ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಲಿ. ಕಳೆದ 24 ವರ್ಷಗಳಿಂದ ಲಾಭವನ್ನುಗಳಿಸುತ್ತಾ ಬಂದಿದೆ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ 14 ಚಿತ್ರದುರ್ಗ ನಗರದ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ., ಕಳೆದ 24 ವರ್ಷಗಳಿಂದ ಲಾಭವನ್ನುಗಳಿಸುತ್ತಾ ಬಂದಿದೆ. 24 ವರ್ಷಗಳಿಂದ ಸಂಘವು ಎ'' ಶ್ರೇಣಿಯಲ್ಲಿ ಮುಂದುವರಿ ಯುತ್ತಿದೆ, 2024-25ನೇ ಸಾಲಿನಲ್ಲಿ ಸಂಘವು ರೂ. 89,02,140.64/-ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕ್‍ನ ಅಧ್ಯಕ್ಷರಾದ ಪಟೇಲ್ ಶಿವಕುಮಾರ್ ತಿಳಿಸಿದರು. ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಶ್ರೀ ನೀಲಕಂಠೇಶ್ವರ ದೇವಾಲಯದ ಎದುರಿನಲ್ಲಿರುವ   ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.,ನ 24 ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯೂ ಶನಿವಾರ ನಗರದ ಬಿ.ಡಿ. ರಸ್ತೆಯ ಶ್ರೀ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದು ಇದನ್ನು ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ದಿನಾಂಕ:02/08/2025ಕ್ಕೆ 24 ವರ್ಷಗಳನ್ನು ಪೂರೈಸಿಬೆಳ್ಳಿ ಹಬ್ಬ” ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ರಜತ ಮಹೋತ್ಸವದ ಆಚರಣೆಯ ಸಂಭ್ರಮದ ಸವಿನೆನಪಿಗಾಗಿ ರಜತ ಮಹೋತ್ಸವ ಭವನ"ವನ್ನು ತಮ್ಮೆಲ್ಲರ ಸಹಕಾರದೊಂದಿಗೆ ನಿರ್ಮಿಸಲು ಸಂಸ್ಥೆಯು ಅತ್ಯಂತ ಉತ್ಸಾಹದಲ್ಲಿದೆ. ಚಿತ್ರದುರ್ಗ ನಗರದ ಧವಳಗಿರಿ ಬಡಾವಣೆಯಲ್ಲಿ 60x180 ಅಡಿ ವಿಸ್ತೀರ್ಣದ ನಿವೇಶನವನ್ನು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಂಸ್ಥೆಯ ಹೆಸರಿಗೆ ನೊಂದಾಯಿಸಿಕೊಳ್ಳಲಾಗಿರುತ್ತದೆ ಎಂದರು. ಆಡಳಿತ ಮಂಡಳಿಯು ರಜತ ಮಹೋತ್ಸವ ಭವನ ನಿರ್ಮಾಣದ ಭೂಮಿ ಪೂಜೆಯನ್ನು ಬಸವ ಜಯಂತಿಯ ದಿನದಂದು ನೆರವೇರಿಸಲಾಯಿತು.

ಈ ರಜತ ಮಹೋತ್ಸವ ಭವನಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಸುಮಾರು ರೂ.3 ಕೋಟಿಗೂ ಅಧಿಕ ವೆಚ್ಚವಾಗಲಿದೆ. ಸೊಸೈಟಿಯಲ್ಲಿ ಲಭ್ಯವಿರುವ ಕಟ್ಟಡ ನಿಧಿ ರೂ.1.55 ಕೋಟಿ ಲಭ್ಯವಿದ್ದು, ಉಳಿದ ಮೊತ್ತವನ್ನು ದಾನಿಗಳು ಹಾಗೂ ಸೊಸೈಟಿಯ ಎಲ್ಲಾ ಷೇರುದಾರರ ಸಹಕಾರದೊಂದಿಗೆ ನಿರ್ಮಿಸಲು ಆಡಳಿತ ಮಂಡಲಿ ಕಾರ್ಯೋನ್ಮುಖವಾಗಿದೆ. 2024-25ನೇ ಸಾಲಿನಲ್ಲಿ ಲೆಕ್ಕ ಪರಿಶೋಧಕರು ಸಂಘದ ಲೆಕ್ಕಪತ್ರಗಳನ್ನು ಪರಿಶೋಧಿಸಿ ಸಂಘವನ್ನುಎ” ಶ್ರೇಣಿಯ ಸಂಘವೆಂದು ಪರಿಗಣಿಸಿರುತ್ತಾರೆ ಎಂದು ತಿಳಿಸಿದರು.
ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.,ಯೂ 2024-25ನೇ ಸಾಲಿನಲ್ಲಿ 1721 ಸದಸ್ಯತ್ವವನ್ನು ಹೊಂದಿದ್ದು, 80.18 ಲಕ್ಷ ರೂ. ಷೇರು ಬಂಡವಾಳವನ್ನು ಹೊಂದಿದ್ದು, 368.04 ಲಕ್ಷ ರೂ. ಕಾಯ್ದಿಟ್ಟ ನಿಧಿಯನ್ನು ಹೊಂದಿದ್ದು, 430.44 ಲಕ್ಷ ರೂ ಇತರೆ ನಿಧಿಗಳನ್ನು ಹೊಂದಿದೆ. 1368.25 ಲಕ್ಷ ರೂ ಠೇವಣಿಗಳನ್ನು ಹೊಂದಿದ್ದು, 758.39 ಲಕ್ಷ ರೂ. ಹೊಡಿಕೆಗಳನ್ನು ಮಾಡಲಾಗಿದೆ. 1227.23 ಲಕ್ಷ ರೂ ವಿವಿಧ ರೀತಿಯ ಸಾಲವನ್ನು ನೀಡಲಾಗಿದೆ. 2131.51 ಲಕ್ಷ ರೂ ದುಡಿಯುವ ಬಂಡವಾಳವನ್ನು ಹೊಂದಿದ್ದು, ಈ ಸಾಲಿನಲ್ಲಿ ಸಂಘವು ರೂ. 89,02,140.64/- ನಿವ್ವಳ ಲಾಭಗಳಿಸಿದೆ. ಷೇರುದಾರರಿಗೆ ಈ ಸಾಲಿನಲ್ಲಿ ಶೇ. 20 ರಷ್ಟು ಡಿವಿಡೆಂಡ್ ವಿತರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಅಡಿಟ್‍ರು ಸಂಘದ ಲೆಕ್ಕಪತ್ರಗಳನ್ನು ಪರಿಶೋಧಿಸಿ ಸಂಘವನ್ನು “ಎ” ಶ್ರೇಣಿಯ ಸಂಘವೆಂದು ಪರಿಗಣಿಸಿರುತ್ತಾರೆ ಎಂದು ಅಧ್ಯಕ್ಷರಾದ ಪಟೇಲ್ ಶಿವಕುಮಾರ್ ತಿಳಿಸಿದರು.
ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ.,ನ ಉಪಾಧ್ಯಕ್ಷರಾದ ಜಿ.ಟಿ.ಸುರೇಶ್. ನಿರ್ದೇಶಕರುಗಳಾದ ಎಸ್.ಪರಮೇಶ್ವರಪ್ಪ, ಎಸ್.ವಿ.ನಾಗರಾಜಪ್ಪ, ಎಸ್.ಷಣ್ಮುಖಪ್ಪ, ಡಿ.ಎಸ್., ಮಲ್ಲಿಕಾರ್ಜನಪ್ಪ, ಬಿ.ಎಂ.ಕರಿಬಸವಯ್ಯ, ಸಿ.ಚಂದ್ರಪ್ಪ, ಶ್ರೀಮತಿ ಜಯಶ್ರೀ ಹಾಗೂ ಆರ್,ಶೈಲಜಾ  ಬ್ಯಾಂಕ್‍ನ ವ್ಯವಸ್ಥಾಪಕರಾದ ಶ್ರೀಮತಿ ಕುಸುಮ ಜವಳಿ ಭಾಗವಹಿಸಿದ್ದರು. 
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ. ಹಾಗೂ ದ್ವೀತಿಯ ಪಿ.ಯು.ನಲ್ಲಿ ಉತ್ತಮ ಅಂಕಗಳನ್ನುಗಳಿಸಿದವರನ್ನು ಸನ್ಮಾನ ಮಾಡಲಾಯಿತು.

Leave a Reply

Your email address will not be published. Required fields are marked *