ರೋಟರಿ ಬಾಲಭವನದಲ್ಲಿ  ಉಚಿತ ಅರೋಗ್ಯ ತಪಾಸಣಾ ಮತ್ತು ವೈದ್ಯಕೀಯ ಸಮಾಲೋಚನಾ ಶಿಬಿರ ಆಯೋಜನೆ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 23 ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚಿತ್ರದುರ್ಗ ಜಿಲ್ಲಾ ಘಟಕದವತಿಯಿಂದ ಬಸವೇಶ್ವರ ಆಸ್ಪತ್ರೆಯ ಸಹಯೋಗದಲ್ಲಿ  ಭಾನುವಾರದಂದು ಚಿತ್ರದುರ್ಗದ ರೋಟರಿ ಎಸ್.ಆರ್.ಬಿ.ಎಂ.ಎಸ್ ಬಾಲಭವನದಲ್ಲಿ  ಉಚಿತ ಅರೋಗ್ಯ ತಪಾಸಣಾ ಮತ್ತು ವೈದ್ಯಕೀಯ ಸಮಾಲೋಚನಾ ಶಿಬಿರ ಆಯೋಜಿಸಲಾಗಿತ್ತು 

ಜಗಳೂರಿನ ಉಪತಹಸೀಲ್ದಾರ್ ಬದರೀನಾಥ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಸೇವಾ ಮನೋಭಾವನೆ ಭಾರತದ ಆಧ್ಯಾತ್ಮಿಕ ಸಾಮಾಜಿಕ ತಳಹದಿ. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದರು. 

ದಾವಣಗೆರೆಯ ಅರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಾದ ಡಾ. ಆನಂದ ಋಗ್ವೇದಿ ಮಾತನಾಡಿ, ಅವಿಭಜಿತ ಚಿತ್ರದುರ್ಗದೊಂದಿಗಿನ ತಮ್ಮ ನಂಟನ್ನು ನೆನೆದು, ಸಮಾಜಡೆದೆಗಿನ ಮಿಡಿತವನ್ನು ಪ್ರತಿಯೊಬ್ಬರೂ ಹೊಂದಿರಬೇಕು, ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಚಿನ್ಮೂಲಾದ್ರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚಿತ್ರದುರ್ಗ ಘಟಕ ಮತ್ತು ಬಸವೇಶ್ವರ ಆಸ್ಪತ್ರೆಯ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ಉಪನ್ಯಾಸಕಾರರಾದ  ಡಾ. ಸಾಗರ್ ಕೆ. ಕೋರಾ ಆರೋಗ್ಯಕರ ಜೀವನಕ್ಕಾಗಿ ಅಗತ್ಯ ಜೀವನಶೈಲಿ ಎಂಬ ವಿಷಯದ ಕುರಿತಾಗಿ ಉಪನ್ಯಾಸ ನೀಡಿ ಮಾತನಾಡಿ,  ರೋಗ ಬಂದಮೇಲೇನು ಮಾಡಬೇಕು ಎಂಬ ಕರ್ತವ್ಯವನ್ನೂ ಮಾಡಿ, ರೋಗವನ್ನು ದೂರವಿಡುವ ಜೀವನವಿಧಾನದ ಬಗ್ಗೆ ತಿಳಿಸಿಕೊಟ್ಟರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಪ್ರತಿನಿಧಿಗಳಾದ ಟಿ. ಕೆ. ನಾಗರಾಜರಾವ್ ಕಾರ್ಯಕ್ರಮದ ಮಹತ್ವವನ್ನು ತಿಳಿಸುತ್ತಾ, ಸಾಮಾಜಿಕ ಜ್ಞಾನ ಸೇವೆಯನ್ನೇ ಉಸಿರಾಗಿಸಿಕೊಂಡ ಮಹನೀಯರಾದ ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು, ಶ್ರೀ ಮಧ್ವಾಚಾರ್ಯರ ಸರ್ವ ಜೀವರ ಹಿತದ ಸಂದೇಶವನ್ನು ಸ್ಮರಿಸಿದರು. 

ಬಸವೇಶ್ವರ ಆಸ್ಪತ್ರೆಯ ಪಿ. ಆರ್. ವಿಭಾಗದ ವ್ಯವಸ್ಥಾಪಕರು ಶ್ರೀಮತಿ ರೂಪಾ ಪ್ರಶಾಂತ್ ಮೂರ್ತಿ ಅವರು ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಯ ಅನೇಕ ಸಮಾಜಮುಖಿ ಉಪಕ್ರಮಗಳ ಬಗ್ಗೆ ತಿಳಿಸಿದರು. 

ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ಅಧ್ಯಕ್ಷರಾದ ಮಂಜುನಾಥ್ ಭಾಗವತ್ ಸ್ವಾಗತಿಸಿದರು ಬ್ರಹ್ಮಚೈತನ್ಯಮಂಡಳಿ ಕಾರ್ಯದರ್ಶಿ ನವೀನ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು  ಕಾರ್ಯ ದರ್ಶಿಪಿ. ಬಿ.ಶಿವರಾಮ್‍ವಂದಿಸಿದರು ಅರೋಗ್ಯ ಶಿಬಿರದ ಸಂಚಾಲಕರಾದ ಶಶಿಧರ್‍ರಾವ್ ಸಭಾ ಕಾರ್ಯಕ್ರಮದ ನಿರ್ವಹಣೆ, ನಿರೂಪಣೆ ಮತ್ತು ಪ್ರಾರ್ಥನೆಯನ್ನು ನೆರವೇರಿಸಿದರು 

ಬಸವೇಶ್ವರ ಆಸ್ಪತ್ರೆಯ ಜನರಲ್ ಮೆಡಿಸಿನ್‍ಜನರಲ್ ಸರ್ಜರಿ ಈ.ಎನ್.ಟಿ.ಐಸ್ಪೆಷಲಿಸ್ಟ್‍ಆಥ್ರ್ತೋ ಪೀಡಿಯಾಟ್ರಿ ಮತ್ತಿತರ ವಿಭಾಗಗಳವೈದ್ಯರುಪಾಲ್ಗೊಂಡರು.ಉಚಿತ ತಪಾಸಣೆ, ವೈದ್ಯಕೀಯ ಸಮಾಲೋಚನೆ, ಉಚಿತ ಔಷದಿ ವಿತರಣೆ, ಉಚಿತ ಬಿ.ಪಿ.ಶುಗರ್ ಚೆಕ್ ಅಪ್ ನೆಡೆಸಲಾಯಿತು.  

Leave a Reply

Your email address will not be published. Required fields are marked *