Horoscope Today 31 May: ಈ ರಾಶಿಯವರು ಕಾಂಚಾಣದಿಂದ ಕಾರ್ಯವನ್ನು ಸಿದ್ಧಿಸಿಕೊಡುವರು.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ – 06 : 03 am, ಸೂರ್ಯಾಸ್ತ – 06 : 57 pm, ಇಂದಿನ ಶುಭಾಶುಭಕಾಲ: ರಾಹು ಕಾಲ 09:17 – 10:54, ಯಮಘಂಡ ಕಾಲ 14:07 – 15:44, ಗುಳಿಕ ಕಾಲ 06:04 – 07:41​

ಮೇಷ ರಾಶಿ: ಸಂಕಲ್ಪ ಶುದ್ದರವಾಗಿದ್ದರೆ ನಿಮ್ಮ ಎಲ್ಲ ಇಂದಿನ ಕಾರ್ಯಗಳೂ ಯಶಸ್ವಿಯಾಗುವುದು. ಆಪತ್ತಿನಲ್ಲಿ ಸಹಾಯ ಮಾಡಲಿಲ್ಲ ಎಲ್ಲರನ್ನೂ ಶಪಿಸುವ ಅವಶ್ಯಕತೆ ಇಲ್ಲ ವಿದ್ಯಾಭ್ಯಾಸದಿಂದ ಲಾಭವಿದೆ ಎಂದು ಅನ್ನಿಸಿ ಶ್ರಮವಹಿಸುವಿರಿ. ಏಕಾಗ್ರತೆಗೆ ನಾನಾ ಪ್ರಕಾರದಲ್ಲಿ ಪರೀಕ್ಷೆಗಳು ಆಗಬಹುದು. ನಿಮ್ಮನ್ನು ಹುಡುಕಿಕೊಂಡು ಬಂದವರಿಗೆ ಸ್ವಲ್ಪ ಸಮಯವನ್ನಾದರೂ ಕೊಡಬೇಕಾಗುವುದು. ಹಣಕಾಸು ಪ್ರಗತಿಮಾರ್ಗದಲ್ಲಿದೆ ಆದರೆ ಯೋಚಿಸಿ ವೆಚ್ಚಮಾಡಿ. ಕುಟುಂಬದ ಬೆಂಬಲ ನಿಮಗೆ ಶಕ್ತಿ ನೀಡುತ್ತದೆ. ಪ್ರೀತಿಯಲ್ಲಿ ನಿಗೂಢತೆಯ ಬದಲಿಗೆ ಸ್ಪಷ್ಟತೆ ಅಗತ್ಯವಿದೆ. ಕಾನೂನು ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ವಿಳಂಬಿತ ಕೆಲಸಗಳಿಂದ ದೂರವಿರಿ. ಆಗಿದ್ದನ್ನು ನೆನಪಿಸಿಕೊಳ್ಳುತ್ತ ಕುಳಿತುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆಗಬೇಕಿರುವುದರ ಕಡೆ ಗಮನವಿರಲಿ. ನಿಮ್ಮನ್ನು ಸರಿದಾರಿಯಲ್ಲಿ ನಡೆಸುವನು. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ಬಹಳಷ್ಟು ಕಾರ್ಯಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ.

ವೃಷಭ ರಾಶಿ: ಗೊತ್ತಿದ್ದೂ ಮಾಡುವ ತಪ್ಪಿಗೆ ನೀವೇ ಹೊಣೆ. ವಾಹನ ಚಾಲನೆಯಲ್ಲಿ ಪ್ರಶಾಂತವಾಗಿರಿ. ಇಂದಿನ ಕೆಲಸಗಳ ಯೋಜನೆ ಬಗ್ಗೆ ಸರಿಯಾದ ದೃಷ್ಟಿ ಇರಲಿ. ದೂರಪ್ರಯಾಣ ಸುಖಕರವಾಗಿ ಇರುವುದು.‌ ಧಾರ್ಮಿಕವಾದ ನಂಬಿಕೆಯುಳ್ಳ ನೀವು ತೀರ್ಥಕ್ಷೇತ್ರಗಳೋ ದೇವಾಲಯಕ್ಕೋ ಭೇಟಿ ಕೊಡುವಿರಿ. ಪರರ ಪ್ರಶಂಸೆಯನ್ನು ಹೃದಯದಲ್ಲಿ ಧರಿಸಿ. ಕೆಲಸದ ಮೆಚ್ಚುಗೆಗಳು ಸಂತೋಷವನ್ನು ಉಂಟುಮಾಡುತ್ತವೆ. ಹಣಕಾಸು ವಿಷಯದಲ್ಲಿ ಜಾಗ್ರತೆ ಅಗತ್ಯವಿದೆ. ಕುಟುಂಬದಲ್ಲಿ ಚಿಕ್ಕಪುಟ್ಟ ಮನಸ್ತಾಪ ಉಂಟಾಗಬಹುದು. ಮಾತುಗಳಲ್ಲಿ ನಿಖರತೆ ಇರಲಿ. ನಿಮ್ಮ ನಿರ್ಧಾರಗಳಲ್ಲಿ ತಲೆಕೆಡಿಸಿಕೊಳ್ಳದೇ ನಂಬಿಕೆಯಿಂದ ಮುಂದೆ ಸಾಗುವುದು ಉತ್ತಮ. ಆರೋಪಗಳಿಂದ ಮುಕ್ತರಾಗುವುದು ಕಷ್ಟವಾಗುವುದು. ಇಂದು ಕುಟುಂಬದವರ ಮಾತುಗಳು ನಿಮ್ಮ ಮನಸ್ಸಿಗೆ ನಾಟಬಹುದು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ಸ್ಪರ್ಧಾತ್ಮಕ ವಿಚಾರದಲ್ಲಿ ಹಿಂದುಳಿಯಬೇಕಾಗುವುದು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ.

ಮಿಥುನ ರಾಶಿ: ಎಲ್ಲಿಯೂ ಸಿಕ್ಕಿಬೀಳದೇ ಎಲ್ಲವನ್ನೂ ಸಲೀಸಾಗಿ ಮಾಡುವ ಗುಣ ಗೊತ್ತಾಗುವುದು. ಎಲ್ಲ ಕೆಲಸವನ್ನೂ ಬೇರೆಯವರೇ ಮಾಡಲಿ ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ನಿಮಗೆ ಸಾಧ್ಯವಾದ ಕೆಲಸಗಳನ್ನು ಮಾಡಿ. ಸ್ವಂತ ಭೂಮಿಯನ್ನು ಮಾರುವ ಸ್ಥಿತಿಯು ಎದುರಾದೀತು. ಕೆಟ್ಟ ಅನುಭವಗಳನ್ನು ಆತ್ಮೀಯರ ಜೊತೆ ಹಂಚಿಕೊಳ್ಳುವಿರಿ. ಹಳೆಯ ವಿಷಯಗಳನ್ನು ನೆನೆಸಿಕೊಳ್ಳದೇ ಪ್ರಸ್ತುತದತ್ತ ಗಮನ ಹರಿಸಿ. ಹೂಡಿಕೆಯೊಳಗಿನ ಲಾಭದಿಂದ ಹಣಕಾಸು ಬೆಂಬಲ ಸಿಗಬಹುದು. ಮನೆಯವರೊಂದಿಗೆ ಕಾಲ ಕಳೆಯುವುದರಿಂದ ಶಾಂತಿ ಪಡೆಯುವಿರಿ. ಹಳೆಯ ಗೆಳೆಯನ ಸಂಪರ್ಕ ಸಂತೋಷ ನೀಡಬಹುದು. ಅತಿಯಾದ ಹಸಿವು ನಿಮ್ಮನ್ನು ಬಾಧಿಸಬಹುದು. ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ ನಿಮ್ಮ ಕೆಲಸಗಳು ಅಚ್ಚುಕಟ್ಟಾಗಿ ಇರಬೇಕಿದೆ. ನಿಮಗೆ ಬರುವ ಆಪತ್ತುಗಳು ನಿಮ್ಮನ್ನು ಗಟ್ಟಿಯಾಗಿಸುತ್ತವೆ. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ. ಸಂಗಾತಿಯ ಮನೋರಥವನ್ನು ಈಡೇರಿಸುವುದು ಕಷ್ಟವಾಗುವುದು.

ಕರ್ಕಾಟಕ ರಾಶಿ: ಸ್ಪರ್ಧಾತ್ಮಕ ವಿಚಾರದಲ್ಲಿ ನಿಮ್ಮ ಮನಸ್ಸು ಒಪ್ಪದು. ತಪ್ಪನ್ನು ಒಪ್ಪಿಕೊಂಡು ಮುನ್ನಡೆದರೆ ಎಲ್ಲವೂ ಸುಖವಾಗುವುದು. ದಾಂಪತ್ಯದಲ್ಲಿ ಉಂಟಾದ ವೈಮನಸ್ಯವನ್ನು ಪ್ರಕಟಗೊಳಿಸಿದೇ ಅಲ್ಲಿಯೇ ಸರಿಮಾಡಿಕೊಳ್ಳಿ. ಮನೆಗೆ ಊಹಿಸಿದ್ದಕ್ಕಿಂತ ಹೆಚ್ಚಿನವರ ಆಗಮನವಾಗಲಿದೆ, ಆತಂಕ ಹೆಚ್ಚುಮಾಡಿಕೊಳ್ಳುವಿರಿ. ಮಾತುಗಳು ಹೊಸ ಅವಕಾಶಗಳನ್ನು ತಂದೀತು. ಕಾನೂನು ಕೆಲಸದಲ್ಲಿ ಎಚ್ಚರಿಕೆ ಇರಲಿ. ಹಣಕಾಸು ಒತ್ತಡದಿಂದ ಚಿಕ್ಕ ಏರುಪೇರು ಆಗಬಹುದು. ಬಹುತೇಕವಾಗಿ ಕೆಲಸಗಳನ್ನು ಒಂದೇ ಸಮಯಕ್ಕೆ ಮಾಡದೆ ಶ್ರದ್ಧೆಯಿಂದ ಪೂರ್ಣಗೊಳಿಸಿ. ಸಹಕರಿಸುವ ಮನೋಭಾವನೆ ಇಂದು ಯಶಸ್ಸಿಗೆ ದಾರಿ ತೆಗೆಯುತ್ತದೆ. ಎಲ್ಲರ ಜೊತೆ ಜಗಳವಾಡುತ್ತ ಇರುವುದು ನಿಮಗೆ ಇಷ್ಟವಾಗಬಹುದು. ಆಸ್ತಿಯ ವಿಚಾರದಲ್ಲಿ ಆಸೆಯನ್ನು ಅತಿಯಾಗಿ ಇಟ್ಟುಕೊಳ್ಳುವಿರಿ. ಇದರಿಂದ‌ ನಿಮ್ಮ ಜೊತೆಗಾರ ಸ್ಥಿತಿಯೂ ಹದ ತಪ್ಪಬಹುದು. ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಯಾರಾದರೂ ತಪ್ಪು ತಿಳಿದಾರು ಎಂಬ ಭಾವ ಕಾಡಬಹುದು.

ಸಿಂಹ ರಾಶಿ: ನಿಮ್ಮನ್ನು ಕುಗ್ಗಿಸುವ ಪ್ರಯತ್ನ ಯಾರಾದರೂ ಮಾಡಬಹುದು. ಇಂದು ನಿಮ್ಮ ಹಳೆಯ ಕನಸಿಗೆ ಮೂರ್ತರೂಪ ಸಿಗುವುದು. ನಿಮ್ಮಿಂದ ಹೆತ್ತವರು ಸುಖಪಡುವರು. ಸ್ನೇಹಿತರಿಗೆ ಮಾಡಿದ ಸಹಾಯದಿಂದ ನಿಮಗೆ ಅನುಕೂಲವಗಲಿದೆ. ಸಾಮಾಜಿಕ ಕಾರ್ಯದಲ್ಲಿ ನಿಮಗೆ ಆಸಕ್ತಿಯು ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಜಾಣೆ ಅಗತ್ಯ. ಮೌಖಿಕ ವಿಚಾರವನ್ನು ಯಾರೂ ಗಂಭೀರವಾಗಿ ಪರಿಗಣಿಸಲಾರರು. ಸಣ್ಣ ಖರ್ಚು ಕೂಡ ದೊಡ್ಡದಾಗಬಹುದು. ಕುಟುಂಬದವರ ಭಾವನೆಗಳಿಗೆ ಪ್ರಾಮುಖ್ಯತೆ ನೀಡಿ. ದೂರದ ಸಂಬಂಧಿಯವರಿಂದ ಸಂವೇದನೆಗಳ ಬದಲಾವಣೆ ಉಂಟಾಗಬಹುದು. ಪ್ರೇಮ ಸಂಬಂಧದಲ್ಲಿ ಗಂಭೀರತೆ ಬೆಳೆಯಲಿದೆ. ಸಿಕ್ಕ ಯಶಸ್ಸನ್ನು ಲಾಭವಾಗಿ ಪರಿವರ್ತಿಸುವಿರಿ. ಸಂಗಾತಿಯ ಪ್ರೀತಿಯು ನಿಮಗೆ ಅಚ್ಚರಿಯನ್ನು ಉಂಟುಮಾಡೀತು. ಮೋಹದಿಂದ ಸರಿ ತಪ್ಪುಗಳ ವಿವೇಚನೆ ದೂರಾಗುವುದು. ಯಾರಾದರೂ ನಿಮ್ಮನ್ನು ತೆಗಳಿದರೆ ಅದನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿ. ಬಂಧುಗಳ ಚರಾಸ್ತಿಯು ಸಿಗಬಹುದು.

ಕನ್ಯಾ ರಾಶಿ: ಉರಿಯುವ ಬೆಂಕಿಗೆ ತುಪ್ಪ ಹಾಕಿದರೆ ನಿಮ್ಮನ್ನೇ ಸುಡಬಹುದು. ಇಂದಿನ ನಿಮ್ಮ ಕೋಪವನ್ನು ಶಾಂತ ಮಾಡಲು ಸಂಗಾತಿಯು ಶ್ರಮಪಡಬಹುದು. ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದ್ದು, ಕೆಲಸವು ಹಾಳಾಗಬಹುದು. ಖರ್ಚಿಲ್ಲದೇ ಎಲ್ಲ ಓಡಾಟವನ್ನು ಮಾಡುವ ಯೋಚನೆ. ಕೆಲಸದಲ್ಲಿ ನಿಮ್ಮ ಚುರುಕು ಮೆಚ್ಚುಗೆಯನ್ನು ಗಳಿಸಬಹುದು. ಹಳೆಯ ಹೂಡಿಕೆಗಳು ಲಾಭದ ಸಂಕೇತ ತೋರಿಸುತ್ತವೆ. ಮನೆಯ ವಿಷಯದಲ್ಲಿ ಹೆಚ್ಚು ಸಮಯ ಕೊಡಬೇಕಾಗಬಹುದು. ಯಾರೊಬ್ಬರ ಉಪದೇಶವೂ ನಿಮಗೆ ಉಪಕಾರಿಯಾಗಬಹುದು. ಹಠವನ್ನು ತೊರೆಯಿರಿ. ಯಶಸ್ಸು ಬೆನ್ನು ಹತ್ತುತ್ತಿದ್ದರೂ ಹಂಬಲವಿಲ್ಲದೆ ಮುಂದುವರಿಯಿರಿ. ಮಕ್ಕಳು ನಿಮ್ಮ ಜೊತೆ ಕಳೆಯಲು ಇಚ್ಛಿಸುವರು. ನಿಮ್ಮಿಂದ‌ ಕುಟುಂಬಕ್ಕೆ ಯಾವುದೇ ಸಲಹೆಯು ಇಲ್ಲದಂತೆ ಅನ್ನಿಸಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಬಂಧುಗಳ ಜೊತೆ ಆತ್ಮೀಯ ಒಡನಾಟ ಮಾಡುವಿರಿ. ಅಚಾತುರ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಿ.

ತುಲಾ ರಾಶಿ: ಮನೆಯ ದುರಸ್ತಿ ನಡೆಯಲಿದ್ದು ಶಾಶ್ವತ ಪರಿಹಾರದ ಬಗ್ಗೆಯೇ ಯೋಚಿಸಿ. ಇಂದು ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಗೌರವ, ಪ್ರಶಂಸೆಗಳು ಸಿಗಲಿವೆ. ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ಮೇಲಧಿಕಾರಿಗಳಿಂದ ಕ್ಷಣಕಾಲ ತಪ್ಪಿಸಿಕೊಂಡರೆ ಅಷ್ಟೇ ಸಾಕು. ನಿಮ್ಮ ಕಾರ್ಯಕ್ಕೆ ವಿದೇಶದಿಂದ ಕರೆ ಬರಬಹುದು. ಹೂಡಿಕೆಗೆ ಮೊದಲು ಎಲ್ಲವನ್ನೂ ಅಧ್ಯಯನ ಮಾಡಿ. ಕುಟುಂಬದವರೊಂದಿಗೆ ಕಳೆಯುವ ಸಮಯ ಹೃದಯ ತಣಿಸುತ್ತದೆ. ಪ್ರೇಮ ಸಂಬಂಧದಲ್ಲಿ ಬುದ್ದಿವಂತಿಕೆ ಮುಖ್ಯ. ನಿಮ್ಮ ನಿಷ್ಠೆ ಮತ್ತು ಶ್ರಮವು ಮೆರೆದೀತು. ನಿಮ್ಮ‌ ಮಾತಿಗೆ ಬೆಲೆ ಇಲ್ಲವಾದೀತು. ದೈವದ ಮೇಲೆ‌ ಅಪನಂಬಿಕೆ ಬರಬಹುದು. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಲಾವಿದರ ಜೊತೆ ನಿಮ್ಮ ನಂಟು ಬೆಳೆಯಬಹುದು. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಮಾಡಿ ಕಾಲಹರಣ ಮಾಡುವಿರಿ.

ವೃಶ್ಚಿಕ ರಾಶಿ: ನಿಮ್ಮ ಮೇಲಿನ ಆರೋಪಕ್ಕೆ ಆಧಾರ ಕೇಳುವಿರಿ. ನೀವು ಅಂದುಕೊಂಡಿದ್ದು ಮಾತ್ರ ಸತ್ಯವಾಗಲಾರದು. ಅದಕ್ಕಿರುವ ಮುಖವನ್ನು ಗಮನಿಸಿ ತೀರ್ಮಾನಕ್ಕೆ ಬನ್ನಿ. ಸಾಲವಾಧೆ ಎದುರಾಗಲಿದ್ದು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಹಠವನ್ನು ಮುಂದಿಡುವುದು ಬೇಡ. ಒಂಟಿಯಾಗಿಯೇ ಇರಬೇಕಾಗುವುದು. ಕೆಲಸದಲ್ಲಿ ಅವಕಾಶಗಳು ಸಿಗಬಹುದು ಆದರೆ ತೀರ್ಮಾನದಲ್ಲಿ ತಾಳ್ಮೆ ಅಗತ್ಯ. ಖರ್ಚುಗಳು ನಿಮ್ಮ ಮೇಲೆ ಒತ್ತಡ ತರುತ್ತವೆ. ಮನೆಯ ಅಲಂಕರಣದ ಚಿಂತನೆ ಮೂಡಬಹುದು ಆದರೆ ಮುಂದಕ್ಕೆ ಹಾಕುವುದು ಉತ್ತಮ. ಸ್ನೇಹಿತರ ಜೊತೆಗಿನ ಸಮಯ ಖುಷಿಯನ್ನು ನೀಡುತ್ತದೆ. ಶಿಸ್ತನ್ನು ಕಾಪಾಡಿಕೊಂಡು ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಿ. ಅನಗತ್ಯ ಚಟುವಟಿಕೆಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಸಂತಾನದ ಬಗ್ಗೆ ನಿಮಗೆ ಅತಿಯಾದ ಆಸೆಯಾಗುವುದು. ಆಪ್ತರ ವಿಯೋಗವು ನಿಮ್ಮನ್ನು ಕುಗ್ಗಿಸಬಹುದು. ಅಧಿಕಾರದ ಬಗ್ಗೆ ವ್ಯಾಮೋಹವು ಕಡಿಮೆಯಾಗುವುದು.

ಧನು ರಾಶಿ: ನಿಮ್ಮ ಉದ್ಯಮದ ಬಗ್ಗೆ ಸುಳ್ಳು ಮಾಹಿತಿಯನ್ನು ನೀಡುವಿರಿ. ಅಲ್ಪ ಜ್ಞಾನದವರ ಸಂಗದಿಂದ ಸ್ವಾಭಿಮಾನ ಧಕ್ಕೆ ಬರುವುದು. ಮುಜುಗರವನ್ನು ಎದುರಿಸಬೇಕಾಗಬಹುದು. ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸಿದರೆ ನಕಾರಾತ್ಮಕ ಉತ್ತರವನ್ನು ಕೊಡಬೇಡಿ. ಧೈರ್ಯದಿಂದ ಕೆಲಸದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು. ಮಾತಿನಂತೆ ನಡಿಗೆ ನೂಲಿನಂತೆ ಬಟ್ಟೆ ಇರುವಂತೆ ಇರಬೇಕು. ಹಣಕಾಸು ಸ್ಥಿತಿಯಲ್ಲಿ ಸ್ಥಿರತೆ ಇರುತ್ತದೆ. ಖರ್ಚುಗಳಲ್ಲಿ ನಿಯಂತ್ರಣ ವಹಿಸಿ. ಮನೆಯವರು ನಿಮ್ಮ ಸಮಯ ಮತ್ತು ಪ್ರೀತಿಗೆ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶದ ನಿರೀಕ್ಷೆ ಇದೆ. ಹೊತ್ತುಕೊಂಡು ಇರುವುದು ಕಷ್ಟ. ಉದ್ಯೋಗದ ನಿಮಿತ್ತ ಬೇರೆ ಕಡೆಗೆ ಹೋಗಬಹುದು. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಇರಲಿದೆ. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ನಿಮಗೆ ಇಷ್ಟವಾಗದು. ನೀವು ಬೇಕಾದ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು. ನಿಮ್ಮ ಮಾತಿಗೆ ಬೆಂಬಲವಿರುವುದು. ಹಳೆಯ ನೆನಪುಗಳು ನಿಮ್ಮ ಕಾಡುವುವು.

ಮಕರ ರಾಶಿ: ಏನನ್ನೇ ಮಾಡಿದರೂ ಹಿರಿಯರ ಅನುಮತಿ ಅವಶ್ಯಕ. ಮೇಲಧಿಕಾರಿಗಳ ಮಾತನ್ನು ಲಘುವಾಗಿ ತೆಗೆದುಕೊಂಡು ಕೆಂಗಣ್ಣಿಗೆ ಗುರಿಯಾಗುವಿರಿ. ಕಾರ್ಯದ ಒತ್ತಡ ನಿಮ್ಮನ್ನು ಇಂದು ಬಂಧಿಸಿ ಇಡಲಿದೆ. ಹೊಸ ವಸ್ತ್ರದ ಖರೀದದಿಯಾಗಲಿದೆ‌. ಕೆಲಸದ ಕಡೆಗೆ ಹೆಚ್ಚಿನ ಗಮನ ನೀಡಿದರೂ ಮನಸ್ಸು ಬೇರೆಡೆ ಇರಬಹುದು. ಹಣಕಾಸು ಸ್ಥಿತಿಯಲ್ಲಿ ನಿರ್ವಹಣಾ ಜಾಣ್ಮ ಅಗತ್ಯ. ಕೈ ಮೀರಿದ ಆರೋಗ್ಯವನ್ನು ನಿಯಂತ್ರಣಕ್ಕೆ ತರಲಾಗದು. ಸಹೋದ್ಯೋಗಿಯಿಂದ ಸ್ಪರ್ಧಾತ್ಮಕ ಮನೋಭಾವನೆ ಎದುರಾಗಬಹುದು. ಹೊಸ ವಿಷಯ ಕಲಿಯಲು ಉತ್ತಮ ಸಮಯ. ಬೇಕಾದುದನ್ನು ಪಡೆಯದೇ ಮನಸ್ಸಿಗೆ ಸಂಕಟವಾಗುವುದು. ಕಲಾಸಕ್ತಿಯು ನಿಮ್ಮನ್ನು ಕಲಿಕೆಗೆ ಜೋಡಿಸಬಹುದು. ಯಾರ ಮಾತನ್ನೂ ನೀವು ಕೇಳಲಾರಿರಿ. ಸಂಶೋಧನೆಯಲ್ಲಿ ಹೊಸ ಮಾರ್ಗವು ಕಾಣಿಸಿಕೊಳ್ಳುವುದು. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು.

ಕುಂಭ ರಾಶಿ: ಪರೀಕ್ಷಾರ್ಥವಾಗಿ ಮಾಡಿದ ಕೆಲಸ ಫಲ ನೀಡುವುದು. ಅದನ್ನೇ ಮುಂದುರಿಸುವಿರಿ. ಇಂದು ನಿಮ್ಮನ್ನು ಕಾಳಜಿ ಮಾಡುವವರ ಜೊತೆ ಸಮಯವನ್ನು ಕಳೆಯುವುದು ಉತ್ತಮ ಎನಿಸಬಹುದು. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಯಾರ ಮೇಲೂ ದ್ವೇಷವನ್ನು ಸಾಧಿಸಿ ಆಗುವುದೇನಿಲ್ಲ. ಸಮಯ ಹಾಳು ಅಷ್ಟೇ. ಉದ್ಯೋಗದಲ್ಲಿ ಚುರುಕು ಮತ್ತು ಯೋಜನೆ ಮುಖ್ಯ. ಹಣಕಾಸಿನಲ್ಲಿ ಸ್ಥಿರತೆ ಇದ್ದರೂ ಸಾಲ ಅಥವಾ ಸಾಲಕೊಡಿಕೆ ಬೇಡ. ಪ್ರೀತಿಯಲ್ಲಿ ಸಹನಶೀಲತೆಯಿಂದ ಸ್ಪಂದಿಸಿ, ಅತಿವಿಚಾರ ಬೇಡ. ನಿಮ್ಮ ಆತ್ಮಸ್ವಭಾವವನ್ನು ನಂಬಿ. ಪ್ರವಾಸದ ಯೋಜನೆ ಆಕಸ್ಮಿಕವಾಗಿ ಬರುತ್ತದೆ. ಆತ್ಮಚಿಂತನದಿಂದ ಶಾಂತಿ ಸಿಗಲಿದೆ. ಆಕಸ್ಮಿಕವಾಗಿ ಆಗಿವ ಘಟನೆಗಳನ್ನು ಮನಸಾರೆ ಸ್ವೀಕರಿಸಿ. ನಿಮ್ಮನ್ನು ನೀವು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದು ಶ್ರೇಯಸ್ಕರ. ನಿಮ್ಮ ತಂದೆಯ ಜೊತೆ ಸ್ನೇಹದ ಸಂಬಂಧವನ್ನು ಇಟ್ಟುಕೊಳ್ಳುವಿರಿ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು.

ಮೀನ ರಾಶಿ: ಪ್ರೇಮಿಗಳಲ್ಲಿ ಪರಸ್ಪರ ವೈರುಧ್ಯ ಏರ್ಪಡಬಹುದು. ನಿಮ್ಮ ಸಂಕೋಚದ ಸ್ವಭಾವದಿಂದ ಹೇಳಬೇಕಾದ ವಿಚಾರವನ್ನು ಹೇಳದೇ ಸುಮ್ಮನಾಗುವಿರಿ.‌ ಉದ್ಯೋಗ ಸೃಷ್ಟಿಗೆ ಬೇಕಾದ ಬಂಡವಾಳವು ಸಿಗಲಿದೆ. ಸಾಲ ಪಡೆದವರು ಮರಳಿ ನೀಡಲಿದ್ದಾರೆ. ಹಣಕಾಸು ಸಂಬಂಧಿತ ವಿಷಯಗಳು ನಿಮ್ಮ ಗಮನಕ್ಕೆ ಬರುತ್ತವೆ. ನೀವು ಸೇವಿಸುವ ಔಷಧ ಅಡ್ಡ ಪರಿಣಾಮ ನೀಡಬಹುದು. ತಪ್ಪುಗಳು ನಡೆದಾಗ ನಿಮ್ಮ ಪರವಾದ ಮಾತುಗಳು ಕೇಳಿಸದೇ ಇರಬಹುದು. ಮಕ್ಕಳ ಸಾಧನೆ ಸಂತೋಷ ನೀಡಲಿದೆ. ಪ್ರೀತಿಯಲ್ಲಿ ಚಿಕ್ಕ ಚಿಕ್ಕ ವ್ಯತ್ಯಾಸಗಳನ್ನು ಸಮಾಧಾನದಿಂದ ಮುಗಿಸಿ. ಅನಗತ್ಯ ಚರ್ಚೆಗಳಿಗೆ ದೂರವಿರಿ. ಸಂಗಾತಿಯ ಜೊತೆ ಸುಂದರ ಕ್ಷಣವನ್ನು ಕಳೆಯಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸಾಲಕ್ಕೆ ಏನನ್ನಾದರೂ ಅಡವಿಡಬೇಕಾಗಬಹುದು. ವಾಹನಕ್ಕಾಗಿ ಖರ್ಚು ಮಾಡಬೇಕಾಗುವುದು. ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *