ಚಿತ್ರದುರ್ಗ ಆ. 13
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
79 ನೇ ಸ್ವಾತಂತ್ರ್ಯ ದಿನೋತ್ಸವವನ್ನು ಸಂಭ್ರಮಿಸಲು ದೇಶಾದ್ಯಂತ ನಡೆಯುತ್ತಿರುವ ‘ಹರ್-ಘರ್ ತಿರಂಗಾ’ ಅಭಿಯಾನದ
ಅಂಗವಾಗಿ ಚಿತ್ರದುರ್ಗ ನಗರದಲ್ಲಿಯೂ ಸಹಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮನೆ-ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ಗೌರವ ಸಲ್ಲಿಸಬೇಕಿದೆ ಈ ಹಿನ್ನಲೆಯಲ್ಲಿ ಇಂದಿನಿಂದ ಆಗಸ್ಟ್ 15 ರವರೆಗೂ ಪ್ರತಿ ಮನೆ
ಮನೆಗಳ ಮೇಲೆ ರಾಷ್ಟ್ರ ಧ್ವಜ ರಾರಾಜಿಸಬೇಕಿದೆ ಇದರಿಂದ ಭಾರತದ ಹಿರಿಮೆ ವಿಶ್ವ ಭೂಪಟದಲ್ಲಿ ಮಿನುಗಬೇಕಿದೆ.
ಇಂದು ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಹರ್-ಘರ್ ತಿರಂಗ ಅಭಿಯಾನದ ಅಂಗವಾಗಿ ಬಿಜೆಪಿ ಮಾಧ್ಯಮ ವಿಭಾಗದಿಂದ
ಪತ್ರಕರ್ತರಿಗೆ, ವಕೀಲರಿಗೆ ಹಾಗೂ ಕಾಲೇಜುಗಳಿಗೆ 79ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಸುಮಾರು 250ಕ್ಕೂ ಹೆಚ್ಚು
ರಾಷ್ಟ್ರಧ್ವಜಗಳನ್ನು ವಿತರಿಸಲಾಗಿತ್ತು.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ. ಕುಮಾರಸ್ವಾಮಿ
ಜಿ.ಪಂ.ಮಾಜಿ ಅಧ್ಯಕ್ಷರಾದ ಮಹಾಲಿಂಗಪ್ಪ, ಬಿಜೆಪಿ ಮಾಧ್ಯಮ ವಕ್ತರಾರದ ನಾಗರಾಜ್ ಬೇದ್ರೇ,ದಗ್ಗೆ ಶಿವಪ್ರಕಾಶ್,
ಕಾರ್ಯಾದ್ಯಕ್ಷರಾದ ರವಿಕುಮಾರ್, ಕಿರಣ, ಯಶವಂತ ಪರಶುರಾಮ್, ನ್ಯಾಯಾ ವಾದಿಗಳಾದ ರಜಿನಿ, ಶಿವು, ಸಚಿನ್ ಬಾಬು,
ಕೀರ್ತಿ ಮಂಜುಳ ಪತ್ರಕರ್ತರು ಸೇರಿದಂತೆ ಇತರರು ಭಾಗವಹಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 13