5 ದಿನಗಳಲ್ಲಿ ‘ಕೂಲಿ’ ಗಳಿಸಿದ್ದೆಷ್ಟು? ‘ವಾರ್ 2’ ಕಲೆಕ್ಷನ್ ಕಥೆ ಏನು?

ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ 2025ರ ಭಾರತದ ನಾಲ್ಕನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಕೇವಲ 5 ದಿನಗಳಲ್ಲಿ ಈ ಸಾಧನೆ ಮಾಡಿದೆ. ಅದೇ ಸಮಯದಲ್ಲಿ ಬಿಡುಗಡೆಯಾದ ‘ವಾರ್ 2’ ಚಿತ್ರ ಟಾಪ್ 5ರ ಪಟ್ಟಿಯಿಂದ ಹೊರಗಿದೆ.

ಇತ್ತೀಚಿನ ವರದಿ ಓದಿ…

ಲೋಕೇಶ್ ಕನಕರಾಜ್ ನಿರ್ದೇಶನದ ‘ಕೂಲಿ’ ಚಿತ್ರ 5ನೇ ದಿನ ಅಂದರೆ ಮೊದಲ ಸೋಮವಾರ ಸುಮಾರು 9.36 ಕೋಟಿ ರೂ. ಗಳಿಸಿದೆ. ನಾಲ್ಕನೇ ದಿನಕ್ಕೆ ಹೋಲಿಸಿದರೆ ಸುಮಾರು 73.4% ಕಡಿಮೆ ಕಲೆಕ್ಷನ್ ಆಗಿದೆ. ಭಾನುವಾರ ಈ ಚಿತ್ರ 35.25 ಕೋಟಿ ರೂ. ಗಳಿಸಿತ್ತು.

‘ಕೂಲಿ’ ಚಿತ್ರ 5 ದಿನಗಳಲ್ಲಿ ಸುಮಾರು 203.86 ಕೋಟಿ ರೂ. ಗಳಿಸಿದೆ. ಚಿತ್ರ ಮೊದಲಿನಿಂದ ಐದನೇ ದಿನದವರೆಗೆ ಕ್ರಮವಾಗಿ 65 ಕೋಟಿ ರೂ., 54.75 ಕೋಟಿ ರೂ., 39.5 ಕೋಟಿ ರೂ., 35.25 ಕೋಟಿ ರೂ. ಮತ್ತು 9.36 ಕೋಟಿ ರೂ. ಗಳಿಸಿದೆ.

2025ರ ಟಾಪ್ 5 ಹಿಟ್ ಚಿತ್ರಗಳಲ್ಲಿ ಮೊದಲ ಸ್ಥಾನದಲ್ಲಿ ಛಾವಾ, ಎರಡನೇ ಸ್ಥಾನದಲ್ಲಿ ಸೈಯಾರ, ಮೂರನೇ ಸ್ಥಾನದಲ್ಲಿ ಮಹಾವತಾರ್ ನರಸಿಂಹ, ನಾಲ್ಕನೇ ಸ್ಥಾನದಲ್ಲಿ ಕೂಲಿ ಮತ್ತು ಐದನೇ ಸ್ಥಾನದಲ್ಲಿ ಸಂಕ್ರಾಂತಿ ವಸ್ತುನಾಮ್ ಇದೆ. ಈ ಚಿತ್ರಗಳ ಗಳಿಕೆ ಕ್ರಮವಾಗಿ 601.57 ಕೋಟಿ ರೂ., 324.4 ಕೋಟಿ ರೂ., 210.5 ಕೋಟಿ ರೂ., 203.86 ಕೋಟಿ ರೂ. ಮತ್ತು 186.97 ಕೋಟಿ ರೂ.

ಅಯಾನ್ ಮುಖರ್ಜಿ ನಿರ್ದೇಶನದ ‘ವಾರ್ 2’ ಚಿತ್ರ 5ನೇ ದಿನ ಅಂದರೆ ಮೊದಲ ಸೋಮವಾರ 7.52 ಕೋಟಿ ರೂ. ಗಳಿಸಿದೆ. ಭಾನುವಾರಕ್ಕೆ ಹೋಲಿಸಿದರೆ 76.6 ಕಡಿಮೆ ಕಲೆಕ್ಷನ್ ಆಗಿದೆ. ಭಾನುವಾರ ಚಿತ್ರ 32.15 ಕೋಟಿ ರೂ. ಗಳಿಸಿತ್ತು.

: ‘ವಾರ್ 2’ ನೋಡಿ ‘ವಾರ್’ನ ಸಹಾಯಕ ನಿರ್ದೇಶಕ ತಲೆ ಚಚ್ಚಿಕೊಂಡರು, ಹೇಳಿದ್ದೇನು?

‘ವಾರ್ 2’ 5 ದಿನಗಳಲ್ಲಿ ಒಟ್ಟು 182.27 ಕೋಟಿ ರೂ. ಗಳಿಸಿದೆ. ಚಿತ್ರ ಮೊದಲಿನಿಂದ ಐದನೇ ದಿನದವರೆಗೆ ಕ್ರಮವಾಗಿ 52 ಕೋಟಿ ರೂ., 57.35 ಕೋಟಿ ರೂ., 33.25 ಕೋಟಿ ರೂ., 27.15 ಕೋಟಿ ರೂ. ಮತ್ತು 7.42 ಕೋಟಿ ರೂ. ಗಳಿಸಿದೆ. ‘ವಾರ್ 2’ 2025ರ 7ನೇ ಹಿಟ್ ಚಿತ್ರ. ಟಾಪ್ 5 ಪಟ್ಟಿ ಮೇಲೆ ನೀಡಲಾಗಿದೆ. 6ನೇ ಸ್ಥಾನದಲ್ಲಿ ‘ಹೌಸ್‌ಫುಲ್ 5’ ಇದ್ದು, 183.38 ಕೋಟಿ ರೂ. ಗಳಿಸಿದೆ.

Source: Suvarna News

Views: 31

Leave a Reply

Your email address will not be published. Required fields are marked *