ಗಾಣಿಗ ಸ್ವಾಮಿಯ ಸುಳ್ಳು ಆರೋಪ? ಶಿವರಾಜ್ ತಗಂಡಗಿ ಎಚ್ಚರಿಕೆ: ಕ್ರಿಮಿನಲ್ ಮೊಕದ್ದಮೆ ಶೀಘ್ರ.
📅 ದಿನಾಂಕ: ಜುಲೈ 08
📍 ಸ್ಥಳ: ಚಿತ್ರದುರ್ಗ
✍️ ಸಮಗ್ರ ಸುದ್ದಿ ಡೆಸ್ಕ್
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ: ಗಾಣಿಗ ಸಮುದಾಯದ ಸ್ವಾಮಿಯವರು ಅವರ ಮೇಲೆಯೇ ಸುಳ್ಳು ಕಮಿಷನ್ ಆರೋಪ ಮಾಡಿರುವ ಹಿನ್ನೆಲೆಯಲ್ಲಿ, ಶೀಘ್ರದಲ್ಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಗಂಡಗಿ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಹಿಂದಿನ ಬಿಜೆಪಿ ಸರ್ಕಾರದ ಕಾಲದಲ್ಲಿ ಗಾಣಿಗ ಪೀಠಕ್ಕೆ ₹3.5 ಕೋಟಿ ಅನುದಾನ ಮಂಜೂರು ಮಾಡಲಾಗಿತ್ತು. ಅದರಲ್ಲಿ ₹2 ಕೋಟಿ ಬಿಡುಗಡೆ ಆಗಿದ್ದು, ಉಳಿದ ₹1.5 ಕೋಟಿಗೆ ಮಾಜಿ ಸಿಎಂ ಬೊಮ್ಮಾಯಿ ಅವರು ಬಿಡುಗಡೆ ಮಾಡಬಾರದೆಂದು ಸೂಚನೆ ನೀಡಿದ್ದರು. ಈಗ ಆ ಆದೇಶವನ್ನು ಮರೆಮಾಚಿ ಮಿಕ್ಕ ಹಣ ಕೇಳುತ್ತಿರುವುದು ಅನ್ಯಾಯ” ಎಂದು ಹೇಳಿದರು.
ಆರೋಪ ಹಾಗೂ ಸಚಿವರ ಸ್ಪಷ್ಟನೆ: ಸ್ವಾಮಿಗಳು ಈಗ “₹3.5 ಕೋಟಿಯಲ್ಲೂ ₹2 ಕೋಟಿ ಮಾತ್ರ ಬಂದಿದೆ, ಮಿಕ್ಕ ₹1.5 ಕೋಟಿ ಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ, ಸಚಿವ ತಗಂಡಗಿಯವರ ಮೇಲೆ ಕಮಿಷನ್ ಕೇಳಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.
ಶಿವರಾಜ್ ತಗಂಡಗಿಯ ಪ್ರತ್ಯುತ್ತರ:
“ನಾನು ಯಾರಿಂದಲೂ ಕಮಿಷನ್ ಕೇಳಿಲ್ಲ. ಯಾರಾದರೂ ಸಾಕ್ಷಿ ಕೊಡಬಹುದು. ನನಗೆ ಸದಾ ಖಾವಿ ಹಾಗೂ ಧರ್ಮದ ಮೇಲಿನ ಗೌರವವಿದೆ. ಸ್ವಾಮಿಗಳು ರಾಜಕೀಯದಿಂದ ಬಂದವರಾಗಿದ್ದು, ಅವರ ಹಿಂದಿನ ರಾಜಕೀಯ ಹಿನ್ನೆಲೆ ಸ್ಪಷ್ಟವಾಗಬೇಕು. ನಾನು ಯಾವುದೇ ತಪ್ಪು ಮಾಡಿದ್ದರೆ ರಾಜೀನಾಮೆ ಮಾತ್ರವಲ್ಲ, ರಾಜಕೀಯವೇ ಬಿಟ್ಟbidರೇನೆ. ಇಲ್ಲದಿದ್ದರೆ ಅವರು ಸ್ವಾಮಿ ಸ್ಥಾನದಿಂದ ಹಿಂದೆ ಸರಿಯಬೇಕು,” ಎಂದು ತಗಂಡಗಿ ಸ್ಪಷ್ಟ ಪಡಿಸಿದ್ದಾರೆ.
ನ್ಯಾಯಾಂಗ ಕ್ರಮದ ಎಚ್ಚರಿಕೆ: ಸಚಿವರು ಮುಂದಾಗಿ, “ಇದೊಂದು ಸುಳ್ಳು ಆರೋಪವಾಗಿದ್ದು, ನಾನು ಸತ್ಯವನ್ನು ಸಾಬೀತು ಪಡಿಸಲು ಕಾನೂನಿನ ಮಾರ್ಗವನ್ನು ಬಳಸುತ್ತೇನೆ. ಸ್ವಾಮಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು” ಎಂದು ಹೇಳಿದ್ದಾರೆ.
ಸಭೆಯಲ್ಲಿ ಉಪಸ್ಥಿತರು: ಈ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್, ಉಪಜಿಲ್ಲಾಧಿಕಾರಿ ಕುಮಾರಸ್ವಾಮಿ, ಡಿಸಿಸಿ ಅಧ್ಯಕ್ಷ ತಾಜ್ ಪೀರ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಖುದ್ದುಸ್ ಪ್ರಕಾಶ್ ರಾಮನಾಯಕ, ಮಧುಗೌಡ, ಕಣ್ಮೇಶ್ ಮತ್ತಿತರರು ಉಪಸ್ಥಿತರಿದ್ದರು.
Views: 10