
ಚಿತ್ರದುರ್ಗ: ನಗರದ ಪ್ರತಿಷ್ಠಿತ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ, ಚಿತ್ರದುರ್ಗ ಇಲ್ಲಿ ದಿನಾಂಕ 13.06.2025(ಶುಕ್ರವಾರ)ದಂದು “ಶಾಲಾ ಸಂಸತ್ತು” ಮಕ್ಕಳ ಚುನಾವಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳಲ್ಲಿ ನಾಯಕತ್ವ, ಸಹಕಾರ, ಸಹಬಾಳ್ವೆ, ಹೊಂದಾಣಿಕೆ ಈ ಗುಣಗಳನ್ನು ಬೆಳೆಸುವಲ್ಲಿ ಮಕ್ಕಳ ಸಂಸತ್ತು ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ತಮ್ಮದೇ ಶೈಲಿಯಲ್ಲಿ ಪ್ರಣಾಳಿಕೆಯೊಂದಿಗೆ ಮತಯಾಚನೆ ಮಾಡಿದ್ದರು. 6ನೇ
ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಮತ ಚಲಾಯಿಸುವ ಮೂಲಕ ಮತದಾನ ಜಾಗೃತಿಯನ್ನು ಮನಗಂಡರು. ಕೈ ಬೆರಳಿಗೆ ಶಾಹಿ ಹಚ್ಚಿಸಿಕೊಂಡು ಬ್ಯಾಲೆಟ್ಪೇ ಪರ್ನಲ್ಲಿ ಸ್ವಸ್ತಿಕ್ ಚಿಹ್ನೆ ನಮೂದಿಸುವ ಮೂಲಕ ಮತ ಚಲಾಯಿಸಿ ಸಂತಸ ಪಟ್ಟರು. ಮತದಾನ ಜಾಗೃತಿ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಸಮಾಜ ವಿಜ್ಞಾನ ಶಿಕ್ಷಕರಾದ ಖಾನ್ಖಾ ದರ್ ವಲಿ, ಸೈಯದ್ ಖಾದರ್ ಭಾಷಾ, ಅಯ್ಯಪ್ಪನ್, ಉಷಾ ಎಲ್ ಆರ್, ಮಂಜೂಷ, ಶಾರದ ಕೆ, ವೈಶಾಲಿ ಬೆನ್ನಾಡಿ ಹಾಗೂ ಇತರೆ ಸಮಾಜ ವಿಜ್ಞಾನ ಶಿಕ್ಷಕರು ಮತದಾನ ಕಾರ್ಯಕ್ರಮದ ಯಶಸ್ವಿಯಲ್ಲಿ ಸಹಕರಿಸಿದರು. ಮತದಾನ ಪ್ರಕ್ರಿಯೆಯನ್ನು ಶಾಲೆಯ ಶೈಕ್ಷಣಿಕ ವ್ಯವಸ್ಥಾಪಕ ನಿರ್ದೇಶಕರಾದ ಪೃಥ್ವೀಶ ಎಸ್.ಎಂ ಅವರು ಮೊದಲ ಮತ ಚಲಾಯಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಕಾರ್ಯದರ್ಶಿಗಳಾದ ಶ್ರೀ ಬಿ ವಿಜಯಕುಮಾರ್, ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಸುನೀತಾ ಪಿ ಸಿ, ಐಸಿಎಸ್ಸಿ ಪ್ರಾಚಾರ್ಯರಾದ ಶ್ರೀ.ಬಸವರಾಜಯ್ಯ ಪಿ, ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ತಿಪ್ಪೇಸ್ವಾಮಿ.ಎನ್.ಜಿ ಹಾಗೂ ಎಲ್ಲಾ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಮತ ಚಲಾಯಿಸುವ ಮೂಲಕ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.