ಜಿಲ್ಲಾ ಜನತಾದಳ (ಜಾತ್ಯಾತೀತ) ಚಿತ್ರದುರ್ಗ ನಗರದಲ್ಲಿ ಬೀದಿ ಗೀಳಿದು ಹೋರಾಟ.

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 30  ಕಾಂಗ್ರೆಸ್ ಸರ್ಕಾರದಲ್ಲಿನ ವಸತಿ ಸಚಿವ ಜಮೀರ್ ಆಹಮದ್‍ರವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ಜನತಾದಳ (ಜಾತ್ಯಾತೀತ) ಚಿತ್ರದುರ್ಗ ನಗರದಲ್ಲಿ ಬೀದಿ ಗೀಳಿದು ಹೋರಾಟ, ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.


ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನೆಯನ್ನು ನಡೆಸಿದ ಜೆಡಿಎಸ್‍ನ ಪದಾಧಿಕಾರಿಗಳು, ಕಾರ್ಯಕರ್ತರು ಓನಕೆ ಒಬವ್ವ ಪ್ರತಿಮೆ ಮುಂಭಾಗದಲ್ಲಿ ಮಾನವ ಸರಪಳಿ ಯನ್ನು ನಿರ್ಮಾಣ ಮಾಡಿ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ ಆಹಮದ್ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್, ಬಡವರಿಗೆ ಮನೆಗಳನ್ನು ಹಂಚುವ ಸಮಯದಲ್ಲಿ ಅವರಿಂದ ಹಣವನ್ನು ಪಡೆಯುತ್ತಿರುವ ಭ್ರಷ್ಠ ಸಚಿವನಾದ ಜಮೀರ್ ಆಹ್ಮದ್ ರವರನ್ನು ಸಿದ್ದರಾಮಯ್ಯರವರು ತಮ್ಮ ಸಚಿವ ಸಂಪುಟದಿಂದ ವಜಾಗೊಳಿಸಬೇಕಿದೆ.

ಇನ್ನೂ ಮುಂದಾದರೂ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಕೆಲಸವನ್ನು ಮಾಡಬೇಕಿದೆ ಮತದಾರ ನಮಗೆ ಉತ್ತಮವಾದ ಸರ್ಕಾರವನ್ನು ನೀಡುತ್ತಾರೆ ಎಂಭ ಭರವಸೆಯ ಮೇರೆಗೆ ಕಾಂಗ್ರೆಸ್‍ಗೆ ಮತವನ್ನು ನೀಡಿದ್ದಾರೆ, ಆದರೆ ಕಾಂಗ್ರೆಸ್ ಮತದಾರರ ನಿರೀಕ್ಷೆಯನ್ನು ಹುಸಿಗೊಳಿಸುವದರ ಮೂಲಕ ಎಲ್ಲಡೆ ಭ್ರಷ್ಠಾಚಾರ ತುಂಬುವಂತೆ ಮಾಡಿದೆ, ಮುಂದಿನ ದಿನಮಾನದಲ್ಲಿ ಕಾಂಗ್ರೆಸ್‍ಗೆ ರಾಜ್ಯದಲ್ಲಿ 50 ಸ್ಥಾನವೂ ಸಹಾ ಬರುವುದಿಲ್ಲ ಎಂದು ಭವಿಷ್ಯ ನುಡಿದರು.


ಚಿತ್ರದುರ್ಗ ಜಿಲ್ಲಾ ಜನತಾದಳ (ಜಾತ್ಯಾತೀತ)ದ ಜಿಲ್ಲಾಧ್ಯಕ್ಷರಾದ ಎಂ.ಜಯ್ಯಣ್ಣ ಮಾತನಾಡಿ, ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರದ ಬಗ್ಗೆ ಅವರ ಪಕ್ಷದ ಶಾಸಕರೇ ವಾಗ್ದಾಳಿಯನ್ನು ನಡೆಸಿದ್ದಾರೆ. ಬಡವರು ಮನೆಯನ್ನು ಪಡೆಯಲು ಲಂಚವನ್ನು ನೀಡಬೇಕು ಲಂಚವನ್ನು ನೀಡಿದರೆ ಮಾತ್ರ ಮನೆಯನ್ನು ನೀಡಲಾಗುತ್ತದೆ ಎಂದು ಹಿರಿಯ ಶಾಸಕರು ದೂರಿದ್ದಾರೆ ಇದರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡಿಗೂ ಸಹಾ ಅದನ್ನೇ ಹೇಳಿದ್ದಾರೆ. ಪಕ್ಷದ ಶಾಸಕರೇ ಸಚಿವರ ಮೇಲೆ ಆರೋಪವನ್ನು ಮಾಡಿದ್ದಾರೆ.

ಭ್ರಷ್ಠಾಚಾರವನ್ನು ಮಾಡಿರುವ ಬಗ್ಗೆ ತಿಳಿಸಿದ್ದಾರೆ, ಇವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿದರು.


ರಾಜ್ಯದಲ್ಲಿ ಅಭೀವೃಧ್ದಿ ಕಾರ್ಯಗಳು ಕುಂಠಿತವಾಗಿದೆ ಅಭೀವೃದ್ದಿಗೆ ಹಣ ಇಲ್ಲದೆ ಇದ್ದ ಹಣವನ್ನೆಲ್ಲಾ ತಮ್ಮ ಗ್ಯಾರೆಂಟಿಗಳಿಗೆ ನೀಡುವುದರ ಮೂಲಕ ಶಾಸಕರ ಅನುದಾನಕ್ಕೆ ಕತ್ತರಿಯನ್ನು ಹಾಕಿದ್ದಾರೆ. ಇದನ್ನು ಕಾಂಗ್ರೆಸ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ, ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಗೌರವ ತರಬೇಕಾದರೆ ಸಚಿವ ಜಮೀರ ಆಹಮದ್‍ರವರನ್ನು ಸಚಿವ ಸಂಪುಟದಿಂದ ಅಲ್ಲದೆ ಕಾಂಗ್ರೆಸ್ ಪಕ್ಷದಿಂದಲೇ ಉಚ್ಚಾಟನೆಯನ್ನು ಮಾಡುವಂತೆ ಒತ್ತಾಯಿಸಿದ್ದು, ಮತದಾರರು ನಿಮ್ಮ ಮಾತನ್ನು ನಂಬಿ 136 ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ ಅದನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕಿದೆ ಎಂದು ಕರೆ ನೀಡಿದರು.


ರಾಜ್ಯದಲ್ಲಿ ಸಾಕಷ್ಟು ಆಭೀವೃದ್ದಿ ಕಾರ್ಯವನ್ನು ಮಾಡಬೇಕೆಂದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಯವರು ಮುಂದಾಗಿದ್ದಾರೆ, ಆದರೆ ರಾಜ್ಯ ಸರ್ಕಾರ ಸಹಕಾರ ನಿಡುತ್ತಿಲ್ಲ ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದರ ಮೂಲಕ ನಿರುದ್ಯೋಗವನ್ನು ಹೋಗಲಾಡಿಸುವ ಕಾರ್ಯವನ್ನು ಮಾಡಲು ಮುಂದಾದರೆ ಸಿದ್ದರಾಮಯ್ಯ ಸಹಕಾರವನ್ನು ನೀಡದೆ ತಿರಸ್ಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಕುಮಾರಸ್ವಾಮಿಗೆ ಒಳ್ಳೇಯ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅನುಮತಿಯನ್ನು ನೀಡುತ್ತಿಲ್ಲ ಅಭೀವೃಧ್ದಿಯಲ್ಲಿ ರಾಜಕೀಯವನ್ನು ಬೆರಸಬೇಡಿ ಬಡ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ ಎಂದು ಜಯ್ಯಣ್ಣ ತಿಳಿಸಿದರು.  


ಈ ಪ್ರತಿಭಟನೆಯಲ್ಲಿ ಜೆಡಿಎಸ್,ನ ಮಾಜಿ ಜಿಲ್ಲಾಧ್ಯಕ್ಷರಾದ ಯಶೋಧರ್, ಜಿಲ್ಲಾ ಮಹಾ ಪ್ರಧಾನ ಕಾರ್ಯ ದರ್ಶಿ ಗೋಪಾಲಸ್ವಾಮಿ ನಾಯ್ಕ್, ಕಾರ್ಯಾದ್ಯಕ್ಷ ಜಿ,ಬಿ. ಶೇಖರ್, ಹಿರಿಯೂರು ಪರಾಜಿತ ಅಭೈರ್ತಿ ರವಿಂದ್ರಪ್ಪ, ಮೊಳಕಾಲ್ಮೂರು ವೀರಭದ್ರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷರಾದ ಸಣ್ಣ ತಿಮ್ಮಪ್ಪ, ಗಣೇಶ್ ಮೂರ್ತಿ, ಪರಮೇಶ್ವರಪ್ಪ, ಪಿಟಿತಿಪ್ಪೇಸ್ವಾಮಿ, ಕರಿಬಸಪ್ಪ, ಹನುಮಂತರಾಯಪ್ಪ, ಪಕ್ಷದ ಮುಖಂಡರಾದ ಚಿದಾನಂದ, ಶಂಕರಮೂರ್ತಿ, ಮಂಜುನಾಥ್, ಅಬ್ಬು, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲ್ಲಾ ಸದಸ್ಯ ರಾದ ದೀಪು, ಮಾಜಿ ಸದಸ್ಯರಾದ ತಿಪ್ಪೇಸ್ವಾಮಿ, ಜಾಲಿಕಟ್ಟೆ ರುದ್ರಣ್ಣ, ಲಿಂಗರಾಜು ಸೇರಿದಂತೆ ಇತರರು ಭಾಗವಹಿಸಿದ್ದರು. 

Leave a Reply

Your email address will not be published. Required fields are marked *