ಆರು ವರ್ಷಗಳಿಂದ ಈಕೆವೈಸಿ ಕೆಲಸ ನಿರ್ವಹಿಸಿರುವ ಹಣವನ್ನು ಅತಿ ಜರೂರಾಗಿ ಬಿಡುಗಡೆಗೊಳಿಸಬೇಕು.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 10 ರಾಜ್ಯದ ಪಡಿತರ ವಿತರಕರಿಗೆ 2025 ಮಾರ್ಚ್ ಏಪ್ರಿಲ್ ಮತ್ತು ಮೇ ಮಾಹೆಯ ಅನ್ನಭಾಗ್ಯದ ಸಹಾಯಧನ ಅಥವಾ ಲಾಭಾಂಶ ಬಿಡುಗಡೆಗೊಳಿಸಬೇಕು, ಆರು ವರ್ಷಗಳಿಂದ ಈಕೆವೈಸಿ ಕೆಲಸ ನಿರ್ವಹಿಸಿರುವ ಹಣವನ್ನು ಅತಿ ಜರೂರಾಗಿ ಬಿಡುಗಡೆಗೊಳಿಸಬೇಕು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭೀವೃದ್ದಿ ಸಂಘ ಆಗ್ರಹಿಸಿದೆ.
ಚಿತ್ರದುಗರ್ಹ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷರಾದ ಕೃಷ್ಣ ಡಿ. ನಾಯ್ಕ್, ಕರ್ನಾಟಕ ರಾಜ್ಯದಲ್ಲಿ ಸುಮಾರು 45 ವರ್ಷಗಳಿಂದ. ಆಹಾರ ಇಲಾಖೆಯಲ್ಲಿ ಸುಮಾರು ವಿತರಕರು. ಕೆಲಸ ನಿರ್ವಹಿಸಿರುತ್ತಾರೆ. ರಾಜ್ಯದಲ್ಲಿ ಪ್ರಸ್ತುತ 20488 ಪಡಿತರ ವಿತರಕರು ಸರ್ಕಾರದ ಅಧೀನದಲ್ಲಿ ಸರ್ಕಾರ ರೂಪಿಸುವ ಯೋಜನೆಗಳಿಗೆ ಅನುಗುಣವಾಗಿ ಕೆಲಸ ನಿರ್ವಹಿಸಿ ಯೋಜನೆಗಳು ಯಶಸ್ಸಿಗೆ ರಾಜ ರಾಜ್ಯದ ಪಡಿತರ ವಿತರಕರು ಮುಖ್ಯ ಕಾರಣಕರ್ತರಾಗಿದ್ದಾರೆ ರಾಜ್ಯದಲ್ಲಿ ಸುಮಾರು 6 ವರ್ಷಗಳ ಹಿಂದೆ ಸರ್ಕಾರ ರಾಜ್ಯದ ಪಡಿತರ ಚೀಟಿದಾರರ ಎಲ್ಲಾ ಸದಸ್ಯರ ಬೆರಳಚ್ಚು ಪಡೆಯುವ ಮುಖಾಂತರ ದೃಢೀಕರಣ ಮಾಡಬೇಕೆಂದು ಆದೇಶ ಮಾಡಿತು. ಅದರಂತೆ ರಾಜ್ಯದ ಎಲ್ಲಾ ಪಡಿತರ ವಿತರಕರು ರಾಜ್ಯದ ಪಡಿತರ ಚೀಟಿದಾರರ ಎಲ್ಲಾ ಸದಸ್ಯರ ಈಕೆವೈಸಿ ಮಾಡಿ ಮುಗಿಸಿರುತ್ತೇವೆ. ಆದರೆ ಇದುವರೆಗೂ ನಮಗೆ ಬರಬೇಕಾಗಿರುವ ಈಕೆವೈಸಿ ಹಣ ಸರ್ಕಾರ ಬಿಡುಗಡೆ ಮಾಡಿರುವುದಿಲ್ಲ ಎಂದು ದೂರಿದ್ದಾರೆ. 
ರಾಜ್ಯದ ಪಡಿತರ ವಿತರಕರಿಗೆ ಪ್ರತಿ ತಿಂಗಳು ಸರ್ಕಾರದಿಂದ ಬರುವ ಸಹಾಯಧನ ಅಥವಾ ಲಾಭಾಂಶ ನೀಡದೇ ಇರುವುದರಿಂದ ಪಡಿತರ ವಿತರಕರ ಜೀವನ ಬಹಳ ಕಷ್ಟಕರವಾಗಿದೆ. ರಾಜ್ಯದ ಪಡಿತರ ವಿತರಕರಿಗೆ 2025 ಮಾರ್ಚ್ ಮಾಹೆಯ ಅನ್ನಭಾಗ್ಯದ ಸಹಾಯಧನ ಅಥವಾ ಲಾಭಾಂಶ ಬಿಡುಗಡೆಗೊಳಿಸಬೇಕು. ಹಾಗೂ ಏಪ್ರಿಲ್ ಮತ್ತು ಮೇ ಮಾಹೆಯ ಸಹಾಯಧನ ಅಥವಾ ಲಾಭಾಂಶ ಬಿಡುಗಡೆಗೊಳಿಸಬೇಕು. ಸರ್ಕಾರದಿಂದ ಪಡಿತರ ವಿತರಕರಿಗೆ ಪ್ರಿಂಟರ್ ಮತ್ತುಡಿಹೊರಿಸ್ ಉಪಕರಣವನ್ನು ನೀಡಬೇಕು. ಆರು ವರ್ಷಗಳಿಂದ ಈಕೆವೈಸಿ ಕೆಲಸ ನಿರ್ವಹಿಸಿರುವ ಹಣವನ್ನು ಅತಿ ಜರೂರಾಗಿ ಬಿಡುಗಡೆಗೊಳಿಸಬೇಕು. ಪಡಿತರ ಚೀಟಿದಾರರಿಗೆ 10 ಕೆಜಿ ಅಕ್ಕಿ ಜೊತೆಗೆ ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ಇತ್ಯಾದಿ ಪದಾರ್ಥಗಳು ವಿತರಿಸಬೇಕು. ಪ್ರತಿ ತಿಂಗಳು ನಮ್ಮ ವಿತರಕರಿಗೆ ಸಹಾಯಧನ ಅಥವಾ ಲಾಭಾಂಶ ಬರುವಂತೆ ಆದೇಶಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. 

ಸರ್ಕಾರ ಈಗ ನಮಗೆ ಬರೀ 150 ರೂಗಳ ಕಮಿಷನ್ ನೀಡುತ್ತಿದೆ ಇದರಿಂದ ನಮ್ಮ ಕೆಲಸಗಳಿಗೆ ಸಾಕಾಗುವುದಿಲ್ಲ ಇದರ ಬದಲಿಗೆ 250 ರೂ.ಗಳನ್ನು ನೀಡಬೇಕು, ಇದರಿಂದ ನಮ್ಮ ಮೇಲೆ ಬೀಳುವ ಹೊರೆ ಕಡಿಮೆಯಾಗುತ್ತದೆ. ಸರ್ಕಾರ ನಮಗೆ ವಿವಿಧ ರೀತಿಯ ಯಂತ್ರಗಳನ್ನು ಖರೀದಿ ಮಾಡುವಂತೆ ಸೂಚನೆ ನೀಡಿದೆ ಆದರೆ ಈ ಯಂತ್ರಗಳನ್ನು ಖರೀದಿ ಮಾಡಲು ನಮ್ಮಲ್ಲಿ ಹಣದ ಕೊರತೆ ಇದೆ ಇದರಿಂದ ಸರ್ಕಾರವÉೀ ಈ ಯಂತ್ರಗಳನ್ನು ಖರೀದಿ ಮಾಡಿ ನೀಡಬೇಕು, ಸರ್ಕಾರ ಅರ್ಹರಿಗೆ ಸರಿಯಾದ ರೀತಿಯಲ್ಲಿ ಪಡಿತರ ವಿತರಣೆಯಾಗಬೇಕೆಂದು ಬಯಸಿದೆ ಇದರಲ್ಲಿ ಅನರ್ಹರು ಸೇರಿಕೊಂಡು ಸರ್ಕಾರದ ಪಡಿತರವನ್ನು ಹಾಳು ಮಾಡುತ್ತಿದ್ದಾರೆ ಇಲಾಖೆವತಿಯಿಂದ ಅನರ್ಹರ ಕಾರ್ಡಗಳನ್ನು ಪತ್ತೇ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಇದಕ್ಕೆ ನಾವು ಸಹಾ ಬೆಂಬಲವನ್ನು ನೀಡುತ್ತೇವೆ ಎಂದರು.

ಸರ್ಕಾರ ಹೊಸದಾಗಿ ಪಡಿತರ ಅಂಗಡಿಗಳನ್ನು ತೆರೆಯಲು ಅನುಮತಿಯನ್ನು ನೀಡುತ್ತಿದೆ ಇದರಿಂದ ನಮಗೆ ತೊಂದರೆಯಾಗುತ್ತದೆ ಈಗ ಇದರಿಂದ ಬರುವ ಲಾಭಾಂಶ ಕಡಿಮೆಯಾಗುತ್ತಿದೆ ಇನ್ನೂ ಹೊಸದಾಗಿ ಅಂಗಡಿಗಳನ್ನು ತರೆಯಲು ಅನುಮತಿ ನೀಡಿದರೆ ನಮಗೆ ಮತ್ತಷ್ಟು ನಷ್ಠವಾಗುತ್ತದೆ ಇದೆ ಬದಲು ಇರುವ ಪಡಿತರ ಅಂಗಡಿಗಳಿಗೆ ಮತ್ತಷ್ಟು ಬೇರೆ ಕಾರ್ಡಗಳನ್ನು ನೀಡುವುದರ ಮೂಲಕ ನಮ್ಮ ಜೀವನಕ್ಕೆ ದಾರಿಯನ್ನು ಕಲ್ಪಿಸಬೇಕಿದೆ ಎಂದ ಅವರು, ನಮಗೆ ಯಾವುದೇ ರೀತಿಯ ಭದ್ರತೆ ಇಲ್ಲವಾಗಿದೆ. ನಮ್ಮ ಕೆಲಸವನ್ನು ಮಾಡುವವರು ಆಕಸ್ಮಿಕವಾಗಿ ನಿಧನ ಹೊಂದಿದರೆ ಅವರ ಅವಲಂಬಿತರಿಗೆ ಪಡಿತರ ಅಂಗಡಿಯನ್ನು ನೀಡುತ್ತಿಲ್ಲ ಇದರಿಂದ ಇದನ್ನು ನಂಬಿದವರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭೀವೃದ್ದಿ ಸಂಘದ ಗೌಅಧ್ಯಕ್ಷರಾದ ಡಿ.ಎಂ.ಹಾಲಸ್ವಾಮಿ, ಹಿರಿಯ ಉಪಾಧ್ಯಕ್ಷರಾದ ಕೆ.ಎಸ್.ಪ್ರಕಾಶ್, ಕೋಶಾಧ್ಯಕ್ಷರಾದ ಡಿ.ಜಿ.ಶಿವಾನಂದಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಎಕೆ.ರಾಮಚಂದ್ರ, ಸಹ ಕಾರ್ಯದರ್ಶಿ ಶ್ರೀಮತಿ ರೇಣುಕಮ್ಮ, ಜಿಲ್ಲಾ ಅಧ್ಯಕ್ಷರು ಕೆ.ಎಸ್.ಸಿದ್ದಬಸಪ್ಪ, ನಗರ ಘಟಕ ಅಧ್ಯಕ್ಷರು ಭಿಮಪ್ಪ, ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *