ಚಿತ್ರದುರ್ಗ ಆ. 15
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಪ್ರವಾಸಿ ಮಂದಿರ ಮುಂಭಾಗದಲ್ಲಿನ ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿಯೂ ಸಹಾ ಇಂದು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಬಡಗಿ ಕ್ಷೇಮಾಭೀವೃದ್ದಿ ಸಂಘದ ಜಿಲ್ಲಾಧ್ಯಕ್ಷ ಪ್ರಿಯಾಂಕಗಾಂಧಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಐಎನ್ಟಿಸಿಡಬ್ಯೂಇಎಫ್ ರಾಜ್ಯ ಉಪಾಧ್ಯಕ್ಷರಾದ ಎ ಜಾಕಿರ್ ಹುಸೇನ್ ಧ್ವಜಾರೋಹಣ ವನ್ನು ನೇರವೇರಿಸಿದರು.
ಈ ಸಮಯದಲ್ಲಿ ಶಾಲೆಯ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ಹಾಗೂ ದೇಶದ ಮಹಾನ್ ವ್ಯಕ್ತಿಗಳ ವೇಷ ಭೂಷಣವನ್ನು ಧರಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಮಕ್ಕಳಿಗೆ ಜಾಕಿರ್ ಹುಸೇನ್ರವರು ತಿಂಡಿಯ ಡಬ್ಬವನ್ನು ಸ್ವಾತಂತ್ರ್ಯದಿನಾಚರಣೆಯ ಉಡುಗೂರೆಯಾಗಿ ನೀಡಿದರು. ಈ ಸಮಯದಲ್ಲಿ ಇಸ್ಮಾಯಿಲ್, ಅದಿಲ್, ಬಂಡೇ, ಜಬೀ, ರಿಯಾಜ್, ಸುಮ್ಮಯ ಮುಂತಾದವರು ಉಪಸ್ಥಿತರಿದ್ದರು.
Views: 14