ಸಮುದಾಯದವರಿಗೆ ಹಚ್ಚಿನ ಸೇವೆಯನ್ನು ನೀಡಲಾಗುವುದೆಂದು ಸಂಘದ ಅಧ್ಯಕ್ಷರಾದ ಷಡಾಕ್ಷರಯ್ಯ ಎಸ್.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 23 ಮುಂದಿನ ದಿನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ, ನಿಯಮಿತವನ್ನು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಥಾಪನೆ ಮಾಡುವುದರ ಮೂಲಕ ನಮ್ಮ ಸಮುದಾಯದವರಿಗೆ ಹಚ್ಚಿನ ಸೇವೆಯನ್ನು ನೀಡಲಾಗುವುದೆಂದು ಸಂಘದ ಅಧ್ಯಕ್ಷರಾದ ಷಡಾಕ್ಷರಯ್ಯ ಎಸ್. ತಿಳಿಸಿದರು.

ಚಿತ್ರದುರ್ಗ ನಗರದ ಪಂಚಚಾರ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ, ನಿಯಮಿತದ ಸರ್ವ ಸದಸ್ಯರ ಪ್ರಥಮ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮುದಾಯದವತಿಯಿಂದ ಸಹಕಾರ ಸಂಸ್ಥೆಯನ್ನು ಮಾಡಬೇಕೆಂದು ಬಹು ದಿನದ ಕನಸಾಗಿತ್ತು ಅದರ ಬಗ್ಗೆ ನಿರಂತರವಾಗಿ ಶ್ರಮವನ್ನು ಹಾಕುವುದರ ಮೂಲಕ ಇಂದಿಗೆ ನನಸಾಗಿದೆ. ಕಳೆದ ವರ್ಷ ಇದೆ ವೇದಿಕೆಯಲ್ಲಿ ಮುಂದಿನ ವರ್ಷ ನಾವುಗಳು ಸಹಕಾರ ಸಂಸ್ಥೆಯನ್ನು ಆರಂಭಿಸುವುದಾಗಿ ಮಾತು ನೀಡಿತ್ತು ಅದರಂತೆ ಸಹಕಾರ ಸಂಸ್ಥೆಯನ್ನು ಎಲ್ಲರ ಸಹಕಾರದಿಂದ ಪ್ರಾರಂಭಿಸಲಾಗಿದೆ. ಸೊಸೈಟಿಗೆ ಆಡಳಿತ ಮಂಡಳಿಗೆ ಚುನಾವಣೆಯನ್ನು ನಡೆಸಿ ಹಣವನ್ನು ವ್ಯಯ ಮಾಡುವ ಬದಲು 11 ಜನರನ್ನು ಅವಿರೋಧವಾಗಿ ಆಯ್ಕೆಯನ್ನು ಮಾಡುವುದರ ಮೂಲಕ ಚುನಾವಣಾ ವೆಚ್ಚವನ್ನು ಉಳಿಸಲಾಯಿತು ಎಂದರು.

ನಮ್ಮ ಸಹಕಾರ ಸಂಘವನ್ನು ಈಗ ಚಿತ್ರದುರ್ಗದಲ್ಲಿ ಸ್ಥಾಪನೆ ಮಾಡಲಾಗಿದೆ ಮುಂದಿನ ದಿನದಲ್ಲಿ ಈ ಸಹಕಾರ ಸಂಘವನ್ನು ಬ್ಯಾಂಕ್ ಆಗಿ ಮಾರ್ಪಡಿಸಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಸಹಾ ಶಾಖೆಗಳನ್ನು ಸ್ಥಾಪನೆ ಮಾಡಲಾಗುವುದು. ಇದ್ದಲ್ಲದೆ ಚಿತ್ರದುರ್ಗದಲ್ಲಿ ಜಿಲ್ಲಾ ಶಾಖೆಯನ್ನು ಪ್ರಾರಂಭ ಮಾಡಲಾಗುವುದು ಇಂದು ನಮ್ಮ ಷೇರುದಾರರಿಗೆ ಷೇರು ಪತ್ರ ಹಾಗೂ ಗುರುತಿನ ಚೀಟಿಯನ್ನು ವಿತರಣೆ ಮಾಡುವ ಕಾರ್ಯಕ್ರಮ ಇತ್ತು ಆದರೆ ತಾಂತ್ರಿಕ ಕಾರಣದಿಂದಾಗಿ ನಡೆದಿಲ್ಲ ಮುಂದಿನ ದಿನದಲ್ಲಿ ಷೇರುದಾರರಿಗೆ ಷೇರಿನ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿಯನ್ನು ವಿತರಣೆ ಮಾಡಲಾಗುವುದು. ನಮ್ಮ ಸಹಕಾರ ಸಂಘದಲ್ಲಿ ಹಣ ಇಲ್ಲ ಹಣ ಇದ್ದವರಿಂದ ಠೇವಣಿಯಾಗಿ ಸಂಗ್ರಹ ಮಾಡಿ ಅದನ್ನು ಅಗತ್ಯ ಇರುವವರೆಗೆ ಸಾಲದ ರೂಪದಲ್ಲಿ ನೀಡಲಾಗುವುದು ನಮ್ಮ ಸಹಕಾರ ಸಂಘದ ನಿದೇಶಕರಿಂದಲೂ ಸಹಾ ಠೇವಣಿಯನ್ನು ಸಂಗ್ರಹ ಮಾಡಲಾಗಿದೆ. ಮುಂದಿನ ದಿನಮಾನದಲ್ಲಿ ಬೇರೆಯವರಿಂದಲೂ ಸಹಾ ಠೇವಣಿ ಯನ್ನು ಸಂಗ್ರಹ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಷಡಾಕ್ಷರಯ್ಯ ಎಸ್. ತಿಳಿಸಿದರು.

ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ, ನಿಯಮಿತದ ಉಪಾಧ್ಯಕ್ಷರಾದ ಜಿ.ಎಸ್,ಕಲ್ಲೇಶಯ್ಯ ಮಾತನಾಡಿ, ಈ ಸಹಕಾರ ಸಂಘವನ್ನುನ ಪ್ರಾರಂಭ ಮಾಡಲು ನಮ್ಮ ಸಮುದಾಯದ ಎಲ್ಲರು ಸಹಾ ಸಹಕಾರವನ್ನು ನೀಡಿದ್ದೀರಾ, ಸಹಕಾರ ಸಂಘವನ್ನು ಪ್ರಾರಂಭ ಮಾಡಬೇಕೆಂಬುದು ಬಹು ದಿನದ ಕನಸಾಗಿತ್ತು ಅದು ಈಗ ಈಡೇರಿದೆ. ನಮ್ಮ ಸಮುದಾಯವರಿಂದ ಷೇರು ಹಣವನ್ನು ಸಂಗ್ರಹ ಮಾಡುವುದರ ಮೂಲಕ ಇದನ್ನು ಸ್ಥಾಪನೆ ಮಾಡಲಾಗಿದೆ. ಅಗತ್ಯ ಇರುವವರೆಗೆ ಸಾಲ ನೀಡುವುದು ಹಣ ಇರುವವರಿಂದ ಠೇವಣಿ ಸಂಗ್ರಹ ಮಾಡುವುದು ಸಕಾಲಕ್ಕೆ ಸರಿಯಾಗಿ ಮರು ಪಾವತಿಯಾಗುವಂತೆ ನೋಡುವುದು ಮುಖ್ಯವಾಗಿದೆ. ಸಂಘದ ಬೆಳವಣಿಗೆಯಲ್ಲಿ ಎಲ್ಲರ ಪಾತ್ರ ಬಹು ಮುಖ್ಯವಾಗಿದೆ ಎಂದರು.

ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ, ನಿಯಮಿತದ ನಿದೇಶಕರಾದ ಬಿ,ವಿಜಯಕುಮಾರ್ ಮಾತನಾಡಿ, ನಮ್ಮ ಜಂಗಮ ಸಮಾಜದವತಿಯಿಂದ ಈಗ ಸಹಕಾರ ಸಂಘವನ್ನು ಸ್ಥಾಪನೆ ಮಾಡಲಾಗಿದೆ ಮುಂದಿನ ವರ್ಷ ನಮ್ಮ ಜಂಗಮ ಸಮಾಜದವತಿಯಿಂದ ಜಿಲ್ಲಾ ಜಂಗಮ ಭವನ ನಿರ್ಮಾಣಕ್ಕೆ ನಿವೇಶನವನ್ನು ಖರೀದಿ ಮಾಡಲಾಗುವುದು ಇದರ ಪ್ರಕ್ರಿಯೇ ನಡೆಯುತ್ತಿದೆ. ಇದ್ದಲ್ಲದೆ ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಂತಹ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ವಸತಿ ಮತ್ತು ಪ್ರಸಾದ ನಿಲಯವನ್ನು ಪ್ರಾರಂಭ ಮಾಡುವ ಉದ್ದೇಶ ಇದೆ. ಇಂದಿನ ದಿನಮಾನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಇದರಿಂದ ಈ ಕಾರ್ಯವನ್ನು ಕೈಗ್ಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ (ಎಸ್.ಜೆ.ಪಿ.)ಪತ್ತಿನ ಸಹಕಾರ ಸಂಘ, ನಿಯಮಿತದ ನಿದೇಶಕರುಗಳಾದ ಡಾ.ಎಂ.ಕೆ.ಪ್ರಭುದೇವ್, ಕೆ.ಎನ್.ವಿಶ್ವನಾಥಯ್ಯ, ಬಿ.ಎಂ.ಶರಣಯ್ಯ, ಎಂ.ಶಶಿಧರ್ ಬಾಬು, ಜಿ.ಎಂ.ವಿರೇಶ್, ಎಂ.ವಿ.ಚನ್ನಯ್ಯ, ಬಿ.ಟಿ.ಲೀಲಾವತಿ ಹಾಗೂ ಕೆ.ಪಿ.ನಂದಿನಿ ಭಾಗವಹಿಸಿದ್ದರು. 

ಬಸವಶಾಸ್ತ್ರಿ ವೇದ ಘೋಷ ವಾಚಿಸಿದರೆ. ಗಣೇಶಯ್ಯ ಪ್ರಾರ್ಥಿಸಿದರು, ಪ್ರಭುದೇವ ಸ್ವಾಗತಿಸಿದರೆ, ನಂದಿನಿ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು, ವಿಶ್ವನಾಥಯ್ಯ 2024-25ನೇ ಸಾಲಿನ ಆಡಳಿತ ವರದಿಯನ್ನು ವಾಚಿಸಿದರು. ಚನ್ನಯ್ಯ ಕಾರ್ಯಕ್ರಮ ನಿರೂಪಿಸಿದರು. 

Leave a Reply

Your email address will not be published. Required fields are marked *