ಗ್ಯಾರೆಂಟಿ ಯೋಜನೆಯ ಪರಿಶೀಲನೆ ಸಲುವಾಗಿ: ಚಿತ್ರದುರ್ಗ ತಾಲ್ಲೂಕು ಮಟ್ಟದಲ್ಲಿ ಶಿಬಿರವನ್ನು ಏರ್ಪಡಿಸಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಮೇ. 30 ಸರ್ಕಾರ ಆಧಿಕಾರಕ್ಕೆ ಬರಬೇಕಾದರೆ ಮತದಾರರಿಗೆ ಪಂಚ ಗ್ಯಾರೆಂಟಿಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿತ್ತು ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿದರ ಪರಿಣಾಮವಾಗಿ ಇಂದು ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದೆ.

ಅದರಂತೆ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಿದೆ ಇವುಗಳು ಸರಿಯಾಗಿ ಫಲಾನುಭವಿಗಳನ್ನು ತಲುಪಿದ್ದೆವೆ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡುವ ಸಲುವಾಗಿ ಚಿತ್ರದುರ್ಗ ತಾಲ್ಲೂಕು ಮಟ್ಟದಲ್ಲಿ ಶಿಬಿರವನ್ನು ಏರ್ಪಡಿಸಿ ಅದಕ್ಕೆ ಬೇಕಾದ ಸಿದ್ದತೆಯನ್ನು
ಮಾಡಿಕೊಳ್ಳುವಂತಯೆ ಗ್ಯಾರೆಂಟಿ ಯೋಜನೆಯ ಅನುಷ್ಠಾನದ ಅಧಿಕಾರಿಗಳಿಗೆ ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಯೋಜನೆಯ
ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಪ್ರಕಾಶ್ ಸೂಚನೆಯನ್ನು ನೀಡಿದ್ದಾರೆ.

ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆದ ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಸಮಿತಿಯ ಸಭೆಯ
ಅಧ್ಯಕ್ಷವಹಿಸಿ ಮಾತನಾಡಿದ ಅವರು, ಸರ್ಕಾರ ನಮ್ಮ ಪ್ರಾಧಿಕಾರಕ್ಕೆ ಸಚಿವ ಸಂಪುಟದ ಮಾನ್ಯತೆಯನ್ನು ನೀಡಿದೆ. ಈಗಾಗಲೇ
ರಾಜ್ಯದಲ್ಲಿ ಕೋಟ್ಯಾಂತರ ಜನತೆ ಗ್ಯಾರೆಂಟಿಯ ಫಲಾನುಭವಿಗಳು ಅಗಿದ್ದಾರೆ. ಇದೇ ರೀತಿ ನಮ್ಮ ಚಿತ್ರದುರ್ಗ ತಾಲ್ಲೂಕಿನಲ್ಲಿಯೂ ಸಹಾ ಲಕ್ಷಾಂತರ ಜನತೆ ಇದರ ಸದುಪಯೋಗವನ್ನು ಪಡೆದಿದ್ದಾರೆ. ಇಂತಹರಲ್ಲಿ ಹಲವಾರು ಜನತೆ ಗ್ಯಾರೆಂಟಿ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ ಇಂತಹರ ಯಶೋಗಾಥೆಯನ್ನು ತಿಳಿಯಬೇಕಿದೆ ಈ ಹಿನ್ನಲೆಯಲ್ಲಿ ಚಿತ್ರದುರ್ಗದಲ್ಲಿ ಅದಷ್ಟು ಬೇಗ ಶಿಬಿರವನ್ನು ಆಯೋಜಿಸುವಂತೆ ಸೂಚನೆಯನ್ನು ನೀಡಿ ಇದಕ್ಕೆ ಬೇಕಾದ ಸೌರ್ಕಯವನ್ನು ಹೊಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಿತ್ರದುರ್ಗ ತಾಲ್ಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನದಲ್ಲಿ ಪ್ರಥಮ ಸ್ಥಾನವನ್ನು ಪಡೆಯುವಲ್ಲಿ ಅಧಿಕಾರಿಗಳು ಹೆಚ್ಚಿನ ಶ್ರಮವನ್ನು ಹಾಕಬೇಕಿದೆ ಯಾರು ಈ ಯೋಜನೆಯಲ್ಲಿ ಇನ್ನೂ ಫಲಾನುಭವಿಗಳಾಗಿಲ್ಲ ಅಂತಹರನ್ನು ಹುಡುಕಿ ಏನಾದರ ಸಮಸ್ಯೆ ಇದ್ದರೆ ಪರಿಹಾರ ಮಾಡಿ ಅವರಿಗೆ ಯೋಜನೆ ತಲುಪುವಂತೆ ಮಾಡಿ ಎಂದು ಸೂಚನೆ ನೀಡಿದ ಪ್ರಕಾಶ್, ಅಧಿಕಾರಿಗಳು ಸಭೆಗೆ ಬರುವಾಗಸರಿಯಾದ ಮಾಹಿತಿಯನ್ನು ತರುವುದರ ಮೂಲಕ ಸಭೆಗೆ ನೀಡಬೇಕಿದೆ ತಮ್ಮ ಇಲಾಖೆಗೆ ಸಮಿತಿಯ ಸದಸ್ಯರು ಬಂದಾಗ ಗೌರವದಿಂದ ಕಾಣುವಂತೆ ತಿಳಿಸಿ ಅವರು ಹೇಳಿದ ಕೆಲಸವನ್ನು ಮಾಡಿಕೊಡಿ ಎಂದು ಸೂಚನೆ ನೀಡಿದರು.

ಐದು ಯೋಜನೆಗಳ ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನವಾದ ಬಗ್ಗೆ ಮಾಹಿತಿಯನ್ನು ಈ ಶಿಬಿರದಲ್ಲಿ ನೀಡುವುದರ ಮೂಲಕ ಅರ್ಹ
ಫಲಾನುಭವಿಗಳನ್ನು ಇದರಲ್ಲಿ ತೊಡಗಿಸಿ ಅವರ ಅನುಭವವನ್ನು ಹಂಚಿಕೊಳ್ಳಬೇಕಿದೆ ಇದನ್ನು ವಿಡಿಯೋ ಮಾಡುವುದರ ಮೂಲಕ
ಎಲ್ಲಡೆ ಪ್ರಚಾರವನ್ನು ಮಾಡಬೇಕಿದೆ. ಅಲ್ಲದೆ ಪ್ರತಿಮಾಹೆ ೧೦ರೊಳಗಾಗಿ ತಾಲ್ಲೂಕಿನ ಮಾಹಿತಿಯನ್ನು ನೀಡುವುದು ಅಧಿಕಾರಿಗಳ ಕೆಲಸವಾಗಿದೆ ಇದನ್ನು ಕೇಂದ್ರಕ್ಕೆ ಕಳುಹಿಸಬೇಕಿದೆ ಎಂದರು.

ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ ಮಾತನಾಡಿ, ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿರುವವರು ಈ ಸೌಲಭ್ಯವನ್ನು
ಪಡೆಯಲು ಬರುವುದಿಲ್ಲ ಎನ್ನಲಾಗುತ್ತಿದೆ ಅಂತಹರು ಯಾರಾದರೂ ಈ ಸೌಲಭ್ಯಕ್ಕೆ ಅರ್ಜಿಯನ್ನು ಹಾಕಿದ್ದಾರೆ ಅಂತಹರ ಪಟ್ಟಿಯನ್ನು ತಯಾರು ಮಾಡಿ ಇದನ್ನು ಸರ್ಕಾರಕ್ಕೆ ಸಲ್ಲಿಸಿ ಅವರಿಂದ ಹೇಳಿಕೆಯನ್ನು ಪಡೆಯಿರಿ, ಸರ್ಕಾರದಿಂದಲೂ ಸಹಾ ಪಡಿತರವನ್ನು ವಿತರಣೆ ಮಾಡಲಾಗುತ್ತಿದೆ ಈ ಹಿನ್ನಲೆಯಲ್ಲಿ ಬೀರಿ ಪ್ರಧಾನ ಮಂತ್ರಿಗಳ ಪೋಟೋ ಮಾತ್ರವೇ ಹಾಕದೆ ಇದರೊಂದಿಗೆ ನಮ್ಮ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಪೋಟೋವನ್ನು ಹಾಕುವುದರ ಮೂಲಕ ಜನತೆಯಲ್ಲಿ ನಮ್ಮ ಕಾಂಗ್ರೆಸ್ಸ ರ್ಕಾರದಿಂದಲೂ ಅಕ್ಕಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿ ಎಂದು ಅಧಿಕಾರಿಗಳಿಗೆ ತಿಳಿ ಹೇಳಿದರು.

ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ಮೈಲಾರಪ್ಪ ಮಾತನಾಡಿ ಕಳೆದ ಕಲವೂ ದಿನಗಳ ಹಿಂದೆ ಸರ್ಕಾರಿ ಬಸ್
ನಿಲ್ದಾಣದಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು ಅದರ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗುತ್ತಾದರೂ ಸಹಾ ಕೆಲಸವಾಗಿಲ್ಲ,
ಸಾವಿರಾರು ಜನತೆ ಬಂದು ಹೋಗುವ ಸ್ಥಳ ಬಸ್ ನಿಲ್ದಾಣ ಅಲ್ಲಿಯ ಶೌಚಾಲಯದಲ್ಲಿ ನೀರಿನ ಸಮಸ್ಯೆಯಾದರೇ ಹೇಗೆ ಇದರ ಬಗ್ಗೆ ಪರೀಶೀಲಿಸಿ ಸೂಕ್ತವಾಧ ಕ್ರಮವನ್ನು ತೆಗೆದುಕೊಳ್ಳುವಂತೆ ಹೇಳಿದರು.

ಈ ಸಭೆಯಲ್ಲಿ ಚಿತ್ರದುರ್ಗ ಗ್ಯಾರೆಂಟಿ ಸಮಿತಿಯ ಸದಸ್ಯರಾದ ಪರಮಶಿವಯ್ಯ, ನಜ್ಮತಾಜ್, ಶಶಿಕಿರಣ್, ಆಶೋಕ್,
ತಿಪ್ಪೇಸ್ವಾಮಿ, ಸೈಯದ್ ಸಾಧಿಕ್, ದಿನೇಶ್, ಮಹಮ್ಮದ್ ಮುದಾಸಿರ್ ನವಾಜ್, ಮಂಜುನಾಥ್ ಚಿತ್ರದುರ್ಗ ತಾಲ್ಲೂಕು
ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ರವಿಕುಮಾರ್ ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *