ನಾಗ ಮೋಹನ್‍ ದಾಸ್‍ ರವರ ಜನಗಣತಿ ಲೋಪ ಸರಿಪಡಿಸಿ ಜನಸಂಖ್ಯಾವಾರು ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹ.

ಚಿತ್ರದುರ್ಗ ಆ. 16

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಾಗ ಮೋಹನ್‍ ದಾಸ್‍ ರವರ ಜನಗಣತಿ ಲೋಪ ಸರಿಪಡಿಸಿ ಜನಸಂಖ್ಯಾವಾರು ಪ್ರತ್ಯೇಕ ಮೀಸಲಾತಿ ನೀಡುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ಭೋವಿ ಸಂಘದ ಪದಾಧಿಕಾರಿಗಳು ಚಿತ್ರದುರ್ಗ ಜಿಲ್ಲಾ ಉಸ್ತುವಾರಿಗಳು ಹಾಗೂ ಸಾಂಖ್ಯಿಕ ಇಲಾಖೆಯ ಸಚಿವರಾದ ಡಿಸುಧಾಕರ್ ರವರನ್ನು ಒತ್ತಾಯಿಸಿದೆ.

ಶುಕ್ರವಾರ ಚಿತ್ರದುರ್ಗದಲ್ಲಿ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ನ್ಯಾಯಮೂರ್ತಿ ಹೆಚ್.ಎನ್.
ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿವೆ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಭೋವಿ ಜನಾಂಗದ ಜನಸಂಖ್ಯೆಯ ನ್ಯೂನ್ಯತೆಗಳು ಸದರಿ ವರದಿಯಲ್ಲಿ ಪುಟ ಸಂಖ್ಯೆ24ರಲ್ಲಿ ತಿಳಿಸಿರುವಂತೆ 2001-11 ರ ಜನಸಂಖ್ಯೆಯ ದಶಕವಾರು ಬೆಳವಣಿಗೆಯ ಪ್ರಮಾಣ 22.31% ರಷ್ಟಿದೆ. ಇದೇ ಮಾನದಂಡವನ್ನು 2011-2025 ಅಂದರೆ 15 ವರ್ಷಗಳ ನಂತರದ ಜನಸಂಖ್ಯೆ ನ್ಯಾ||ನಾಗಮೋಹನ್‍ದಾಸ್‍ರವರ ವರದಿಯಂತೆ ರಾಜ್ಯದ ಪರಿಶಿಷ್ಟ ಜಾತಿ ಜನಸಂಖ್ಯೆ 1 ಕೋಟಿ
7ಲಕ್ಷ ಹಾಗೂ ಭೋವಿ ಜನಾಂಗದ ಜನಸಂಖ್ಯೆ 11,29,301ಮಾತ್ರವಾಗಿದೆ ಸದಾಶಿವ ಆಯೋಗ ಹಾಗೂ 2011ರ ಜನಗಣತಿಯಲ್ಲಿ ಎರಡೂ ಸಮೀಕ್ಷೆ ಏಕಕಾಲದಲ್ಲಿ ನಡೆದರೂ ಸಹ ಪರಿಶಿಷ್ಟ ಜಾತಿ ಜನಸಂಖ್ಯೆ ವಿಚಾರದಲ್ಲ್ಲಿ ದೊಡ್ಡ ಪ್ರಮಾಣದ ವ್ಯತ್ಯಾಸ ಇದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದು ಈ ಕಾರಣದಿಂದ ಹೊಸದಾಗಿ ಸಮೀಕ್ಷೆ ನಡೆಯಬೇಕಾಗಿದೆ ಎಂದು ಹೇಳಿರುವಾಗ ಪ್ರಸ್ತುತ ಲೋಪದೋಷ ಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ 2026ರ ಜನಗಣತಿ ಆಗುವವರೆವಿಗೂ ಕಾಯುವುದು ಸೂಕ್ತ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.

ವರದಿಯಲ್ಲಿ ತಿಳಿಸಿರುವಂತೆ ಈ ಎಲ್ಲಾ ಮಾನದಂಡಗಳಲ್ಲಿ ಭೋವಿ ಜನಾಂಗ, ಎಡಗೈ, ಬಲಗೈ ಹಾಗೂ ಬಂಜಾರ
ಸಮಾಜಗಳಂತಹ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ್ದರು ಭೋವಿ ಸಮಾಜವನ್ನು ಮುಂದುವರೆದ ಗುಂಪಿಗೆ
ಸೇರಿಸಲಾಗಿದೆ.ವರದಿಯಲ್ಲಿರುವ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಉದ್ಯೋಗ ಸೂಚಕಗಳಿಗೂ ಹಾಗೂ ಮೀಸಲಾಗಿರುವ ಶೇಕಡ ನಿಗದಿ ಪಡೆಸಿರುವುದಕ್ಕೂ ಯಾವುದೇ ತಾಳೇ ಇಲ್ಲದಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ.ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸೂಚಕಗಳು ಮತ್ತು ವಿವಿಧ ಗುಂಪುಗಳಲ್ಲಿ ನಿಗದಿಪಡಿಸಿದ ಮೀಸಲಾತಿಯ ಪ್ರಮಾಣಗಳ ನಡುವೆ ಯಾವುದೇ ಪರಸ್ಪರ ಸಂಬಂಧವಿಲ್ಲ. ಸಮೀಕ್ಷೆಗೆ ಕೇಂದ್ರ ಸರ್ಕಾರದ ಜನಗಣತಿಯ ಸಮಯದಲ್ಲಿ ಅನುಸರಿಸಲಾಗುವ ವಿಧಾನವನ್ನು ಅನುಸರಿಸಿದರೆ ಮತದಾರರ ಪಟ್ಟಿಯನ್ನು ಮಾನದಂಡವಾಗಿ ಇಟ್ಟುಕೊಂಡು ಸಮೀಕ್ಷೆ ಮಾಡಿರುವುದೇ ಈ ಎಲ್ಲಾ ಗೊಂದಲಗಳಿಗೆ ಕಾರಣ
ಎಂದಿದ್ದಾರೆ.

ತರಾತುರಿಯಲ್ಲಿ ಅಲ್ಪ ಸಮಯದಲ್ಲಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲು Short Cut Methodಗಳನ್ನು ಬಳಸಿ ಪ್ರಮಾದ ಎಸಗಲಾಗಿದೆ.ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸಲು ಪಡಿತರ ಚೀಟಿಯನ್ನು ಒಂದು ಮಾನದಂಡವಾಗಿ ಬಳಸಲಾಗಿದೆ. ಆದರೆ ವರದಿಯಲ್ಲಿ ತಿಳಿಸಿರುವಂತೆ ಸುಮಾರು 7 ಲಕ್ಷ ಪರಿಶಿಷ್ಟ ಜಾತಿ ಕುಟುಂಬಗಳು ಪಡಿತರ ಚೀಟಿಯೇ ಹೊಂದಿಲ್ಲಅಂದ ಮೇಲೆ ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸುವಲ್ಲಿ ಲೋಪವಾಗಿ ಸುಮಾರು 30 ಲಕ್ಷ ಜನರನ್ನು ಕೈ ಬಿಡಲಾಗಿದೆ ಹಾಗೂ ಭೋವಿ ಜನಾಂಗದ ಸುಮಾರು 3.5 ಲಕ್ಷ ಜನರನ್ನು ಸಮೀಕ್ಷೆಯಿಂದ ಕೈಬಿಡಲಾಗಿದೆ.

ಹಲವು ಮಾನದಂಡಗಳಲ್ಲಿ ಬಿ ಮತ್ತು ಸಿ ಗುಂಪು,ಡಿ ಗುಂಪಿಗಿಂತ ಸ್ಪಷ್ಟವಾಗಿ ಮಂದೆ ಇದೆ . ಡಿ ಗುಂಪಿನವರು 26 ಮಾನದಂಡಗಳಲ್ಲಿ 19 ಮಾನದಂಡಗಳಲ್ಲಿ ಹಿಂದೆ ಇದೆ. ಹೀಗಿರುವಾಗ ಆಯೋಗವು ಡಿ ಗುಂಪಿಗೆ ಕೇವಲ 4% ಮೀಸಲಾತಿ ನಿಗದಿ ಮಾಡಿರುವುದು ಮೇಲ್ನೋಟಕ್ಕೆ ಅವೈಜ್ಞಾನಿಕವಾಗಿದೆ . ಭೋವಿ ಸಮಾಜವು 2026ರಲ್ಲಿ ಕೇಂದ್ರ ಸರ್ಕಾರ ನಡೆಸುವ ಜನಗಣತಿ ಆದಾರದ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳ ಆಧಾರದ ಮೇಲೆ ಒಳಮೀಸಲಾತಿಯನ್ನು ಕಲ್ಪಿಸಲು ಒತ್ತಾಯಿಸುತ್ತದೆ. ಹಾಗೂ ದೋಷ ಪೂರಿತ ನ್ಯಾ|| ನಾಗಮೋಹನದಾಸ್ ವರದಿಯನ್ನು ತಿರಸ್ಕರಿಸಲು ಒತ್ತಾಯಿಸಿದ್ದು ಒಳಮೀಸಲಾತಿ ನೀಡುವ ಸಮಯದಲ್ಲಿ ನಿಖರವಾದ ವೈಜ್ಞಾನಿಕ ಅಂಕಿಅಂಶಗಳನ್ನು ಪಡೆದು ಭೋವಿ ಸಮಾಜವನ್ನು ಪ್ರತ್ಯೇಕ ಗುಂಪಾಗಿ ಮಾಡಲು ಮನವಿ
ಮಾಡಲಾಯಿತು.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಭೋವಿ ಸಂಘದ ಅಧ್ಯಕ್ಷರಾದ ಟಿ.ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ಖಂಜಾಚಿ ಈ ಮಂಜುನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Views: 29

Leave a Reply

Your email address will not be published. Required fields are marked *