
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 13 ನಗರದ ಶ್ರೀ ಪಾಶ್ರ್ವನಾಥ ಎಜುಕೇಶನ್ ಸೊಸೈಟಿಯ ಶ್ರೀ ಪಾಶ್ರ್ವನಾಥ ವಿದ್ಯಾ ಸಂಸ್ಥೆವತಿಯಿಂದ ಶುಕ್ರವಾರ ಶಾಲಾ ಆವರಣದಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಶಾಲಾ ಉಪಾಧ್ಯಕ್ಷರಾದ ಉತ್ತಮ ಚಂದ್ ಸುರಾನ ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು ವಿದ್ಯಾಥಿಗಳು ನಾಡು ನುಡಿ ಹಾಗೂ ದೇಶ ಭಕ್ತಿ ಗೀತೆಗಳಿಗೆ ನೃತ್ಯ ಮಾಡಿದರು.
ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಸುರೇಶ್ ಕುಮಾರ್, ರಾಜೇಂದ್ರ ಜೈನ್, ಭರತ್ ಜೈನ್. ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ನಾಜಿಮಾ ಸ್ವಾಲೆಹಾ, ಪ್ರೌಡಶಾಲಾ ಮುಖ್ಯೋಪಾಧ್ಯಾಯ ಜನಕ್ ರೆಡ್ಡಿ, ಶಿಕ್ಷಕರಾದ ಶಾಂತ ಕುಮಾರಿ, ಆಯಿಶಾ, ಕಲಾವಿದ ನಾಗರಾಜ್ ಬೇದ್ರೆ ಭಾಗವಹಿಸಿದ್ದರು.