ಚಿತ್ರದುರ್ಗ, ಆ 13 :
ನಗರದ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಗಸ್ಟ್ 17 ರಂದು ತಲೆ
ಸುತ್ತುವಿಕೆಯಸಮಸ್ಯೆಗೆ ಸಂಭಂದಿಸಿದಂತೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಖ್ಯಾತ ತಜ್ಞರಾದ ಡಾ.ಎನ್. ಬಿ ಪ್ರಹ್ಲಾದ ಎನ್.ಬಿ, ಎಂ.ಬಿ.ಬಿ.ಎಸ್, ಎಂ.ಎಸ್ (ಚಂಡೀಗರ್) ಇವರ ನೇತೃತ್ವದಲ್ಲಿ, ಕರ್ನಾಟಕ ಕಿವಿ,
ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ರಿ) ನಂ 29,ಬಸವ ಭವನ,ದವಳಗಿರಿ ಬಡಾವಣೆ 2ನೇ ಹಂತ
ಭೀಮಸಮುದ್ರ ರಸ್ತೆ, ಚಿತ್ರದುರ್ಗವು, ಚಿತ್ರದುರ್ಗ ಜಿಲ್ಲಾ ದೇವಾಲಯ ಸಂವರ್ಧನಾ ಸಮಿತಿ, ಚಿತ್ರದುರ್ಗ ಜಿಲ್ಲಾ ಪತಂಜಲಿ ಯೋಗ
ಟ್ರಸ್ಟ್(ರಿ) , ಹಾಗೂ ಚಾಂಪಿ ಯನ್ಸ್ ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆ ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆಯಲಿದೆ.
ತಲೆ ಸುತ್ತುವಿಕೆ ರೋಗ ಲಕ್ಷಣಗಳು :
ಸುತ್ತಮುತ್ತಲಿನ ವಾತಾವರಣ ಸಂಪೂರ್ಣವಾಗಿ ತಿರುಗಿದಂತೆ ಕಾಣುವುದು, ಇದರ ಜೊತೆಗೆ ವಾಕರಿಕೆ, ವಾಂತಿ ಮತ್ತು
ತಾತ್ಕಾಲಿಕವಾಗಿ ಕಿವಿ ಕೇಳಿಸದಿರುವುದು, ಕಿವಿಯಲ್ಲಿ ಅಹಿತಕರ ಶಬ್ದ, ಈ ಎಲ್ಲಾ ಸಮಸ್ಯೆಗಳು ತಲೆ ಸುತ್ತುವಿಕೆ ರೋಗ ಲಕ್ಷಣಗಳಲ್ಲಿ
ಒಂದಾಗಿರುತ್ತದೆ. ಆಗಸ್ಟ್ 17 ರ ಭಾನುವಾರ ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 02:00 ಗಂಟೆಯವರೆಗೆ ಈ ಶಿಬಿರ
ನಡೆಯಲಿದ್ದು ಈ ಮೇಲೆ ತಿಳಿಸಿದ ಯಾವುದೇ ರೋಗ ಲಕ್ಷಣದ(ಸಮಸ್ಯೆ) ಇರುವ ರೋಗಿಗಳು ಈ ಶಿಬಿರದ ಪ್ರಯೋಜನವನ್ನು
ಪಡೆದು ಕೊಳ್ಳಬಹುದಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಶಿಬಿರದ ವಿಳಾಸ : ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ರಿ) ನಂ 29,ಬಸವ ಭವನ,ದವಳಗಿರಿ
ಬಡಾವಣೆ 2ನೇ ಹಂತ ಭೀಮಸಮುದ್ರ ರಸ್ತೆ, ಚಿತ್ರದುರ್ಗ 577501
ಈ ಶಿಬಿರಕ್ಕೆ ಹೆಸರನ್ನು ನೊಂದಾಯಿಸಲು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ :ಬ9483519988.
Views: 8