ಎಸ್‌ಬಿಐ ಲೈಫ್ ಗೆ ವಿಜೇತರ ಕಿರೀಟ; ಕೆಳಗೋಟೆ ಕಿಂಗ್ ದ್ವಿತೀಯ ಸ್ಥಾನ.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ: ಜುಲೈ 14, 2025

ಚಿತ್ರದುರ್ಗ ಸ್ಪೋಟ್ರ್ಸ್ ಕ್ಲಬ್, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ಬೆಂಗಳೂರು) ಮತ್ತು ಚಿತ್ರದುರ್ಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ನಗರದ ಹಳೆಯ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ 25 ವರ್ಷದೊಳಗಿನ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್ ಸೀಜನ್-4 (2025) ಸ್ಪರ್ಧೆಯಲ್ಲಿ ಎಸ್.ಬಿ.ಐ. ಲೈಫ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕೆಳಗೋಟೆ ಕಿಂಗ್ ತಂಡ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದೆ.

ಮೂರು ದಿನಗಳ ಕಾಲ ನಡೆದ ಈ ಕಬಡ್ಡಿ ಹೋರಾಟದಲ್ಲಿ ರಾಜ್ಯದ 6 ಪ್ರಮುಖ ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯ ಅಂತಿಮ ಹಂತದಲ್ಲಿ ನಡೆದ ಹೆಬ್ಬಾಗಣೆಯ ಪಂದ್ಯದಲ್ಲಿ ಎಸ್.ಬಿ.ಐ. ಲೈಫ್ 27 ಅಂಕಗಳಿಸಿ, ಕೆಳಗೋಟೆ ಕಿಂಗ್ 15 ಅಂಕಗಳಷ್ಟೇ ಗಳಿಸಿತು, ಪರಿಣಾಮವಾಗಿ ಎಸ್‌ಬಿಐ ಲೈಫ್ ಪ್ರಥಮ ಸ್ಥಾನಕ್ಕೆ ತಲುಪಿತು.

** ಬಹುಮಾನಗಳ ವಿವರಗಳು:**

1ನೇ ಸ್ಥಾನ – ಎಸ್.ಬಿ.ಐ. ಲೈಫ್: ₹50,000 ನಗದು ಮತ್ತು ಪಾರಿತೋಷಕ

2ನೇ ಸ್ಥಾನ – ಕೆಳಗೋಟೆ ಕಿಂಗ್: ₹30,000 ನಗದು ಮತ್ತು ಪಾರಿತೋಷಕ

3ನೇ ಸ್ಥಾನ – ರಾಯರಸೇನೆ: ₹20,000 ನಗದು ಮತ್ತು ಪಾರಿತೋಷಕ

4ನೇ ಸ್ಥಾನ – 7 ಸ್ಟಾರ್ ಬಳ್ಳಾರಿ: ₹10,000 ನಗದು ಮತ್ತು ಪಾರಿತೋಷಕ

5ನೇ ಸ್ಥಾನ – ಚಿತ್ರದುರ್ಗ ಸ್ಪೋಟ್ರ್ಸ್ ಕ್ಲಬ್: ₹5,000 ನಗದು ಮತ್ತು ಪಾರಿತೋಷಕ

6ನೇ ಸ್ಥಾನ – ಸರ್ಕಲ್ ಅಡ್ಡ: ₹5,000 ನಗದು ಮತ್ತು ಪಾರಿತೋಷಕ

ವೈಯಕ್ತಿಕ ಪ್ರಶಸ್ತಿಗಳು:

ಉತ್ತಮ ಹಿಡಿತಗಾರ: ಆಕರ್ಷ ಗೌಡ (ಎಸ್.ಬಿ.ಐ. ಲೈಫ್)

ಉತ್ತಮ ಧಾಳಿಗಾರ: ಧನುಷ್ (ಕೆಳಗೋಟೆ ಕಿಂಗ್)

ಪಂದ್ಯದ ಸರ್ವೋತ್ತಮ ಆಟಗಾರ: ಕಿರಣಗೌಡ (ಎಸ್.ಬಿ.ಐ. ಲೈಫ್)

ಅತಿಥಿಗಳು ಮತ್ತು ವಿಶೇಷ ಆಮಂತ್ರಿತರು:

ಅಂತಿಮ ಪಂದ್ಯಾವಳಿಯನ್ನು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಸಂಸದ ಗೋವಿಂದ ಕಾರಜೋಳ, ಬಿಜೆಪಿ ಜಿಲ್ಲಾ ಅಧ್ಯಕ್ಷ ಮುರುಳಿ, ಬಾವಿ ಅಧ್ಯಕ್ಷ ಕುಮಾರಸ್ವಾಮಿ, ಖಂಜಾಚಿ ಮಾಧುರಿ ಗೀರಿಶ್, ಸಮಾಜವಾದಿ ಪಕ್ಷದ ಲಕ್ಷ್ಮೀಕಾಂತ್, ನಗರಸಭಾ ಸದಸ್ಯ ಮೊಹಮ್ಮದ್ ಜೈಲುದ್ದೀನ್, ಹಿರಿಯ ಕಬಡ್ಡಿ ಆಟಗಾರ ಉಮೇಶ್, ನಿವೃತ್ತ ಡಿವೈಎಸ್‌ಪಿ ಅಬ್ದುಲ್ ರಹಮಾನ್ ಮತ್ತು ಶಿವಲಿಂಗಪ್ಪ ವೀಕ್ಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಟಿ.ಕೆ. ಬಸವರಾಜು ವಹಿಸಿದ್ದರು. ಆಯೋಜನೆಯನ್ನು ಕಬಡ್ಡಿ ಕ್ರೀಡಾಪಟು ಮರುಗೇಶ್ ಮಾಡಿದ್ದರು. ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಸುರೇಶ್ ನಾಯ್ಕ್, 7 ಸ್ಟಾರ್ ಬಳ್ಳಾರಿ ತಂಡದ ಮಾಲಿಕ ಆಗ್ರಹಾರ ಗೋವಿಂದ, ಕೆಳಗೋಟೆ ಕಿಂಗ್ ಮಾಲಿಕ ದೇವರಾಜ್, ಎಸ್.ಬಿ.ಐ. ಲೈಫ್ ತಂಡದ ಚಂದ್ರಶೇಖರ್, ಸರ್ಕಲ್ ಅಡ್ಡದ ಪ್ರಜ್ವಲ್, ರಾಯರಸೇನೆಯ ಮಧು-ಶ್ರೀನಿವಾಸ್ ಹಾಗೂ ಚಿತ್ರದುರ್ಗ ಸ್ಪೋಟ್ರ್ಸ್ ಕ್ಲಬ್‌ನ ನಾಗಭೂಷಣ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *