ಅಮ್ಮ ವಿಡಿಯೋ ಮಾಡ್ತಿದ್ರೆ, ಅಲೆ ಮಗಳನ್ನೇ ನುಂಗಿಹಾಕ್ತು;ಪುಟ್ಟ ಪೋರಿನ ಸಾವಿನ ಬಾಯಿಗೆ ತಳ್ಳಿದ ತಾಯಿ!

ಜನರಿಗೆ ಸಾಮಾಜಿಕ ಮಾಧ್ಯಮ ವ್ಯಸನ ಶುರುವಾಗಿ ಬಹಳ ವರ್ಷಗಳೇ ಕಳೆದಿವೆ. ಒಮ್ಮೆ ಅದರ ಚಟಕ್ಕೆ ಬಿದ್ದರೆ ಯಾವುದೇ ಔಷಧಿಯಿಂದ ಕೂಡ ಅದನ್ನು ಬಿಡಿಸಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಜನರು ವೈರಲ್ ಆಗಲು ಅಥವಾ ಉತ್ತಮ ಫೋಟೋ ಅಥವಾ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ.

ಅಂತಹ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಒಬ್ಬ ತಾಯಿ ತನ್ನ ಮಗಳನ್ನು ಸಾವಿನ ಬಾಯಿಗೆ ತಳ್ಳಿದ್ದಾಳೆ. ವಿಡಿಯೋ ನೋಡಿದ ನಂತರ ನೀವೂ ತಾಯಿಯ ಅಜಾಗರೂಕತೆಯ ಬಗ್ಗೆ ತೀವ್ರವಾಗಿ ಕಾಮೆಂಟ್ ಮಾಡುತ್ತೀರಿ. ಜೊತೆಗೆ ಶಪಿಸುತ್ತೀರಿ.

ಸಂತೋಷದಿಂದ ನೃತ್ಯ ಮಾಡುತ್ತಿದ್ದ ಹುಡುಗಿ
ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗಿ ತುಂಬಾ ಸಂತೋಷವಾಗಿದ್ದಾಳೆ ಮತ್ತು ಸಮುದ್ರದ ಅಲೆಗಳನ್ನು ಆನಂದಿಸುತ್ತಿದ್ದಾಳೆ. ಆದರೂ ಅಲೆಗಳು ತುಂಬಾ ವೇಗವಾಗಿ ಅವಳ ಕಡೆಗೆ ಬರುತ್ತಿವೆ. ಈ ಸಮಯದಲ್ಲಿ, ಹುಡುಗಿಯ ತಾಯಿ ಅವಳ ವಿಡಿಯೋ ಮಾಡುತ್ತಿದ್ದಾಳೆ. ಅಪಾಯವನ್ನು ನೋಡಿದರೂ ಇದೆಲ್ಲವೂ ನಿರಂತರವಾಗಿ ನಡೆಯುತ್ತಿದೆ. ಅಷ್ಟರಲ್ಲಿ, ಇದ್ದಕ್ಕಿದ್ದಂತೆ ಬಲವಾದ ಅಲೆ ಬಂದು ಹುಡುಗಿಯನ್ನು ಎಳೆದುಕೊಂಡು ಹೋಗಿದೆ. ಇದೆಲ್ಲಾ ಆದ ನಂತರ, ಅಲ್ಲಿದ್ದ ಜನರೆಲ್ಲರೂ ಕೂಗಲು ಪ್ರಾರಂಭಿಸಿದರು.

ಈ ವಿಡಿಯೋ ಎಲ್ಲಿಂದ ಬಂದಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ ಕೆಲವರು ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಜನರು ಈ ವಿಡಿಯೋ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ. ಯಾರಾದರೂ ಇಷ್ಟೊಂದು ಅಸಡ್ಡೆ ಹೊಂದಲು ಹೇಗೆ ಸಾಧ್ಯ ಎಂದು ಹೇಳುತ್ತಿದ್ದಾರೆ. ಕೆಲವರು ಇದು ಹಳೆಯ ವಿಡಿಯೋ ಎಂದು ಹೇಳುತ್ತಾರೆ, ಇದನ್ನು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ವೈರಲ್ ವಿಡಿಯೋ ನೋಡಿದ ನಂತರ , ಜನರು ಹುಡುಗಿಯ ತಾಯಿಯನ್ನು ಶಪಿಸುತ್ತಿದ್ದಾರೆ. ಬಲವಾದ ಅಲೆಗಳು ಬರುತ್ತಿರುವುದು ಗೋಚರಿಸುತ್ತಿರುವಾಗ, ಹುಡುಗಿಯನ್ನು ಸಮುದ್ರಕ್ಕೆ ಕಳುಹಿಸುವಂಥದ್ದೇನಿತ್ತು ಎಂದು ಜನರು ಶಪಿಸುತ್ತಿದ್ದಾರೆ. ಹಾಗೆಯೇ ಕೆಲವು ಬಳಕೆದಾರರು ಈ ವಿಡಿಯೋದಲ್ಲಿ ಹೆಚ್ಚಿನ ವಿಷಯಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ ಎಂದು ಹೇಳುತ್ತಿದ್ದಾರೆ, ಆದ್ದರಿಂದ ಅವರು ಹುಡುಗಿಗೆ ಏನಾಯಿತು ಎಂದು ಚಿಂತಿತರಾಗಿದ್ದಾರೆ. ಈ ವಿಡಿಯೋವನ್ನು ಹಂಚಿಕೊಳ್ಳುವಾಗ, “ಸಮುದ್ರವು ತುಂಬಾ ಸುಂದರವಾಗಿದೆ, ಆದರೆ ಅದೇ ಸಮಯದಲ್ಲಿ ಅದು ಅದೆಷ್ಟು ನಿರ್ದಯವಾಗಿದೆ” ಎಂದು ಕಾಮೆಂಟ್ ಮಾಡಿದ್ದಾರೆ.

ಇಲ್ಲಿ ಅಮ್ಮ ಸಾವು
ಇಂತಹುದೇ ಘಟನೆ ಇತ್ತೀಚೆಗಷ್ಟೇ ಉತ್ತರಾಖಂಡದಲ್ಲಿ ನಡೆದಿತ್ತು. ಇಲ್ಲಿ ರೀಲ್ಸ್ ಶೂಟ್ ಮಾಡುವಾಗ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮಹಿಳೆ ಕ್ಯಾಮೆರಾವನ್ನು ನೋಡಿ ನಗುತ್ತಾ, ಇದ್ದಕ್ಕಿದ್ದಂತೆ ನೀರಿಗೆ ಜಾರಿಬೀಳುತ್ತಿರುವುದು ಕಂಡುಬಂದಿದೆ. ಇತ್ತ ಕಡೆ

“ಅಮ್ಮ” ಎಂದು ಆಕೆಯ ಮಗಳು ಜೋರಾಗಿ ಕಿರುಚುವುದು ಕಂಡುಬರುತ್ತದೆ. ಆ ಮಹಿಳೆ ನೀರಿನಿಂದ ಹೊರಬರಲು ಎಷ್ಟೇ ಹೆಣಗಾಡಿದರೂ ನಂತರ ಬಲವಾದ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಾಳೆ.

ಘಟನೆಯ ವಿವರ
35 ವರ್ಷದ ಮಹಿಳೆ ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿ ಮಾಡಲು ತನ್ನ 11 ವರ್ಷದ ಮಗಳೊಂದಿಗೆ ಮಣಿಕರ್ಣಿಕಾ ಘಾಟ್‌ಗೆ ಭೇಟಿ ನೀಡಿದ್ದಾಗ ಈ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ, ಮಹಿಳೆ ತನ್ನ ಮೊಬೈಲ್ ಫೋನ್ ಅನ್ನು ಮಗಳಿಗೆ ನೀಡಿ ನದಿಯಲ್ಲಿ ತನ್ನ ವಿಡಿಯೋ ಮಾಡಲು ಕೇಳಿಕೊಂಡಿದ್ದಳು.

ಸ್ಥಳದಲ್ಲಿದ್ದವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ವಲ್ಪ ಸಮಯದ ನಂತರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಯಿತು. ಆದರೆ, ಮಹಿಳೆ ಪತ್ತೆಯಾಗಲಿಲ್ಲ. ಈ ಘಟನೆಯು ರೀಲ್ಸ್ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡಬೇಕೆಂಬುದನ್ನು ಸೂಚಿಸುತ್ತದೆ. ಕಳೆದ ವರ್ಷ ಜುಲೈನಲ್ಲಿ, ಮಹಾರಾಷ್ಟ್ರದ ರಾಯಗಢ ಬಳಿ ರೀಲ್ಸ್ ಶೂಟ್ ಮಾಡುವಾಗ ಇನ್‌ಸ್ಟಾಗ್ರಾಮ್ ಇನ್‌ಫ್ಲೂಯೆನ್ಸರ್ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದರು. 26 ವರ್ಷದ ಆನ್ವಿ ಕಾಮ್ದಾರ್ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದಾಗ, ವಿಡಿಯೋ ಚಿತ್ರೀಕರಣ ಮಾಡುವಾಗ ಆಳವಾದ ಸಂದಿಗೆ ಜಾರಿ ಬಿದ್ದಿದ್ದಳು.

Suvarna News

Leave a Reply

Your email address will not be published. Required fields are marked *