ಭೀಮಸಮುದ್ರ.ಸಮೀಪದ
ಚಿತ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಕೊಟ್ಟಡಿ ಗುದ್ದಲಿ ಪೂಜೆ ಕಾರ್ಯಕ್ರಮ ನೆರವೇರಿಸಿ ಹೊಳಲ್ಕೆರೆ ತಾಲೂಕಿನ EO ಶ್ರೀನಿವಾಸ್ ಮಾತನಾಡಿ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ ಆದುದರಿಂದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಉತ್ತಮ ಇತ್ತೀಚಿಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕರ್ನಾಟಕದಲ್ಲಿ 4134. ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಪ್ರಾರಂಭಿಸಿದೆ.

ದಿನ ದಿನಗಳಲ್ಲಿ ಯುಕೆಜಿ ಹಾಗೂ ಎಲ್ ಕೆ ಜಿ ಪ್ರಾರಂಭ ಮಾಡುವ ಭರವಸೆ ಇದೆ ಆದುದರಿಂದ ಮಕ್ಕಳನ್ನುಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಿದರು
ಸಮಾಜಸೇವಕರಾದ ಜಿ ಎಂ ಲವಕುಮಾರ್ ಮಾತನಾಡಿ ಚಿತ್ರಹಳ್ಳಿ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದೇನೆ ಮಕ್ಕಳಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡುತ್ತಿದ್ದೇವೆ ಹೊಳಲ್ಕೆರೆ ಶಾಸಕರಾದ ಡಾಕ್ಟರ್ M ಚಂದ್ರಪ್ಪನವರು ಶಾಲೆಗೆ ಸಾಕಷ್ಟು ಅನುದಾನ ನೀಡಿದ್ದಾರೆ ಹಾಗೆಯೇ ಇಂದು ಕೂಡ ಎರಡು ಕೊಟ್ಟಡಿಗೆ 20 ಲಕ್ಷದ ರೂಗಳನ್ನು ನೀಡಿದ್ದಾರೆ
ಚಿತ್ರಹಳ್ಳಿ ಗ್ರಾಮದ ಸುತ್ತಮುತ್ತಲಿರುವ ಯಾವುದೇ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದೆಂದು ಸರ್ಕಾರಿ ಶಾಲೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಈ ಶಾಲೆಯನ್ನು ದತ್ತು ಪಡಿತ್ತಿದ್ದೇನೆ ಖಾಸಗಿ ಶಾಲೆಗಳಿಗೆ ಸೇರಿಸುವುದಕ್ಕಿಂತ ನಮ್ಮ ಸರ್ಕಾರಿ ಶಾಲೆಗೆ ಸೇರಿಸಿದರೆ ಉತ್ತಮ ಶಿಕ್ಷಣ ಸಿಗುತ್ತದೆ ಎಂದು ತಿಳಿಸಿದರು
ಶಾಲಾ ಕೊಟ್ಟಡಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಹೊಳಲ್ಕೆರೆ EO ಶ್ರೀನಿವಾಸ್ ಜಿ ಎಂ ಲವಕುಮಾರ್ ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿವ್ಯ ಜ್ಯೋತಿ ಮುಖ್ಯ ಉಪಾಧ್ಯಾಯರಾದ ಗಾಯತ್ರಿ ಪ್ರಭಾಕರ್ ಗ್ರಾಮ ಪಂಚಾಯತಿ ಸದಸ್ಯರಾದ ಜಿಎಂ ಕಾಂತರಾಜ್ ಮಲ್ಲಿಕಾರ್ಜುನ್ ಮಂಜುನಾಥ್ ಎಂ ಆರ್ ನಾಗರಾಜ್ ಶಿಕ್ಷಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಇದ್ದರು