ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ನಿಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಿ.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಜು. 18 
ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ನಿಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಿ, ಉನ್ನತ ಸ್ಥಾನದಲ್ಲಿದ್ಧಾಗ ಸಮಾಜ ಹಾಗೂ ಮಠ ಮಾಡಿದ ಸೇವೆಯನ್ನು ಮರೆಯದೇ ಬೇರೆಯವರಿಗೆ ನಿಮ್ಮ ಕೈಲಾದ ಸೇವೆಯನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶಿವರಾಜ್ ತಂಗಡಗಿ ಕರೆ ನೀಡಿದರು. 
ನಗರದ ಹೊರ ವಲಯದ ಭೋವಿ ಗುರುಪೀಠದಲ್ಲಿ ಶುಕ್ರವಾರ ನಡೆದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 27ನೇ ಲಾಂಛನ ದೀಕ್ಷಾ ಮಹೋತ್ಸವ, 40ನೇ ವಸಂತೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಧೂ-ವರರ ಸಮಾವೇಶ, ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಇಂದಿನ ದಿನಮಾನದಲ್ಲಿ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡಿ ಸಿಹಿಯನ್ನು ಹಂಚಿದರೆ ನಮ್ಮ ಇಮ್ಮಡಿ ಶ್ರೀಗಳು ತಮ್ಮ ಹುಟ್ಟು ಹಬ್ಬದ ದಿನದಂದು ಪ್ರತಿಭಾವಂತ ಮಕ್ಕಳನ್ನು ಕರೆಯಿಸಿ ಅವರಿಗೆ ಸ್ಕಾಲರ್ ಶಿಪ್ ಹಾಗೂ ಸನ್ಮಾನವನ್ನು ಮಾಡಿ ಶಿಕ್ಷಣಕ್ಕೆ ಸಹಾಯವಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಸಂತೋಷವನ್ನು ಉಂಟು ಮಾಡಿದೆ ಎಂದರು.


ನಮ್ಮ ಸಮಾಜದ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಬೇಕಿದೆ. ಯಾವೂತ್ತು ನಾವು ಶಿಕ್ಷಣವಂತರಾಗುತ್ತೇವೆ ಅಂದು ನಮ್ಮ ಸಮಾಜ ಅಭೀವೃದ್ದಿಯಾಗುವ ಸಾಧ್ಯತೆ ಇದೆ. ಅಂಬೇಡ್ಕರ್ ರವರು ನಿಡಿದ ಸಂದೇಶದಂತೆ ಶಿಕ್ಷಣ, ಹೋರಾಟ ಸಂಘಟನೆಯಿಂದ ಮಾತ್ರ ನಮ್ಮ ಅಭೀವೃದ್ದಿಯಾಗಲು ಸಾಧ್ಯವಿದೆ ಎಂದಿದ್ದಾರೆ ಇದನ್ನು ನಾವುಗಳು ನಮ್ಮ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕಿದೆ. ನಾನು ಸಹಾ ಸಮಾಜದ ಸಂಘಟನೆಯಿಂದಲೇ ರಾಜಕೀಯ ಜೀವನವನ್ನು ಪ್ರಾರಂಭ ಮಾಡಲಾಗಿದೆ ಈ ಹಿಂದೆ ನಮ್ಮಲ್ಲಿ ಸಂಘಟನೆ ಇರಲಿಲ್ಲ ನಮ್ಮ ಬೆನ್ನಿಗೆ ಯಾವ ಮಠಗಳು ಸಹಾ ಇರಲಿಲ್ಲ, ಆಗ ಅರಿವು, ಹೋರಾಟ, ಶಿಕ್ಷಣದ ಕೊರತೆ ಇತ್ತು, ಈ ಹಿನ್ನಲೆಯಲ್ಲಿ ಮಠವನ್ನು ಸ್ಥಾಪನೆ ಮಾಡುವುದರ ಮೂಲಕ ಸಂಘಟಿತರಾಗಲು ಮುಂದಾದವೇ, ಈ ಹಿಂದೆ ನಮ್ಮನ್ನು ಯಾರೂ ಸಹಾ ಕೇಳುವವರಿಲ್ಲ, ಆದರೆ ಈಗ ಸಮಾಜ ಸಂಘಟನೆಯ ಜೊತೆಗೆ ಶಿಕ್ಷಣದ ಅರಿವು ಸಹಾ ಆಗುತ್ತಿದೆ ಎಂದರು.
ಇಂದಿನ ಇಮ್ಮಡಿ ಶ್ರೀಗಳನ್ನು ನಮ್ಮ ಮಠಕ್ಕೆ ಸ್ವಾಮಿಗಳಾಗಿ ಮಾಡಬೇಕಾದರೆ ಹಲವಾರು ಅಡೆ ತಡೆಗಳು ಬಂದವು ನಮ್ಮ ಮೇಲೆ ಹಾಗೂ ಆರವಿಂದ ಲಿಂಬಾವಳಿ ಮೇಲೆ ಕೇಸ್‍ಗಳನ್ನು ಹಾಕಲಾಯಿತು ನಮ್ಮ ಮೇಲೆ ಕೇಸ್ ಹಾಕಿದರು ಪರವಾಗಿಲ್ಲ ನಮ್ಮ ಸಮಾಜ ಸಂಘಟನೆ ಮುಖ್ಯ ಎಂದು ಅವುಗಳನ್ನು ಎದುರಿಸಲಾಯಿತು. ಅಂದೇ ನಿರ್ಧಾರವನ್ನು ಮಾಡಿ ನಮ್ಮ ಸಮಾಜ ಎಚ್ಚರವಾಗುತ್ತದೆ ಎಂಬ ನಂಬಿಕೆ ಇತ್ತು ಈಗ ಅದರಂತೆ ಆಗಿದೆ ನಮ್ಮ ಸಮಾಜ ಎಚ್ಚರಗೊಂಡಿದೆ ಶಿಕ್ಷಣವಂತರಾಗಿದ್ದಾರೆ ಎಂದ ಅವರು, ಭೋವಿ ಸಮಾಜ ಸಂಘಟನೆಯಾಗುತ್ತಿದೆ ಎಂಬ ನಂಬಿಕೆ ಬೇರೆ ಸಮುದಾಯದಲ್ಲಿಯೂ ಕಂಡು ಬರುತ್ತಿದೆ, ಬೇರೆ ಸಮಾಜವನ್ನು ಪ್ರೀತಿ ವಿಶ್ವಾಸದಿಂದ ನೋಡಿದರೆ ಅವರು ಸಹಾ ನಮ್ಮನ್ನು ಅವರು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇದರಿಂದ ಚುನಾವಣೆಯಲ್ಲಿ ನಮ್ಮ ಸಮುದಾಯದವರು ಗೆಲ್ಲುತ್ತಿದ್ದಾರೆ ಇದ್ದೆಲ್ಲಾ ಬೇರೆಯವರ ಸಮಾಜದ ಕಾಣಿಕೆಯಾಗಿದೆ ಎಂದು ಸಚಿವರು ತಿಳಿಸಿದರು.


ನಮ್ಮ ಸಮಾಜದ ಬಾಂಧವರು ಬೇರೆಯವರಿಗೆ ಮಾತನ್ನು ಕೂಡುವುದಿಲ್ಲ ಆದರೆ ಒಮ್ಮೆ ಮಾತನ್ನು ಕೂಟ್ಟರೆ ಆಯಿತು ಅವರನ್ನು ಜೀವ ಇರುವವರೆಗೂ ಕಾಯುತ್ತೇವೆ. ಕಲ್ಲು ಬಂಡೆಯತೆ ರಕ್ಷಣೆಯನ್ನು ಮಾಡಲಾಗುತ್ತದೆ. ನಮ್ಮ ಸಮಾಜ ಬೇರೆ ಸಮಾಜದವರೊಂದಿಗೆ ಬೆರತು ಅವರ ಪ್ರೀತಿ ವಿಶ್ವಾಸವನ್ನು ಗಳಿಸುವಂತ ಕೆಲಸವನ್ನು ಮಾಡಲಾಗುತ್ತಿದೆ. ಇಲ್ಲಿಗೆ ಬಂದವರು ಸುಮ್ಮನೆ ಕಾರ್ಯಕ್ರಮ ನೋಡಿಕೊಂಡು ಉಟವನ್ನು ಮಾಡಿ ಹೋಗುವುದಲ್ಲ ಬಂದವರೆಲ್ಲಾ ಮಠಕ್ಕೆ ಕಾಣಿಕೆಯನ್ನು ನೀಡುವುದರ ಮೂಲಕ ಸಹಾಯವನ್ನು ಮಾಡಬೇಕಿದೆ ಎಂದ ಸಚಿವರು, ಈಗ ನಮ್ಮ ಬೆನ್ನ ಹಿಂದೆ ಗುರುಗಳು ಇದ್ದಾರೆ ನಮ್ಮ ಮುಂದೆ ಗುರಿ ಇರಬೇಕಿದೆ. ನಮ್ಮ ಸಮಾಜ ಶಿಕ್ಷಣವನ್ನು ಪಡೆಯಬೇಕಿದೆ. ನಾವು ಹೋರಾಟಕ್ಕೆ ಇಳಿಯಬೇಕಿದೆ. ಸಂಘಟನೆಯನ್ನು ಮಾಡಬೇಕಿದೆ ಈ ಮೂರು ಕಡೆಯಿಂದ ನಮ್ಮ ಸಮಾಜ ಬಲಗೂಳ್ಳಬೇಕಿದೆ ಎಂದು ಶಿವರಾಜ್ ತಿಳಿಸಿದರು. 


ಶಾಸಕರಾದ ಮಾನಪ್ಪ ವಜ್ಜಲ್ ಮಾತನಾಡಿ, ಭೋವಿ ಸಮಾಜದ ಶ್ರೀಗಳು ಸಮಾಜದ ಯಾವುದೇ ಕಾರ್ಯಕ್ರಮವಾದರೂ ಸಹಾ ತಪ್ಪದೆ ಭಾಗವಹಿಸುತ್ತಾರೆ. ಭಕ್ತರ ಮನೆಗಳಿಗೆ ಭೇಟಿ ನೀಡುವುದರ ಮೂಲಕ ಹಗಲು ರಾತ್ರಿ ಎನ್ನದೆ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಸಮಾಜವನ್ನು ಸಂಘಟಿಸುತ್ತಿದ್ದಾರೆ, ಭೋವಿ ಸಮಾಜ ಇಷ್ಟು ಬಲಿಷ್ಠವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ, ಬೆಳೆಯಲು ಶ್ರೀಗಳ ಪರಿಶ್ರಮ ಕಾರಣವಾಗಿದೆ. ಗುರುಗಳು ನಮಗೆ ಏನು ಮಾಡಿಲ್ಲ ಎನ್ನದೆ ಗುರುಗಳಿಗಾಗಿ ನಾವು ಏನು ಮಾಡಿದ್ದೇವೆ ಎಂದು ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಿದೆ. ಭೋವಿ ಸಮಾಜವನ್ನು ಒಂದು ಕಡೆಯಲ್ಲಿ ಕೂಡಿಸಬೇಕೆಂಬ ದೃಷ್ಟಿಯಿಂದ ಅವರ ಹುಟ್ಟು ಹಬ್ಬದ ನೆಪದಲ್ಲಿ ನಾವೆಲ್ಲಾ ಸಂಘಟಿತರಾಗುತ್ತಿದ್ದೇವೆ ಎಂದರು. 
ದೇವರಾಜು ಅರಸ್ ವಿದ್ಯಾ ಸಂಸ್ಥೆಯ ಸಿಇಓ ರಘುಚಂದನ್ ಮಾತನಾಡಿ, ನಮ್ಮ ಭೋವಿ ಸಮಾಜ ಈ ಹಿಂದೆ ಎಲ್ಲಿ ಇತ್ತು ಎಂಬುದಾಗಿ ಹುಡುಕಬೇಕಿತ್ತು ಆಗ ನಮಗೆ ಯಾರ ಬೆಂಬಲವೂ ಇರಲಿಲ್ಲ ರಾಜಕೀಯವಾಗಿ ನಮ್ಮವರು ಯಾರೂ ಸಹಾ ಇರಲಿಲ್ಲ, ನಾವು ಸಂಘಟಿತರಾಗುವುದರ ಮೂಲಕ ನಮ್ಮ ಶಕ್ತಿಯ ಪ್ರದರ್ಶನವನ್ನು ಮಾಡಬೇಕಿದೆ. ಕೋಟೆಗಳು ಇತಿಹಾಸವನ್ನು ಹೇಳುತ್ತೇವೆ ಆದರೆ ಕೋಟೆಯನ್ನು ಕಟ್ಟಿದವರು ನಾವು ಎಂಬುದನ್ನು ತಿಳಿಸಬೇಕಿದೆ. ನಮ್ಮ ಮಕ್ಕಳು ಶಿಕ್ಷಣವನ್ನು ಪಡೆಯುವುದರ ಮೂಲಕ ಜೀವನದಲ್ಲಿ ಉನ್ನತವಾದ ಸ್ಥಾನವನ್ನು ಪಡೆಯಬೇಕಿದೆ. ನಮ್ಮ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ಸಹಾ ಸಹಾಯ ಸಿಗುವಂತಾಗಬೇಕಿದೆ ಎಂದರು.


ಸಮಾರಂಭದ ಸಾನಿಧ್ಯವನ್ನು ವಹಿಸಿದ್ದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಯವರು ಮಾತನಾಡಿ, ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಯಾರಿಗೆ ಅಕ್ಷರ ಪ್ರಜ್ಞೆ ಇದ್ದೆಯ ಅವರು ಇತಿಹಾಸವನ್ನು ಬರೆದುಕೊಂಡಿದ್ದಾರೆ, ಯಾವ ಸಮುದಾಯಗಳು ಕಾಯಕ ಶ್ರಮವನ್ನು ನಂಬಿ ಬೆವರನ್ನು ಸುರಿಸುತ್ತಾ ಅಕ್ಷರದ ಪ್ರಜ್ಞೆಯನ್ನು ಕಳೆದುಕೊಂಡಿದ್ದರೂ ಅವರಿಗೆ ಭವ್ಯವಾದ ಇತಿಹಾಸ ಇದ್ದರೂ ಸಹಾ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳಲಾಗಿಲ್ಲ, ಕೋಟೆ, ಡ್ಯಾಂ, ಕಟ್ಟಡಗಳನ್ನು ನಿರ್ಮಾಣ ಮಾಡಿದವರು ವಡ್ಡರೇ ಆಗಿದ್ದರೂ ಸಹಾ ಇತಿಹಾಸವನ್ನು ಉಳಿಸಿಕೊಳ್ಳಲು ಬರೆಸಿಕೊಳ್ಳಲಾಗಿಲ್ಲ, ನಮ್ಮ ಇತಿಹಾಸವನ್ನು ನಾಮೇ ಬರೆಯಬೇಕಾದರೆ ನಾವು ಅಕ್ಷರದ ವಾರಸುದಾರಿಕೆಯನ್ನು ಪಡೆಯವುದು ಅಗತ್ಯವಾಗಿದೆ. ಅಕ್ಷರ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕಿದೆ ಎಂದರು.


ಭೋವಿ ಗುರು ಪೀಠ ಶಿಕ್ಷಣಕ್ಕೆ ಪ್ರಥಮವಾದ ಆದ್ಯತೆಯನ್ನು ನೀಡುವುದರ ಮೂಲಕ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣಕ್ಕೆ ಮುಂದಾಗಿದೆ. ನಮ್ಮ ಸಮಾಜದಿಂದ ಪ್ರತಿಭಾ ಪುರಸ್ಕಾರಕ್ಕೆ ಶೇ 90 ರಷ್ಟು ಅಂಕಗಳನ್ನು ಪಡೆದ 600 ಮಕ್ಕಳನ್ನು ಸನ್ಮಾನಿಸಲಾಗುತ್ತಿದೆ. ಈಗ ಸಮುದಾಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಅಕ್ಷರದ ಜಾಗೃತಿಯಾಗುತ್ತಿದೆ ಎಂದ ಶ್ರೀಗಳು ಶಿಕ್ಷಣವನ್ನು ಪಡೆದವರೆಲ್ಲಾ ಸರ್ಕಾರದ ಉದ್ಯೋಗ ಸಿಗುತ್ತದೆ ಎಂಬ ನಂಬಿಕೆ ಇಲ್ಲ, ಈ ಹಿನ್ನಲೆಯಲ್ಲಿ ಶಿಕ್ಷಣವನ್ನು ಕಲಿತವರು ಸರ್ಕಾರದ ಉದ್ಯೋಗವನ್ನು ಕಾಯದೇ ನಮ್ಮ ಕಾಲ ಮೇಲೆ ನಾವು ನಿಲ್ಲುವಂತ ಕಾರ್ಯವಾಗಬೇಕಿದೆ.  ಸರ್ಕಾರದಿಂದ ಉದ್ಯೋಗದ ನೆಪದಲ್ಲಿ ವೇತವನ್ನು ಪಡೆಯದೇ ಸರ್ಕಾರದ ಖಜಾನೆಯನ್ನು ತುಂಬಿಸುವಂತ ಕಾರ್ಯವಾಗಬೇಕಿದೆ. ಈ ಜಗತ್ತಿನಲ್ಲಿ ಹಣ ಮತ್ತು ಅಧಿಕಾರಕ್ಕೆ ಬಹಳ ಗೌರವಯಿದೆ. ನಿಮ್ಮ ಕೌಶಲ್ಯವನ್ನು ಬಳಸಿ ಉದ್ದಿಮೆಯನ್ನು ಸ್ಥಾಪನೆ ಮಾಡಿದಾಗ ಬೇರೆಯವರು ನಿಮ್ಮ ಬಳಿ ಬರುತ್ತಾರೆ ಎಂದು ಶ್ರೀಗಳು ತಿಳಿಸಿದರು.
ಹುಟ್ಟು ಬಡತನ ಇರಬಹುದು ಆದರೆ ಬಡವನಾಗಿ ಸಾಯುವುದು ತುಂಬ ತಪ್ಪಾಗುತ್ತದೆ ಕಾಯಕ ಪ್ರಜ್ಞೆಯಿಂದ ಬೆಳೆಯವ ಕಾರ್ಯವನ್ನು ಮಾಡಿದಾಗ ಅ ಸಮಾಜ ಬೆಳೆಯುತ್ತಾ ಹೋಗುತ್ತದೆ. ಸರ್ಕಾರ ಕಲಿಯವ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸ್ಕಾಲರ್ ಶಿಪ್‍ನ್ನು ನೀಡುವಂತ ಕಾರ್ಯವನ್ನು ಮಾಡಿ ಮಕ್ಕಳ ಶಿಕ್ಷಣಕ್ಕೆ ದಾರಿ ದೀಪವಾಗಬೇಕಿದೆ. ಇಲ್ಲವಾದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಇದರ ಬಗ್ಗೆ ಸರ್ಕಾರ ಆಲೋಚನೆಯನ್ನು ಮಾಡಿ ಸಕಾಲಕ್ಕೆ ಸರಿಯಾಗಿ ಮಕ್ಕಳಿಗೆ ಸ್ಕಾಲರಶಿಪ್ ತಲುವುವಂತ ಕಾರ್ಯಾ ವಾಗಬೇಕಿದೆ.

ನಮ್ಮ ಮಠಕ್ಕೆ ಉತ್ತಮವಾದ ಶಿಷ್ಯರು ಸಿಕ್ಕಿದ್ದಾರೆ. ನಮ್ಮ ಪುಣ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ್ ಮುಖಂಡರಾದ ರವಿ ಮಾಕಳಿ, ಆನಂದಪ್ಪ, ಮಂಜುನಾಥ ಪ್ರಸಾದ್, ಸಂಸದರಾಧ ತುಕಾರಂ, ಭೋವಿ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಸಾಹಿತಿಗಳಾದ ಸಿದ್ದರಾಮಯ್ಯ, ಮಾಜಿ ಶಾಸಕರಾದ ನಾರಾಯಣಸ್ವಾಮಿ, ಮುನಿರಾಮಪ್ಪ, ನೇರ್ಲಗುಂಟೆ ರಾಮಪ್ಪ, ಚಿಕ್ಕಂದವಾಡಿ ತಿಪ್ಪೇಸ್ವಾಮಿ, ಜಯ್ಯಣ್ಣ, ಸೇರಿದಂತೆ ಇತರರು ಭಾಗವಹಿಸಿದ್ದರು. 

Leave a Reply

Your email address will not be published. Required fields are marked *