ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ಮಿಥುನ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ವಿಶಾಖಾ ಯೋಗ: ವರಿಯಾನ್, ಕರಣ: ವಣಿಜ, ಸೂರ್ಯೋದಯ – 06 : 10 am, ಸೂರ್ಯಾಸ್ತ – 07 – 04 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 17:28 – 19:05, ಯಮಘಂಡ ಕಾಲ 12:37 – 14:14, ಗುಳಿಕ ಕಾಲ 15:51 – 17:28
ಇಂದು ಏಕಾದಶಿ. ಇದನ್ನು ಶಯನೈಕಾದಶೀ ಎಂದೂ ಕರೆದಿದ್ದಾರೆ. ವಿಷ್ಣುವು ಇಂದಿನಿಂದ ಯೋಗನಿದ್ರೆಯಲ್ಲಿ ಆರು ತಿಂಗಳ ಕಾಲ ಇರಲಿದ್ದಾನೆ. ಅತ್ಯಂತ ಶುಭ ದಿನವಾಗಿದ್ದು ಮಹಾವಿಷ್ಣುವು ಎಲ್ಲರಿಗೂ ಶುಭವನ್ನೇ ಮಾಡಲಿ.
ಮೇಷ ರಾಶಿ: ನಿಯಮಗಳಿಂದ ನಿಮ್ಮ ಸಂಯಮ ತಪ್ಪುವುದು. ಇಂದು ನೀವು ವಿವಾದಗಳಿಗೆ ಆತಂಕಪಡುವಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನಿಮ್ಮ ಅತಿಯಾದ ಲೆಕ್ಕಾಚಾರವು ಬುಡ ಮೇಲಾಗುವ ಸಾಧ್ಯತೆ ಇದೆ. ನಿಮ್ಮನ್ನು ಅನಾವರಣ ಗೊಳಿಸಿದವರಿಗೆ ಕೃತಜ್ಞತೆ ಹೇಳಿ. ವಾಹನವನ್ನು ರಿಪೇರಿ ಮಾಡಿಸುವ ಕೆಲಸವೇ ಇಂದು ಹೆಚ್ಚಾದೀತು. ಯಾವ ಕೆಲಸವೂ ಆಗದೇ ಕಿರಿಕಿರಿಯಿಂದ ಸಿಟ್ಟುಗೊಳ್ಳುವಿರಿ. ಕೃಷಿಕರಿಗೆ ಇಂದು ಸ್ವಲ್ಪ ಜಾಡ್ಯವೂ ಇರಬಹುದು. ಆಪ್ತರನ್ನು ಭೇಟಿಯಾಗುವ ಮನಸ್ಸೂ ಇಲ್ಲದೇ ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಿರಿ. ಯಾವುದನ್ನೂ ಯೋಚಿಸದೇ ಇಂದು ನಿಶ್ಚಿಂತೆಯಿಂದ ಇರಲು ಇಚ್ಛಿಸುವಿರಿ. ತಂದೆಯಿಂದ ನಿಂದನೆ ಸಿಕ್ಕೀತು. ಬೇಡದೇ ಇರವನ್ನು ಸಂಗತಿಗಳನ್ನು ಮೂಲೋತ್ಪಾಟನೆ ಮಾಡುವುದು ಉಚಿತ. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಅನಪೇಕ್ಷಿತ ಮಾತುಗಳೇ ನಿಮ್ಮ ಸಿಕ್ಕಿಸುವುದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಹೆಚ್ಚಿನ ಆದಾಯದ ಬಗದಗೆ ಚಿಂತನೆ ಮಾಡುವಿರಿ.
ವೃಷಭ ರಾಶಿ: ಇಂದು ಮನೆಗೆಲಸದಲ್ಲಿ ಹೆಚ್ಚು ತೊಡಗುವಿರಿ. ಕ್ಷಮತೆಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾಗದು. ಮಕ್ಕಳಿಗೆ ಯೋಗ್ಯವಾದ ಮಾರ್ಗದರ್ಶನದ ಸಾಧ್ಯತೆ. ಕಳೆದುಕೊಂಡದ್ದರ ಬಗ್ಗೆ ಚಿಂತೆ ಬಿಟ್ಟು ಮುಂದೇನು ಆಗಬೇಕು ಎಂಬ ಬಗ್ಗೆ ಆಲೋಚಿಸಿ ಸಂತೋಷವಾಗಿರಬಹುದು. ನಿಮ್ಮ ಸ್ವಭಾವಕ್ಕೆ ಯೋಗ್ಯರಾದವರನ್ನು ಆರಿಸಿಕೊಳ್ಳಲು ಕಷ್ಟವಾಗಬಹುದು. ತೊಂದರೆಯನ್ನು ಸಹಿಸುವ ಸಹನೆ ಕಡಿಮೆಯಾಗಬಹುದು. ರಾಜಕಾರಣದಲ್ಲಿ ಕೆಲವು ಬದಲಾವಣೆಗಳನ್ನು ಅನಿರೀಕ್ಷಿತವಾಗಿ ನೋಡಬೇಕಾಗಬಹುದು. ಅನಿವಾರ್ಯ ಕಾರಣದಿಂದ ನಿಮಗೆ ಪ್ರಯಾಣ ಮಾಡಬೇಕಾದ ಸ್ಥಿತಿ ಬರುವ ಸಾಧ್ಯತೆ ಇದೆ. ಆಸಕ್ತಿದಾಯಕವಾದದ್ದನ್ನು ಮಾಡಲು ಅಥವಾ ನಿಮ್ಮ ಸ್ನೇಹಿತರ ಜೊತೆಗೆ ಮೋಜು ಮಾಡಲು ನೀವು ಸ್ಫೂರ್ತಿ ಪಡೆಯಬಹುದು. ವಾಹನವನ್ನು ಚಲಿಸುವಾಗ ಬಹಳ ಎಚ್ಚರಿಕೆ ಅಗತ್ಯ. ಪರೋಪಕಾರಕ್ಕೆ ಸಮಯವನ್ನು ಕೊಡುವಿರಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.
ಮಿಥುನ ರಾಶಿ: ಸಣ್ಣ ಲಾಭವಾದರೂ ಸಂತೋಷವೇ. ನಿಮಗೆ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಚಿಂತೆ ಹೆಚ್ಚಾಗುವುದು. ಸರ್ಕಾರಿ ಅಧಿಕಾರಿಗಳಿಗೆ ಹೆಚ್ಚಿನ ಆದಾಯ ಸಿಗಲಿದೆ. ಸಂಗಾತಿಯ ಜೊತೆ ತಾಳ್ಮೆಂದಿರಿ. ಉತ್ತಮ ಕಾಲವು ಬರಲಿ ಎಂದು ನಿರೀಕ್ಷೆಯಲ್ಲಿ ಇರುವಿರಿ. ತುಲನಾತ್ಮಕತೆಯಿಂದ ಸರಿಯಾದುದರ ಆಯ್ಕೆ ಮಾಡುವಿರಿ. ಮನೆಯಲ್ಲಿ ಯಾರೂ ಹೇಳಿಕೊಳ್ಳಲಾಗದ ಅಸಮಾಧಾನವಿರಲಿದೆ. ಸ್ತ್ರೀಮೂಲದಿಂದ ಧನಸಹಾಯವು ಆಗಬಹುದು. ಬೇಡದ ವಿಚಾರಗಳು ಯಾವುದಾದರೂ ಒಂದು ಮೂಲದಿಂದ ನಿಮಗೆ ಗೊತ್ತಾಗುವುದು. ಸಮಸ್ಯೆಗಳನ್ನು ನಿಭಾಯಿಸಲು ನೀವು ಸೋಲಬಹುದು. ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ, ನೀವು ಬೇಗನೆ ಚೇತರಿಸಿಕೊಳ್ಳುವುದು ಉತ್ತಮ. ನಿಮ್ಮ ಕೆಲಸದಲ್ಲಿ ಸಮಯ ಮತ್ತು ಶ್ರಮವನ್ನು ಹಾಕಿದ್ದರೆ ನೀವು ಗುರಿಯನ್ನು ಸಾಧಿಸುವಿರಿ. ಸ್ವಲ್ಪ ಮಾನಸಿಕ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ಇನ್ನೊಬ್ಬರ ಮೇಲೆ ಬಲಪ್ರಯೋಗ ಬೇಡ.
ಕರ್ಕಾಟಕ ರಾಶಿ: ಏನೇ ಮಾಡಿದರೂ ನಿಮ್ಮನ್ನು ಸುಮ್ಮನೆ ಇರಲು ಬಿಡರು. ನಿಮ್ಮ ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದು ಸಾಧಿಸುವಿರಿ. ಅದಕ್ಕೆ ದೈವಬಲವೂ ಇರಲಿದೆ. ಉದ್ಯೋಗದಲ್ಲಿ ಸ್ವಲ್ಪ ಏರಳಿತಗಳನ್ನು ಎದುರಿಸಬೇಕಾದೀತು. ಇಂದು ನಿಮ್ಮ ಸಂಬಂಧದಲ್ಲಿ ಅನಗತ್ಯ ಮಾತುಗಳು, ವಿವಾದಗಳು ಉಂಟುಮಾಡಬಹುದು. ಸುಲಭವಾಗಿ ಏನನ್ನೂ ಒಪ್ಪಿಕೊಳ್ಳಲಾರಿರಿ. ಆರೋಗ್ಯವಾಗಿರಲು ಚಿಕಿತ್ಸೆಯನ್ನು ನಿರಂತರ ಮಾಡುವುದು ಅವಶ್ಯಕ. ಸಕಾರಾತ್ಮಕ ಆಲೋಚನೆ ನಿಮ್ಮನ್ನು ಸರಿ ದಾರಿಗೆ ಕೊಂಡೊಯ್ಯಬಹುದು. ಪ್ರೀತಿಪಾತ್ರರ ಜೊತೆ ಹೆಚ್ಚು ಸಲುಗೆಯಿಂದ ಇರುವಿರಿ. ನಿಮ್ಮ ಕಷ್ಟಕ್ಕೆ ಆದವರನ್ನು ಮರೆಯಬೇಡಿ. ವೈವಾಹಿಕ ಜೀವನವನ್ನು ಹೊಂದಾಣಿಕೆಯಿಂದ ನಡೆಸಬೇಕಾಗುವುದು. ಒಬ್ಬರಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತ ಇಂದು ಇರಬಹುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು.
ಸಿಂಹ ರಾಶಿ: ತಾಳ್ಮೆಯಿಂದ ಕಳೆದುಕೊಂಡ ಯಶಸ್ಸು ಸಿಗಲು ಸಾಧ್ಯ. ಆದರೆ ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಲಿದ್ದೀರಿ. ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದರೆ ಒಳ್ಳೆಯದು. ಇಂದು ಕೆಲಸವನ್ನು ಕಂಡು ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸಿಯಾರು. ಪ್ರವಾಸವನ್ನು ಮಾಡುವ ನಿರ್ಧಾರಕ್ಕೆ ಬರಲಿದ್ದೀರಿ. ಮನಸ್ಸಿಗೆ ಖುಷಿಯಾಗುವಂಥ ಕೆಲಸಗಳನ್ನು ಮಾಡಲಿದ್ದೀರಿ. ಅಪರಿಚಿತರು ನಿಮ್ಮ ಹಾದಿಯನ್ನು ತಪ್ಪಿಸಬಹುದು. ಗೊತ್ತದ್ದೂ ಗೊತ್ತಿಲ್ಲದಂತೆ ಇರುಬುದು ಸದ್ಯಕ್ಕೆ ಸೂಕ್ತ. ಆರ್ಥಿಕ ಲಾಭವು ನಿಮಗೆ ಗೌರವವನ್ನು ನೀಡಬಹುದು. ವ್ಯಾಪಾರಸ್ಥರು ಆಪ್ತರ ಸಲಹೆಯನ್ನು ಸ್ವೀಕರಿಸಿ. ವಿದೇಶ ಪ್ರಯಾಣದ ಸಂದರ್ಭವೂ ಬರಬಹುದು. ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ಕ್ಲಿಷ್ಟ ಎನಿಸದು.
ಕನ್ಯಾ ರಾಶಿ: ಸ್ನೇಹಕ್ಕಾಗಿ ಸ್ವಂತಿಕೆಯನ್ನು ಬಿಡಬೇಕಾಗುವುದು. ನೀವು ಅಧಿಕಾರವನ್ನು ಪಡೆಯಲು ಮಾರ್ಗವನ್ನು ಬದಲಿಸುವಿರಿ. ತಪ್ಪು ತಿಳುವಳಿಕೆಯಿಂದ ಸಂಬಂಧ ಕೊನೆಗೊಳ್ಳುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಕಾಲ ಕಳೆದು ಖುಷಿಕೊಡುವಿರಿ. ಇಂದು ನೀವು ಉದ್ವೇಗಕ್ಕೆ ಒಳಗಾಗಲು ಅನೇಕ ಸಂದರ್ಭಗಳು ಬರಬಹುದು. ತಾಳ್ಮೆಯಿಂದಲೇ ಇರಿ. ವಿವಾಹಕ್ಕೆ ನಿಮಗೆ ಮನಸ್ಸು ಪೂರ್ಣವಾಗಿ ಸಿದ್ಧವಾಗಿರದು. ಹಣಕಾಸಿನ ಒತ್ತಡದಿಂದ ಮನೆಯಲ್ಲಿ ಅಶಾಂತಿಯು ಉಂಟಾಗಬಹುದು. ಮನಸ್ಸನ್ನು ಹಿಡಿತದಲ್ಲಿರಿಸಿಕೊಳ್ಳಿ. ತಂತ್ರಜ್ಞಾನ ಕ್ಷೇತ್ರದಲ್ಲಿ ನೀವು ಸಾಧ್ಯವಾದಷ್ಟು ಜ್ಞಾನವನ್ನು ಪಡೆಯಲು ಪ್ರಯತ್ನಿಸುವಿರಿ. ಇದು ನಿಮಗೆ ಸಂತೋಷವನ್ನು ನೀಡುತ್ತದೆ. ದೀರ್ಘಾವಧಿಯ ಅನಂತರ ಭೂಮಿಯಿಂದ ಉತ್ತಮ ಲಾಭವನ್ನು ಗಳಿಸುವಿರಿ. ವಿರಾಮವನ್ನು ಪಡೆದು ಸುತ್ತಾಡಲು ಹೋಗುವಿರಿ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆ ಸಿಗದೇಹೋಗಬಹುದು.
ತುಲಾ ರಾಶಿ: ಯಶಸ್ಸಿನ ಮೆಟ್ಟಿಲು ಇನ್ನೂ ನಿಮಗೆ ಬಹಳ ದೂರವಿದೆ. ಈಗಲೇ ಯಾವುದನ್ನೂ ಘೋಷಿಸುವ ಅವಶ್ಯಕತೆ ಇಲ್ಲ. ನಿಮ್ಮ ಪೂರ್ವಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ದಾಂಪತ್ಯದಲ್ಲಿ ನೆಮ್ಮದಿ ಇರಲಿದೆ. ಚರ್ಚೆಗಳಿಗೆ ಆಸ್ಪದ ನೀಡದಿರಿ. ನೂತನ ಮಿತ್ರರ ಭೇಟಿ ಆಗವುದು. ಅವಿವಾಹಿತರಿಗೆ ವಿವಾಹವಾಗುವ ಸೂಚನೆಯು ಬರಲಿದೆ. ಮನೆಯಲ್ಲಿ ದೇವಕಾರ್ಯಗಳು ನಡೆಯಲಿದೆ. ಯೋಗ್ಯತೆಗೆ ಅನುಸಾರವಾಗಿ ಅಭಿವೃದ್ಧಿಯನ್ನು ಹೊಂದುವನು. ಅದರಲ್ಲಿ ಯಾವುದೇ ಬೇಸರಿಸಬೇಕಿಲ್ಲ. ಎಲ್ಲ ಬಗೆಯ ಬೆಂಬಲ ಹಾಗೂ ಸಹಕಾರಗಳನ್ನು ಜನರು ಕೊಡಬಹುದು. ನೀವು ಇಂದು ತುಂಬಾ ಸಂತೋಷದಿಂದ ಇರುವಿರಿ. ಹೊಸ ಯೋಜನೆಗಳನ್ನು ಪ್ರಾರಂಭಿಸುವ ಸಮಯವು ಇದಾಗಿಲ್ಲ. ದೀರ್ಘಕಾಲ ಸ್ನೇಹಿತರು ವಿವಾಹಕ್ಕೆ ಹಿರಿಯರ ಅನುಮತಿಯನ್ನು ಪಡೆಕೊಳ್ಳಿ. ದಿನದ ಕೆಲವು ಸಮಯದಲ್ಲಿ ನಿಮಗೆ ಉತ್ತಮ ಜೀವನದ ಸೂಚನೆ ಸಿಗಲಿದೆ. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು. ವಿವಾದವನ್ನು ಮಾಡಿಕೊಳ್ಳಲು ಮನಸ್ಸಾಗದು.
ವೃಶ್ಚಿಕ ರಾಶಿ: ಮನೆಯ ಕಾರ್ಯದಲ್ಲಿ ಎಂದಿರದ ಉತ್ಸಾಹ ಕಾಣಿಸುವುದು. ನಿಮಗೆ ಮಕ್ಕಳ ವಿಚಾರದಲ್ಲಿ ಸಂತೋಷವಿರಲಿದೆ. ಸ್ತ್ರೀ ಪುರುಷರ ನಡವೆ ಪರಸ್ಪರ ದ್ವೇಷಬರಬಹುದು. ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ. ನಿಮ್ಮವರೇ ನಿಮ್ಮಮೇಲೆ ಅಪವಾದವನ್ನು ಹೇರುವ ಪ್ರಯತ್ನವನ್ನು ಮಾಡಬಹುದು. ನಿಃಸ್ವಾರ್ಥವಾಗಿ ಇಷ್ಟಪಡುವವರ ಮೇಲೆ ಅನುಮಾನ ಬೇಡ. ಯಾವದನ್ನಾದರೂ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರಲಾಗದು. ನೀವು ನಡೆಯಬೇಕಾದ ದಾರಿಯು ಸರಿ ಇದ್ದು ಅತ್ತ ಸಾಗುವಿರಿ. ನಕಾರಾತ್ಮಕ ಆಲೋಚನೆಗಳು ನಿಮ್ಮ ಗಮನದ ವ್ಯತ್ಯಾಸಕ್ಕೆ ಕಾರಣವಾಗಬಹುದು. ಉತ್ಸಾಹದಲ್ಲಿ ತಪ್ಪು ಮಾಡುವ ಸಾಧ್ಯತೆ ಇದೆ. ಕೆಲವು ದುರಭ್ಯಾಸದಿಂದ ನಿಮ್ಮ ಓದಿಗೆ ಅಡ್ಡಿಯಾಗಬಹುದು. ಇಂದು ವೈದ್ಯಕೀಯ ವಿದ್ಯಾರ್ಥಿಗಳಿಗೆ ಚೆನ್ನಾಗಿರಬಹುದು. ನಿಮ್ಮ ಅಧ್ಯಯನದಿಂದ ನಿಮ್ಮನ್ನು ವಿಚಲಿತಗೊಳಿಸುವ ಅನಗತ್ಯ ವಾದಗಳನ್ನು ತಪ್ಪಿಸಿ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ.
ಧನು ರಾಶಿ: ಶುಭಪ್ರದವಾದ ಯಾವುದಾದರೊಂದು ಕಾರ್ಯಕ್ಕೆ ಸಂಕಲ್ಪ ಮಾಡುವಿರಿ. ನಿಮ್ಮ ಸಹೋದರರಿಂದ ನಿಮಗೆ ಆಕಸ್ಮಿಕವಾಗಿ ಸಹಾಯ ಸಿಗಬಹುದು. ವೃತ್ತಿಯಲ್ಲಿ ನಿಮ್ಮ ಕೆಲಸವನ್ನು ನೀವು ನಿಯಮಬದ್ಧವಾಗಿ ಮಾಡುವುದು ಉತ್ತಮ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಗೊಳ್ಳುತ್ತದೆ. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಹಿನ್ನಡೆ ಇರಲಿದೆ. ಸಂಗಾತಿಯೇ ನಿಮ್ಮ ಕೆಲಸಗಳಿಗೆ ಮುಂದೆ ಬಂದು ಸಹಾಯ ಮಾಡುವರು. ಸರ್ಕಾರಿ ಕಛೇರಿಯ ಕೆಲಸಗಳಲ್ಲಿ ಸ್ವಲ್ಪ ಚುರುಕುತನ ಕಾಣಬಹುದು. ಮನದಲ್ಲಿ ನೆನೆದವರು ಕಣ್ಣೆದುರು ಪ್ರತ್ಯಕ್ಷವಾಗಬಹುದು. ಸಹೋದ್ಯೋಗಿಗಳ ಜೊತೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಸಾಲವನ್ನು ಮಾಡಬೇಕಾಗಿಬರಬಹುದು. ಯಾರಮೇಲೂ ಒತ್ತಡಬೇಡ. ಸಂಗಾತಿಯ ಮಾತುಗಳು ನಿಮಗೆ ಅನಿರೀಕ್ಷಿತ ಆದೀತು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ. ನೀವು ಯಾವುದನ್ನೂ ಇಂದು ಗಂಭೀರವಾಗಿ ತೆಗೆದುಕೊಳ್ಳಲಾರಿರಿ.
ಮಕರ ರಾಶಿ: ಬಹಳ ದಿನಗಳಿಂದ ಮಾಡಿತ್ತಿರುವ ಕೆಲಸ ಇಂದು ಮುಕ್ತಯವಗಬಹುದು. ಇಂದು ನೀವು ಬೇರೆಯವರ ಕಷ್ಟಕ್ಕೆ ನೆರವಾಗುವಿರಿ. ಜೊತೆಗಾರರು ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಪ್ರಯತ್ನಿಸಬಹುದು. ಸಂಗಾತಿಯ ಜೊತೆಗೆ ಸ್ನೇಹದಿಂದ ವರ್ತಿಸುವಿರಿ. ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಅಚಲವಾದ ನಂಬಿಕೆಗೆ ಘಾಸಿ ಮಾಡುವರು. ಬಹುಜನರ ಅಭಿಪ್ರಾಯವನ್ನು ಹೆಚ್ಚಿಗೆ ಗೌರವಿಸುವುದು ಒಳ್ಳೆಯದು. ಇತರರಿಗೆ ಬೇಸರ ಮಾಡುವಿರಿ. ಹಣದ ಹರಿವುಕಡಿಮೆ ಇರುವುದರಿಂದ ಖರ್ಚನ್ನು ಸರಿಯಾಗಿ ನಿಭಾಯಿಸುವುದು ಒಳ್ಳೆಯದು. ನಿಮ್ಮ ಪ್ರೇಮಿಯ ಜೊತೆ ಸಮಯವನ್ನು ಕಳೆಯಲು ಇಚ್ಛಿಸುವಿರಿ. ಉನ್ನತ ಮಟ್ಟಕ್ಕೆ ಏರಲು ಸಂಪೂರ್ಣ ಅವಕಾಶ ಸುಗಲಿದೆ. ಸ್ನೇಹದಿಂದ ಪ್ರೇಮವು ಉಂಟಾಗಲಿದೆ. ಸಂಬಂಧದ ಮಹತ್ವವನ್ನು ತಿಳಿಯುವುದು. ಬೇಕಾದಷ್ಟು ಕೆಲಸಗಳಿದ್ದರೂ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಉದ್ಯಮವು ಬೆಳೆಯುತ್ತಿರುವುದು ನಿಮಗೆ ಸಂತೋಷ ಕೊಡುವುದು.
ಕುಂಭ ರಾಶಿ: ಹೋಗಬೇಕಾದ ಸ್ಥಳಕ್ಕೆ ವಿಳಂಬವಾಗಿ ಹೋಗಿವಿರಿ. ನೀವು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಆಸಕ್ತಿ ಇರುವುದು. ಬಹಳ ದಿನಗಳ ಅನಂತರ ಹಿರಿಯರ ಭೇಟಿಯಿಂದ ಖುಷಿ ಸಿಗುವುದು. ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ನಿಮ್ಮನ್ನು ಯಾರಾದರೂ ಗಮನಿಸಬಹುದು. ಇಂದಿನ ನಿಮ್ಮ ಹಣದ ಒಳಹರಿವು ಸಾಮಾನ್ಯವಾಗಿರುತ್ತವೆ. ತಾಯಿಯಿಂದ ಹೆಚ್ಚಿನ ಸಹಕಾರಗಳು ನಿಮಗೆ ದೊರೆತು ಸಂತಸವಾಗುತ್ತದೆ. ಇಂದುಕೆಲವೊಮ್ಮೆ ನಿಮ್ಮ ವ್ಯವಹಾರದಲ್ಲಿ ಅನಿರೀಕ್ಷಿತ ಲಾಭವು ಬರಬಹುದು. ಮನಸ್ಸು ವಿಶ್ರಾಂತಿಯನ್ನು ಪಡೆಯಲು ಅವಕಾಶ ಬೇಕು. ಆರ್ಥಿಕ ಲಾಭಕ್ಕಾಗಿ ಪ್ರಯಾಣ ಮಾಡುವಿರಿ. ಕುಟುಂಬದ ಖರ್ಚು ಇಂದು ಇರಬಹುದು. ಯಾರ ಮೆಚ್ಚುಗೆಯೂ ನಿಮಗೆ ಸಮಾಧಾನ ತರದು. ವಿನಾಕಾರಣ ಕಾಲಹರಣ ಮಾಡಲಿದ್ದು ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು.
ಮೀನ ರಾಶಿ: ಯಾವುದೇ ಅನುಕೂಲತೆಯನ್ನು ಕೂಡಲೇ ಒಪ್ಪಿಕೊಳ್ಳಲಾರಿರಿ. ಇಂದು ನಿಮ್ಮ ಸ್ವಂತ ಕಾರ್ಯದಲ್ಲಿ ಹೆಚ್ಚಿನ ಪ್ರಗತಿ ಇರುವುದು. ವ್ಯವಹಾರಿಕ ನಷ್ಟವು ನಿಮ್ಮ ಗಮನಕ್ಕೆ ಬಾರದೇ ಇರುವುದು. ನಿಮ್ಮ ಪ್ರಣಯ ಜೀವನವು ಬಹಳಷ್ಟು ಸಂತೋಷ ತರಬಹುದು. ನಿಮ್ಮ ಆಪ್ತರ ಜೊತೆ ಬಾಂಧವ್ಯವನ್ನು ರೂಪಿಸುವ ಅವಕಾಶವಿದೆ. ಹೆಚ್ಚು ಶ್ರಮದ ಕಾರ್ಯಕ್ಕೆ ನೀವು ಹೋಗಲಾರಿರಿ. ನೂತನವಾಗಿ ವಿವಾಹವಾದ ದಂಪತಿಗಳು ಪ್ರೀತಿ ಮತ್ತು ವಾತ್ಸಲ್ಯದಿಂದ ಇರುವರು. ವಿದ್ಯಾರ್ಥಿಗಳ ಕೆಲಸವು ಗಮನಾರ್ಹವಾಗಿ ವೃದ್ಧಿಯಾಗಬಹದು. ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಗೃಹ ನಿರ್ಮಾಣದ ಕೆಲಸದಲ್ಲಿ ಅತಿ ಆತುರ ಬೇಡ. ಮಾತಿನಿಂದ ಕಾರ್ಯ ಸಾಧನೆ ಮಾಡಿ ಮೆಚ್ಚುಗೆ ಪಡೆಯುವಿರಿ. ಸಹೋದ್ಯೋಗಿಗಳು ತಪ್ಪಿಗೆ ನಿಮ್ಮ ಕಡೆ ಬೊಟ್ಟು ಮಾಡಿ ತೋರಿಸಿಯಾರು. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ. ನೀವು ಯಾರಿಗೋ ಸಹಾಯ ಮಾಡಲು ಹೋಗಿ ಆಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು.
TV9 Kannada