“ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ಪರೀಕ್ಷೆ ಗೆಲುವಿನ ಹೆಜ್ಜೆಗಳು- ಚೇತನ್ ರಾಮ್”

ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಚೇತನ್ ರಾಮ್”

ಚಿತ್ರದುರ್ಗ ಆ. 12

ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203


ಹೊಳಲ್ಕೆರೆ: ತಾಲೂಕಿನ ಸ್ನೇಹ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಬೇಕಾದ ಪರೀಕ್ಷೆ ಹಾಗೂ ಶಿಕ್ಷಣದ ಬಗ್ಗೆ ಬೋಧನೆ ಮಾಡಿದ ವಿಕಸನ ತರಬೇತುದಾರರಾದ ಆರ್ ಎ ಚೇತನ್ ರಾವ್ ಮಾತನಾಡಿ
ಪ್ರೇರಣಗುರು ಶಿಕ್ಷಣ ತಜ್ಞರಾದ ಇವರು ಶಿಕ್ಷಕರು, ಮಕ್ಕಳನ್ನು ಕುರಿತಂತೆ ಪರೀಕ್ಷೆ ಒಂದು ಅನಿವಾರ್ಯ ಸ್ಥಿತಿ, ಪರೀಕ್ಷೆ ಎಂದರೆ ನಮ್ಮ ಜ್ಞಾನ ಕುಶಲತೆ ಮನೋಭಾವ ಮತ್ತು ಪರಿಸರದ ಬೆಂಬಲ ಎಲ್ಲವೂ ಸೇರಿ ಯಶಸ್ಸಿನ ಎಡೆಗೆ ನಮ್ಮನ್ನು ಕರೆದೊಯ್ಯುವ ಅನುಭವ ಎನ್ನುವ ಮೂಲಕ ಪರೀಕ್ಷೆ ಒಂದು ಹಬ್ಬ ಅದನ್ನು ಸಂಭ್ರಮಿಸಬೇಕು ಎಂದು ತಿಳಿಸಿದರು ಹಾಗೂ ‘ದಡ್ಡ ವಿದ್ಯಾರ್ಥಿ ಹುಟ್ಟಿಯೇ ಇಲ್ಲ’ ಸರಿ-ನಿಯಮ, ಸರಿ-ಸಮಯ ಪಾಲಿಸಿದರೆ ಯಾರು ಬೇಕಾದರೂ ಓದಬಹುದು, ಅಂಕ ಗಳಿಸಬಹುದು, ಓದುವ ಉತ್ಸಾಹ ಅಧ್ಯಯನ ಸೂತ್ರಗಳು ಏಕೆ ಓದಬೇಕು? ಏನು? ಎಷ್ಟು? ಹೇಗೆ ಬರೆಯಬೇಕು, ಏಕಾಗ್ರತೆ ನೆನಪು ನಿರಂತರ ಶ್ರಮ ಮೆದುಳಿನ ನಿರ್ವಹಣಾ ತಂತ್ರ ಒತ್ತಡ ಸಮಯ ಆರೋಗ್ಯ ಈ ಎಲ್ಲಾ ನಿರ್ವಹಣೆ ಹೇಗೆ ಮಾಡಬೇಕೆಂಬುದನ್ನು ಸರಳವಾಗಿ ಮಕ್ಕಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಮಂಜುನಾಥ್ ಜೆ ಎಸ್ ಕಾರ್ಯದರ್ಶಿಗಳಾದ ಶ್ರೀಯುತ ವಸಂತ್ ಜೆ ಎಸ್, ಸಲಹಾಗಾರರಾದ ಶ್ರೀಮತಿ ಛಾಯಾ ಮಂಜುನಾಥ್, ಪ್ರಾಂಶುಪಾಲರಾದ ಶ್ರೀಯುತ ವೇಣುಗೋಪಾಲ್ ಜಿ ಸಿ ಹಾಗೂ ಶಿಕ್ಷಕರಿಂದ ಮಕ್ಕಳು ಉಪಸ್ಥಿತರಿದ್ದರು

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 312

Leave a Reply

Your email address will not be published. Required fields are marked *