ಬಯೋಡೀಸಲ್ ಗೆ ಹೆಚ್ಚಿದೆ, ಬೇಡಿಕೆ ಪ್ರತಿ ಜಿಲ್ಲೆಯಲ್ಲೂ ಘಟಕ ಪ್ರಾರಂಭಿಸಲು ಚಿಂತನೆ.

ಚಿತ್ರದುರ್ಗ ಆ. 4 

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ರಾಜ್ಯ ಸರ್ಕಾರ ಬಯೋಡೀಜೆಲ್‌ಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ ಇದರಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಸಹಾ ಇದರ ಘಟಕಗಳನ್ನು ಪ್ರಾರಂಭಿಸುವ ಚಿಂತನೆ ನಡೆದಿದೆ ಎಂದು ಜೈವಿಕ ಇಂಧನ ಅಭೀವೃದ್ದಿ ಮಂಡಳಿಅಧ್ಯಕ್ಷ ಎಸ್.ಇ.ಸುಧೀಂದ್ರ ತಿಳಿಸಿದ್ದಾರೆ. 
ಚಿತ್ರದುರ್ಗ ನಗರದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀಮತಿ ಜಯ್ಯಮ್ಮ ನಿವಾಸಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ನಿಗಮಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಚಿವರಾದ ಪ್ರಿಯಾಂಕ ಖರ್ಗೆಯವರು ಇದರ ಬಗ್ಗೆ ಬಹಳವಾದ ಆಸಕ್ತಿಯನ್ನು ಹೊಂದಿದ್ದಾರೆ. ನಮ್ಮಲ್ಲಿ ಸಿಗುವಂತ ವಿವಿಧ ರೀತಿಯ ತ್ಯಾಜ್ಯ ವಸ್ತುಗಳಿಂದ ಡಿಜೆಲ್ ತಯಾರು ಮಾಡುವ ಬಗ್ಗೆ ಈಗಾಗಲೇ ಸಂಶೋಧನೆಗಳು ನಿಗಮದವತಿಯಿಂದ ನಡೆಯುತ್ತಿದೆ ಇದ್ದಲ್ಲದೆ ಈ ಹಿಂದೆ ನಡೆದ ಸಂಶೋಧನೆಯ ಫಲವಾಗಿ ಡಿಜೆಲ್‌ನ್ನು ತಯಾರು ಮಾಡಿ ನಮ್ಮ ಸರ್ಕಾರದ ವಿವಿಧ ವಾಹನಗಳಿಗೆ ಹಾಕಿ ಓಡಿಸಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯವಾಗುವುದಿಲ್ಲ, ಮಾನವರಿಗೂ ಸಹಾ ಯಾವುದೇ ರೀತಿಯಿಂದಲೂ ಸಹಾ ಹಾನಿಯಾವುದಿಲ್ಲ ಎಂದರು.
ಒಂದು ಕಾಲದಲ್ಲಿ ಮುಚ್ಚುವ ಸ್ಥಿತಿಯಲ್ಲಿದ್ದ ಜೈವಿಕ ಇಂಧನ ಅಭೀವೃದ್ದಿ ಮಂಡಳಿಯನ್ನು ಇದು ಅಗತ್ಯವಾದ ಮಂಡಳಿಯಾಗಿದೆ ಎಂದು ರಾಜ್ಯದಲ್ಲಿ ೨೦೦೯ರ ಪಾಲಿಸಿಯನ್ನು ರಾಷ್ಟ್ರದಲ್ಲಿ ಅಳವಡಿಕೆ ಮಾಡಿಕೊಳ್ಳಲಾಗಿದೆ, ೨೦೧೯ರಲ್ಲಿ ಇದರ ಬಗ್ಗೆ ಕಾನೂನು ಆಗುತ್ತದೆ, ಇದರ ಬಗ್ಗೆ ರಾಜ್ಯದಲ್ಲಿಯೂ ಸಹಾ ಪಾಲಿಸಿಯನ್ನು ಮಾಡಬೇಕೆಂದು ವಿಧಾನಸೌಧಲ್ಲಿ ಇದರ ಬಗ್ಗೆ ಚರ್ಚೆಯನ್ನು ಮಾಡಲಾಗಿದೆ. ಇದರ ಬಗ್ಗೆ ಮಾಡಲಿಸ್ ಅಧ್ಯಕ್ಷರು ಇದರ ಬಗ್ಗೆ ಚರ್ಚೆ ಮಾಡಿ ಮುಂದಿನ ದಿನದಲ್ಲಿ ಇದಕ್ಕೆ ಜೀವ ಇದೆ ಎಂದಿದ್ದಾರೆ. ಇದನ್ನು ನಮ್ಮ ರಾಜ್ಯದಲ್ಲಿ ಅಳವಡಿಕೆ ಮಾಡಿಕೊಡಲು ಮನವಿ ಮಾಡಿದ್ದಾರೆ, ಇದರ ಬಗ್ಗೆ ಬೆಂಗಳೂರಿನಲ್ಲಿ ೮ ಕೋಟಿ ವೆಚ್ಚದಲ್ಲಿ ಸಂಶೋಧನ ಕೇಂದ್ರ ಇದೆ ಇದರಲ್ಲಿ ಬಯೋ ಡಿಜೆಲ್ ತಯಾರಿಕೆಯ ಬಗ್ಗೆ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿರುತ್ತವೆ. ತ್ಯಾಜ್ಯ ವಸ್ತುಗಳಿಂದ ವಿವಿಧ ರೀತಿಯ ಉತ್ಪನ್ನಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು
ಚಿತ್ರದುರ್ಗದಲ್ಲಿ ಜಾಗವನ್ನು ನೀಡಿದರೆ ಇಲ್ಲಿಯೂ ಸಹಾ ಮಂಡಳಿವತಿಯಿಂದ ಸಂಶೋಧನ ಕೇಂದ್ರವನ್ನು ನಿರ್ಮಾಣ ಮಾಡಲಾಗುವುದು. ಇದರ ಬಗ್ಗೆ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಗಮನ ನೀಡಬೇಕಿದೆ. ಜೈವಿಕ ಇಂಧನ ಮುಂದಿನ ದಿನದಲ್ಲಿ ಉಪಯುಕ್ತವಾದ ವಸ್ತುವಾಗಲಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಆಸಕ್ತಿಯನ್ನು ತೋರಿಸಿದ್ದಾರೆ ಇದನ್ನು ರಾಜ್ಯದಲ್ಲಿ ಉತ್ತಮಪಡಿಸುವಂತೆ ಸೂಚನೆಯನ್ನು ನೀಡಿದ್ದಾರೆ ಇದರ ಘಟಕಗಳನ್ನು ರಾಜ್ಯದಲ್ಲಿ ಪ್ರಾರಂಭ ಮಾಡುವಂತೆ ನಿರ್ದೇಶನ ನೀಡಿದ್ದಾರೆ ಎಂದ ಅವರು, ವೆಸ್ಟ್‌ನ್ನು ಸಹಾ ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿ ಅದನ್ನು ಮರು ಬಳಕೆ ಮಾಡುವಂತೆ ಆಗಬೇಕಿದೆ ಇದರ ಬಗ್ಗೆ ಚಿಂತನೆಯನ್ನು ನಡೆಸುವಂತೆ ಸೂಚಿಸಿದ್ದಾರೆ ಎಂದರು.
ಜೈವಿಕ ಇಂಧನ ಬಗ್ಗೆ ಪಾಲಿಸಿ ಬಂದಾಗ ರಾಜ್ಯ ಅಲ್ಲದೆ ರಾಷ್ಟ್ರಕ್ಕೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭೀವೃದ್ದಿ ಮಂಡಳಿ ಮಾದರಿಯಾಗಲಿದೆ. ಚಿತ್ರದುರ್ಗದಲ್ಲಿ ಮಂಡಳಿಯವತಿಯಿಂದ ಯಾವ ರೀತಿಯಾದ ಉಪಯೋಗವನ್ನು ಮಾಡಬೇಕೆಂದು ರೂಪರೇಷಗಳನ್ನು ತಯಾರು ಮಾಡಲಾಗಿದೆ. ಇಲ್ಲಿಗೆ ನಮ್ಮ ಮಂಡಳಿಯ ತಂಡವನ್ನು ಕಳುಹಿಸಿ ಯಾವ ರೀತಿ ಮಾಡಬೇಕೆಂದು ಅಲೋಚನೆಯನ್ನು ನಡೆಸಲಾಗುವುದು. ಉತ್ತಮ ಗುಣಮಟ್ಟದಲ್ಲಿ ಇಂಧನ ತಯಾರು ಮಾಡಿದರೆ ಅದನ್ನು  ನೇರವಾಗಿ ವಾಹನಗಳಿಗೆ ಬಳಕೆಯನ್ನು ಮಾಡಬಹುದಾಗಿದೆ, ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪಾಲಿಸಿಯನ್ನು ಮಾಡಲಾಗಿದೆ ಅದು ಅನುಮತಿ ಪಡೆದು ಪಾಲಿಸಿಯಾಗಿ ಹೊರ ಬಂದಲ್ಲಿ ನಮ್ಮ ಮಂಡಳಿ ಮತ್ತಷ್ಟು ಉಪಯುಕ್ತವಾದ ಕಾರ್ಯವನ್ನು ಮಾಡಬಹುದಾಗಿದೆ ಎಂದು ಸುಧಿಂದ್ರ ತಿಳಿಸಿದರು.
ಆ. ೧೧ ರಿಂದ ವಿಧಾನ ಸಭೆಯ ಅಧಿವೇಶನ ಪ್ರಾರಂಭವಾಗಲಿದ್ದು ಇದರಲ್ಲಿ ಈ ಪಾಲಿಸಿಯ ಬಗ್ಗೆ ಚರ್ಚೆಯಾಗಿ ಕಾನೂನಾಗಿ ರೂಪುಗೊಳ್ಳುವ ನಿರೀಕ್ಷೆ ಇದೆ. ನಮ್ಮ ಸಂಶೋಧನ ಕೇಂದ್ರಕ್ಕೆ ನೇಪಾಳ್ ಪ್ರಧಾನ ಮಂತ್ರಿ ಹಾಗೂ ಮಾಲಿಡಿಸ್ ಅಧ್ಯಕ್ಷರು ಸಹಾ ಭೇಟಿ ಮಾಡಲು ಅಸಕ್ತಿಯನ್ನು ಹೊಂದಿದ್ದಾರೆ. ನಮ್ಮ ಕೆಲಸದ ಬಗ್ಗೆಯೂ ಸಹಾಸ ಚರ್ಚೆ ಮಾಡಲಿದ್ದಾರೆ. ಕೇಂದ್ರ ಸರ್ಕಾರದ ಸಚಿವರು ಸಹಾ ನಮ್ಮ ಕಾರ್ಯವನ್ನು ಹೊಗಳಿದ್ದಾರೆ. ಸಂಶೋಧನಾ ಕೇಂದ್ರಕ್ಕೆ ಇತ್ತೀಚೆಗೆ ೩೦ ಲಕ್ಷ ರೂಗಳನ್ನು ಬಳಕೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀಮತಿ ಜಯ್ಯಮ್ಮ, ಜಿ.ಪಂ. ಮಾಜಿ ಅಧ್ಯಕ್ಷರಾದ ಬಾಲರಾಜ್, ಕೆಪಿಸಿಸಿ ವಕ್ತಾರ ಬಾಲಕೃಷ್ಣ ಯಾದವ್, ಗುರುರಾಜ್ ಶೆಟ್ಟಿ, ಆಶ್ರಫ್, ಉಪಸ್ಥಿತರಿದ್ದರು. 

Views: 25

Leave a Reply

Your email address will not be published. Required fields are marked *