15 ವಿವಿಧ ರಾಜಕೀಯ ಪಕ್ಷಗಳ ಕಚೇರಿಯಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯ ದಿನಾಚರಣೆ.

ಚಿತ್ರದುರ್ಗ ಆ. 15

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ಚಿತ್ರದುರ್ಗ ನಗರದಲ್ಲಿಂದು ವಿವಿಧ ರಾಜಕೀಯ ಪಕ್ಷಗಳ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.


ನಗರದ ನೀಲಕೇಂಶ್ವರ ದೇವಾಲಯದ ಪಕ್ಕದಲ್ಲಿನ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷರಾದ ಎಂ ಜಯಣ್ಣ ದ್ವಜಾರೋಹಣವನ್ನೂ ನೇರವೇರಿಸಿ ಮಾತನಾಡಿ, ಭಾರತ ದೇಶವು ಸ್ವತಂತ್ರವಾಗಿ ಇಂದು 78 ವರ್ಷಗಳು ಕಳೆದಿದ್ದು 79 ನೇ ಸ್ವಾತಂತ್ರೋತ್ಸವವನ್ನು ಈ ಬಾರಿ ಅಚರಿಸಲಾಗುತ್ತಿದೆ ಸ್ವಾತಂತ್ರೋತ್ಸವದಲ್ಲಿ `ವಿಕಸಿತ ಭಾರತ’ವೆಂಬುದು ಧ್ಯೇಯವಾಕ್ಯವಾಗಿದ್ದು 2047 ರಲ್ಲಿ ಭಾರತ ಆಭಿವೃದ್ಧಿಶೀಲ ರಾಷ್ಟ್ರ ಆಗಲಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್, ಸರೋಜಿನಿ ನಾಯ್ಡು, ಪಂಡಿತ್ ಮದನ್ ಮೋಹನ್ ಮಾಳವೀಯ, ಅನಿಬೆಸೆಂಟ್, ಚಂದ್ರಶೇಖರ್ ಆಜಾದ್, ಲಾಲಾಲಜಪತ ರಾಯ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ತಾತ್ಯಾ ಟೋಪೆ ವೀರ ಸಾವರ್ಕರ್, ಸುಭಾಷಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಭಗತಸಿಂಗ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮುಂತಾದ ಅನೇಕ ಗಣ್ಯರನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುತ್ತದೆ.

ಇವರೆಲ್ಲರೂ ಮಾಡಿದ ಹೋರಾಟ, ಚಳುವಳಿ ಪರಿಶ್ರಮದ ಫಲದಿಂದ ಭಾರತ ದೇಶ ಆಗಸ್ಟ್ 15 ರಂದು ಸ್ವತಂತ್ರವಾಯಿತು ಎಂದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಬಿ ಕಾಂತರಾಜ್, ಜಿಲ್ಲಾ ಕಾರ್ಯಧ್ಯಕ್ಷರಾದ ಜಿ.ಬಿ.ಶೇಖರ್, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿನಾಯಕ, ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷರಾದ ಸಣ್ಣತಿಮ್ಮಪ್ಪ, ಮಠದಹಟ್ಟಿ ವೀರಣ್ಣ, ಮಂಜುನಾಥ ಹನುಮಂತ ರಾಯಪ್ಪ, ಚಿದಾನಂದ, ಪ್ರತಾಪ್ ಜೋಗಿ, ಗೀತಮ, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷರಾದ
ನಸುರುಲ್ಲಾ, ನಿಜಲಿಂಗಪ್ಪ, ಮಾಜಿ ನಗರಸಭೆಯ ಸದಸ್ಯ ತಿಪ್ಪೇಸ್ವಾಮಿ, ಅಬ್ಬು, ಚಿದಾನಂದ, ನಾಗರಾಜ್, ಮಲ್ಲಿಕಾರ್ಜುನ ಇತರರು ಭಾಗವಹಿಸಿದ್ದರು.


ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ರಾಷ್ಟ್ರ ಧ್ವಜಾರೋಹಣವನ್ನು ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂವಿಧಾನದ ಪ್ರಕಾರ ನಮಗೆ ಆಚಾರ-ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವಿದೆ. ಈ ಸೃಷ್ಟಿಯಲ್ಲಿ ಪ್ರತಿಯೊಬ್ಬರು ತಾನು ಸ್ವತಂತ್ರವಾಗಿ ಇರಬೇಕು ಮತ್ತು ಸ್ವತಂತ್ರವಾಗಿ
ಬಾಳಬೇಕೆಂದು ಬಯಸುತ್ತಾರೆ ಎಂದರು.


ಈ ಸಂದರ್ಭದಲ್ಲಿ ಅಧಿ ಜಾಂಭವ ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶ್ರೀಮತಿ ಜಯ್ಯಮ್ಮ, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಮೈಲಾರಪ್ಪ, ಓಬಿಸಿ ಘಟಕದ ಅಧ್ಯಕ್ಷ ಎನ್.ಡಿ.ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ನಂದಿನಿ ಗೌಡ, ಮೋಕ್ಷಾ ರುದ್ರಸ್ವಾಮಿ, ಕುಮಾರ್‍ಗೌಡ, ಉಪಾಧ್ಯಕ್ಷರಾದ ರವಿಕುಮಾರ್, ಖುದ್ದುಸ್ ಮುನೀರಾ, ಪ್ರಕಾಶ್ ರಾಮ ನಾಯ್ಕ್, ನಗರಸಭೆಯ ಮಾಜಿ ಉಪಾಧ್ಯಕ್ಷೆ ಶ್ರೀಮತಿ ರುದ್ರಾಣಿ ಗಂಗಾಧರ್, ಪೈಲ್ವಾನ್ ತಿಪ್ಪೇಸ್ವಾಮಿ,
ನಗರಸಭೆಯ ಮಾಜಿ ಅಧ್ಯಕ್ಷರಾದ ಮಂಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

ನಗರದ ಕೆಳಗೋಟೆಯಲ್ಲಿನ ಅಂಭಭವಾನಿ ದೇವಾಲಯದ ಬಳಿಯಲ್ಲಿನ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿಯೂ ಸಹಾ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪಕ್ಷ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ ಧ್ವಜಾರೋಹಣವನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಸಂಸದರಾದ ಗೋವಿಂದ ಕಾರಜೋಳ ಮಾತನಾಡಿ ದೇಶ ಸ್ವಾತಂತ್ರ್ಯವಾಗಲು ಹಲವಾರು ಜನತೆ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ, ಇವರ ತ್ಯಾಗದ ಫಲವಾಗಿ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ, ಅವರ ಸ್ಮರಣೆಯನ್ನು ಮಾಡಬೇಕಿದೆ. ಇಂದಿನ ದಿನದಲ್ಲಿ ದೇಶ ನರೇಂದ್ರ ಮೋದಿಯರತ್ತ ನೋಡುತ್ತಿದೆ, ಅವರು ಕಳೆದ 23 ವರ್ಷಗಳಿಂದ ನಿರಂತವಾಗಿ ಸಂವಿದಾನಿಕ ಹುದ್ದೆಯನ್ನು ಅಲಂಕರಿಸಿದ್ದಾರೆ. ಭಾರತ ಇಂದು ಆರ್ಥಿಕ ಸ್ಥಿತಿಯಲ್ಲಿ ಮುಂಚೂಣಿಯಲ್ಲಿದೆ. ಭಧ್ರತಾ
ದೃಷ್ಟಿಯಲ್ಲಿಯೂ ಸಹಾ ಜಗತ್ತು ನಮ್ಮ ಕಡೆ ನೋಡುವಂತ ವಾತಾವರಣ ನಿರ್ಮಾಣವಾಗಿದೆ. ದೇಶ ಮತದಾರರು ಮೂರನೇ ಬಾರಿ ನರೇಂದ್ರ ಮೋದಿಯವರನ್ನು ದೇಶದ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದಾರೆ.

ದೇಶ ಎಲ್ಲಾ ವರ್ಗದ ಜನರಿಗೆ ವಿವಿಧ ರೀತಿಯ ಯೋಜನೆಯನ್ನು ನೀಡುವುದರ ಮೂಲಕ ದೇಶದ ಅಭೀವೃದ್ದಿಯನ್ನು ಮಾಡುತ್ತಿದೆ ಎಂದರು. ಬಿಜೆಪಿ ಮಾಜಿ ಅಧ್ಯಕ್ಷರಾದ ಎ.ಮುರಳಿ, ಟಿ,ಜಿ.ನರೇಂದ್ರನಾಥ್, ನಗರಾಧ್ಯಕ್ಷ ಲೋಕೇಶ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ಖಂಜಾಚಿ ಮಾಧುರಿನ ಗೀರಿಶ್, ವಕ್ತಾರ ನಾಗರಾಜ್ ಬೇದ್ರೇ, ರಾಜ್ಯ ಮಹಿಳಾ ಮೋರ್ಚಾದ ಸದಸ್ಯರಾದ ಶ್ಯಾಮಾಲ ಶಿವಪ್ರಕಾಶ್, ಶಿವಣ್ಣಾಚಾರ್, ಶುಂಭು, ಬಸಮ್ಮ, ಶಾಂತಮ್ಮ ಕವಿತಾ ಸೇರಿದಂತೆ ಇತರರು ಭಾಗವಹಿಸಿದ್ದರು.

ಚಿತ್ರದುರ್ಗದ ನಗರದ ವಿ.ಪಿ.ಬಡಾವಣೆಯಲ್ಲಿನ ಅಮ್ಮ ಆದ್ಮಿ ಪಕ್ಷದ ಕಚೇರಿಯಲ್ಲಿ ಸ್ವತಂತ್ರ ದಿನಾಚರಣೆ ಯನ್ನು ಆಚರಣೆ ಮಾಡಲಾಯಿತು ಧ್ವಜಾರಣವನ್ನು ಜಿಲ್ಲಾಧ್ಯಕ್ಷರಾದ ಇ ಜಗದೀಶ್ ನೆರವೇರಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಲೋಕೇಶ್ ರವಿಕುಮಾರ್ ರಾಮಪ್ಪ ತನ್ವೀರ್ ಜ್ಯೋತಿ ವಿನೋದಮ್ಮ ಲಕ್ಷ್ಮಮ್ಮ ದಾಸಪ್ಪ ಲೋಹಿತ್ ರಾಜಣ್ಣ ಹೇಮಣ್ಣ ಹಾಗೂ ಪಕ್ಷದ ಕಾರ್ಯಕರ್ತರು ಮುಖಂಡರುಗಳು ಇದ್ದರು.

Views: 54

Leave a Reply

Your email address will not be published. Required fields are marked *