾಡಬೇಕು. ಮನಸ್ಸಿದ್ದರೆ ಮಾರ್ಗ ಉಂಟು. ಸ್ನೇಹಿತರು, ಪರಿವಾರದ ಸದಸ್ಯರು ಧ್ಯೆರ್ಯ ತಂಬಿ ವ್ಯಸನಮುಕ್ತರಾಗಲು ಸಹಾಯ
ಮಾಡಬೇಕು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *