📚 Education:ರಾಜ್ಯದ ಎಸ್ಎಸ್ಎಲ್ಸಿ (SSLC) ಹಾಗೂ ಪಿಯುಸಿ (PUC) ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಪರೀಕ್ಷಾ ವಿಧಾನದಲ್ಲಿ ಮಹತ್ವದ ಬದಲಾವಣೆ ತಂದಿದೆ. ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಪಾಸ್ ಆಗಲು 33% ಅಂಕಗಳೇ ಸಾಕು ಎಂಬ ನಿರ್ಧಾರ ಕೈಗೆತ್ತಲಾಗಿದೆ.
📌 ಕರ್ನಾಟಕ ಸರ್ಕಾರದ ನೂತನ ಕರಡು ನಿಯಮಾವಳಿ ಪ್ರಕಟ:
ರಾಜ್ಯ ಸರ್ಕಾರವು 1983ರ ಕರ್ನಾಟಕ ಶಿಕ್ಷಣ ಕಾಯ್ದೆಯ ಅಧೀನದಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು 2025 ರಿಂದ ಅನ್ವಯವಾಗುವ ಕರಡು ತಿದ್ದುಪಡಿ ನಿಯಮಗಳನ್ನು ಪ್ರಕಟಿಸಿದೆ. ಈ ನಿಯಮಗಳು 2025-26ನೇ ಶೈಕ್ಷಣಿಕ ವರ್ಷದಿಂದ SSLC ಹಾಗೂ II PUC ವಿದ್ಯಾರ್ಥಿಗಳಿಗೆ ಅನ್ವಯವಾಗಲಿವೆ.
📌 ಇನ್ನು ಪಾಸ್ ಆಗಲು 35% ಅಲ್ಲ… ಕೇವಲ 33% ಸಾಕು:
ಕರಡು ನಿಯಮಾವಳಿಯ ಪ್ರಕಾರ, ವಿದ್ಯಾರ್ಥಿಗಳು ಒಟ್ಟು ಅಂಕಗಳಲ್ಲಿ ಶೇಕಡಾ 33% ಅಂಕಗಳನ್ನು ಗಳಿಸಿದರೆ ಪಾಸ್ ಆಗಿರುವಂತೆ ಪರಿಗಣಿಸಲಾಗುತ್ತದೆ.
ಉದಾಹರಣೆಗೆ, ಆಂತರಿಕ ಮೌಲ್ಯಮಾಪನದಲ್ಲಿ 20 ಅಂಕಗಳ ಪೈಕಿ 20 ಅಂಕ ಪಡೆದು, ಲಿಖಿತ ಪರೀಕ್ಷೆಯಲ್ಲಿ ಕನಿಷ್ಟ 13 ಅಂಕ ಪಡೆದರೂ ಪಾಸ್ ಆಗಬಹುದಾಗಿದೆ.
📌 ಅಧಿಕೃತ ಸೂಚನೆ ಏನು ಹೇಳುತ್ತಿದೆ?
✍️ ಸರ್ಕಾರಿ ಪ್ರಕಾರ, ಕನಿಷ್ಠ ಉತ್ತೀರ್ಣ ಶೇಕಡಾವಾರು ಹೀಗಿದೆ:
🔹 ಒಟ್ಟು ಅಂಕಗಳಲ್ಲಿಯೂ 33%
🔹 ಪ್ರತಿಯೊಂದು ವಿಷಯದಲ್ಲೂ ಲಿಖಿತ + ಆಂತರಿಕ ಅಂಕ ಸೇರಿ ಕನಿಷ್ಠ 30%
🔹 80 ಅಂಕಗಳ ಲಿಖಿತ ಪರೀಕ್ಷೆ ಇದ್ದರೆ ಕನಿಷ್ಠ 24 ಅಂಕ ಬೇಕು
🔹 70 ಅಂಕಗಳ ಲಿಖಿತ ಪರೀಕ್ಷೆ ಇದ್ದರೆ ಕನಿಷ್ಠ 21 ಅಂಕ ಬೇಕು
📌 ಪ್ರಾಯೋಗಿಕ ಪರೀಕ್ಷೆಗಳ ನಿಯಮಗಳಲ್ಲೂ ಬದಲಾವಣೆ:
ಪ್ರಾಯೋಗಿಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಗರಿಷ್ಠ ಅಂಕವನ್ನು 30ರಿಂದ 20ಕ್ಕೆ ಇಳಿಸಲಾಗಿದೆ. ಉಳಿದ 10 ಅಂಕಗಳನ್ನು ಹಾಜರಾತಿ ಮತ್ತು ಕಾರ್ಯನಿರ್ವಹಣೆಯ ಆಧಾರದ ಮೇಲೆ ನೀಡಲಾಗುತ್ತದೆ.
➡️ ಈ 10 ಅಂಕ ಪಡೆಯಲು ಈ ಷರತ್ತುಗಳು ಬೇಕು:
✅ ಪ್ರತಿ ವಿಷಯಕ್ಕೆ ಕನಿಷ್ಠ 75% ಹಾಜರಾತಿ
✅ ನಿರ್ದಿಷ್ಟ ಸಂಖ್ಯೆಯ ಪ್ರಯೋಗಗಳು ಪೂರ್ಣಗೊಳಿಸಬೇಕು
✅ ಪ್ರಾಯೋಗಿಕ ದಾಖಲೆ ಪುಸ್ತಕ ಸರಿಯಾಗಿ ನಿಭಾಯಿಸಬೇಕು
✅ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿರಬೇಕು
📌 ಕರಡು ನಿಯಮಗಳ ಕುರಿತಂತೆ ಸಲಹೆ ಮತ್ತು ಆಕ್ಷೇಪಣೆ ಸಲ್ಲಿಸಬಹುದಾ?
ಹೌದು! ಈ ನಿಯಮಗಳ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು 15 ದಿನಗಳೊಳಗೆ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ.
ಯಾರು ಸಲಹೆ ನೀಡಬೇಕೆಂದಿದ್ರೆ, ತಮ್ಮ ಸೂಚನೆಗಳನ್ನು ಈ ವಿಳಾಸಕ್ಕೆ ಕಳುಹಿಸಬಹುದು:
👉 ಸರ್ಕಾರದ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ. ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-560001
🎯 ಉದ್ದೇಶ: ವಿದ್ಯಾರ್ಥಿಗಳ ಮೆಚ್ಚುಗೆ, ಪರೀಕ್ಷಾ ಒತ್ತಡ ಕಡಿತ
ಈ ಹೊಸ ನಿಯಮದಿಂದ ವಿದ್ಯಾರ್ಥಿಗಳಿಗೆ ಪಾಸ್ ಆಗುವುದು ಸುಲಭವಾಗುತ್ತಿದ್ದು, ಅಂಕಗಳ ಒತ್ತಡದಿಂದ ಹೊರಬರಲು ಸಹಾಯವಾಗಲಿದೆ. ಸರ್ಕಾರವು ಈ ಮೂಲಕ ವಿದ್ಯಾರ್ಥಿ ಹಿತದೃಷ್ಟಿಯಿಂದ ಉನ್ನತ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುತ್ತಿದೆ.
📢 ಇದು ಪೋಷಕರಿಗೂ ವಿದ್ಯಾರ್ಥಿಗಳಿಗೊ ವರದಾನ!
ಈ ಬದಲಾವಣೆ SSLC ಮತ್ತು PUC ಪರೀಕ್ಷೆಗಳಲ್ಲಿ ಹೆಚ್ಚಿನ ಪಾಸ್ ಶೇಕಡಾವಾರವನ್ನು ಪಡೆಯಲು ಸಹಾಯಮಾಡಲಿದೆ. ಶಿಕ್ಷಣದಲ್ಲಿ ಸಕಾರಾತ್ಮಕ ಬದಲಾವಣೆಯ ಒಂದು ಹೆಜ್ಜೆ ಎಂದೇ ಹೇಳಬಹುದು.