ಹುಟ್ಟು ಹಬ್ಬ, ವಿವಾಹ ಮಹೋತ್ಸವ, ವಿವಾಹ ಕಾರ್ಯಕ್ರಮಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿಯನ್ನು ಮೂಡಿಸಿಕೊಳ್ಳಿ: ಚಂದ್ರಹಾಸ್ ಕರೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜೂ. 05 ತಮ್ಮ ಮನೆಗಳಲ್ಲಿ ನಡೆಯುವ ಹುಟ್ಟು ಹಬ್ಬ, ವಿವಾಹ ಮಹೋತ್ಸವ, ವಿವಾಹ ಕಾರ್ಯಕ್ರಮಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿಯನ್ನು ಮೂಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್‍ನ ಯೋಜನಾಧಿಕಾರಿಗಳಾದ ಚಂದ್ರಹಾಸ್ ಕರೆ ನೀಡಿದರು.
ಚಿತ್ರದುರ್ಗ ನಗರದ ಕವಾಡಿಗರ ಹಟ್ಟಿಯಲ್ಲಿನ ಪ್ರಿಯದರ್ಶಿನಿ ಬಾಲಕಿಯರ ಪೌಢಶಾಲೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ
ಯೋಜನೆ ಬಿ.ಸಿ.ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಇಂದು ಪರಿಸರ ದಿನಾಚರಣೆಯ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ಮಾಹಿತಿ
ಕಾರ್ಯಕ್ರಮ ಹಾಗೂ ಸಸಿ ನಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ
ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗಡೆ ಯವರು ಸಹಾ ತಮ್ಮ ಹಲವಾರು ಕಾರ್ಯಕ್ರಮಗಳಲ್ಲಿ ಪರಿಸರ ಕಾಳಜಿಯೂ ಒಂದಾಗಿದೆ.
ಈ ಕಾರ್ಯಕ್ರಮವನ್ನು ಮುಂದಿನ ಒಂದು ತಿಂಗಳವರೆಗೂ ಸಸಿ ನಡುವ ಕಾರ್ಯಕ್ರಮ ನಡೆಯಲಿದೆ. ರಾಜ್ಯದಲ್ಲಿ ಲಕ್ಷಾಂತರ
ಸಸಿಗಳನ್ನು ನಡಲಾಗುವುದು ಚಿತ್ರದುರ್ಗ ತಾಲ್ಲೂಕಿನಲ್ಲಿ ಕಳೆದ ಬಾರಿ 2500 ಸಸಿಗಳನ್ನು ನಡೆಲಾಗಿತ್ತು ಈ ಬಾರಿ 3000 ಸಸಿಗಳನ್ನು
ನಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಪರಿಸರದ ಬಗ್ಗೆ ಎಲ್ಲರೂ ಸಹಾ ಕಾಳಜಿಯನ್ನು ಹೊಂದಬೇಕಿದೆ, ಪರಿಸರ ಇದ್ದರೆ ಮಾತ್ರ ನಮ್ಮ ಬದುಕಿಗೂ ಸಹಾ ಸಹಾಯವಾಗಿದೆ.
ಪರಿಸರ ನೀಡುವಂತ ಹಲವಾರು ಪ್ರಯೋಜನಗಳು ನಮ್ಮ ಜೀವನಕ್ಕೆ ದಾರಿಯಾಗಿದೆ. ನಮ್ಮ ಪೂರ್ವಜರ ಕಾಲದಲ್ಲಿ ಉತ್ತಮವಾದ
ಕಾಡು ಇತ್ತು ಅಲ್ಲಿ ಕಾಡು ಪ್ರಾಣಿಗಳು ವಾಸ ಮಾಡುತ್ತಿದ್ದವು ಆದರೆ ಈಗ ಮಾನವ ತನ್ನ ದುರಾಸೆಗಾಗಿ ಕಾಡನ್ನು ನಾಶ ಮಾಡಿದ್ದಾನೆ
ಇದರಿಂದ ಕಾಡಿನ ಪ್ರಾಣಿಗಳು ನಾಡಿಗೆ ಆಹಾರಕ್ಕಾಗಿ ಬರುತ್ತಿವೆ. ಇದಕ್ಕೆಲ್ಲ ನಾವೇ ಕಾರಣರಾಗಿದ್ದೆವೆ. ತಮ್ಮ ಮನೆಗಳಲ್ಲಿ ನಡೆಯುವ
ಹುಟ್ಟುಹಬ್ಬ, ವಿವಾಹ ಮಹೋತ್ಸವ, ವಿವಾಹ ಕಾರ್ಯಕ್ರಮಗಳಲ್ಲಿ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿಯನ್ನು
ಮೂಡಿಸಿಕೊಳ್ಳಬೇಕಿದೆ ತಮ್ಮ ಮನೆಯ ಮುಂದೆ ಜಾಗ ಇದ್ದಲ್ಲಿ ಅಲ್ಲಿ ಸಸಿಗಳನ್ನು ನಡೆವುದರ ಮೂಲಕ ಪರಿಸರವನ್ನು ಬೆಳಸಿ,
ಇಲ್ಲವಾದಲ್ಲಿ ಪಾಟು, ಕುಂಡಗಳಲ್ಲಿ ಸಸಿಗಳನ್ನು ನಡೆರಿ ಎಂದರು.
ಕರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘು ರಾಜ್ಯದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮನೆ
ಇಲ್ಲದ ನಿರ್ಗತಿಕರಿಗೆ ವಾತ್ಸಲ ಯೋಜನೆಯಡಿ ಮನಮೆ ನಿರ್ಮಾಣ, ನೋಡಿಕೊಳ್ಳಲು ಯಾರು ಇಲ್ಲದವರಿಗೆ ಮಾಸಿಕ ಪಿಂಚಿಣಿ,
ಕಲಿಯುವ ಮಕ್ಕಳಿಗೆ ಶಿಷ್ಯವೇತನ, ದೇವಾಲಯಗಳಿಗೆ ಸಹಾಯ, ಶಾಲಾ ಕಾಪೊಂಡು ನಿರ್ಮಾಣ ಇದರೊಂದಿಗೆ ಸಮುದಾಯದ
ಅಭೀವೃದ್ದಿ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಚಂದ್ರಹಾಸ್ ತಿಳಿಸಿದರು.
ಪ್ರಿಯದರ್ಶಿನಿ ಬಾಲಕಿಯರ ಪೌಢಶಾಲೆಯ ಶಿಕ್ಷಕರಾದ ವಸಂತಕಮಾರ್ ಮಾತನಾಡಿ, ಮಾನವನಿಗೆ ಪರಿಸರ ಪ್ರಕೃತಿ
ಅಗತ್ಯವಾಗಿದೆ, ಆದರೆ ಪರಿಸರ ಪ್ರಕೃತಿ ಮಾನವನಿಗೆ ಅಗತ್ಯವಾಗಿಲ್ಲ ಪರಿಸರ, ಪ್ರಕೃತಿಯಿಂದ ನಾವು ಅದರಿಂದ ನಮಗೆ ಅವುಗಳು
ಅಗತ್ಯವಾಗಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಪರಿಸರ ಅಗತ್ಯವಾಗಿದೆ. ಪ್ರಕೃತಿಯಿಂದ ನಾವು ಬೇಕಾದಷ್ಟು
ಪ್ರಯೋಜನವನ್ನು ಪಡೆಯಲಾಗಿದೆ ಆದರೆ ನಾವು ಪ್ರಕೃತಿಗೆ ಏನನ್ನು ಸಹಾ ನೀಡಲ್ಲ, ಉತ್ತಮವಾದ ಆರೋಗ್ಯವನ್ನು ಹೊಂದಲು
ಉತ್ತಮವಾದ ಪರಿಸರ ಅಗತ್ಯವಾಗಿದೆ. ಉತ್ತಮವಾದ ಗಾಳಿ, ಶುದ್ದವಾದ ಕುಡಿಯುವ ನೀರು ಹೊಂದಲು ನಾವುಗಳು ಉತ್ತಮವಾದ
ಪರಿಸರವನ್ನು ಹೊಂದಬೇಕಿದೆ ಪರಿಸರದ ಮೇಲೆ ದೌರ್ಜನ್ಯ ಹೆಚ್ಚಾದಷ್ಟು ಮಾನವ ಮೇಲೆ ರೋಗಗಳ ಹಾವಳಿ ಹೆಚ್ಚಾಗುತ್ತಿದೆ.
ಮಾನವ ತನ್ನ ದುರಾಸೆಗಾಗಿ ಪರಿಸರವನ್ನು ನಾಶ ಮಾಡಿ ಕಾಂಕ್ರೇಟ್ ಕಾಡನ್ನು ನಿರ್ಮಾಣ ಮಾಡುತ್ತಿದ್ದಾನೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೋಪಾಧ್ಯಯರಾದ ಮಹಾಂತೇಶ್ ಮಾತನಾಡಿ, ಪರಿಸರ ಚನ್ನಾಗಿ ಇದ್ದರೆ ಉತ್ತಮವಾದ
ಆರೋಗ್ಯವನ್ನು ಪಡೆಯಲು ಸಾಧ್ಯವಿದೆ. ಉತ್ತಮವಾದ ಆರೋಗ್ಯವನ್ನು ಪಡೆಯಲು ಉತ್ತಮವಾದ ಪರಿಸರ ಅಗತ್ಯ ಇದೆ ಆರೋಗ್ಯ
ಹಾಗೂ ಪರಿಸರಕ್ಕೆ ಅವಿನಾಭಾವ ಸಂಬಂಧಯಿದೆ. ಹಿಂದಿನ ಕಾಲದಲ್ಲಿ ಮನೆಯ ಹಿಂದೆ ಹಿತ್ತಲ್ಲು ಎಂದು ಇರುತ್ತಿತ್ತ ಅಲ್ಲಿ ಮನೆಗೆ
ಬೇಕಾದ ತರಕಾರಿಗಳನ್ನು ಹಾಗೂ ವಿವಿಧ ರೀತಿಯ ಹೂವಿನ ಗಿಡಗಳು ಹಾಗೂ ಹಣ್ಣಿನ ಮರಗಳನ್ನು ಬೆಳಸುತ್ತಿದ್ದರು ಆದರೆ ಈಗ
ಮನೆ ಸುಂದರವಾಗಿರುತ್ತದೆ ಅಲ್ಲಿ ಸಿಮಿಂಗ್ ಪೂಲ್, ಆಟದ ವಸ್ತುಗಳು ಇರುತ್ತವೆ ಹಿತ್ತಲು ಮಾತ್ರ ನಾಪತ್ತೇಯಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಜಯ್ಯಣ್ಣ, ಶಿಕ್ಷಕರುಗಳಾದ ತಿಪ್ಪೇರುದ್ರಪ್ಪ, ಶ್ರೀಮತಿ ಗೀತಾ, ಶ್ರೀ ಕ್ಷೇತ್ರ ಧರ್ಮಸ್ಥಳ
ಗ್ರಾಮಾಭಿವೃದ್ದಿ ಯೋಜನೆಯ ಕವಾಡಿಗರ ಹಟ್ಟಿ ಒಕ್ಕೂಟದ ಉಪಾಧ್ಯಕ್ಷರಾದ ಶಕುಂತಲ, ಭಾಗವಹಿಸಿದ್ದರು, ರೇಣುಕಾ
ಪ್ರಾರ್ಥಿಸಿದರೆ, ಜಯ್ಯಪ್ಪ ಸ್ವಾಗತಿಸಿದರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್‍ನ ಸುರೇಶ್ ಕಾರ್ಯಕ್ರಮ
ನಿರೂಪಿಸಿ ವಂದಿಸಿದರು,

Leave a Reply

Your email address will not be published. Required fields are marked *