ಚಿತ್ರದುರ್ಗ ಆ. 16
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥಾಪಕ ಕಾರ್ಯದರ್ಶಿಗಳಾದ ಡಾ.ವಿ.ಎಲ್ ಪ್ರಶಾಂತ್ ವಹಿಸಿದ್ದರು.
ಶಾಲೆಯ ಆಡಳಿತ ಅಧಿಕಾರಿ ವಿಎಲ್ ಪ್ರವೀಣ್ ಶಾಲೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಗೌರಿ ವಿಎಲ್ ಪ್ರಶಾಂತ್ ಶ್ರೀಮತಿ ಕಾವ್ಯ ವಿಎಲ್‍ಪ್ರವೀಣ್ ಮುಖ್ಯೋಪಾಧ್ಯಾಯರಾದ ಆರ್ ಮಹಾಂತೇಶ್,ದೈಹಿಕ ಶಿಕ್ಷಕರು ಕೋ ಆರ್ಡಿನೇಟರಾದ ಶ್ರೀ ಲಕ್ಷ್ಮಿ ದೇಸಾಯಿ ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು ಈ ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕೃತಿ ಕಾರ್ಯಕ್ರಮ ನಡೆದವು
ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾಕ್ಟರ್ ವಿ.ಎಲ್.ಪ್ರಶಾಂತ್ ರವರ ಹುಟ್ಟು ಹಬ್ಬದ ಪ್ರಯುಕ್ತ ವಿವೇಕಾನಂದ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮಕ್ಕಳಿಗೆ ಸುಮಾರು 75 ತಟ್ಟೆ ಮತ್ತು ಲೋಟಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಮಾತೃಶ್ರೀ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ವಿ.ಎಲ್. ಪ್ರವೀಣ್ ಸಿ.ಆರ್.ಪಿ. ಗೋವಿಂದಪ್ಪ ಹಾಗೂ ವಿವೇಕಾನಂದ ನಗರ ಶಾಲೆಯ ಮುಖ್ಯ ಶಿಕ್ಷಕಿಯರು ಭಾಗವಹಿಸಿದ್ದರು.
Views: 14