
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜೂ. 02 ನಿಮ್ಮ ಸಮಸ್ಯೆಗಳ ಬಗ್ಗೆ ಜುಲೈನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡುವುದರ ಜೊತೆಗೆ ಇದರ ಸಂಬಂಧ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಪತ್ರವನ್ನು ಬರೆದು ಒತ್ತಾಯಿಸುವುದಾಗಿ ವಿಧಾನ ಪರಿಷತ್
ಸದಸ್ಯರಾದ ಕೆ.ಎಸ್.ನವೀನ್ ಭರವಸೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಸತಿ ಶಾಲೆಗಳ ನೌಕರರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದವತಿಯಿಂದ ತಮ್ಮ
ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆಯನ್ನು ನಡೆಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅವರು ಪ್ರತಿಭಟನಾಕಾರರ ಸಮಸ್ಯೆಯನ್ನು ಅಲಿಸಿ
ಮಾತನಾಡಿದ ಅವರು, ನಿಮ್ಮ ಸಮಸ್ಯೆಗಳು ನ್ಯಾಯಯುತವಾಗಿವೆ. ಸಮಾಜ ಕಲ್ಯಾಣ ಮನಸ್ಸು ಮಾಡಿದ್ದರೆ ನಿಮ್ಮ ಸಮಸ್ಯೆಯನ್ನು
ಶೀಘ್ರವಾಗಿ ಪರಿಹಾರ ಮಾಡಬಹುದಾಗಿತ್ತು ಇದು ಸರ್ಕಾರಕ್ಕೂ ಸಹಾ ದೊಡ್ಡದಾದ ಸಮಸ್ಯೆ ಏನು ಅಲ್ಲ, ಸಮಾಜ ಕಲ್ಯಾಣ
ಇಲಾಖೆಯ ಅನುದಾನದಲ್ಲಿ ಸಾಸಿವೆ ಕಾಳಿನಷ್ಟು ಮಾತ್ರ ಇಷ್ಟರಲ್ಲಿಯೇ ನಿಮ್ಮ ಸಮಸ್ಯೆ ಈಡೇರುತ್ತದೆ. ನಿಮ್ಮ ಸಮಸ್ಯೆಗಳ ಬಗ್ಗೆ
ವಿಧಾನ ಮಂಡಲದಲ್ಲಿ ಮಾತನಾಡುವುದಾಗಿ ತಿಳಿಸಿ ಇದರ ಬಗ್ಗೆ ನಮ್ಮ ಪಕ್ಷದ ಇತರೆ ಸದಸ್ಯರನ್ನು ಸಹಾ ಕರೆಯಲಾಗುವುದು.
ಅಗತ್ಯ ಬಿದ್ದರೆ ಮಂಡಲದಲ್ಲಿ ಪ್ರತಿಭಟನೆಯನ್ನು ಸಹಾ ನಡೆಸುವುದಾಗಿ ತಿಳಿಸಿದರು.
ವಸತಿ ಶಾಲೆಗಳ ನೌಕರರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ದಸ್ತಗಿರಿ ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರದ
ಸಮಾಜ ಕಲ್ಯಾಣ ಇಲಾಖೆಯ ಅಧೀನದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ರಾಜ್ಯಾದ್ಯಾಂತ 821 ವಸತಿ
ಶಾಲೆ/ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಸತಿಯುತ ಶಿಕ್ಷಣವನ್ನು
ಉಚಿತವಾಗಿ ಪಡೆಯುತ್ತಿದ್ದಾರೆ. ಕ್ರೈಸ್ ಖಾಯಂ ಬೋಧಕ/ಬೋಧಕೇತರ ಸಿಬ್ಬಂದಿಗಳ ಕಠಿಣ ಶ್ರಮದಿಂದ ವಸತಿ ಶಾಲೆಗಳು
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರತಿ ವರ್ಷವೂ ಉತ್ತಮ ಗುಣಮಟ್ಟದ ಫಲಿತಾಂಶವನ್ನು ನೀಡುತ್ತಾ ಬರುತ್ತಿವೆ.
ನವೋದಯ ವಿದ್ಯಾಲಯ ಮತ್ತು ಶಿಕ್ಷಣ ಇಲಾಖೆಯ ಶಾಲೆಗಳ ಅಥವಾ ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಗಳ
ಬೋಧಕ/ಬೋಧಕೇತರ ನೌಕರರಿಗೆ ದೊರೆಯುವ ಹಲವು ಸೌಲಭ್ಯಗಳು ಕ್ರೈಸ್ ವಸತಿ ಶಾಲೆಗಳ ಬೋಧಕ/ಬೋಧಕೇತರ
ನೌಕರರಿಗೆ ದೊರೆಯುತ್ತಿಲ್ಲ ಎಂದು ತಿಳಿಸಿದರು.
ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಅಥವಾ ಎಸ್.ಸಿ, ಎಸ್.ಟಿ, ಬಿ.ಸಿ ವಸತಿ ಶಾಲೆಗಳನ್ನು ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ
ಇಲಾಖೆಗಳ ವಶಕ್ಕೆ ನೀಡಬೇಕು, ಖಾಯಂ ನೌಕರರಿಗೆ ಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸಬೇಕು, ಮರಣ ಮತ್ತು ನಿವೃತ್ತಿ
ಉಪದಾನ ಸೌಲಭ್ಯ ಒದಗಿಸಬೇಕು, ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ ನೀಡಬೇಕು, ಖಾಯಂ ನೌಕರರಿಗೆ 10% ವಿಶೇಷ
ಭತ್ಯೆ ಮಂಜೂರು ಮಾಡುವಂತೆ ಒತ್ತಾಯಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯು ತನ್ನ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ/ನೌಕರರಿಗೆ ನೀಡುತ್ತಿರುವ ಸೌಲಭ್ಯಗಳಲ್ಲಿ ಅಸಮಾನತೆ ಇದೆ.
ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ವಸತಿ ಶಿಕ್ಷಣ ನೀಡುವ ಸಲುವಾಗಿ ಕ್ರೈಸ್ ವಸತಿ ಶಾಲೆಗಳ ಶಿಕ್ಷಕರು/ನೌಕರರ
ಸಮಸ್ಯೆಗಳನ್ನು ಪರಿಷ್ಕರಿಸಲು ಸರ್ಕಾರಕ್ಕೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಉಪಾಧ್ಯಕ್ಷರಾದ ಸ್ವಾಮಿ, ಖಂಜಾಚಿ ಮಂಜುನಾಥ್, ಗೌರವಾಧ್ಯಕ್ಷರಾದ
ಬಡಪ್ಪ, ಸಹ ಕಾರ್ಯದರ್ಶಿ ಶ್ರೀಮತಿ ನಾಗಲಾಂಬಿಕ, ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಮಲ್ಲಿಕಾರ್ಜನಯ್ಯ, ಪ್ರಕಾಶ್,
ಬಸವರಾಜ್, ಗೌಸುಲ್ ಅಜಮ್, ಸೇರಿದಂತೆ ಇತರರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1