ಪಾರ್ಶ್ವನಾಥ ವಿದ್ಯಾ ಸಂಸ್ಥೆಯಲ್ಲಿ 79ನೇ ಸ್ವಾತಂತ್ರೋತ್ಸವನ್ನು ಶಾಲಾ ಆವರಣದಲ್ಲಿ ನೆರವೇರಿಸಲಾಯಿತು.

ಚಿತ್ರದುರ್ಗ August 15

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಧ್ವಜಾರೋಹಣವನ್ನು ಶಾಲಾ ಅಧ್ಯಕ್ಷರಾದ ಬಾಬುಲಾಲ್‍ಜೀ ಪಟಿಯಾತ್ ನೆರೆವೇರಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಅನೇಕ ಮಹನೀಯರ,ದೇಶಭಕ್ತರ ಬಲಿದಾನದಿಂದ ಸ್ವಾತಂತ್ರ ಬಂದಿದೆ. ಇಂದು ನಮ್ಮ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯತ್ತ ಸಾಗುತ್ತಿದೆ ಹಾಗೂ ದೇಶದ ಸಂವಿಧಾನ ಹಾಗೂ ಪ್ರಜಾ ಪ್ರಭುತ್ವದ ಭಾವೈಕ್ಯತೆಯನ್ನು ಕುರಿತು ಸಂದೇಶ ನೀಡಿದರು ಹಾಗೂ ದೇಶ ಪ್ರೇಮದ ಬಗ್ಗೆ ಹಿತವಚನವನ್ನು ನೀಡಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ದೇಶ ಭಕ್ತಿ ಹಾಗೂ ದೇಶ ಪ್ರೇಮ ಸಾರುವ ಅನೇಕ ಹಾಡು, ಭಾಷಣ, ನೃತ್ಯಗಳನ್ನು ಪ್ರದರ್ಶಿಸಿದರು. ಈ ಸಮಯದಲ್ಲಿ ಮಾಜಿ ಸಲಹಾ ಸಮಿತಿಯ ಸದಸ್ಯರುಗಳಿಗೆ ಸನ್ಮಾನಿಸಲಾಯಿತು.

ಶಾಲಾ ಆಡಳಿತ ಮಂಡಳಿಯ ಸಲಹಾ ಸಮಿತಿ ಸದಸ್ಯರು, ಉಪಾಧ್ಯಕ್ಷರು, ಮುಕೇಶ್ ಸೋನ್ ವಾಡಿಯಾ, ಕಾರ್ಯದರ್ಶಿಯಾದ ಸುರೇಶ್ ಕುಮಾರ್ ಸಿಸೋಡಿಯಾ, ಸಹಕಾರ್ಯದರ್ಶಿ, ಖಜಾಂಚಿ ಮತ್ತು ಸದಸ್ಯರುಗಳು ಹಾಗೂ ಬಿ.ಜೆ.ಎಸ್ ಸಂಘದ ಆದ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು , ಪೋಷಕರು, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

Views: 22

Leave a Reply

Your email address will not be published. Required fields are marked *