“Horoscope Today 05 July”: ಇಂದು ಈ ರಾಶಿಯವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಸ್ವಾತಿ, ಯೋಗ : ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ – 06 : 09 am, ಸೂರ್ಯಾಸ್ತ – 07 : 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 09:24 : 11:00, ಯಮಘಂಡ ಕಾಲ 14:14 – 15:51, ಗುಳಿಕ ಕಾಲ 06:10 – 07:47.

ಮೇಷ ರಾಶಿ: ಗೃಹೋಪಕರಣವನ್ನು ಮಾರಾಟ ಮಾಡಿ ಆದಾಯ ಬರುವುದು. ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಆಯ್ಕೆ ವಿಚಾರದಲ್ಲಿ ನೀವು ಸೋಲಬಹುದು. ಕಹಿ ನೆನಪು ಕಾಡಲಿದೆ. ಸಂಗಾತಿಯ ಜೊತೆ ವಾಸ್ತವದ ಬಗ್ಗೆ ಆಲೋಚಿಸಿ. ಹೂಡಿಕೆಯಲ್ಲಿ ನಂಬಿಕೆ ಹೆಚ್ಚಾಗುವುದು. ಹೊಸ ವ್ಯವಹಾರ ಪ್ರಾರಂಭಿಸಲು ದಿನ ಲಾಭದಾಯಕ. ಸ್ನೇಹಿತರೊಂದಿಗೆ ಸಮಯ ಕಳೆಯುವುದು ಉಲ್ಲಾಸ ತರಬಹುದು. ನಿಮ್ಮ ಧ್ವನಿ ಸಾರ್ವಜನಿಕ ಕಾರ್ಯಕ್ಕೆ ಉಪಯೋಗವಾಗಲಿದೆ. ದಿನದ ಮೊದಲಾರ್ಧದಲ್ಲಿ ನಿರ್ಣಯಗಳಲ್ಲಿ ನಿಶ್ಚಿತತೆ ಇರಲಿ. ಚಾಲನೆಯ ವಿಚಾರದಲ್ಲಿ ಜಾಗರೂಕತೆ ಇರದು. ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣವನ್ನು ಮಾಡುವಿರಿ. ಭೂಮಿಯ ವ್ಯವಹಾರಕ್ಕೆ ಸದ್ಯ ಕೈ ಹಾಕುವುದು ಬೇಡ. ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವವಿರದು. ಮಕ್ಕಳು ನಿಮ್ಮಿಂದ ಹಣವು ಖಾಲಿಯಾಗುವಂತೆ ಮಾಡಿಯಾರು. ಅವರು ಬೇಸರಗೊಳ್ಳದಂತೆ ನೋಡಿಕೊಳ್ಳಿ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು.

ವೃಷಭ ರಾಶಿ: ಅಲ್ಲಗಳೆಯದೇ ಯಾವುದನ್ನೂ ಒಪ್ಪಿಕೊಳ್ಳಲಾರಿರಿ. ಇಂದು ನಿಮ್ಮ ಮುಂದೆ ಸಾಲದ ವಿಚಾರ ಬಂದರೆ ಮೌನವಹಿಸುವಿರಿ. ಶತ್ರುಗಳ ಕಾಟಕ್ಕೆ ಪೂರ್ಣವಿರಾಮ ಬೇಕಾಗಿದೆ. ಮಾನಸಿಕವಾಗಿ ಅವರು ನಿಮಗೆ ಇಂದು ತೊಂದರೆಯನ್ನು ಕೊಡಬಹುದು. ಕುಟುಂಬದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕಲಹಗಳು ಆಗಬಹುದು. ಬುದ್ದಿವಂತಿಕೆಯ ಸಹಾಯದಿಂದ ಸಮಸ್ಯೆಗಳನ್ನು ಪರಿಹರಿಸಬಲ್ಲಿರಿ. ಹಳೆಯ ಚಿಕ್ಕ ವಿಷಯ ಈಗ ದೊಡ್ಡ ವಿವಾದಕ್ಕೆ ಕಾರಣವಾಗಬಹುದು, ಎಚ್ಚರಿಕೆಯಿಂದಿರಿ. ಮಕ್ಕಳ ಬಗೆಗಿನ ಕಾಳಜಿ ಹೆಚ್ಚಾಗುವುದು. ನಿಮ್ಮ ಸಾಮರ್ಥವನ್ನು ಅಗೌರವಿಸುವರು. ಬರಬೇಕಾದ ಸಂಪತ್ತು ಕೈಗೆ ಸಿಗದೇ ಸಾಲವನ್ನು ಮಾಡಬೇಕಾದೀತು. ಕುಟುಂಬದಲ್ಲಿ ನಿರ್ವಹಣೆಯು ಸರಿಯಾಗಿ ಆಗುತ್ತಿಲ್ಲ ಎಂದು ದಾಂಪತ್ಯದಲ್ಲಿ ಕಲಹವು ಉಂಟಾಗಬಹುದು. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ಕೈಲಾಗದ್ದನ್ನು ಮಾಡುವ ಉತ್ಸಾಹ ಬೇಡ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು.

ಮಿಥುನ ರಾಶಿ: ಯಾವುದನ್ನೇ ಆದರೂ ದೊಡ್ಡ ಪ್ರಮಾಣದಲ್ಲಿ ಆಗುವಂತೆ ಮಾಡುವಿರಿ. ಇಂದು ಹಳೆಯ ಪ್ರಣಯವು ಆರಂಭದ ಸೂಚನೆ ಸಿಗುವುದು. ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ನೀವು ಸೋಲಬಹುದು. ದೇಹದಲ್ಲಿ ಸೌಖ್ಯವಿಲ್ಲದ ಭಾವನೆ ಉಂಟಾಗಬಹುದು. ಕೆಲ ಕಾಲ ಮನೋಭಾವ ಕುಂಠಿತವಾಗಿರಬಹುದು. ಮಧ್ಯಾಹ್ನದ ಬಳಿಕ ಕೆಲಸಗಳು ಸರಿದೂಗುತ್ತವೆ. ನಿಮ್ಮ ಬಗ್ಗೆ ವಿನೋದದ ಮಾತಿಗಳನ್ನಾಡುವರು. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಅನ್ಯರ ತಪ್ಪುಗಳನ್ನು ಮನ್ನಿಸುವ ಗುಣವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಆಕಸ್ಮಿಕವಾದ‌ ಕೆಲವು ಘಟನೆಗಳು ನಿಮ್ಮನ್ನು ಚಿಂತೆಯಲ್ಲಿ ಇರುವಂತೆ ಮಾಡುವುದು. ಏಕಾಂತವು ನಿಮಗೆ ಬಲವನ್ನು ಕೊಡುವುದು. ಯುಕ್ತಿಯಿಂದ ನಿಮ್ಮ‌ ಕಾರ್ಯವನ್ನು ಸಾಧಿಸಿಕೊಳ್ಳಿ. ಎಲ್ಲಿಯೂ ಕಲಹವಾಗದೇ ಕೆಲಸವು ಮುಕ್ತಾಯವಾಗುವುದು. ವಿಶೇಷ ಸಂದರ್ಭದಲ್ಲಿ ಭಾಗವಹಿಸಲಿದ್ದೀರಿ. ಅದೇ ನಿಮ್ಮ ತಲೆಯನ್ನು ದಿನವಿಡೀ ಕೊರೆಯಬಹುದು. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆ.

ಕರ್ಕಾಟಕ ರಾಶಿ: ಬೇಡದ ವಿಚಾರಕ್ಕೆ ಗೊಂದಲಗಳು ಸೃಷ್ಟಿಮಾಡಿಕೊಳ್ಳುವಿರಿ. ಇಂದು ನೀವು ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಗೊತ್ತಿದ್ದೂ ಉದ್ವೇಗದಲ್ಲಿ ಸಿಕ್ಕಿಕೊಳ್ಳಬೇಡಿ. ಹಿರಿಯರ ಜೊತೆ ಮಾತನಾಡುವಾಗ ಹಿಡಿತವಿರಲಿ. ಆಧ್ಯಾತ್ಮಿಕ ಪ್ರಗತಿ ಮಾರ್ಸಾಧ್ಯ. ವಿದ್ಯಾರ್ಥಿಗಳಿಗೆ ಎಚ್ಚರಿಕೆಯಿಂದ ಸಮಯ ಬಳಕೆ ಅಗತ್ಯ. ಕೆಲವು ಅಸಹಜ ಘಟನೆಗಳಿಂದ ಆತಂಕ ಉಂಟಾಗಬಹುದು. ಹಣಕಾಸಿನ ನಿರ್ವಹಣೆಯಲ್ಲಿ ಯುಕ್ತಿ ಅವಶ್ಯ. ಅಪವಾದದಿಂದ ನೀವು ಚುರುಕಾಗುವಿರಿ. ವಿದ್ಯಾಭ್ಯಾಸದಲ್ಲಿ ಆತಂಕ ಬಂದು ಅರ್ಧಕ್ಕೆ ಬಿಡುವಿರಿ. ಯಾರದೋ ಮಾತಿಗೆ ಮಣಿದು ನಿಮ್ಮ ಗುರಿಯನ್ನು ಬದಲಿಸಿಕೊಳ್ಳುವುದು ಸರಿಯಲ್ಲ. ನೀವು ಬಹಳ ವೇಗವಾಗಿ ನಡೆಯುವಿರಿ ಹಾಗೂ ವೇಗವಾಗಿ ಮಾತನಾಡುವಿರಿ. ಸ್ತ್ರೀಯರಿಂದ ಸಹಕಾರವು ಸಿಗಬಹುದು. ಆತ್ಮೀಯತೆಯು ಬದಲಾಗಬಹುದು. ನಿಮ್ಮವರನ್ನು ನೀವು ಬಿಟ್ಟುಕೊಡಲಾರಿರಿ. ನಿಮ್ಮ ಕೆಲಸವು ನಿಮಗೆ ತೃಪ್ತಿಕರವಾಗಿ ಇರಲಿದೆ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ.

ಸಿಂಹ ರಾಶಿ: ನಿಮ್ಮ ಒತ್ತಡವು ಇತರರಿಗೆ ಗೊತ್ತಾಗದಂತೆ ಇರುವಿರಿ. ಇಂದು ನೀವು ವಾಹನವನ್ನು ಚಲಾಯಿಸುವುದು ಬೇಡ. ಹೊಸ ಆದಾಯದ ಮೂಲವನ್ನು ಹುಡುಕುವುದು ಉತ್ತಮ. ಇದಕ್ಕೆ ಸಹೋದರನ ಬೆಂಬಲವೂ ಸಹಕಾರವೂ ಸಿಗಲಿದೆ. ಅನಗತ್ಯ ಓಡಾಟದಿಂದ ಶರೀರಕ್ಕೆ ಆಯಾಸವಾಗಬಹುದು. ವ್ಯವಸ್ಥಿತ ರೀತಿಯಿಂದ ಆಸ್ತಿಯ ಹಂಚಿಕೆಯನ್ನು ಮಾಡಿಕೊಳ್ಳಿ. ಮಾತು ಜವಾಬ್ದಾರಿಯಿಂದ ಕೂಡಿರಲಿ. ಆರ್ಥಿಕ ಲಾಭದ ಅವಕಾಶಗಳು ಬರಬಹುದು. ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ ಬರುವ ಸಾಧ್ಯತೆ. ಕುಟುಂಬದಲ್ಲಿ ಏನಾದರೂ ಹೊಸ ಚಟುವಟಿಕೆ ನಡೆಯಬಹುದು. ಸೋಲನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಇರುವುದಿಲ್ಲ. ಕೈಗೆ ಬಂದ ಹಣವು ಹೇಗೆ ಖರ್ಚಾಯಿತು ಎಂಬುದೇ ಊಹಾತೀತವಾಗುವುದು. ಅನೇಕ ಕ್ಷೇತ್ರಗಳಲ್ಲಿ ಬೆಳೆಯಬೇಕು ಎಂಬ ತುಡಿತ ಉಂಟಾಗಬಹುದು. ಯಾರ ಜೊತೆ ಸ್ಪರ್ಧೆಗೆ ಇಳಿಯದೇ ನಿಮ್ಮ ಕೆಲಸವನ್ನು ಮುಂದುರಿಸುವುದು ಉತ್ತಮ.

ಕನ್ಯಾ ರಾಶಿ: ಹಣವನ್ನು ಕೂಡಲೆ ಸಿಗುವಂತೆ ಇಟ್ಟುಕೊಳ್ಳುವುದು ಬೇಡ. ಇಂದು ನಿಮ್ಮ ದುರಭ್ಯಾಸಗಳು ಇತರರಿಗೆ ಗೊತ್ತಾಗುವುದು. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಉದ್ಯೋಗವನ್ನು ಬದಲಿಸುವುದು ನಿಮಗೆ ನಿತ್ಯದ ಕೆಲಸದಂತೆ ಸಲೀಸಾಗಬಹುದು. ಒಂದೇ ಉದ್ಯೋಗವನ್ನು ಹೆಚ್ವು ಕಾಲ ಮಾಡಲು ಇಷ್ಟ ಪಡದೇ ಬದಲಿಸುವಿರಿ. ಮೂರನೇ ವ್ಯಕ್ತಿಗಳ ಮಾತನ್ನು ನಂಬಿ ಮೋಸಹೋಗುವಿರಿ. ಒತ್ತಡ ಇರಬಹುದು ಆದರೆ ತಾಳ್ಮೆಯಿಂದ ಜಯಿಸಬಹುದು. ವಾದವಿವಾದಗಳಲ್ಲಿ ತಾಳ್ಮೆ ಉಳಿಸಿ. ಜೀವನ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಬಹುದು. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದಿರಿ. ಮಕ್ಕಳ ಬಗ್ಗೆ ಸಂತೋಷದ ಸುದ್ದಿ ಸಿಗಬಹುದು. ವಾತಾವರಣಕ್ಕೆ ಹೊಂದಿಕೊಳ್ಳುವ ಸ್ವಭಾವವನ್ನು ಬೆಳಿಸಿಕೊಳ್ಳಬೇಕಾಗಬಹುದು. ಏನೇ ಹೊಸದನ್ನು ಮಾಡಿದರೂ ಅದಕ್ಕೆ ನಿಮ್ಮರಿಂದಲೇ ತಡೆ ಬರಬಹುದು. ಸಾಂಸಾರಿಕ‌ ಜೀವನವನ್ನು ಬಹಳ ಗಂಭೀರವಾಗಿ ಸ್ವೀಕರಿಸಿದ್ದೀರಿ. ಸಂಧಿಗಳಲ್ಲಿ ನೋವುಗಳು ಹೆಚ್ಚಾಗಬಹುದು. ನಿಷ್ಕಾಳಜಿ ಮಾಡಬೇಡಿ. ನೀವು ಹೊಸ ಯೋಜನೆಯ ಬಗ್ಗೆ ಅಧಿಕ ಆಲೋಚನೆ ಇರಲಿದೆ.

ತುಲಾ ರಾಶಿ: ಅಪರಿತರಿಂದ ಮಾತಿಗೆ ತಿರಸ್ಕಾರ ಬರುವುದನ್ನು ಸಹಿಸಲಾಗದು. ಇಂದು ನಿಮ್ಮ ಹಣವು ಬಲವಂತದಿಂದ ಬರಲಿದೆ. ವೈದ್ಯಕೀಯ ವೃತ್ತಿಯಲ್ಲಿ ಚುರುಕುತನ ಬೇಕಾಗಬಹುದು. ಕುಟುಂಬದಲ್ಲಿ ಮಂಗಲ ಕಾರ್ಯಗಳು ನಡೆಯಬಹುದು. ಸಂಗಾತಿಯ ಮಾತನ್ನು ಆಲಿಸಿ, ಇಲ್ಲವಾದರೆ ಸಿಟ್ಟಾದಾರು. ಕೆಲಸದಲ್ಲಿ ಚುರುಕು ಮತ್ತು ಸ್ಪಷ್ಟತೆ ಅಗತ್ಯ. ಇತ್ತೀಚಿನ ಯಾವುದೇ ತೀರ್ಮಾನವು ಪರಿಶೀಲನೆ ಅಗತ್ಯವಿದೆ. ಹಣಕಾಸಿನಲ್ಲಿ ನಿರೀಕ್ಷಿತ ಲಾಭದೊರೆಯಬಹುದು. ಪೋಷಕರ ಆರೋಗ್ಯಕ್ಕೆ ಆರೈಕೆ ಅವಶ್ಯ. ಕಾನೂನು ಅಥವಾ ಅಧಿಕಾರಿಗಳೊಂದಿಗೆ ಸಂಬಂಧ ಉತ್ತಮ ಇರಲಿ. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ತಾಯಿಯ ಜೊತೆ ಹರಟೆ ಹೊಡೆದು ಅವರ ಮನಸ್ಸನ್ನು ಹಗುರ ಮಾಡುವಿರಿ. ಸಂಗಾತಿಗೆ ನಿಮ್ಮಿಂದ ಪ್ರಿಯವಾದುದು ಸಿಗಬಹುದು. ಮನಸ್ಸಿನ ದ್ವಂದ್ವಗಳನ್ನು ಸರಿದೂಗಿಸುವ ಸಾಮರ್ಥ್ಯವನ್ನು ಹೊಂದುವಿರಿ. ಆರ್ಥಿಕವಾದ ಕೆಲವು ವಿಚಾರಗಳಲ್ಲಿ ಗೌಪ್ಯತೆಯನ್ನು ಇಟ್ಟುಕೊಳ್ಳುವಿರಿ‌.

ವೃಶ್ಚಿಕ ರಾಶಿ: ಆದಾಯದ ಮೂಲಗಳಿಂದ ಬರುವ ಹಣವು ನಿಮಗೆ ಸಾಕಾಗದು. ಇಂದು ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ವ್ಯಯಿಸುವಿರಿ. ಬಹಳ ದಿನಗಳಿಂದ ಹೋಗಬೇಕು ಎಂದುಕೊಂಡ ಸ್ಥಳಗಳಿಗೆ ಹೋಗಿ ಬರುತ್ತೀರಿ. ಸಹೋದ್ಯೋಗಿಗಳಿಂದ‌ ಕಛೇರಿಯಲ್ಲಿ ನಿಮಗೆ ಒತ್ತಡ ಪರಿಸ್ಥಿತಿ ಬರಬಹುದು. ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸಿದರೆ ಯಶಸ್ಸು ಖಚಿತ. ಹಠ ಅಥವಾ ಜಿದ್ದು ದಾಂಪತ್ಯದಲ್ಲಿ ಅಸಮಾಧಾನ ತರಬಹುದು. ಹಣಕಾಸು ಸ್ಥಿತಿಯು ಸ್ಥಿರವಾಗಿರಲಿದೆ. ಹಿರಿಯರ ಸಲಹೆಗೆ ಕಿವಿಗೊಡಿ. ನಿಮ್ಮ ಆಪ್ತವಲಯವು ಇನ್ನೂ ದೊಡ್ಡದಾಗಬಹುದು. ಭೂಮಿಯನ್ನು ಖರೀದಿಸಲು ಸ್ಥಳ ಪರಿಶೀಲನೆಗೆ ಹೋಗುವ ಸಾಧ್ಯತೆ ಇದೆ. ಯಾರಾದರೂ ಹಣಕಾಸಿನ‌ ವಿಚಾರಕ್ಕೆ ಬಂದರೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ಇಂದಿನ ಕಾರ್ಯವನ್ನು ಉತ್ಸಾಹದಿಂದ ಮಾಡುವಿರಿ. ಯಾರನ್ನೂ ಅವಲಂಬಿಸುವ ಯೋಜನೆಯನ್ನು ನೀವು ಬಿಡುವಿರಿ. ಸಣ್ಣ ವಿವಾದಗಳು ಆಗಬಹುದು.‌ ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ.

ಧನು ರಾಶಿ: ಇಂದು ಆಪ್ತರ ಮಾತಿಗೆ ಅತಿಯಾಗಿ ಭಾವುಕರಾಗುವಿರಿ. ಇಂದು ನಿಮ್ಮ ನಿರ್ಲಕ್ಷ್ಯದಿಂದ ವ್ಯಾಪಾರದಲ್ಲಿ ವಂಚನೆ ಸಾಧ್ಯವಾದೀತು. ತೊಂದರೆಗಳಿಂದ ಮನಸ್ಸು ಕುಗ್ಗಬಹುದು. ಗೌಪ್ಯತೆಯನ್ನು ನೀವು ಕಾಪಾಡಿಕೊಳ್ಳಲಿದ್ದೀರಿ. ನೆರೆಹೊರೆಯವರು ನಿಮ್ಮ ಮನೆಗೆ ಬರಬಹುದು. ನಿಮ್ಮ ಪ್ರಯತ್ನಗಳು ಗುರುತು ಕಾಣುವ ದಿನ. ಮಿತ್ರರ ಸಹಕಾರದಿಂದ ಕೆಲಸ ಸುಲಭವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ಬದಲಾಗಬಹುದು. ಅತಿ ನಂಬಿಕೆಯಿಂದ ಹಾನಿ ಆಗಬಾರದು ಎಂಬುದನ್ನು ನೆನಪಿಡಿ. ಕೋಪದಿಂದಲೇ ಎಲ್ಲದಕ್ಕೂ ಪರಿಹಾರ ಸಿಗದು. ಕೇವಲ ಮಾತಿನ‌ ಆಧಾರದ ಮೇಲೆ ಯಾರನ್ನೂ ಅಳೆಯಬೇಡಿ. ಜೀವನ ನಿರ್ವಹಣೆಗೆ ಮತ್ತೊಂದು ವೃತ್ತಿಯನ್ನು ಆಶ್ರಯಿಸಬಹುದು. ಯಾರಿಂದಲಾದರೂ ಏನನ್ನಾದರೂ ಪಡೆಯುವಾಗ ವಿನಯವು ಇರಲಿ. ಅತಿಯಾದ ಆಲಸ್ಯದಿಂದ ಮನೆಯ ಕೆಲಸಗಳು ಹಾಗೆಯೇ ಉಳಿದುಕೊಳ್ಳಬಹುದು. ದೂರದ ಪ್ರಯಾಣವನ್ನು ಅಪೇಕ್ಷಿಸುವಿರಿ. ಧಾರ್ಮಿಕವಾದ ಚಿಂತನೆಯನ್ನು ನಡೆಸಬಹುದು.

ಮಕರ ರಾಶಿ: ಅಸಂಗತಗಳಿಂದ ನಿಮಗೆ ಅಪಮಾನವಾಗಲಿದೆ. ಯಾವ ಸೋಲಿಗೂ ಹತಾಶರಾಗುವುದು ಬೇಡ. ಮರೆಯಲು ಬೇಕಾದ ಚಟುವಟಿಕೆಗಳನ್ನು ಮಾಡಿ. ಮನೆಯಿಂದ ದೂರ ಉದ್ಯೋಗದ ನಿಮಿತ್ತ ಇರಬೇಕಾಗಿ ಬರಬಹುದು. ಕೌಟುಂಬಿಕ ಚರ್ಚೆಗಳಲ್ಲಿ ತಾಳ್ಮೆಯಿಂದ ಪ್ರತಿಕ್ರಿಯಿಸಿ. ಆರ್ಥಿಕವಾಗಿ ಏರುಪೇರು ಆಗಬಹುದು. ಹೊಸ ಖರೀದಿಗೆ ದಿನ ಸೂಕ್ತವಲ್ಲ. ಸ್ನೇಹಿತರ ಮಾತುಗಳಲ್ಲಿ ಸತ್ಯತೆ ಇಲ್ಲದಿರುವ ಸಾಧ್ಯತೆ. ಅಸ್ತಿ ಸಂಬಂಧ ಕಾನೂನು ವ್ಯವಹಾರ ನೋಡಿಕೊಳ್ಳಿ. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸುವ ಪ್ರಯತ್ನ ಮಾಡುವಿರಿ. ಸಾಲಬಾಧೆಯ ಭಯವು ಕಾಡುವುದು. ಎಲ್ಲರ ಪ್ರೀತಿಯನ್ನು ಗಳಿಸಲು ಸಾಧ್ಯವಾಗದು. ಪ್ರತಿಕೂಲ‌ ಸಂದರ್ಭವನ್ನು ಸರಿಯಾಗಿ ನಿಭಾಯಿಸುವಿರಿ. ತೊಂದರೆಗಳು ಬರುವುದು ನಿಲ್ಲುವುದು. ಇರುವುದನ್ನು ಸರಿ ಮಾಡಿಕೊಳ್ಳುವ ಜವಾಬ್ದಾರಿಯು ನಿಮ್ಮ ಮೇಲಿದೆ. ಸಂಗಾತಿಯನ್ನು ಜೊತೆ ಹೊಸ ಉದ್ಯಮವನ್ನು ಆರಂಭಿಸುವ ಹುನ್ನಾರ ನಡೆಯಲಿದೆ. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ.

ಕುಂಭ ರಾಶಿ: ನಿಮ್ಮ ಗುರಿಗೆ ಅಪರಿಚಿತರು ಜೊತೆಯಾಗುವರು. ಸುಮ್ಮನೇ ಇಂದು ಯಾರದೋ ಮೇಲೆ ದ್ವೇಷವನ್ನು ಸಾಧಿಸುತ್ತ ಇರುವುದು ಬೇಡ. ಮನಸ್ಸು ಕೆಡುವುದು ಬಿಟ್ಟರೆ ಮತ್ತೇನೂ ಆಗದು. ಯಾರ ಮಾತನ್ನೂ ಕೇಳದೇ ಹಣ ಹೂಡಿಕೆ‌ ಮಾಡಿ ಕಳೆದುಕಳ್ಳುವಿರಿ. ಹಣಕಾಸು ವಿಷಯದಲ್ಲಿ ಲಾಭದ ಸೂಚನೆಗಳಿವೆ. ಹಳೆಯ ಸ್ನೇಹಿತರಿಂದ ಸಂಪರ್ಕ ಬರಬಹುದು. ಕೆಲಸದ ಜವಾಬ್ದಾರಿಗಳಿಂದ ದೂರ ಉಳಿಯಲಾಗದು. ಆರೋಗ್ಯ ಸರಾಸರಿ ಇರುತ್ತದೆ. ಪ್ರವಾಸದ ಯೋಚನೆಯಲ್ಲಿದ್ದರೆ ಮುಂದೂಡುವುದು ಉತ್ತಮ. ಮಾನಸಿಕವಾಗಿ ಹಿಂಜರಿಕೆ ಇರಲಿದೆ. ಆಪ್ತರ ಮಾತು ನಿಮ್ಮನ್ನು ಚೇತರಿಸಿಕೊಳ್ಳಲು ಸಹಾಯ ಮಾಡಬಹುದು. ಚಟಗಳಿಂದ ಒಂದಿಷ್ಟು ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿಕೊಳ್ಳಲಿದ್ದೀರಿ. ಭವಿಷ್ಯದ‌ ಕುರಿತು ಆಲೋಚಿಸುವುದು ಉತ್ತಮ. ಉತ್ತಮವಾದುದನ್ನು ಪಡೆಯಲು ಪ್ರಯತ್ನಿಸಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ನಿಮ್ಮ ಬಗೆಗಿನ ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ.

ಮೀನ ರಾಶಿ: ನಿಮ್ಮಿಂದ ರುಚಿಕರವಾದ ಭೋಜನ ಮನೆಯವರಿಗೆ ಸಿಗುವುದು. ನೀವು ಬೇಕಾಗಿರುವುದನ್ನು ಮಾಡುವುದಕ್ಕಿಂತ ಬೇರೆಯದನ್ನೇ ಮಾಡುವಿರಿ. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಸರಿಯಾದ ಕೆಲಸವನ್ನು ಕೊಡಿ. ಸಂಗಾತಿಯ ಜೊತೆ ಸ್ವಲ್ಪ ಕಾಲ ಕಳೆಯಿರಿ. ಆತ್ಮವಿಶ್ವಾಸವನ್ನು ಬೆಳಸಿಕೊಂಡ ನಿಮಗೆ ಸದಾ ಸಂತೋಷವು ಇರಲಿದೆ. ಆರ್ಥಿಕ ವಿಚಾರದಲ್ಲಿ ಚಿಂತೆ ಇರಬಹುದು, ಆದರೆ ತಾಳ್ಮೆಯಿಂದ ನಿರ್ವಹಿಸಬಲ್ಲಿರಿ. ಕುಟುಂಬದೊಂದಿಗೆ ಸಮಯ ಕಳೆಯುವುದು ಸಂತೋಷ ತರುವದು. ಉದ್ಯೋಗದಲ್ಲಿನ ಒತ್ತಡ ಕಡಿಮೆಯಾಗಬಹುದು. ಸ್ನೇಹಿತರ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಲು ಬಯಸುವಿರಿ. ಎಲ್ಲದರ ಬಗ್ಗೆಯೂ ಋಣಾತ್ಮಕ ಭಾವವನ್ನು ಇಟ್ಟುಕೊಂಡು ಕೊರಗುವುದು ನಿರ್ಥಕ. ವ್ಯವಹಾರದಲ್ಲಿ ಅಷ್ಟಾಗಿ ತೊಡಗಿಕೊಳ್ಳುವ ಮನಸ್ಸಿರದು. ಬಂಧುಗಳ ಭೇಟಿಯು ಖುಷಿ ಕೊಡಬಹುದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ.

Leave a Reply

Your email address will not be published. Required fields are marked *