“75 ವರ್ಷಗಳಾದರೂ ಗ್ರಾಮಕ್ಕೆ ಸರಿಯಾದ ರಸ್ತೆ ನಿರ್ಮಾಣವಾಗಿಲ್ಲ: ಗ್ರಾಮಸ್ಥರ ಅಳಲು”

ಚಿತ್ರದುರ್ಗ ಆ. 10

ವಲದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಜಿಲ್ಲೆಯ ಹೊಳಲ್ಕೆರೆ ತಾಲೂಕು ಕಾಳಘಟ್ಟ ವಡ್ಡರಹಟ್ಟಿಯಿಂದ ದಾಸರಹಳ್ಳಿ ವಡ್ಡರಹಟ್ಟಿ ಹೋಗುವ ರಸ್ತೆಯಲ್ಲಿ ಇರುವ ಹಳ್ಳಕ್ಕೆ ಗ್ರಾಮಸ್ಥರೇ ನಿರ್ಮಾಣ ಮಾಡಿಕೊಂಡಿದ್ದು, ಕಲ್ಲು ಸೇತುವೆ ಇತ್ತೀಚಿಗೆ ಬೀಳುತ್ತಿರುವ ಮಳೆಯ ಪ್ರವಾಹದಿಂದ ಕೊಚ್ಚಿ ಹೋಗಿದೆ. ಎರಡು ಹಳ್ಳಿ ಜನರಿಗೆ ಓಡಾಟಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಕಳೆದರೂ ಸಹ ಗ್ರಾಮದ ಮಧ್ಯ ಓಡಾಡಲು ಜನರಿಗೆ ಉತ್ತಮವಾದ ರಸ್ತೆ ಇದುವರೆವಿಗೂ ನಿರ್ಮಾಣವಾಗಿಲ್ಲ, ಕಾಳಘಟ್ಟ ವಡ್ಡರಹಟ್ಟಿಯಿಂದ ದಾಸರಹಳ್ಳಿ ವಡ್ಡರಹಟ್ಟಿ ಹೋಗುವ ರಸ್ತೆಯಲ್ಲಿ ಸರಿಯಾದ ರೀತಿಯಲ್ಲಿ ರಸ್ತೆಯ ನಿರ್ಮಾಣ ಕಾರ್ಯವಾಗಿಲ್ಲ ಜನಾರ್ಧನ ಸ್ವಾಮಿಯವರ ಸಂಸದರಾಗಿದ್ದ ಸಮಯದಲ್ಲಿ ಇಲ್ಲಿ ರಸ್ತೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದರು ಆದರೆ ಆತಂರಿಕ ಜಗಳದಿಂದಾಗಿ ರಸ್ತೆ ನಿರ್ಮಾಣ ಕಾರ್ಯ ನೆನಗುದ್ದಿಗೆ ಬಿತ್ತು ಇದರಿಂದ ಈ ಗ್ರಾಮಗಳಲ್ಲಿ ಮಳೆಗಾಲದಲ್ಲಿ ಓಡಾಡಲು ರಸ್ತೆ ಇಲ್ಲದಾಗಿದೆ, ನಮ್ಮ ಗ್ರಾಮವೂ ಹೊಳಲ್ಕೆರೆ ವಿಧಾನಸಭಾ ವ್ಯಾಪ್ತಿಗೆ ಬರಲಿದ್ದು ಅಲ್ಲಿ ಚುನಾಯಿತರಾದ ಯಾವ ಚುನಾಯಿತ ಪ್ರತಿನಿಧಿಗಳು ಸಹಾ ಇದರ ಬಗ್ಗೆ ಗಮನ ನೀಡಲ್ಲ, ಈಗಿನ ಶಾಸಕರು ರಸ್ತೆ ರಾಜ ಎಂದು ಹೆಸರನ್ನು ಪಡೆದಿದ್ದಾರೆ ಆದರೆ ನಮ್ಮ ಗ್ರಾಮದ ರಸ್ತೆ ಕಾಣುತಿಲ್ಲವೆ ಎಂದು ಗ್ರಾಮಸ್ಥರು ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ.

ಇಲ್ಲಿ ರಸ್ತೆಯನ್ನು ನಿರ್ಮಾಣ ಮಾಡುವಂತೆ ಹಲವಾರು ಬಾರಿ ಆಗ್ರಹ ಮಾಡಿದ್ದರು ಸಹಾ ಇದುವರೆವಿಗೂ ಯಾರೂ ಸಹಾ ಗಮನ ನೀಡಿಲ್ಲ, ಹಲವಾರು ಮಳೆಗಾಲದಲ್ಲಿ ಗ್ರಾಮಸ್ಥರೇ ಮುಂದಾಗಿ ಹಳ್ಳ ಹರಿದ ಜಾಗದಲ್ಲಿ ಕಲ್ಲುಗಳನ್ನು ಹಾಕಿ ತಾತ್ಕಾಲಿಕವಾಗಿ ರಸ್ತೆಯನ್ನು ನಿರ್ಮಾಣ ಮಾಡಿಕೊಂಡ ಬರಲಾಗುತ್ತಿದೆ ಪ್ರತಿ ಮಳೆಯ ಸಮಯದಲ್ಲಿಯೂ ಸಹಾ ಇಲ್ಲಿನ ರಸ್ತೆ ಹಾಳಾಗುತ್ತದೆ ಮಳೆ ನಿಂತ ಮೇಲೆ ಗ್ರಾಮಸ್ಥರೆ ಪುನರ್ ರಸ್ತೆಯನ್ನು ನಿರ್ಮಾಣ ಮಾಡಿಕೊಳ್ಳುವಂತ ವಾತಾವರಣ ನಮ್ಮ ಗ್ರಾಮದಲ್ಲಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

ಇಲ್ಲಿ ರಸ್ತೆ ನಿರ್ಮಾಣ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ತಿಳಿಸಲು ಕರೆ ಮಾಡಿದರು ಕರೆ ಸ್ವೀಕರಿಸುತ್ತಿಲ್ಲ, ಕಚೇರಿಗೆ ಹೋದರು ಸಹಾ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಹಾರಿಕೆ ಉತ್ತರವನ್ನು ನೀಡಲಾಗುತ್ತದೆ, ಸ್ವಾತಂತ್ರ್ಯ ಬಂದು 75 ವರ್ಷಗಳನ್ನು ಕಳೆದರೂ ಸಹ ಗ್ರಾಮದ ಮಧ್ಯ ಓಡಾಡಲು ಜನರಿಗೆ ಉತ್ತಮವಾದ ರಸ್ತೆ ಇದುವರೆವಿಗೂ ನಿರ್ಮಾಣವಾಗಿಲ್ಲದಿರುವುದು ನಮ್ಮ ದುರಂತವಾಗಿದೆ. ರಾಜಕಾರಣಿಗಳು ಸಹ ಸ್ಪಂದಿಸಿಲ್ಲ ಎಂದು ದೂರಿದ್ದಾರೆ. 

ಸರ್ಕಾರ ರಸ್ತೆ ನಿರ್ಮಾಣಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂ.ಗಳನ್ನು ನೀಡುತ್ತದೆ ಆದರೆ ನಮ್ಮ ಗ್ರಾಮದಲ್ಲಿನ ರಸ್ತೆ ನಿರ್ಮಾಣಕ್ಕೆ ಇದುವರೆವಿಗೂ ಸಹಾ ಹಣವನ್ನು ನೀಡಿಲ್ಲ, ಇದರ ಬಗ್ಗೆ ಯಾವ ಚುನಾಯಿತ ಪ್ರತಿನಿಧಿಗಳು ಸಹಾ ಗ್ರಾಮದ ಈ ರಸ್ತೆಯ ಚಕಾರವನ್ನು ಎತ್ತಿಲ್ಲ, ಚುನಾವಣೆ ಸಮಯದಲ್ಲಿ ಮತವನ್ನು ಕೇಳಲು ಎಲ್ಲಾ ಪಕ್ಷದವರಯ ಸಹಾ ಬರುತ್ತಾರೆ ಆದರೆ ಗೆದ್ದ ನಂತರ ನಮ್ಮ ಗ್ರಾಮವನ್ನು ಮರೆಯುತ್ತಾರೆ, ಇದ್ದಲ್ಲದೆ ಪ್ರತಿ ಚುನಾವಣೆಯಲ್ಲಿಯೂ ಸಹಾ ಇದರ ಬಗ್ಗೆ ಎಲ್ಲರಲ್ಲೂ ಸಹಾ ಪ್ರಸ್ತಾವನೆ ಮಾಡಿದಾಗ ನಾನು ಗೆದ್ದು ಬಂದರೆ ಈ ಕೆಲಸವನ್ನು ಮಾಡಿಸುತ್ತೇನೆ ಎಂದು ಭರವಸೆಯನ್ನು ನೀಡುತ್ತಾರೆ ಆದರೆ ಮಾಡುವುದಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 

ಇನ್ನಾದರೂ ಹೊಳಲ್ಕೆರೆ ತಾಲೂಕು ಕಾಳಘಟ್ಟ ವಡ್ಡರಹಟ್ಟಿಯಿಂದ ದಾಸರಹಳ್ಳಿ ವಡ್ಡರಹಟ್ಟಿ ಹೋಗುವ ರಸ್ತೆಯಲ್ಲಿ ಇರುವ ಹಳ್ಳಕ್ಕೆ ಈ ಭಾಗದ ಚುನಾಯಿತ ಪ್ರತಿನಿಧಿಗಳು ಉತ್ತಮವಾದ ರಸ್ತೆಯನ್ನು ನಿರ್ಮಾಣ ಮಾಡಿಕೊಡುವರೆ ಎಂದು ಗ್ರಾಮಸ್ಥರು ಕಾಯುತ್ತಿದ್ದಾರೆ. 

Views: 12

Leave a Reply

Your email address will not be published. Required fields are marked *