Raksha Bandhan 2025: “ರಾಖಿ ತೆಗೆಯಲು ಸರಿಯಾದ ಸಮಯ ಯಾವುದು”?

ರಕ್ಷಾ ಬಂಧನವು (Raksha Bandhan) ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಅಣ್ಣ ತಂಗಿಯರ ಸಂಬಂಧವನ್ನು ಗಟ್ಟಿಗೊಳಿಸುವ ಈ ಪವಿತ್ರ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 09 ರಂದು ರಕ್ಷಾ ಬಂಧನ ಅಥವಾ ನೂಲ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ.

ಈ ವಿಶೇಷ ದಿನದಂದು ಸಹೋದರಿಯರು ತಮ್ಮ ಸಹೋದರನ ಕೈಗೆ ರಕ್ಷಾ ದಾರವನ್ನು ಕಟ್ಟುತ್ತಾರೆ. ಇದು ಇಬ್ಬರ ನಡುವಿನ ಪ್ರೀತಿ, ಬಾಂಧವ್ಯವನ್ನು ಗಟ್ಟಿಗೊಳಿಸುವ ದಾರವಾಗಿದೆ. ಹೀಗಾಗಿ ಕೈಗೆ ಕಟ್ಟಿದ ದಾರವನ್ನು (Rakhi) ಎಷ್ಟು ದಿನಗಳ ಬಳಿಕ ತೆಗೆಯಬೇಕು?, ಈ ರಾಖಿಯನ್ನು ತೆಗೆದು ಏನು ಮಾಡಬೇಕು? ಈ ಕುರಿತಾದ ಮಾಹಿತಿ ಇಲ್ಲಿದೆ.

ಕೈಗೆ ಕಟ್ಟಿದ ರಾಖಿಯನ್ನು ಯಾವಾಗ ತೆಗೆಯುವುದು ಸೂಕ್ತ

ಪ್ರೀತಿಯಿಂದ ಸಹೋದರಿಯರು ಕಟ್ಟಿದ ರಾಖಿಯನ್ನು ಕೆಲ ಸಹೋದರರು ಹಾಗೆಯೇ ಕೈಯಲ್ಲೇ ಇಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಮಾರನೇ ದಿನವೇ ರಕ್ಷಾ ದಾರವನ್ನು ತೆಗೆದು ಬಿಡುತ್ತಾರೆ. ಆದರೆ ರಾಖಿ ಕಟ್ಟಿದ ನಂತರ ಅದನ್ನು ಯಾವಾಗ ತೆಗೆಯಬೇಕು ಎಂಬುದಕ್ಕೆ ಯಾವುದೇ ಕಟ್ಟುನಿಟ್ಟಾದ ನಿಯಮಗಳು ಇಲ್ಲ. ಹೀಗಾಗಿ ಕೈಗೆ ಕಟ್ಟಿದ ರಾಖಿಯನ್ನು ಯಾವಾಗ ಬೇಕಾದರೂ ತೆಗೆಯಬಹುದು.

  • ಸಾಂಪ್ರಾದಾಯಿಕವಾಗಿ ರಾಖಿ ತೆಗೆಯಲು ಸರಿಯಾದ ದಿನವಿದ್ದರೆ ಅದು ಕೃಷ್ಣ ಜನ್ಮಾಷ್ಠಮಿ. ರಕ್ಷಾ ಬಂಧನದ ಎಂಟನೇ ದಿನವಾದ ಕೃಷ್ಣ ಜನ್ಮಾಷ್ಟಮಿಯಂದು ರಾಖಿಯನ್ನು ತೆಗೆಯುತ್ತಾರೆ.
  • ರಕ್ಷಾ ದಾರವನ್ನು ಎಷ್ಟು ದಿನ ಬೇಕಾದರೂ ಕಟ್ಟಬಹುದು. ಇದು ನಿಮ್ಮ ವೈಯುಕ್ತಿಕ ಆದ್ಯತೆಯನ್ನು ಅವಲಂಬಿಸಿರುತ್ತದೆ. ಈ ದಾರಕ್ಕೆ ಹಾಳಾಗುವವರೆಗೂ ಕೈಯಲ್ಲಿ ಹಾಗೆಯೇ ಇಟ್ಟುಕೊಳ್ಳಬಹುದು. ಒಂದು ವೇಳೆ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದರೆ, ನೀವು ಅದನ್ನು ತೆಗೆದುಹಾಕಬಹುದು. ಸಾಧ್ಯವಾದರೆ ಮುಂದಿನ ರಕ್ಷಾ ಬಂಧನದವರೆಗೂ ರಾಖಿಯಲ್ಲಿ ಕೈಯಲ್ಲಿ ಇಟ್ಟುಕೊಳ್ಳಬಹುದು.

ಕೈಯಿಂದ ತೆಗೆದ ರಾಖಿಯನ್ನು ಏನು ಮಾಡಬೇಕು?

ರಾಖಿಯನ್ನು ತೆಗೆದ ಬಳಿಕ ಎಲ್ಲೆಂದರಲ್ಲಿ ಎಸೆಯುವುದು ಸರಿಯಲ್ಲ. ಸಹೋದರಿಯೂ ಪ್ರೀತಿಯಿಂದ ಕಟ್ಟಿದ ರಕ್ಷಾ ದಾರವನ್ನು ನೀವು ನೆನಪಿಗಾಗಿ ಇಟ್ಟುಕೊಳ್ಳಬಹುದು. ಇಲ್ಲದಿದ್ದರೆ ಹರಿಯುವ ನೀರಿನಲ್ಲಿ ಬಿಡಬಹುದು ಅಥವಾ ಮರ ಕೆಳಗೆ ಇಡುವುದು ಸೂಕ್ತ.

Views: 16

Leave a Reply

Your email address will not be published. Required fields are marked *