ಚಿತ್ರದುರ್ಗದ ವೀರಶೈವ ಸಮಾಜದವತಿಯಿಂದ ಪ್ರತಿಭಾ ಪುರಸ್ಕಾರ.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

2024-25ರ ಸಾಲಿನಲ್ಲಿ ವಿದ್ಯಾಭ್ಯಾಸ ಮಾಡಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಯಲ್ಲಿ ಶೇಕಡಾ 90% ಮೇಲ್ಪಟ್ಟು ಅಂಕಗಳಿಸಿದ ಚಿತ್ರದುರ್ಗ ಜಿಲ್ಲೆಯ ವೀರಶೈವ/ಲಿಂಗಾಯಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ವೀರಶೈವ ಸಮಾಜವು ತೀರ್ಮಾನಿಸಿದೆ.

ಆದ್ದರಿಂದ ದಿನಾಂಕ : 30-06-2025 ರೊಳಗಾಗಿ ತಾವು ಅಭ್ಯಾಸ ಮಾಡಿದ ಪ್ರೌಢಶಾಲೆ/ಕಾಲೇಜು ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರಿಂದ ದೃಢೀಕರಿಸಿದ ಅಂಕಪಟ್ಟಿ ಮತ್ತು ಜಾತಿ ದೃಢೀಕರಣ ಪತ್ರದೊಂದಿಗೆ ಚಿತ್ರದುರ್ಗ ನಗರದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿರುವ ವೀರಶೈವ ಸಮಾಜದ ಕಛೇರಿಗೆ ಅರ್ಜಿ ಸಲ್ಲಿಸಲು ವೀರಶೈವ ಸಮಾಜ ಕಾರ್ಯದರ್ಶಿಗಳಾದ ಪಿ.ವೀರೇಂದ್ರಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ :: 9986295285, 9449022069

Leave a Reply

Your email address will not be published. Required fields are marked *