ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ, ಜುಲೈ 12:
“ದೇಶದಲ್ಲಿ ಜಿ.ಎಸ್.ಟಿ ಬಡವರಿಗೆ ತೊಂದರೆ ತಂದಿದ್ದು, ಸಾಹುಕಾರರಿಗೆ ಮಾತ್ರ ಲಾಭವಾಗಿದೆ” ಎಂಬುದಾಗಿ ಕಾರ್ಮಿಕ ಇಲಾಖೆಯ ಸಚಿವ ಸಂತೋಷ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಡತನ ನಿರ್ಮೂಲನೆಯಾಗಿದೆ ಎಂದು ಹೇಳಿದರೆ, ನಿತಿನ್ ಗಡ್ಕರಿ ಬಡತನ ಹೆಚ್ಚುತ್ತಿದೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ತೋಳಿನಿಂದ ತೆಂಗು ಕೀಳಿ ಹಾಲು ತೆಗೆದರೂ ಅದರ ಮೇಲೆ ಜಿ.ಎಸ್.ಟಿ ಹಾಕುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
📌 ಜಿ.ಎಸ್.ಟಿ ಯಿಂದ ಬಡವರಿಗೆ ಭಾರ:
“ಹಾಲು, ಮೊಸರು, ಅರಿಶಿಣ, ಅಕ್ಕಿ ಇತ್ಯಾದಿ ಬಳಕೆಯ ದಿನಸಿ ವಸ್ತುಗಳ ಮೇಲೂ ಜಿ.ಎಸ್.ಟಿ ವಿಧಿಸಿರುವುದು ಶೇ. 60-70ರಷ್ಟು ಜನರು ನೇರವಾಗಿ ಹೊರುವ ತೆರಿಗೆ. ಇದು ನ್ಯಾಯಸಮ್ಮತವಲ್ಲ” ಎಂದು ಲಾಡ್ ಹೇಳಿದರು.
🏦 ಸಾಹುಕಾರರಿಗೆ ಸಾಲಮನ್ನಾ: ಬಡವರಿಗೆ ಏನು?
ಸಂತೋಷ ಲಾಡ್ ಅವರು ಮುಂದುವರೆದು, “ದೇಶದಲ್ಲಿ 16 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ಸಾಹುಕಾರರಿಗೆ ಮನ್ನಾ ಮಾಡಲಾಗಿದೆ. ಆದರೆ ರೈತರು, ಬಡವರು, ಮಧ್ಯಮ ವರ್ಗಕ್ಕೆ ಈ ಅನುಕೂಲ ಸಿಕ್ಕಿಲ್ಲ,” ಎಂದರು.
💸 ಕ್ಯಾಶ್‌ಲೆಸ್ ಗಿಮಿಕ್: ನಕಲಿ ನೋಟು ಪತ್ತೆ ತರುವುದು ಏನು ಸಾಧನೆ?
26,000 ಕೋಟಿ ರೂ. ಮೌಲ್ಯದ ₹2000 ನೋಟುಗಳು ನಕಲಿ ಎಂದು ಪತ್ತೆಯಾಗಿದೆ
1.14 ಲಕ್ಷ ಕೋಟಿ ರೂ. ಮೌಲ್ಯದ ₹500 ನೋಟುಗಳು ನಕಲಿ ಎಂದು RBI ವರದಿ
ಲಾಡ್ ಹೇಳಿಕೆಯಲ್ಲಿ ವ್ಯಂಗ್ಯ: “ಜನರಿಗೆ ಸುಳ್ಳು ಹೇಳಿ ಚಿತ್ರ ನಿರ್ದೇಶಿಸುತ್ತಿದ್ದಾರೆ!”
🗣️ ಪ್ರಹ್ಲಾದ್ ಜೋಶಿಗೆ ತಿರುಗೇಟು:
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರದ ಅಕ್ಕಿ ಹಂಚುವ ಯೋಗ್ಯತೆ ಇಲ್ಲ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಲಾಡ್,
“ನಾವು ಸಹ ನರೇಗಾ ಯೋಜನೆಗೆ ಹಣ ನೀಡುತ್ತಿಲ್ಲವೆಂದು ಹೇಳಬಹುದೇ? ಈ ರೀತಿ ಮಾತುಗಳಲ್ಲಿ ಚಿಂತನೆಯಿಲ್ಲ” ಎಂದು ಹೇಳಿದರು.
🤐 ಸಿಎಂ ಸಿದ್ಧರಾಮಯ್ಯ ಕುರಿತು:
ಸಂತೋಷ ಲಾಡ್, ಸಿಎಂ ಸಿದ್ದರಾಮಯ್ಯನವರು 5 ವರ್ಷ ಪೂರೈಸುತ್ತಾರೆ ಎಂಬ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೆ,
“ಆದರೆ ಕಾಂಗ್ರೆಸ್ ಶಾಸಕರು ಬೇರೆ ಬಗೆಯ ಹೇಳಿಕೆ ನೀಡದಂತೆ ಮನವಿ ಮಾಡುತ್ತೇನೆ,” ಎಂದು ಹೇಳಿದರು.