ಪ್ರೇರಣಾದಾಯಕ ನುಡಿಗಳನ್ನಾಡಿದರೆ ಸಾಕು, ಅವರಿಂದ ಮತ್ತಷ್ಟು ಮಗದಷ್ಟು ಕೆಲಸವನ್ನು ಸಮಾಜ ನಿರೀಕ್ಷಿಸಬಹುದು.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ 13,  ವೈಯುಕ್ತಿಕ  ಇಲ್ಲವೇ ಸಾರ್ವಜನಿಕ ರಂಗದಲ್ಲಿರುವವರು ವ್ಯಷ್ಟಿಯ ಹಿತದೊಂದಿಗೆ ಸಮಷ್ಟಿಯ ಹಿತ ಬಯಸುವ ನಿಟ್ಟಿನಲ್ಲಿ ತಾನು ನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ಕರ್ತವ್ಯ ನಿಷ್ಠೆ, ಬದ್ದತೆ, ಪ್ರಾಮಾಣಿಕತೆ ಹಾಗು ನಿಸ್ವಾರ್ಥದಿಂದ ಸೇವಾ ಭಾವ ತೋರುವಂತಹ ವ್ಯಕ್ತಿತ್ವವುಳ್ಳವರನ್ನ ಪರಿಗಣಿಸಿ, ಗೌರವಿಸುವ, ಅಭಿನಂದಿಸುವ ಇಲ್ಲವೇ ನಿಮ್ಮ ನಡೆಗೆ ನನ್ನ ಅಭಿನಂದನೆ ನೀವು ಚನ್ನಾಗಿ ಕೆಲಸ ನಿರ್ವಹಿಸಿ ಎನ್ನುವ ಪ್ರೇರಣಾದಾಯಕ ನುಡಿಗಳನ್ನಾಡಿದರೆ ಸಾಕು, ಅವರಿಂದ ಮತ್ತಷ್ಟು ಮಗದಷ್ಟು ಕೆಲಸವನ್ನು ಸಮಾಜ ನಿರೀಕ್ಷಿಸಬಹುದು ಎಂದು ಹರಿಹರ ತಾಲ್ಲೂಕಿನ ಎರೆಹೊಸಳ್ಳಿ ವೇಮನ (ರೆಡ್ಡಿ) ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ವೇಮನ ಮಹಾಸ್ವಾಮಿಗಳು ತಮ್ಮ ಆಶಯ ವ್ಯಕ್ತ ಪಡಿಸಿದರು.

ಶ್ರೀಗಳವರು ಹಿರಿಯೂರು ಪಟ್ಟಣದಲ್ಲಿ ಶ್ರೀಗುರು ನರ್ಸಿಂಗ್ ಹೋಂ ಸ್ಥಾಪಿಸಿ ಆರೋಗ್ಯ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಉಳ್ಳವರು ಇಲ್ಲದವರೆಂಬ ತಾರತಮ್ಯೆ ಎಣಿಸದೆ ಸೇವೆ ಮಾಡುತ್ತಿರುವ ಡಾ. ಹೆಚ್.ಮೂರ್ತಿಯವರ ಸೇವ ನಿಷ್ಠೆ ಕಂಡು, ಗುರುತಿಸಿ ಅವರ ಹಿತೈಸಿಗಳು, ಬಂಧುಗಳು ಮತ್ತು ಸ್ನೇಹಿತರು ಸೇರಿಕೊಂಡು ಮೂರ್ತಿಯವರು ಇಂತಹ ಸೇವಾಭಾವ ಹಾಗೂ ಸಂಸ್ಕಾರಯುತ ಜೀವನ ಕ್ರಮ ಅನುಸರಿಸಲು ಶಾಲಾದಿನಗಳಲ್ಲಿ ಪ್ರೇರಣೆಯಾದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುವ ಮೂಲಕ ಮೂರ್ತಿಯವರ ಅಭಿನಂದನೆ ಹಾಗೂ ಜನ್ಮದಿನ ಆಚರಣೆಯು ನಗರದ ಹೊರವಲಯದಲ್ಲಿ ನಿನ್ನೆ ಯೋಗವನ ಬೆಟ್ಟದಲ್ಲಿ ನಡೆದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡುತ್ತ ನಿಸ್ವಾರ್ಥದಿಂದ ಕೆಲಸಮಾಡುವ ಯಾರೇ ಆಗಲಿ ಅವರಿಗೆ ಒಂದು ಸ್ಪೂರ್ತಿದಾಯಕ ಮಾತು ಅವರ ಹುಮ್ಮಸನ್ನು ನೂರ್ಮಡಿ ಗೊಳಿಸುತ್ತದೆಂದು ಹೇಳಿದರು. ಇದೊಂದು ನೂತನ, ಮಾದರಿ ಸಮಾರಂಭ ಎಂದು ಶ್ಲಾಘಿಸಿದ ಶ್ರೀಗಳು ಉತ್ತಮ ರೀತಿಯ ಕೆಲಸದ ದಾರಿಗೆ ಹೂವಾಸುವ ಕೆಲಸವಾಗಬೇಕೆಂದು ಕರೆ ನೀಡಿದರು. 

ಸಮಾರಂಭದ ಸಮ್ಮುಖವಹಿಸದ್ದ ಯೋಗವನ ಬೆಟ್ಟದ ಅಧ್ಯಕ್ಷರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಮಾತನಾಡಿ ಯಾರಿಗೆ ಆಗಲಿ ಚಿಕ್ಕ ವಯಸ್ಸಿನಲ್ಲಿ ಸಂಸ್ಕಾರ ಸಿಕ್ಕರೆ ಎಂತಹ ಸದ್ಗುಣಿಗಳಾಗಲು ಸಾಧ್ಯ ಎನ್ನುವುದಕ್ಕೆ ಡಾ. ಮೂರ್ತಿಯವರೆ ನಮ್ಮ ಮುಂದಿದ್ದಾರೆ. ವೈದ್ಯವೃತ್ತಿಯಲ್ಲಿ ಅವರ ನಡೆ ಮಾದರಿಯಾಗಿದೆ. ಅವರು ಸರ್ಕಾರಿ ಸೇವೆಯನ್ನು ತೊರೆದು ಜಿಲ್ಲೆಯ ಹಾಗೂ ತಾಲ್ಲೂಕಿನ ಜನರ ಸೇವೆಗಾಗಿ ಅದೂ ಸಹ ಶ್ರೀ ಗುರು ನರ್ಸಿಂಗ್ ಹೋಂ ಅಂದರೆ ಈ ಹಿಂದೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಿಂದ ದೊರೆತ ಮಾರ್ಗದರ್ಶನ ಪರಿಣಾಮ ಮತ್ತು ಪ್ರಭಾವದ ಫಲ ಎಂಬಂತೆ ಗುರುಗಳ ಹೆಸರನ್ನಿಟ್ಟಿರುವುದು ಅವರು ಗುರುವಿಗೆ ನೀಡಿದ ಗೌರವದ ಸ್ಥಾನ ಆದರ್ಶದ ಮಾರ್ಗವೇ ಆಗಿದೆ. ಈ ರೀತಿ ಸಮಾಜಕ್ಕೆ ಋಣ ತೀರಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ ಎಂದು ಸಲಹೆ ನೀಡಿದರು. 

ಡಾ. ಹೆಚ್. ಮೂರ್ತಿಯವರ ಶಾಲಾ ದಿನಗಳ ಕಲಿಕೆಯ ದಿನಗಳಲ್ಲಿ ಮಾರ್ಗದರ್ಶನ ನೀಡಿದ ಪ್ರಸ್ತುತ ನಿವೃತ್ತರಾಗಿರುವ ಬೆಳವನೂರಿನ ಸದಾಶಿವಪ್ಪ, ತಾಳಿಕಟ್ಟಿಯ ಈಶ್ವರಪ್ಪ, ಹೊಳಲ್ಕೆರೆಯ ಟಿ.ಜಿ. ಶಂಕರಮೂರ್ತಿ ಅವರುಗಳು ಮೂರ್ತಿಯವರ ಶಾಲಾದಿನಗಳಾದ ವರ್ತನೆ ಕಲಿಕೆ, ವಿನಯ, ಬದ್ದತೆಯಿಂದ ಚನ್ನಾಗಿ ವ್ಯಾಸಂಗ ಮಾಡಲು ಸಾದ್ಯವಾಯಿತು. ಅವರ ಬರಹವಂತೂ ಅಂದವಾಗಿರುತಿತ್ತು. ನೀಟಾದ ಬರವಣಿಗೆಯ ವ್ಯಕಿತ್ವವುಳ್ಳವುರು, ಸುಸಂಸ್ಕøತ, ಸುಜ್ಞಾನ, ನಯ ವಿನಯದಲ್ಲಿ ಮುಂದಿರುತ್ತಾರೆಂಬುದು ವಾಡಿಕೆ.   ಒಂದರ್ಥದಲ್ಲಿ ವೈದ್ಯವೃತ್ತಿಯಂತಹ ಉನ್ನತ ಹುದ್ದೆಯಲ್ಲಿದ್ದರೂ ಅವರಿಗೆ ಗರ್ವವಿಲ್ಲ. ನಿಗರ್ವಿ ಮತ್ತು ನಿಸ್ವಾರ್ಥಿ ಎಂದು ಬಣ್ಣಿಸಿದರು. ಮಕ್ಕಳ ವೈದ್ಯರಾಗಿ ಆ ಭಾಗದಲ್ಲಿ ಜನಾನುರಾಗಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾವುಗಳು ಗಮನಿಸಿ ಕೇಳುತ್ತಿರುವಂತೆ ನಗರ ಹಾಗೂ ಗ್ರಾಮೀಣ, ಪಟ್ಟಣ ಭಾಗದಲ್ಲಿ ಇವರನ್ನು ದೈವಸ್ವರೂಪಿಗಳೆಂದೇ ಭಾವಿಸಿದ್ದಾರೆ. ಹಣ ಸಂಪಾದನೆ ಜತೆಗೆ ಗುಣ ಸಂಪಾದನೆ ಸೇರಿದರೆ ಜನ್ಮ  ಸಾರ್ಥಕವಲ್ಲವೇ ? ಈಗೀಗ ಅಭಿಮಾನ, ಸನ್ನಡತೆ, ಸೇವಾಭಾವ ಮರಿಚೀಕೆಯಾಗುತ್ತಿರುವ ಈ ದಿನಮಾನದಲ್ಲಿ ನಮ್ಮಂತ ನಿವೃತ್ತ ಮೇಷ್ಟ್ರುಗಳನ್ನು ಕರೆದು ಗೌರವಿಸುವ ಮನೋಭಾವ ಆದರ್ಶವೇ ಸರಿ ಎಂದರು. ಈ ಸಮಾರಂಭ ಮೂರ್ತಿಯವರಿಗೆ ಜನ್ಮದಿನ ಆಚರಿಸಿಕೊಳ್ಳಲು ಇಷ್ಟವಿಲ್ಲದ ಕಾರಣ ಮೂರ್ತಿಯವರ ಸಲಹೆಯಂತೆ ಅವರ ಶ್ರೀಮತಿ ಡಾ.ಮಂಜುಳಾ ಅವರು ನಮ್ಮನ್ನೆಲ್ಲ ಆಮಂತ್ರಿಸಿ ಗೌರವಿಸುವುದು ಒಂದುರೀತಿಯ ಮಾರ್ಗದರ್ಶಿ ನಡೆ ಎನ್ನಬಹುದಾಗಿದೆ. ಎಂದು ಮೂವರು ಶಿಕ್ಷಕರು ಕಳೆದ ನಾಲ್ಕೈದು ದಶಕಗಳ ನೆನಪನ್ನು ಹಾಗೂ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಡಾ.ಮೂರ್ತಿ ಹಾಗೂ ಡಾ.ಮಂಜುಳ ದಂಪತಿ, ಶ್ರೀಗಳು ಮೂರ್ತಿಂiÀವರ ಸ್ನೇಹಿತರು, ಹಿತೈಷಿಗಳು, ಬಂಧುಗಳು ಮೂವರು ಶಿಕ್ಷಕರಿಗೆ ಗೌರವವಂದನೆ ಸಲ್ಲಿಸಿದರು. ಅದೇ ರೀತಿ ಶ್ರೀಗಳು ಸೇರಿದವರು ಡಾ. ಹೆಚ್.ಮೂರ್ತಿಯವರನ್ನು ಅಭಿನಂದಿಸಿರು. 

ಈ ಸಂದರ್ಭದಲ್ಲಿ ಗುರುವಂದನೆ ಹಾಗೂ ಮೂರ್ತಿಯವರ ಜನ್ಮದಿನ ಅಭಿನಂದನಾ ಸಮಾಂಭಕ್ಕೆ ಸಾಕ್ಷಿಯಾದ ದಾವಣಗೆರೆ ಶಿವಲೀಲಾ ಡಯಾಗ್ನಸ್ಟಿಕ್ ಸೆಂಟರ್‍ನ ಡಾ. ವಿಜಯಕುಮಾರ್, ಹುಳಿಯಾರನ ಸ್ಪಂದನ ನರ್ಸಿಂಗ್ ಹೋಂನ ಪ್ರಸ್ತೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಬಿ.ಎನ್. ರವಿಕುಮಾರ್, ಡಾ. ರೋಹಿತ್, ನಾಗಸಮುದ್ರದ ಡಿ.ಎ.ಓ ಡಾ. ಚಂದ್ರಕಾಂತ್, ಹಿರಿಯೂರಿನ ವೈದ್ಯರಾದ ಡಾ. ಜಗನ್ನಾಥ್, ನಿವೃತ್ತ ಡಿ.ಹೆಚ್.ಓ. ಡಾ.ವಿಶ್ವನಾಥಯ್ಯ, ಡಾ.ಶಿವಣ್ಣರೆಡ್ಡಿ, ಹಿರಿಯ ವೈದ್ಯರಾದ ಡಾ. ಮಲ್ಲಿಕಾರ್ಜುನಪ್ಪ, ನೇತ್ರತಜ್ಞ ಡಾ. ಸಂದೀಪ್, ಚರ್ಮರೋಗ ತಜ್ಞ ಡಾ.ವೆಂಕಟೇಶ್, ಹೊಸದುರ್ಗದ ಡಾ. ನದಾಫ್, ಯುರಾಲಾಜಿಸ್ಟ್ ಡಾ. ಮಂಜುನಾಥ, ಬಾಲಾಜಿ ನರ್ಸಿಂಗ್ ಹೋಂ ಡಾ. ವೆಂಕಟರಾಘವನ್,  ಡಾ.ಸೌಮ್ಯ, ನನ್ನಿವಾಳದ ಡಾ.ಪ್ರಭು, ಆಲಘಟ್ಟದ ಡಾ. ಸತೀಶ್, ಸೊಂಡೆಕರೆಯ ಡಾ. ನಾಗರಾಜ್, ಡಾ. ಲಕ್ಷ್ಮಣನಾಯಕ, ಡಾ. ನಾಗರಾಜ್‍ನಾಯಕ, ಹಿರಿಯೂರಿನ ನಗರಸಭಾ ಸದಸ್ಯರಾದ ಶ್ರೀಮತಿ ರತ್ನಮ್ಮ, ನಿವೃತ್ತ ಬ್ಯಾಂಕ್ ಅಧಿಕಾರಿ ಶೇಷಾದ್ರಿ, ಉದ್ಯಮಿಗಳಾದ ಬಾಬಣ್ಣ, ಮಲ್ಲೇಶಪ್ಪ, ಪಿಡಿಓ ಶಶಿಧರನಾಯಕ್, ಗೌತಮಶ್ರೀಪತಿ, ಹಿರಿಯೂರು ರೋಟರಿ ಅಧ್ಯಕ್ಷರಾದ ಶಶಿಕಿರಣ ಹಾಗೂ ಪ್ರಶಾಂತ್ ಸೇರಿದಂತೆ  ಬಂಧುಗಳು, ಅಭಿಮಾನಿಗಳು, ಭಾಗವಹಿಸಿದ್ದರು. ಪರಿಸರ ಮಾಸದ ಅಂಗವಾಗಿ ಬಂದವರಿಗೆ ಸಸಿಗಳನ್ನು ವಿತರಿಸಲಾಯಿತು. ಡಾ.ಮಂಜುಳ ಸ್ವಾಗತಿಸಿ, ಶರಣು ಸಮಾರ್ಪಣೆ ನರೆವೇರಿಸಿದರು.    

Leave a Reply

Your email address will not be published. Required fields are marked *