ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು. 07 ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ 26ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ
ಗುರುಪೂರ್ಣಮೆಯ ಜು.10ನೇ ಗುರುವಾರದಂದು ವಾರ್ಷಿಕೋತ್ಸವದ ಅಂಗವಾಗಿ ಪೂಜಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ ಮಾಡಲಾಗುವುದು ಬೆಳಿಗ್ಗೆ 10.30 ಕ್ಕೆ ಶ್ರೀ
ಲಕ್ಷ್ಮಿ ನಾರಾಯಣ ಹೃದಯಾ ಹೋಮ 12:30 ಗಂಟೆಗೆ ಪೂರ್ಣವತಿ ನೇರವೇರುವುದು. ಈ ಪೂರ್ಣಾವತಿಗೆ ಭಕ್ತಾದಿಗಳು ಸೀರೆ,
ಕುಪ್ಪಸ,ಹಣ್ಣುಗಳು,ದವಸ ಧಾನ್ಯಗಳು ತುಪ್ಪ ಹಾಗೂ ಇನ್ನಿತರೆ ಪೂಜಾ ಸಾಮಗ್ರಿಗಳನ್ನುಸಲ್ಲಿಸಬಹುದು. ಮಧ್ಯಾಹ್ನ 1ಗಂಟೆಗೆ ಅನ್ನ
ಸಂತರ್ಪಣೆ ಕಾರ್ಯಕ್ರಮವು ನೆರವೇರಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶರಣ್ ಕುಮಾರ್‍ವಹಿಸಲಿದ್ದಾರೆ.
ಕಾರ್ಯದರ್ಶಿಎಂ.ಪಿ.ವೆಂಕಟೇಶ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್, ನಿರ್ದೇಶಕರು ಹಾಗೂ ಮಲ್ಲಿಕಾರ್ಜುನ ಸ್ವಾಮಿ,
ಹನುಮಂತರೆಡ್ಡಿ ಉಪಸ್ಥಿತರಿರುವರು.
ಈ ಎಲ್ಲಾ ಪೂಜಾ ಕಾರ್ಯಕ್ರಮಕ್ಕೆ ಚಿತ್ರದುರ್ಗದ ಸಮಸ್ತ ಭಕ್ತಾದಿಗಳು ಆಗಮಿಸಿ ಪೂಜೆಯನ್ನು ಯಶಸ್ವಿಗೊಳಿಸಬೇಕಾಗಿ ಅಯ್ಯಪ್ಪ
ಸ್ವಾಮಿ ಸೇವಾ ಟ್ರಸ್ಟ್ ಮನವಿ ಮಾಡಿದೆ.