ಅಗ್ನಿ ಶಾಮಕ ದಳದಿಂದ ವಿದ್ಯಾರ್ಥಿಗಳಿಗೆ ಅಗ್ನಿ ಅವಘಡ ನಿಯಂತ್ರಣ ತರಬೇತಿ – ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಾತ್ಯಕ್ಷಿಕೆ.

ಚಿತ್ರದುರ್ಗ: ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ ಆವರಣದಲ್ಲಿ ಅತ್ಯಂತ ಉಪಯುಕ್ತ ಹಾಗೂ ಜನಜಾಗೃತಿ ಮೂಡಿಸುವ ಕಾರ್ಯಕ್ರಮವೊಂದು ಏರ್ಪಟ್ಟಿತು. ನಗರ ಅಗ್ನಿ ಶಾಮಕ ದಳದ ಸಿಬ್ಬಂದಿಯವರಿಂದ ವಿದ್ಯಾರ್ಥಿಗಳಿಗಾಗಿ ಅಗ್ನಿ ಅವಘಡಗಳಿಂದ ತಪ್ಪಿಸಿಕೊಳ್ಳುವ ವಿಧಾನ, ಅಗ್ನಿಯನ್ನು ನಿಯಂತ್ರಿಸುವ ತಂತ್ರಗಳು, ಹಾಗು ಅಗ್ನಿಯನ್ನು ನಂದಿಸುವ ಮಾರ್ಗಗಳು ಕುರಿತು ವಿವರವಾದ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.

ಈ ವಿಶೇಷ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ರಕ್ಷಣಾ ತಂತ್ರಗಳು, ಸಾಫ್ಟಿ ಟ್ರಿಕ್ಸ್, ತುರ್ತು ನಿರ್ಗಮನ ವಿಧಾನಗಳು, ಮತ್ತು ಅಗ್ನಿ ನಿಗ್ರಹ ಸಾಧನಗಳ ಬಳಕೆ ಕುರಿತು ಹುರಿದುಂಬಿಸುವ ರೀತಿಯಲ್ಲಿ ತರಬೇತಿ ನೀಡಲಾಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಅಗ್ನಿ ಶಾಮಕ ದಳದ ಮುಖ್ಯಾಧಿಕಾರಿ ಶ್ರೀ ನರೇಂದ್ರ, ಅಗ್ನಿ ಅವಘಡಗಳಿಂದ ಉಂಟಾಗುವ ಅಪಾಯಗಳ ಬಗ್ಗೆ, ಅವುಗಳಿಗೆ ಕಾರಣಗಳು ಹಾಗೂ ತಕ್ಷಣ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದ ಎಲ್ಲಾ ಅಗ್ನಿಶಾಮಕ ಸಿಬ್ಬಂದಿಗಳಿಗೆ ಶಾಲೆಯ ಆಡಳಿತ ಮಂಡಳಿ ವತಿಯಿಂದ ಗೌರವ ಸೂಚಿಸಲಾಯಿತು.

ಕಾರ್ಯಕ್ರಮದ ಪ್ರಮುಖರು:

ಶಾಲೆಯ ಅಧ್ಯಕ್ಷರಾದ ಎಸ್. ಭಾಸ್ಕರ್

ಕಾರ್ಯದರ್ಶಿ ರಕ್ಷಣ್ ಎಸ್. ಬಿ

ಪ್ರಾಚಾರ್ಯ ಸಿ.ಡಿ. ಸಂಪತ್ ಕುಮಾರ್

ಮುಖ್ಯೋಪಾಧ್ಯಾಯ ವೆಂಕಟೇಶ್

ಹೆಡ್ ಕೋ-ಆರ್ಡಿನೇಟರ್ ಬಸವರಾಜ್ ಕೆ

ಶಾಲೆಯ ಶಿಕ್ಷಕ/ಶಿಕ್ಷಕಿಯರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ತರಬೇತಿ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಸುರಕ್ಷತಾ ಜಾಗೃತಿ ಮೂಡಿಸಿ, ಭವಿಷ್ಯದ ಎಚ್ಚರಿಕೆಗೆ ಪೂರಕವಾಯಿತು.

Leave a Reply

Your email address will not be published. Required fields are marked *