“ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯಿಂದ 354ನೇ ವರ್ಷದ ಆರಾಧನಾ ಪಂಚರಾತ್ರೋತ್ಸವ”

ಚಿತ್ರದುರ್ಗ ಆ. 8

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಇದೇ ಶ್ರೀ ವಿಶ್ವಾವಸುನಾಮ ಸಂವತ್ಸರದ ಶ್ರಾವಣಮಾಸ ಕೃಷ್ಣಪಕ್ಷ ಪ್ರತಿಪದ, ದ್ವಿತೀಯಾ, ತೃತೀಯಾ ದಿನಾಂಕ 10-08-2025 ರಿಂದ 12-08-2025ರವರೆಗೆ ಈ ಮೂರು ದಿನಗಳಲ್ಲಿ ಶ್ರೀ ಗುರುಸಾರ್ವಭೌಮರು ಮಂತ್ರಾಲಯ ಮಹಾಕ್ಷೇತ್ರದಲ್ಲಿ ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ ಸ್ಮರಣಾರ್ಥವಾಗಿ ಆಚರಿಸುವ ಹಿನ್ನಲೆಯಲ್ಲಿ ನಗರದ ಆನೇ ಬಾಗಿಲ ಬಳಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿವತಿಯಿಂದ354ನೇ ವರ್ಷದ ಆರಾಧನಾ ಪಂಚರಾತ್ರೋತ್ಸವವನ್ನು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ನಡೆಸಲು ಸಂಕಲ್ಪಿಸಲಾಗಿದೆ. 

ಮಂತ್ರಾಲಯದ ಮಹಾಪ್ರಭುಗಳು, ಮಾನವ ಕಲ್ಯಾಣಕ್ಕಾಗಿ ಅವತರಿಸಿ ಜಾತಿ,ಮತ, ಪಂಥಗಳ ಭೇದವಿಲ್ಲದೆ ಆರ್ತರನ್ನು ರಕ್ಷಿಸುತ್ತಿರುವುದು ಮನೆಮಾತಾಗಿದೆ. ಇಂಥ ಮಹಾನುಭಾವರು ಐತಿಹಾಸಿಕ ಪೌರಾಣಿಕ ಪ್ರಸಿದ್ಧವಾದ ಚಿತ್ರದುರ್ಗ ನಗರಕ್ಕೆ ಆಗಮಿಸಿದಾಗ ನೀರಿನ ವೆಂಕಣ್ಣನಿಗೆ ಮೋಕ್ಷವನ್ನು ಕೊಟ್ಟುದರ ಸ್ಮಾರಕವು ಇಂದಿಗೂ ಶ್ರೀಮಠದಲ್ಲಿ ಸಾಕ್ಷಿಯಾಗಿ ನಿಂತಿದೆ. ಪಾಂಡವರು ಪೂಜಿಸಿದ ಪ್ರಾಣದೇವರು ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳು ತಮ್ಮ ಬೃಂದಾವನವು ಹೀಗಿರಬೇಕೆಂದು ಸ್ವ-ಹಸ್ತದಿಂದ ನಿರ್ಮಿಸಿ ತೋರಿಸಿದ ಮಾದರಿ ಬೃಂದಾವನದಿಂದಲೂ, ಮೊದಲು ಶ್ರೀ ಸುಮತೀಂದ್ರತೀರ್ಥರು ಪೂಜಿಸಿ, ನಂತರ 1962 ರಲ್ಲಿ ಶ್ರೀ ಸುಯಮೀಂದ್ರತೀರ್ಥರಿಂದ ಸ್ಥಿರ ಬೃಂದಾವನ ಪ್ರತಿಷ್ಠಾಪನೆಗೊಂಡು ಹಾಗೂ 1985ರಲ್ಲಿ ಶ್ರೀ ಸುಜಯೀಂದ್ರತೀರ್ಥರು ಹಾಗೂ ಶ್ರೀ ಸುಶಮೀಂದ್ರತೀರ್ಥರಿಂದ ಪುನಃ ಪ್ರತಿಷ್ಠಾಪನೆಗೊಂಡು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ವಿಶೇಷ ಸನ್ನಿಧಾನವು ಶೋಭಿಸುತ್ತಿದೆ. ಹೀಗೆ ಭಕ್ತರು ಬೇಡಿದ ಇಷ್ಟಾರ್ಥಗಳನ್ನು ಈಡೇರಿಸುವುದರಲ್ಲಿ ಪ್ರತ್ಯಕ್ಷ ಸಾಕ್ಷಿಯಾಗಿ ಶ್ರೀ ಗುರುಸಾರ್ವಭೌಮರು ಮಂತ್ರಾಲಯ ಮಹಾಕ್ಷೇತ್ರದಲ್ಲಿ ಸಶರೀರರಾಗಿ ಬೃಂದಾವನ ಪ್ರವೇಶ ಮಾಡಿದ ಸ್ಮರಣಾರ್ಥವಾಗಿ ಆಚರಿಸುವ 354ನೇ ವರ್ಷದ ಆರಾಧನಾ ಪಂಚರಾತ್ರೋತ್ಸವವಾಗಿದೆ.

354ನೇ ವರ್ಷದ ಆರಾಧನಾ ಮಹೋತ್ಸವದ ಕಾರ್ಯಕ್ರಮದಲ್ಲಿದಿನಾಂಕ 9-08-2025ನೇ ಶನಿವಾರ ಬೆಳಗ್ಗೆ 7.30 ರಿಂದ ಋಗ್ವದ, ಯಜುರ್ವೇದ, ನಿತ್ಯ, ನೂತನ ಉಪಾಕರ್ಮ ಹುಣ್ಣಿಮೆ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ, ಬೆಳಿಗ್ಗೆ 10.00 ಗಂಟೆಗೆ ಈ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಂಘ(ರಿ)ದ ಅಧ್ಯಕ್ಷರಾದ ಪಿ.ಎಸ್ ಮಂಜುನಾಥ್, ಶ್ರೀಗುರುರಾಜ ಸೇವಾ ಸಂಘದ ಅಧ್ಯಕ್ಷರಾದ ವೇದವ್ಯಾಸಾಚಾರ್(ಅಣ್ಣಾದೊರೆ), ಶ್ರೀ ಹರಿವಾಯು ಗುರು ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಟಿ.ಕೆ. ನಾಗರಾಜ್ ರಾವ್,ಹೋಟೆಲ್ ಉದ್ಯಮಿಗಳಾದ ಎಲ್.ಎ. ದೀಪಾನಂದ ಮತ್ತು ಸಹೋದರರು ಭಾಗವಹಿಸಲಿದ್ದಾರೆ. ಸಂಜೆ 6.30ರಿಂದ ಪಂಚರಾತ್ರೋತ್ಸವದ ಅಂಗವಾಗಿ ಧ್ವಜಾರೋಹಣ, ಗೋಪೂಜೆ, ಧನ-ಧಾನ್ಯ ಪೂಜೆ, ಲಕ್ಷ್ಮೀ ಪೂಜೆ, ಸ್ವಸ್ತಿ ವಾಚನ, ಮಹಾಮಂಗಳಾರತಿ ನಡೆಯಲಿದೆ.

ದಿನಾಂಕ 10-08-2025ನೇಭಾನುವಾರಶ್ರೀ ಗುರುಸಾರ್ವಭೌಮರ ಪೂರ್ವಾರಾಧನೆ ದಿನಾಂಕ 11-08-2025ನೇ ಸೋಮವಾರ : ಶ್ರೀ ಗುರುಸಾರ್ವಭೌಮ ಮಧ್ಯಾರಾಧನೆ ದಿನಾಂಕ 12-08-2025ನೇ ಮಂಗಳವಾರ : ಶ್ರೀ ಗುರುಸಾರ್ವಭೌಮರ ಉತ್ತರಾರಾಧನೆ ರಾಯರ ಆರಾಧನಾ ದಿನಗಳಲ್ಲಿ ಪ್ರತಿದಿನ ಸುಪ್ರಭಾತ, ನಿರ್ಮಾಲ್ಯ,ಬೆಳಗ್ಗೆ 7:30ಗಂಟೆ ಗೆ ಕ್ಷೀರಾಅಭಿಷೇಕ, ಫಲ ಪಂಚಾಮೃತ, ಅಭಿಷೇಕ 8.30 ರಿಂದ 10.30 ರವರೆಗೆ ಪಾದಪೂಜೆ ಕನಕಾಭಿಷೇಕ, ಮಹಾಪೂಜೆ, ಸರ್ವ ಸೇವಾ 12:30 ಗಂಟೆಗೆ ಅಲಂಕಾರ ಸೇವೆ, ಮಹಾ ನೈವೇದ್ಯ, ಮಹಾಮಂಗಳರತಿ, ಪ್ರಸಾದ ವಿನಿಯೋಗ ನಡೆಯುತ್ತದೆ. ದಿನಾಂಕ 13-08-2025ನೇ ಬುಧವಾರ : ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ, ಪವಮಾನ ಹೋಮ, ಸರ್ವ ಸಮರ್ಪಣೋತ್ಸವ ನ್ಯೂ ಆರಾಧನಾ ನಡೆಯಲಿದೆ. 

ದಿನಾಂಕ:12/ 08/2025 ರ (ಮಂಗಳವಾರ) ಉತ್ತರಾರಾದನೆ ಪ್ರಯುಕ್ತ ನಗರದ ರಾಜ ಬೀದಿಗಳಲ್ಲಿ ವೇದ ಘೋಷದೊಡನೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಹಾಗೂ ಮಠದಲ್ಲಿ ರಥೋತ್ಸವ ಸೇವೆ ನಡೆಯುತ್ತದೆ. 10-08-2025 80 12-08-20248 ಮಹಾ ಅನ್ನಸಂತರ್ಪಣೆ (ರಾಯರ ಮಹಾಪ್ರಸಾದ) ವಿತರಿಸಲಾಗುವುದು. ದಿನಾಂಕ 07-08-2025 ರಿಂದ 09-08-2025ರವರೆಗೆ ವಿದ್ವಾನ್ ಶ್ರೀ ರಾಘವಾಚಾರ್ಯ ಮಿಟ್ಟಿಯವರಿಂದ ಶ್ರೀ ರಾಘವೇಂದ್ರ ವಿಜಯ ಪ್ರವಚನ ಸಂಜೆ 6.00 ರಿಂದ 7.00ರವರೆಗೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದಿನಾಂಕ 10-08-2025ನೇ ಭಾನುವಾರ ಸಾಯಂಕಾಲ 6.00 ರಿಂದ 8.30ರವರೆಗೆ ದಾಸವಾಣಿ ಕಾರ್ಯಕ್ರಮ ಸುಜೀತ್ ಕುಲಕರ್ಣಿ, ಚಿತ್ರದುರ್ಗ ಇವರಿಂದ ದಿನಾಂಕ 11-08-2025ನೇ ಸೋಮವಾರ ಸಾಯಂಕಾಲ 6.00 ರಿಂದ 8.30ರವರೆಗೆ ದಾಸವಾಣಿ ಕಾರ್ಯಕ್ರಮ ರಜತ್ ಕುಲಕರ್ಣಿ, ಕಿತ್ತೂರು ಇವರಿಂದ ದಿನಾಂಕ 12-08-2025ನೇ ಮಂಗಳವಾರ ಸಾಯಂಕಾಲ 6.00 ರಿಂದ 8.00ರವರೆಗೆ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರ, ಶ್ರೀಮತಿ ವಿದೂಷಿ ನಂದಿನಿ ಶಿವಪ್ರಕಾಶ್ ಹಾಗೂ ಶಿಷ್ಯವೃಂದ ರವರಿಂದ ಭರತನಾಟ್ಯ ಕಾರ್ಯಕ್ರಮ ದಿನಾಂಕ 13-08-2025ನೇ ಬುಧವಾರ ಸಾಯಂಕಾಲ 6.00 ರಿಂದ 8.00ರವರೆಗೆ ಶ್ರೀಮತಿ ಸಿಂಧೂರ ಮತ್ತು ಸಹೋದರಿಯವರಿಂದ ಭರತನಾಟ್ಯ ಮತ್ತು ಕೂಚಿಪುಡಿ ಕಾರ್ಯಕ್ರಮ ನಡೆಯಲಿದೆ.

ಶ್ರೀ ಗುರುರಾಜರ ಆರಾಧನಾ ವೈಭವವನ್ನು ಕಂಡು ಭಕ್ತರು ಕಣ್ಮನ ತುಂಬಿಕೊಳ್ಳಬಹುದಾಗಿದೆ. ಕಾರಣ ಆಸ್ತಿಕ ಸಜ್ಜನರು ಈ ಮೂರು ದಿವಸಗಳ ಕಾಲ ಶ್ರೀಮಠಕ್ಕೆ ಆಗಮಿಸಿ ಶ್ರೀ ಗುರುರಾಜರ ದರ್ಶನ, ಸೇವಾ ಸೌಭಾಗ್ಯವನ್ನು ಪಡೆದು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಗುರುಗಳ ಸೇವೆಯನ್ನು ಮಾಡಿ ತೀರ್ಥ ಪ್ರಸಾದ ಫಲ ಮಂತ್ರಾಕ್ಷತೆ ಸ್ವೀಕರಿಸಿ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮಠದ ಪ್ರಕಟಣೆ ತಿಳಿಸಿದೆ

Views: 13

Leave a Reply

Your email address will not be published. Required fields are marked *