ಚಿತ್ರದುರ್ಗ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ : ಮೇಲುಗೈ ಸಾಧಿಸಿದ ನಿಶಾನಿ ಜಯ್ಯಣ್ಣ, ಈಶ್ವರಪ್ಪ ಬಣ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ಚಿತ್ರದುರ್ಗ ಜೂ. 23 ನಗರದ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿಯಲ್ಲಿನ ಚಿತ್ರದುರ್ಗ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ಮುಂದಿನ 5 ವರ್ಷಗಳ ಆವಧಿಗೆ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಇದರಲ್ಲಿ ನಿಶಾನಿ ಜಯ್ಯಣ್ಣ ನೇತೃತ್ವದಲ್ಲಿ ಈಶ್ವರಪ್ಪರವರ ಸಾರಥ್ಯದಲ್ಲಿ 7 ಜನರ ತಂಡ ನಿರ್ದೆಶಕರಾಗಿ ಆಯ್ಕೆಯಾಗಿದ್ದಾರೆ. ಸಾಲಗಾರರ ಕ್ಷೇತ್ರದಿಂದ ಸ್ಪರ್ದೆ ನಡೆದಿದ್ದು, ಇದರಲ್ಲಿ 19 ಜನ ಸ್ಪರ್ದೆ ಮಾಡಿದ್ದರು.
ಇದರಲ್ಲಿ 8 ಜನರನ್ನು ಆಯ್ಕೆ ಮಾಡಬೇಕಿತ್ತು, ಸಾಲಗಾರರ ಕ್ಷೇತ್ರದಿಂದ ಸ್ಪರ್ದೆ ಮಾಡಿದ್ದ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಎ.ಈಶ್ವರಪ್ಪ (318),ಪರಿಶಿಷ್ಟ ಜಾತಿ ಮೀಸಲಿನಿಂದ ಏಕಾಂತಪ್ಪ (279), ಸಾಮಾನ್ಯ ಸ್ಥಾನದಿಂದ ಎಸ್.ಜಯ್ಯಪ್ಪ(292),ಎಸ್.ತಿಮ್ಮಪ್ಪ(304),ಎಂ.ನಿಶಾನಿ ಜಯ್ಯಣ್ಣ (307), ಎಂ.ಜಿ. ಮಲ್ಲಿಕಾರ್ಜನ್ (304), ಎ.ಮೂರ್ತಿ (253), ಹಿಂದುಳಿದ ವರ್ಗ ಬಿ.ಮೀಸಲು ಸ್ಥಾನದಿಂದ ಸಿ.ಹೆಚ್. ಸೂರ್ಯಪ್ರಕಾಶ್ (273) ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಲಕ್ಷ್ಮೀ ನರಸಿಂಗಮ್ (90) ಮತಗಳನ್ನು ಪಡೆದು ಜಯಶಾಲಿ ಯಾಗಿದ್ದಾರೆ. ಸಾಲಗಾರರ ಕ್ಷೇತ್ರದಲ್ಲಿ 770 ಜ£,À ಸಾಲಗಾರರಲ್ಲದ ಕ್ಷೇತ್ರದಲ್ಲಿ 137 ಜನ ಮತದಾರಿದ್ದರೆ.
ಇದಕ್ಕೂ ಮುನ್ನಾ ಪರಿಶಿಷ್ಟ ಪಂಗಡದಿಂದ ಪಾಪೇಶ್ ಹಾಗೂ ಮಹಿಳಾ ಮೀಸಲಾತಿ ಕ್ಷೇತ್ರದಿಂದ ಶೇಖಮ್ಮ, ಮತ್ತು ಲಕ್ಷ್ಮೀದೇವಿಯವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನಿಶಾನಿ ಜಯ್ಯಣ್ಣ ಹಾಗೂ ಈಶ್ವರಪ್ಪರವರ ಬಣ ಮೇಲುಗೈ ಸಾಧಿಸಿದೆ. ಕಳೆದ 30 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಎ.ಈಶ್ವರಪ್ಪ, ಎಂ.ನಿಶಾನಿ ಜಯ್ಯಣ್ಣ ಹಾಗೂ  ಹೂವಿನ ತಿಮ್ಮಪ್ಪ ಸಕ್ರಿಯವಾಗಿ ಸೇವೆಯನ್ನು ಸಲ್ಲಿಸಿದ್ದಾರೆ. 

Leave a Reply

Your email address will not be published. Required fields are marked *