“ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಜ್ಜಾದ ಚಿತ್ರದುರ್ಗ”

ಚಿತ್ರದುರ್ಗ ಆ. 12

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ನಗರದ ಆನೇ ಬಾಗಿಲ ಬಳಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿವತಿಯಿಂದ354ನೇ ವರ್ಷದ ಆರಾಧನಾ ಪಂಚರಾತ್ರೋತ್ಸವವನ್ನು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ಅ. 10 ರಿಂದ 12ರವರೆಗೆ ನಡೆಸಲಾಯಿತು.
ಈ ಮೂರು ದಿನದಲ್ಲಿ  ಗುರುಸಾರ್ವಭೌಮರ ಪೂರ್ವಾರಾಧನೆ ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ರಾಯರ ಆರಾಧನಾ ನಡೆಯಿತು. ಈ ದಿನಗಳಲ್ಲಿ ಪ್ರತಿದಿನ ಸುಪ್ರಭಾತ, ನಿರ್ಮಾಲ್ಯ, ಕ್ಷೀರಾಅಭಿಷೇಕ, ಫಲ ಪಂಚಾಮೃತ, ಅಭಿಷೇಕ ಪಾದಪೂಜೆ ಕನಕಾಭಿಷೇಕ, ಮಹಾಪೂಜೆ, ಸರ್ವ ಸೇವಾ ಅಲಂಕಾರ ಸೇವೆ, ಮಹಾ ನೈವೇದ್ಯ, ಮಹಾಮಂಗಳರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಆ. 12 ರ ಇಂದು ಉತ್ತರಾರಾದನೆ ಪ್ರಯುಕ್ತ ನಗರದ ರಾಜ ಬೀದಿಗಳಲ್ಲಿ ವೇದ ಘೋಷದೊಡನೆ ಪಲ್ಲಕ್ಕಿ ಉತ್ಸವ ಹಾಗೂ ಮಠದಲ್ಲಿ ರಥೋತ್ಸವ ಸೇವೆ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ವಾನ್ ಶ್ರೀ ರಾಘವಾಚಾರ್ಯ ಮಿಟ್ಟಿಯ ವರಿಂದ ಶ್ರೀ ರಾಘವೇಂದ್ರ ವಿಜಯ ಪ್ರವಚನ, ಸುಜೀತ್ ಕುಲಕರ್ಣಿ, ರಜತ್ ಕುಲಕರ್ಣಿ, ಕಿತ್ತೂರು ದಾಸವಾಣಿ, ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರ, ವಿದೂಷಿ ಶ್ರೀಮತಿ ನಂದಿನಿ ಶಿವಪ್ರಕಾಶ್ ಹಾಗೂ ಶಿಷ್ಯವೃಂದ ರವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
 
ಆ13ನೇ ಬುಧವಾರ ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ, ಪವಮಾನ ಹೋಮ, ಸರ್ವ ಸಮರ್ಪಣೋತ್ಸವ ನ್ಯೂ ಆರಾಧನಾ ನಡೆಯಲಿದ್ದು,ಸಂಜೆ 6.ರಿಂದ8.ರವರೆಗೆ ಶ್ರೀಮತಿ ಸಿಂಧೂರ ಮತ್ತು ಸಹೋದರಿಯವರಿಂದ ಭರತನಾಟ್ಯ ಮತ್ತು ಕೂಚಿಪುಡಿ ಕಾರ್ಯಕ್ರಮ ನಡೆಯಲಿದೆ.

Views: 4

Leave a Reply

Your email address will not be published. Required fields are marked *