ಚಿತ್ರದುರ್ಗ ಆ. ೦4
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯಲ್ಲಿನ ಸರ್ಕಾರಿ ಮಾದರಿ ಹಿರಿಯ ಫ್ರೌಢಶಾಲೆಯಲ್ಲಿ ರೋಟರಿ ಕ್ಲಬ್ವತಿಯಿಂದ ಶಾಲೆಯಲ್ಲಿನ ಮಕ್ಕಳಿಗೆ ದಂತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಶಿಬಿರದಲ್ಲಿ ಶಾಲೆಯಲ್ಲಿನ 150 ಮಕ್ಕಳ ದಂತವನ್ನು ತಪಾಸಣೆಯನ್ನು ಡಾ. ಜಯಚಂದ್ರ ಮತ್ತು ತಂಡ ನಡೆಸಿಕೊಟ್ಟರು, ಈ ಸಮಯದಲ್ಲಿ ಮಕ್ಕಳಿಗೆ ನೀಡಲಾದ ಚೀಟಿಯನ್ನು ನಗರದ ಎಸ್.ಜೆ.ಎಂ. ದಂತ ಮಹಾ ವಿದ್ಯಾಲಯಕ್ಕ ಭೇಟಿ ನೀಡುವುದರ ಮೂಲಕ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ಎಸ್.ವಿರೇಶ್, ವೀರಭದ್ರಸ್ವಾಮಿ, ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Views: 10