ಸಂಗ್ರಹ: ಸಮಗ್ರ ಸುದ್ದಿ
ಚೆನ್ನೈ, ಜುಲೈ 13:
ಇಂದು ಬೆಳಿಗ್ಗೆ ಸುಮಾರು 5:30ರ ಸುಮಾರಿಗೆ ತಿರುವಲ್ಲೂರು ರೈಲು ನಿಲ್ದಾಣದ ಬಳಿ ಡೀಸೆಲ್ ಸಾಗಿಸುತ್ತಿದ್ದ ಸರಕು ರೈಲಿನ ನಾಲ್ಕು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ವರದಿಯಾಗಿದೆ. ಬೆಂಕಿ ಕ್ರಮೇಣ 22 ಬೋಗಿಗಳಿಗೆ ವಿಸ್ತರಿಸಿದೆ. ಈ ಘಟನೆ ಸುತ್ತಮುತ್ತಲಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ.
ಅಗ್ನಿಶಾಮಕ ದಳಗಳ ಸಮಯೋಚಿತ ಕಾರ್ಯಾಚರಣೆ:
ಅಗ್ನಿಶಾಮಕ ಹಾಗೂ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ತೀವ್ರ ಪ್ರಯತ್ನದ ಮೂಲಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ಡೀಸೆಲ್ ಇದ್ದ ಕಾರಣ ಬೆಂಕಿಯನ್ನು ನಂದಿಸುವುದು ಕಠಿಣವಾಗಿದ್ದರೂ, ಯಾವುದೇ ಜೀವಹಾನಿಯಿಲ್ಲದೆ ಕಾರ್ಯಾಚರಣೆ ಯಶಸ್ವಿಯಾಯಿತು.
ಪೊಲೀಸ್ ಅಧೀಕ್ಷಕ ಎ. ಶ್ರೀನಿವಾಸ ಪೆರುಮಾಳ್ ಹೇಳಿದರು:
“ರೈಲನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಯಾವುದೇ ಜೀವಕ್ಕೆ ಅಪಾಯವಿಲ್ಲ.”
ಅಗ್ನಿಶಾಮಕ ಇಲಾಖೆ ಮುಖ್ಯಸ್ಥೆ ಸೀಮಾ ಅಗರ್ವಾಲ್ ಅವರು ಮಾಹಿತಿ ನೀಡಿದರು:
“ಡೀಸೆಲ್ ಇರುವ ಕಾರಣ ಕಾರ್ಯಾಚರಣೆ ಅತ್ಯಂತ ಸವಾಲಿನದಾಗಿತ್ತು. ಆದರೆ ನಮ್ಮ ಸಿಬ್ಬಂದಿ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ.”
ರೈಲು ಸಂಚಾರ ಅಸ್ತವ್ಯಸ್ತ:
ಘಟನೆಯ ಪರಿಣಾಮವಾಗಿ ಚೆನ್ನೈ ಕಡೆಗೆ ಹಾಗೂ ಅಲ್ಲಿಂದ ಹೊರಡುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ರೈಲ್ವೆ ಇಲಾಖೆಯು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸಲು ಕ್ರಮ ತೆಗೆದುಕೊಳ್ಳುತ್ತಿದೆ. ದಕ್ಷಿಣ ರೈಲ್ವೆ ಇಲಾಖೆ ಶೀಘ್ರದಲ್ಲೇ ಅಧಿಕೃತ ಹೇಳಿಕೆ ನೀಡಲಿದೆ.
ಮುನ್ನೆಚ್ಚರಿಕಾ ಕ್ರಮಗಳು:
ಮನಾಲಿಯಿಂದ ತಿರುಪತಿಯತ್ತ ತೆರಳುತ್ತಿದ್ದ ರೈಲಿನಲ್ಲಿ ತಿರುವಲ್ಲೂರು ರೈಲು ನಿಲ್ದಾಣದ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಹತ್ತಿರದ ಪ್ರದೇಶದ ನಿವಾಸಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಲಾಗಿದೆ. ಬೆಂಕಿ ಉಂಟಾದ ನಿಖರ ಕಾರಣವನ್ನು ತಿಳಿಯಲು ತನಿಖೆ ನಡೆಯುತ್ತಿದೆ.