ಸರ್ಕಾರದಿಂದ ದುರ್ಗೋತ್ಸವ ಕಾರ್ಯಕ್ರಮವನ್ನು ಜೂನ್ ಅಂತ್ಯದೊಳಗೆ ದಿನಾಂಕ ನಿಗಧಿಪಡಿಸಿ ಆಚರಿಸುವಂತೆ ಆಗ್ರಹಿಸಿ ಕರುನಾಡ ವಿಜಯಸೇನೆ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 20 ಐತಿಹಾಸಿಕ ಚಿತ್ರದುರ್ಗದಲ್ಲಿ ಸರ್ಕಾರದಿಂದ ದುರ್ಗೋತ್ಸವ ಕಾರ್ಯಕ್ರಮವನ್ನು ಜೂನ್ ಅಂತ್ಯದೊಳಗೆ ದಿನಾಂಕ ನಿಗಧಿಪಡಿಸಿ ಆಚರಿಸುವಂತೆ ಆಗ್ರಹಿಸಿ ಕರುನಾಡ ವಿಜಯಸೇನೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಒತ್ತಾಯಿಸಿದೆ.

ಚಿತ್ರದುರ್ಗ ನಗರದ ಮದಕರಿ ವೃತ್ತದಲ್ಲಿ ದುರ್ಗೋತ್ಸವ ಆಚರಣೆ ಸಂಬಂಧ ಜಿಲ್ಲೆಯ ಸಂಸದರು, ಸಚಿವರು, ಶಾಸಕರನ್ನು ಪ್ರಶ್ನಿಸುವ ಭಿತ್ತಿ ಪತ್ರವನ್ನು ಹಿಡಿದು ಪ್ರತಿಭಟನೆಯನ್ನು ನಡೆಸಿದ ಕರುನಾಡ ವಿಜಯಸೇನೆಯ ಪದಾಧಿಕಾರಿಗಳು ನಮ್ಮ ಸುತ್ತಾ-ಮುತ್ತಲ್ಲಿನ ಜಿಲ್ಲೆಯಲ್ಲಿ ಸರ್ಕಾರ ವಿವಿಧ ರೀತಿಯ ಉತ್ಸವಗಳನ್ನು ಆಚರಣೆ ಮಾಡುತ್ತಿದೆ ಆದರೆ ನಮ್ಮ ಚಿತ್ರದುರ್ಗದಲ್ಲಿ ಮಾತ್ರ ದುರ್ಗೋತ್ಸವ ಆಚರಣೆ ಮಾಡಲು ಮೀನಾ-ಮೇಷ ಮಾಡುತ್ತಿದೆ ಎಂದು ದೂರಿ ಜಿಲ್ಲೆಯ ಸಂಸದರು, ಸಚಿವರು ಶಾಸಕರ ವಿರುದ್ದ ಘೋಷಣೆಗಳನ್ನು ಕೂಗಲಾಯಿತು, ಇದ್ದಲ್ಲದೆ ದುರ್ಗೋತ್ಸವ ಆಚರಣೆ ಯಾವಾಗ ಎಂಬ ಭಿತ್ತಿ ಪತ್ರವನ್ನು ಮದಕರಿ ಹಾಗೂ ಓನಕೆ ಒಬವ್ವ ವೃತ್ತದಲ್ಲಿ ಅಂಟಿಸಲಾಯಿತು,

ಈ ಸಂದರ್ಭದಲ್ಲಿ ಮಾತನಾಡಿದ ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಕರ್ನಾಟಕ ಸರ್ಕಾರದಿಂದ ಮೈಸೂರು ದಸರಾ, ಹಂಪಿ ಉತ್ಸವ, ಕೊಡಗು ಉತ್ಸವ, ಕಿತ್ತೂರು ಉತ್ಸವ, ಹಲವು ಜಿಲ್ಲೆಗಳಲ್ಲಿ ಇತಿಹಾಸವುಳ್ಳ ಹೆಸರುಗಳ ಮೇಲೆ ಉತ್ಸವಗಳನ್ನು ಸರ್ಕಾರವೇ ಆಚರಿಸುತ್ತಾ ದುರ್ಗೋತ್ಸವ ಆಚರಣೆಗೆ ತಾರತಮ್ಯ ಏಕೆ? ನಿನ್ನೆ-ಮೊನ್ನೆ ಜಿಲ್ಲೆಗಳೆಂದು ಘೋಷಣೆ ಮಾಡಿರುವ ಕೆಲವೂ ತಾಲ್ಲೂಕುಗಳಲ್ಲಿ ಉತ್ಸವಗಳನ್ನು ಸರ್ಕಾರದಿಂದ ನಡೆಸುತ್ತಿರುತ್ತಾರೆ. ಈ ಹಿಂದೆ ಕಾಂಗ್ರೆಸ್  ಸರ್ಕಾರವಿದ್ದಾಗ ಆಂಜನೇಯ ಸಚಿವರಾಗಿದ್ದಾಗ “ದುರ್ಗೋತ್ಸವ” ಕಾರ್ಯಕ್ರಮವನ್ನು ಆಚರಿಸಲಾಗಿತ್ತು. ಅಲ್ಲಿಂದ ತಾವುಗಳು ದುರ್ಗೋತ್ಸವ ಕಾರ್ಯಕ್ರಮವನ್ನು ಮಾಡುವುದು ಮರೆತಿರುವುದು ಎದ್ದು ಕಾಣುತ್ತಿದೆ ಎಂದು ದೂರಿದರು.

ಚಿತ್ರದುರ್ಗದಲ್ಲಿ ದುರ್ಗೋತ್ಸವವನ್ನು ಸರ್ಕಾರದಿಂದ ಆಚರಿಸುವಂತೆ ಈಗ್ಗೆ 5-6 ತಿಂಗಳ ಹಿಂದೆ ಸಂಘಟನೆಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡ ಪರಿಣಾಮ ಸಚಿವರು ಜೂನ್ ಅಂತ್ಯದೋಳಗೆ ದುರ್ಗೋತ್ಸವ” ಕಾರ್ಯಕ್ರಮವನ್ನು ಮಾಡಲು ಮೌಖಿಕವಾಗಿ ತಿಳಿಸಿರುತ್ತಾರೆ. ಆದರೆ ಜೂನ್ ತಿಂಗಳು  ಕಳೆಯುತ್ತಾ ಬಂದರೂ ಈ ಬಗ್ಗೆ ಸಚಿವರಾಗಲೀ, ಶಾಸಕರುಗಳಾಗಲಿ, ಮಾತನಾಡದಿರುವುದು ನೋಡಿದರೆ ಚಿತ್ರದುರ್ಗವನ್ನು ಕಡೆಗಣಿಸುತ್ತಿರುವುದು ಬೋಲ್ನೋಟಕ್ಕೆ ಕಂಡುಬರುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿವರ್ಷ ಆಯಾಯಾ ಜಿಲ್ಲೆಯ ಐತಿಹಾಸಿಕ ಇತಿಹಾಸವುಳ್ಳಂತಹ ಹೆಸರಿನ ಮೇಲೆ ಸರ್ಕಾರವು ಉತ್ಸವಗಳನ್ನು ಮಾಡುತ್ತಾ ಬಂದಿದೆ. ಆದರೆ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಚಿತ್ರದುರ್ಗವನ್ನು ಸರ್ಕಾರ, ಜಿಲ್ಲಾಡಳಿತ ಮತ್ತು ಜಿಲ್ಲೆಯ ಶಾಸಕರು ಕಡೆಗಣಿಸಿರುತ್ತಾರೆ. ವರ್ಷಕ್ಕೊಮ್ಮೆ ಐತಿಹಾಸಿಕ “ದುರ್ಗೋತ್ಸವ” ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮಾಡಿದರೆ ಇನ್ನು ಹೆಚ್ಚಿನದಾಗಿ ಪ್ರವಾಸಿತಾಣಗಳು ಅಭಿವೃದ್ಧಿ ಹೊಂದಲು ಮತ್ತು ಪ್ರವಾಸಿಗರು ಜಿಲ್ಲೆಯ ಐತಿಹಾಸಿಕ ಸ್ಥಳಗಳನ್ನು ಇನ್ನು ಹೆಚ್ಚಿನದಾಗಿ ವೀಕ್ಷಣೆ ಮಾಡಲು ಅವಕಾಶವಾಗುತ್ತದೆ. ಆದರೆ ಸರ್ಕಾರ ಚಿತ್ರದುರ್ಗವನ್ನು ಕಡೆಗಣಿಸುತ್ತಿರುವುದರಿಂದ ಜಿಲ್ಲೆಯ ಪ್ರವಾಸಿಗರಿಗೆ ಮತ್ತು ಕನ್ನಡಾಭಿಮಾನಿಗಳಿಗೆ ತುಂಬಾ ನೋವುಂಟು ಮಾಡಿದಂತಾಗಿದೆ ಎಂದರು.

ಸರ್ಕಾರ 2 ಬಾರಿ ದುರ್ಗೋತ್ಸದ ಆಚರಿಸಿರುವುದು ಬಿಟ್ಟರೆ ಇಲ್ಲಿಯವರೆಗೆ ಆಚರಿಸುವುದಿಲ್ಲ. ಕಿತ್ತೂರು ಉತ್ಸವ, ಹಂಪಿ ಉತ್ಸವ, ಮೈಸೂರು ದಸರಾ ಉತ್ಸವ ರೀತಿಯಲ್ಲಿಯೇ ಸರ್ಕಾರ ಜಿಲ್ಲಾಡಳಿತ, ಚಿತ್ರದುರ್ಗ ಜಿಲ್ಲೆಯ ಉಸ್ತುವಾರಿ ಸಚಿವರು, ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಒಟ್ಟುಗೂಡಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿಕೊಂಡು ಈಗಿನ ಯುವÀಕರ ಚಿತ್ರದುರ್ಗದ ಇತಿಹಾಸವನ್ನು ತಿಳಿದುಕೊಳ್ಳಲು ಪ್ರತಿವರ್ಷ ವಿಶೇಷವಾಗಿ “ದುರ್ಗೋತ್ಸವ” ಕಾರ್ಯಕ್ರಮವನ್ನು ಸರ್ಕಾರವೇ ವಿಧಾನಸಭೆಯಲ್ಲಿ ಚರ್ಚಿಸಿ ಜೂನ್ ಅಂತ್ಯದೊಳಗೆ ದಿನಾಂಕ ನಿಗಧಿಪಡಿಸಿ ಆಚರಿಸಲು ಕೂಡಲೇ ಸೂಕ್ತ ಆದೇಶ ನೀಡಿ ಚಿತ್ರದುರ್ಗದಲ್ಲಿ “ದುರ್ಗೋತ್ಸವ-2025” ಆಚರಣೆಗೆ ಚಾಲನೆ ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಕರುನಾಡ ವಿಜಯಸೇನೆಯ ಒತ್ತಾಯಿಸಿದೆ.

ಈ ಪ್ರತಿಭಟನೆಯಲ್ಲಿ ಮಹಿಳಾ ಜಿಲ್ಲಾ ಅಧ್ಯಕ್ಷೆ ವೀಣಾಗೌರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಜಿಲ್ಲಾ ಉಪಾಧ್ಯಕ್ಷರಾದ ಮುಜಾಯಿದ್, ಜಿಲ್ಲಾ ಕಾರ್ಯದರ್ಶಿ ಅಣ್ಣಪ್ಪ, ಜಗದೀಶ್, ನಗರಾಧ್ಯಕ್ಷ ಆವಿನಾಶ್, ಕಾರ್ಮೀಕ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಸಮಿತಿಯ ವಿಜಯಬಾಬು, ನಿಸಾರ್ ಆಹ್ಮದ್, ತಿಪ್ಪೇಸ್ವಾಮಿ, ಶಶಿಧರ್, ಕಮಲಮ್ಮ, ಮಧುಸೂಧನ್, ನಾಗೇಶ್ ಸುರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು. 

Leave a Reply

Your email address will not be published. Required fields are marked *